AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: 40 ಸಾವಿರ ರೂ ಮನೆ ಬಾಡಿಗೆ, 2.4 ಲಕ್ಷ ರೂ ಭದ್ರತಾ ಠೇವಣಿ; ಬೆಂಗಳೂರಿನಲ್ಲಿ ಮನೆ ಹುಡುಕುತ್ತಿದ್ದ ವ್ಯಕ್ತಿಗೆ ಫುಲ್ ಶಾಕ್

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮನೆಮಾಲೀಕರು ಬಾಡಿಗೆ ಹಾಗೂ ಠೇವಣಿ ಹೆಸರಿನಲ್ಲಿ ಸುಲಿಗೆ ಮಾಡುತ್ತಿದ್ದಾರೆ. ಇದಕ್ಕೆ ಸಾಕ್ಷಿಯಾಗಿದೆ ಈ ಪೋಸ್ಟ್. ಬೆಂಗಳೂರಿನಲ್ಲಿ ಫ್ಲಾಟ್‌ಗಾಗಿ ಹುಡುಕುತ್ತಿದ್ದಾಗ ಈ ವ್ಯಕ್ತಿಯೊಬ್ಬರ ಬಳಿ ಮನೆಮಾಲೀಕರು 40,000 ರೂ ಬಾಡಿಗೆ ಹಾಗೂ 2.4 ಲಕ್ಷ ರೂ ಭದ್ರತಾ ಠೇವಣಿ ನೀಡುವಂತೆ ಕೇಳಿದ್ದಾರೆ. ತನ್ನ ಸ್ನೇಹಿತನ ಮನೆ ಹುಡುಕಾಟದ ಅನುಭವದ ಬಗ್ಗೆ ವ್ಯಕ್ತಿಯೊಬ್ಬರು ಹಂಚಿಕೊಂಡ ಪೋಸ್ಟ್ ಚರ್ಚೆಗೆ ನಾಂದಿ ಹಾಡಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Viral: 40 ಸಾವಿರ ರೂ ಮನೆ ಬಾಡಿಗೆ, 2.4 ಲಕ್ಷ ರೂ ಭದ್ರತಾ ಠೇವಣಿ; ಬೆಂಗಳೂರಿನಲ್ಲಿ ಮನೆ ಹುಡುಕುತ್ತಿದ್ದ ವ್ಯಕ್ತಿಗೆ ಫುಲ್ ಶಾಕ್
ಸಾಂದರ್ಭಿಕ ಚಿತ್ರImage Credit source: Pinterest
ಸಾಯಿನಂದಾ
|

Updated on:Jun 18, 2026 | 6:16 PM

Share

ಬೆಂಗಳೂರು, ಜೂನ್ 18: ಬೆಂಗಳೂರಿನಲ್ಲಿ (Bengaluru) ಬಾಡಿಗೆ ಮನೆ ಮಾಡಿ ನೆಮ್ಮದಿಯಿಂದ ಇರೋಣ ಅಂದ್ರೆ ಮನೆ ಮಾಲೀಕರ ಡಿಮ್ಯಾಂಡ್ ಹೆಚ್ಚಾಗಿದೆ. ದುಡ್ಡಿನ ಆಸೆಗೆ ಬಿದ್ದು ಮನೆ ಮಾಲೀಕರು ಬೇಕಾಬಿಟ್ಟಿ ಬಾಡಿಗೆ ಹಾಗೂ ಭದ್ರತಾ ಠೇವಣಿ ಕೇಳುತ್ತಿದ್ದಾರೆ. ನೀವೇನಾದ್ರೂ ಸಿಲಿಕಾನ್‌ ಸಿಟಿಯಲ್ಲಿ ಮನೆ ಹುಡುಕುತ್ತಿದ್ರೆ ಕಡಿಮೆ ಬಾಡಿಗೆ ಹಾಗೂ ಠೇವಣಿ ಇರುವ ಮನೆ ಸಿಗುತ್ತೆ ಅನ್ನೋದು ದೂರದ ಮಾತು. ಬೆಂಗಳೂರಿನಲ್ಲಿ ಬಾಡಿಗೆ ಮನೆ ಹುಡುಕಾಟ ವಿಚಾರದಲ್ಲಿ ತನ್ನ ಸ್ನೇಹಿತನಿಗಾದ ಅನುಭವವನ್ನು ಪೋಸ್ಟ್ ಮಾಡಿದ್ದಾರೆ. ಬೆಂಗಳೂರಿಗೆ ಸ್ಥಳಾಂತರಗೊಂಡ ತನ್ನ ಸ್ನೇಹಿತ ಫ್ಲಾಟ್‌ಗಾಗಿ ಹುಡುಕುತ್ತಿದ್ದಾಗ ಆತನಿಗೆ ಮನೆ ಮಾಲೀಕರು ಕೇಳಿದ ಬಾಡಿಗೆ ಹಾಗೂ ಠೇವಣಿ ಮೊತ್ತ ಕೇಳಿದ್ರೆ ನಿಮ್ಮದು ತಲೆ ಗಿರ್ ಅನ್ನುತ್ತೆ. ಹೌದು, 40,000 ರೂ ತಿಂಗಳ ಬಾಡಿಗೆ ಹಾಗೂ 2.4 ಲಕ್ಷ ರೂ ಭದ್ರತಾ ಠೇವಣಿಯಂತೆ. ಸದ್ಯ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ.

