AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ವಿದೇಶಿ ಜೀವನಕ್ಕೆ ಗುಡ್ ಬೈ ಹೇಳಿ ಬೆಂಗಳೂರಿಗೆ ಬಂದ ಇಂಜಿನಿಯರ್, ಕಾರಣ ಇದೇ ನೋಡಿ

ಕೆಲಸ ಯಾವುದಾದರೇನು ನೆಮ್ಮದಿ ಮುಖ್ಯ. ಆದರೆ ಇದೀಗ ಭಾರತೀಯ ಇಂಜಿನಿಯರ್ ಒಬ್ಬರು ಸಿಂಗಾಪುರದಲ್ಲಿ ಉತ್ತಮ ಸಂಬಳದ ಸಿಗುವ ಕೆಲಸ ತೊರೆದು ಬೆಂಗಳೂರಿಗೆ ತೆರಳಿದ ಬಗ್ಗೆ ಹೇಳಿಕೊಂಡಿದ್ದಾರೆ. ಈ ಪೋಸ್ಟ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ವಿದೇಶಿ ಜೀವನಕ್ಕೆ ಗುಡ್ ಬೈ ಹೇಳಿ ಬೆಂಗಳೂರಿಗೆ ಬಂದ ಇಂಜಿನಿಯರ್, ಕಾರಣ ಇದೇ ನೋಡಿ
ವೈರಲ್‌ ವಿಡಿಯೋImage Credit source: Instagram
ಸಾಯಿನಂದಾ
|

Updated on: Jun 21, 2026 | 2:32 PM

Share

ಕೆಲವರಿಗೆ ವಿದೇಶ (foreign) ಅಂದ್ರೆ ಅದೇನೋ ವ್ಯಾಮೋಹ. ಹೀಗಾಗಿ ಓದು ಮುಗಿಯುತ್ತಿದ್ದಂತೆ ವಿದೇಶಕ್ಕೆ ಹಾರುತ್ತಾರೆ. ವಿದೇಶದಲ್ಲಿ ಜಾಬ್ ಸಿಕ್ಕರೆ ಲೈಫ್ ಸೆಟ್ಲ್ ಆದಂತೆ ಎನ್ನುವುದು ಹೆಚ್ಚಿನವರ ಭಾವನೆ. ಆದರೆ ವ್ಯಕ್ತಿಯೊಬ್ಬರು ಸಿಂಗಾಪುರದಿಂದ ಬೆಂಗಳೂರಿಗೆ (Bengaluru) ಮರಳಿದ್ದಾರೆ. ತಮ್ಮ ಈ ನಿರ್ಧಾರದ ಹಿಂದಿನ ಕಾರಣವನ್ನು ರಿವೀಲ್ ಮಾಡಿದ್ದಾರೆ. ಈ ಕುರಿತಾದ ವಿಡಿಯೋ ಸದ್ಯ ವೈರಲ್ ಆಗಿದೆ.

ಅಮನ್ ವೈಷ್ಣವ್ (@amandailylogs) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಹಿರಿಯ ಎಂಎಲ್ ಎಂಜಿನಿಯರ್ ಎಂದು ತಮ್ಮನ್ನು ಪರಿಚಯಿಸಿಕೊಂಡ ಅಮನ್ ವೈಷ್ಣವ್ ಸಿಂಗಾಪುರ ಬಿಟ್ಟು ಬೆಂಗಳೂರಿಗೆ ಬಂದ ನಿರ್ಧಾರದ ಬಗ್ಗೆ ಹೇಳಿಕೊಂಡಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ

