Video: ಬೆಂಗಳೂರಿನ ಮನೆಯ ಬಾಲ್ಕನಿಯಲ್ಲೇ ವೆಸ್ಟರ್ನ್ ಕಮೋಡ್, ವೈರಲ್ ಆಯ್ತು ದೃಶ್ಯ

ಬಹುತೇಕರು ತಮ್ಮ ಮನೆಯನ್ನು ಐಷಾರಾಮಿ ಸವಲತ್ತುಗಳನ್ನೊಳಗೊಂಡಂತೆ ವಿಭಿನ್ನವಾಗಿ ಕಟ್ಟಲು ಬಯಸುತ್ತಾರೆ. ಇದೀಗ ಬೆಂಗಳೂರಿನ ವಿಭಿನ್ನವಾದ ಈ ಮನೆಯೂ ಎಲ್ಲರ ಗಮನ ಸೆಳೆಯುತ್ತಿದೆ. ಹೌದು, ಬೆಂಗಳೂರಿನ ಮನೆಯ ಬಾಲ್ಕನಿಯಲ್ಲೇ ವೆಸ್ಟರ್ನ್ ಕಮೋಡ್ ಅಳವಡಿಸಲಾಗಿದ್ದು, ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಅಚ್ಚರಿ ಪಟ್ಟುಕೊಂಡಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಬೆಂಗಳೂರಿನ ಮನೆಯ ಬಾಲ್ಕನಿಯಲ್ಲೇ ವೆಸ್ಟರ್ನ್ ಕಮೋಡ್, ವೈರಲ್ ಆಯ್ತು ದೃಶ್ಯ
ವೈರಲ್‌ ವಿಡಿಯೋ
Image Credit source: Twitter

Updated on: Jun 21, 2026 | 5:10 PM

ಬೆಂಗಳೂರು, ಜೂನ್ 21: ಬೆಂಗಳೂರು (Bengaluru) ಏರುತ್ತಿರುವ ಬಾಡಿಗೆ ದರಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಆಗಾಗ್ಗೆ ಚರ್ಚೆಯಾಗುತ್ತದೆ. ಇದೀಗ ಬೆಂಗಳೂರು ಸುದ್ದಿಯಾಗಿರುವುದು ವೆಸ್ಟರ್ನ್ ಕಮೋಡ್‌ನಿಂದ. ಮನೆಯೊಂದರಲ್ಲಿ ಬಾಲ್ಕನಿಯಲ್ಲಿ ವೆಸ್ಟರ್ನ್ ಕಮೋಡ್ ಅಳವಡಿಸಿಕೊಳ್ಳಲಾಗಿದೆ. ಈ ವಿಡಿಯೋ ಸದ್ಯ ವೈರಲ್ ಆಗಿದ್ದು ನೆಟ್ಟಿಗರ ಹುಬ್ಬೇರಿಸುವಂತೆ ಮಾಡಿದೆ.

ಶ್ರೀಸತ್ಯ (SriSathya) ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಮನೆಯ ಬಾಲ್ಕನಿಯಲ್ಲಿ ಅಳವಡಿಸಿಕೊಂಡಿರುವುದನ್ನು ಕಾಣಬಹುದು. ಬಾಲ್ಕನಿಗೆ ಕಬ್ಬಿಣದ ಜಾಲಿ ಅಳವಡಿಸಲಾಗಿದ್ದು, ಈ ಜಾಲಿ ಸಂಪೂರ್ಣ ಪಾರದರ್ಶಕವಾಗಿದೆ. ಈ ಕ್ಲಿಪಿಂಗ್ ನಲ್ಲಿ ಯುವತಿ ಟಾಯ್ಲೆಟ್ ಕಾರ್ಯನಿರ್ವಹಿಸುತ್ತಿದೆ ಎಂದು ಪರಿಶೀಲಿಸಿರುವುದಾಗಿ ಹೇಳಿದ್ದಾಳೆ.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ವಿದೇಶಿ ಜೀವನಕ್ಕೆ ಗುಡ್ ಬೈ ಹೇಳಿ ಬೆಂಗಳೂರಿಗೆ ಬಂದ ಇಂಜಿನಿಯರ್, ಕಾರಣ ಇದೇ ನೋಡಿ

ಈ ವಿಡಿಯೋ ಹತ್ತೊಂಭತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಬೆಂಗಳೂರಿನಲ್ಲಿ ಬಾಡಿಗೆ ದರ ಹಾಗೂ ಜಾಗದ ಬೆಲೆ ದುಪ್ಪಟ್ಟು ಇದೆ. ಹೀಗಾಗಿ ಬಾಲ್ಕನಿಯನ್ನೇ ಬಾತ್ರೂಮ್ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಈ ರೀತಿ ಬಾತ್ ರೂಮ್ ಸೂಕ್ತವಲ್ಲ ಎಂದಿದ್ದಾರೆ. ಇನ್ನೊಬ್ಬರು, ಸ್ಥಳದ ಕೊರತೆಯಿಂದ ಈ ರೀತಿ ವ್ಯವಸ್ಥೆ ಮಾಡಿಕೊಂಡಿರಬಹುದೆಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us