ಪರಿತಷ್ ಶರ್ಮಾ (Paritsh Shrrma) ತಮ್ಮ ಎಕ್ಸ್ ಖಾತೆಯಲ್ಲಿ ಬೆಂಗಳೂರಿಗೆ ಸ್ಥಳಾಂತರಗೊಂಡ ತನ್ನ ಸ್ನೇಹಿತನೊಬ್ಬನಿಗೆ ಮನೆ ಹುಡುಕುತ್ತಿದ್ದ ವೇಳೆ ಆದ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ನಲ್ಲಿ ನನ್ನ ಒಬ್ಬ ಸ್ನೇಹಿತ ಬೆಂಗಳೂರಿಗೆ ಸ್ಥಳಾಂತರಗೊಂಡು ಫ್ಲಾಟ್ ಹುಡುಕುತ್ತಿದ್ದ. ಅವನಿಗೆ ತಿಂಗಳಿಗೆ 40,000 ರೂ ಬಾಡಿಗೆ ಇರುವ ಗೆ ಫ್ಲಾಟ್ ಸಿಕ್ಕಿತು. ಮಾಲೀಕರು ಆರು ತಿಂಗಳ ಭದ್ರತಾ ಠೇವಣಿ 2.4 ಲಕ್ಷ ರೂ ಕೇಳುತ್ತಿದ್ದಾರೆ. ಅದರ ಜೊತೆಗೆ 40,000 ರೂ ಬ್ರೋಕರೇಜ್.

ವೈರಲ್ ಪೋಸ್ಟ್ ಇಲ್ಲಿದೆ

ಆರು ತಿಂಗಳ ಠೇವಣಿಯ ಹಿಂದಿನ ತರ್ಕವನ್ನು ಯಾರಾದರೂ ವಿವರಿಸಬಹುದೇ? ಬೇರೆ ಯಾವುದೇ ಪ್ರಮುಖ ನಗರದಲ್ಲಿ ಇದನ್ನು ಸಾಮಾನ್ಯ ಅಭ್ಯಾಸವಾಗಿ ನಾನು ನೋಡಿಲ್ಲ. ಅನೇಕ ಸಂದರ್ಭಗಳಲ್ಲಿ, ಮನೆ ಮಾಲೀಕರು ಕೊನೆಯಲ್ಲಿ ಪೂರ್ಣ ಠೇವಣಿಯನ್ನು ಹಿಂದಿರುಗಿಸುವುದಿಲ್ಲ. ಬೆಂಗಳೂರಿನ ಬಾಡಿಗೆ ಮಾರುಕಟ್ಟೆ ತುಂಬಾ ಉತ್ಸುಕವಾಗಿ ಕಾಣುತ್ತದೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಎಚ್ಎಸ್ಆರ್ ಲೇಔಟ್‌ನ 1BHK ನಲ್ಲಿ ವಾಸಿಸುವ ಮಹಿಳೆಯ ತಿಂಗಳ ಖರ್ಚು ಎಷ್ಟು ಗೊತ್ತಾ?

ಈ ಪೋಸ್ಟ್ ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ಟೈಯರ್ 1 ಹಾಗೂ ಮೆಟ್ರೋ ಸಿಟಿಗಳಲ್ಲಿ ಆರು ತಿಂಗಳ ಠೇವಣಿ ಸರ್ವೇ ಸಾಮಾನ್ಯ ಎಂದಿದ್ದಾರೆ. ಇನ್ನೊಬ್ಬರು, ಆರು ತಿಂಗಳ ಭದ್ರತಾ ಠೇವಣಿ ಪಡೆದಿರುವುದಕ್ಕೆ ನಿಮ್ಮ ಸ್ನೇಹಿತ ನಿಜಕ್ಕೂ ಅದೃಷ್ಟವಂತ. ಕೆಲವು ಕಡೆಗಳಲ್ಲಿ 12 ತಿಂಗಳ ಭದ್ರತಾ ಠೇವಣಿಯಿದೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ದಯವಿಟ್ಟು ಬ್ರೋಕರೇಜ್ ಕೊಡಬೇಡಿ ಎಂದು ಸಲಹೆ ನೀಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:15 pm, Thu, 18 June 26