ಈ ಕ್ಲಿಪಿಂಗ್ ನಲ್ಲಿ ಪ್ರತಿಯೊಬ್ಬ ಭಾರತೀಯ ಎಂಜಿನಿಯರ್ ಕನಸು ಕಾಣುವಂತೆ ಆ ಕನಸು ಕಂಡೆ. ಹಾಯ್ ನಾನು ಅಮನ್, ಹಿರಿಯ ಎಂಎಲ್ ಎಂಜಿನಿಯರ್. ನಾನು ಕಳೆದ ತಿಂಗಳು ಸಿಂಗಾಪುರವನ್ನು ತೊರೆದಿದ್ದೇನೆ. ಉತ್ತಮ ಸಂಬಳ, ಎಲ್ಲವೂ ಇತ್ತು.. ಆದರೆ ನಾನು ಭಾರತಕ್ಕೆ ಮರಳುವುದನ್ನು ಆಯ್ಕೆ ಮಾಡಿದೆ. ಕೆಲವು ವೈಯುಕ್ತಿಕವಾದ ಸಂದರ್ಭಗಳು ಸಂಭವಿಸಿದವು. ಹಾಗಾಗಿ ನಾನು ಬ್ಯಾಗ್ ಪ್ಯಾಕ್ ಮಾಡಿದೆ, ಭಾರತಕ್ಕೆ ಹಿಂತಿರುಗಿದೆ ಎಂದು ಹೇಳಿಕೊಂಡಿದ್ದಾರೆ.

ಹೆಚ್ಚಿನ ಜನರು ನನ್ನನ್ನು ಹುಚ್ಚ ಎಂದು ಭಾವಿಸಿದ್ದರು. ಅದು ನನಗೆ ಸರಿಯಾದ ನಿರ್ಧಾರವೇ ಎಂದು ನನಗೆ ತಿಳಿದಿದೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಇನ್ನೂ ಆಗಿಲ್ಲ. ನಾನು ಎಂದಿಗೂ ಭಯದಿಂದ ನಿರ್ಧಾರ ತೆಗೆದುಕೊಂಡಿಲ್ಲ. ಒಂದು ಹಂತದಲ್ಲಿ, ನೀವು ಚೆನ್ನಾಗಿ ಕಾಣುವ ಜೀವನ ಮತ್ತು ಸರಿಯಾಗಿ ಅನಿಸುವ ಜೀವನದ ನಡುವೆ ಆಯ್ಕೆ ಮಾಡಬೇಕಾಗುತ್ತದೆ. ಹೀಗಾಗಿ ನಾನು ಎರಡನೆಯದನ್ನು ಆರಿಸಿಕೊಂಡೆ ಎಂದು ಹೇಳಿದ್ದಾರೆ. ಈಗ ನನಗೆ 26 ವರ್ಷ, ಹೊಸ ನಗರದಲ್ಲಿ ತನ್ನ ಜೀವನವನ್ನು ಪುನರ್ನಿರ್ಮಿಸುತ್ತಿದ್ದೇನೆ. ನಿಮ್ಮ ಜೀವನದ ಅಧ್ಯಾಯಗಳು ಕೆಲವು ಸಲ ಅರ್ಥಪೂರ್ಣವಾಗಿರುವುದಿಲ್ಲ, ಮತ್ತು ಬಹುಶಃ ನೀವೇ ಜೀವನವನ್ನು ಯೋಗ್ಯವಾಗಿಸಬೇಕಾಗುತ್ತದೆ ಎಂದು ಹೇಳಿರುವುದನ್ನು ನೋಡಬಹುದು.

ಇದನ್ನೂ ಓದಿ: 40 ಸಾವಿರ ರೂ ಮನೆ ಬಾಡಿಗೆ, 2.4 ಲಕ್ಷ ರೂ ಭದ್ರತಾ ಠೇವಣಿ; ಬೆಂಗಳೂರಿನಲ್ಲಿ ಮನೆ ಹುಡುಕುತ್ತಿದ್ದ ವ್ಯಕ್ತಿಗೆ ಫುಲ್ ಶಾಕ್

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಪರಿಪೂರ್ಣ ಜೀವನ ಬೇಕಾಗಿಲ್ಲ, ಸರಿಯಾದ ಜೀವನ ಬೇಕು ಈ ಸಾಲು ನನಗೆ ತುಂಬಾ ಬೇಸರವಾಗಿದೆ ಎಂದಿದ್ದಾರೆ. ಇನ್ನೊಬ್ಬರು, ನಿಮ್ಮ ಉಜ್ವಲ ಭವಿಷ್ಯಕ್ಕಾಗಿ ಪ್ರಾರ್ಥಿಸುತ್ತೇನ ಎಂದು ಹೇಳಿದ್ದಾರೆ. ಮತ್ತೊಬ್ಬರು, ನಿಮಗೆ ಶುಭ ಹಾರೈಸುತ್ತೇನೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us