Follow Us
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ
ಅಂಗವಿಕಲನಂತೆ ನಟಿಸಿ ಮೊಬೈಲ್ ಕದಿಯುತ್ತಿದ್ದ ಉತ್ತರ ಪ್ರದೇಶದ ಭಿಕ್ಷುಕ ಸೆರೆ
ಅಂಗವಿಕಲನಂತೆ ನಟಿಸಿ ಮೊಬೈಲ್ ಕದಿಯುತ್ತಿದ್ದ ಉತ್ತರ ಪ್ರದೇಶದ ಭಿಕ್ಷುಕ ಸೆರೆ
ಕಾವೇರಿ ವಿವಾದ ನಡುವೆಯೂ ವಿಜಯ್ ಸ್ವಾಗತಕ್ಕೆ ವಿಧಾನಸೌಧದಲ್ಲಿ ಭರದ ಸಿದ್ಧತೆ!
ಕಾವೇರಿ ವಿವಾದ ನಡುವೆಯೂ ವಿಜಯ್ ಸ್ವಾಗತಕ್ಕೆ ವಿಧಾನಸೌಧದಲ್ಲಿ ಭರದ ಸಿದ್ಧತೆ!
ಹರೀಶ್ ರಾಜ್​ಗೆ ರೊಮ್ಯಾಂಟಿಕ್ ಸ್ಟಾರ್ ಬಿರುದು; ಹೊಸ ಸಿನಿಮಾ ಕುರಿತು ಮಾತು
ಹರೀಶ್ ರಾಜ್​ಗೆ ರೊಮ್ಯಾಂಟಿಕ್ ಸ್ಟಾರ್ ಬಿರುದು; ಹೊಸ ಸಿನಿಮಾ ಕುರಿತು ಮಾತು
ಕಾವೇರಿ ನೀರು ಹಂಚಿಕೆ ವಿವಾದ: ಸಚಿವ ರಾಮಲಿಂಗಾ ರೆಡ್ಡಿ ತುರ್ತು ಸಭೆ
ಕಾವೇರಿ ನೀರು ಹಂಚಿಕೆ ವಿವಾದ: ಸಚಿವ ರಾಮಲಿಂಗಾ ರೆಡ್ಡಿ ತುರ್ತು ಸಭೆ
ಗುರು ಪೂರ್ಣಿಮೆ 2026: ಸಾಯಿಬಾಬಾ ದರ್ಶನಕ್ಕೆ ಭಕ್ತ ಸಾಗರ
ಗುರು ಪೂರ್ಣಿಮೆ 2026: ಸಾಯಿಬಾಬಾ ದರ್ಶನಕ್ಕೆ ಭಕ್ತ ಸಾಗರ
ದೆಹಲಿಗೆ ತೆರಳಿದ ಜಮೀರ್​; ರಾಹುಲ್ ಗಾಂಧಿ ಭೇಟಿ ಸಾಧ್ಯತೆ
ದೆಹಲಿಗೆ ತೆರಳಿದ ಜಮೀರ್​; ರಾಹುಲ್ ಗಾಂಧಿ ಭೇಟಿ ಸಾಧ್ಯತೆ
ತಮಿಳುನಾಡಿಗೆ ನೀರು ಬಿಡುವಂತೆ ಆದೇಶಿಸಿದ್ದು ಸರಿಯಲ್ಲ: ದರ್ಶನ ಪುಟ್ಟಣಯ್ಯ
ತಮಿಳುನಾಡಿಗೆ ನೀರು ಬಿಡುವಂತೆ ಆದೇಶಿಸಿದ್ದು ಸರಿಯಲ್ಲ: ದರ್ಶನ ಪುಟ್ಟಣಯ್ಯ
ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ಖಂಡಿಸಿ ಅನ್ನದಾತರ ಆಕ್ರೋಶ
ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ಖಂಡಿಸಿ ಅನ್ನದಾತರ ಆಕ್ರೋಶ
ಮಾದಪ್ಪನ ಹುಂಡಿಯಲ್ಲಿ ಕೋಟಿ ಕೋಟಿ ಕಾಣಿಕೆ ಸಂಗ್ರಹ!
ಮಾದಪ್ಪನ ಹುಂಡಿಯಲ್ಲಿ ಕೋಟಿ ಕೋಟಿ ಕಾಣಿಕೆ ಸಂಗ್ರಹ!