ಬೆಂಗಳೂರು: 10 ನಿಮಿಷ ಕಾಯಿಸಿದ್ದಕ್ಕೆ ಮಹಿಳೆ ಮತ್ತು ಆಟೋ ಚಾಲಕನ ನಡುವೆ ಬಿಗ್​​ ಫೈಟ್

ಬೆಂಗಳೂರಿನಲ್ಲಿ ಆಟೋ ಚಾಲಕ ಮತ್ತು ಪ್ರಯಾಣಿಕರ ನಡುವಿನ ಜಗಳದ ವಿಡಿಯೋ ವೈರಲ್ ಆಗಿದೆ. ಆ್ಯಪ್ ಮೂಲಕ ಬುಕ್ ಮಾಡಿದ ಮಹಿಳೆ ಆಟೋ ಚಾಲಕನನ್ನು 10 ನಿಮಿಷ ಕಾಯಿಸಿದ್ದಾರೆ. ಇದಕ್ಕೆ ಚಾಲಕ ಹೆಚ್ಚುವರಿ ಹಣ ಕೇಳಿದಾಗ ಇಬ್ಬರ ನಡುವೆ ಜಗಳ ಶುರುವಾಗಿದೆ. ಇದೀಗ ಇಲ್ಲಿ ಯಾರು ಸರಿ, ಯಾರು ತಪ್ಪು ಎಂಬುದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಪ್ರತಿದಿನ ಇಂತಹ ಜಗಳಗಳ ವಿಡಿಯೋ ವೈರಲ್​ ಆಗುತ್ತ ಇರುತ್ತದೆ.

ಬೆಂಗಳೂರು: 10 ನಿಮಿಷ ಕಾಯಿಸಿದ್ದಕ್ಕೆ ಮಹಿಳೆ ಮತ್ತು ಆಟೋ ಚಾಲಕನ ನಡುವೆ ಬಿಗ್​​ ಫೈಟ್
ವೈರಲ್​​ ವಿಡಿಯೋ

Updated on: Oct 30, 2025 | 1:37 PM

ಬೆಂಗಳೂರು, ಅ.30: ಬೆಂಗಳೂರಿನಲ್ಲಿ ಆಟೋ ಚಾಲಕರು (Bengaluru Auto Dispute) ಹಾಗೂ ಪ್ರಯಾಣಿಕರ ನಡುವೆ ಕಿರಿಕಿರಿ ಮಾಡಿಕೊಳ್ಳುವ ಅದೆಷ್ಟೋ ಪೋಸ್ಟ್​​ಗಳು ಸೋಶಿಯಲ್​​ ಮೀಡಿಯಾದಲ್ಲಿ ದಿನನಿತ್ಯ ವೈರಲ್​​ ಆಗುತ್ತ ಇರುತ್ತದೆ. ಇದೀಗ ಇಲ್ಲೊಂದು ಪೋಸ್ಟ್​​ ಸಾಮಾಜಿಕ ಜಾಲತಾಣದಲ್ಲಿ ವೈರಲ್​​​ ಆಗಿದ್ದು. ಇಲ್ಲಿ ಯಾರದು ತಪ್ಪು ಎಂಬುದನ್ನು ನಿರ್ಧಾರ ಮಾಡಬೇಕಿದೆ. ಚಾಲಕ ಮತ್ತು ಮಹಿಳೆಯ ನಡುವೆ ಕಾಯುವ ವಿಚಾರವಾಗಿ ಜಗಳ ನಡೆದಿದೆ ಎಂದು ಹಂಚಿಕೊಂಡಿರುವ ಪೋಸ್ಟ್​​​ನಲ್ಲಿ ಬರೆದುಕೊಂಡಿದ್ದು, ಈ ವಿಡಿಯೋವನ್ನು ಎಕ್ಸ್​​​ನಲ್ಲಿ ಹಂಚಿಕೊಳ್ಳಲಾಗಿದೆ. ಪೋಸ್ಟ್‌ನಲ್ಲಿರುವ ವೀಡಿಯೊದ ಪ್ರಕಾರ, ಮಹಿಳೆಯೊಬ್ಬರು ಆ್ಯಪ್​​​ನಲ್ಲಿ ಆಟೋ ಬುಕ್​​ ಮಾಡಿದ್ದಾರೆ. ಆಟೋ ಮಹಿಳೆಯ ಮನೆ ಬಳಿ ಬಂದ ನಂತರ ಚಾಲಕ ಫೋನ್​​ ಮಾಡಿ, ಮೇಡಂ ನಾನು ಲೊಕೇಶನ್​​ನಲ್ಲಿ ಇದ್ದೇನೆ ಎಂದು ಹೇಳಿದ್ದಾರೆ. ಅದಕ್ಕೆ ಮಹಿಳೆ ಎಸ್..​​ ಸರ್​​ ಬಂದೆ, ಮನೆಗೆ ಬೀಗ ಹಾಕುತ್ತಿದ್ದೇನೆ ಎಂದು ಹೇಳಿದ್ದಾರೆ. 10 ನಿಮಿಷವಾದ್ರೂ ಮಹಿಳೆಯ ಪತ್ತೆ ಇಲ್ಲ. 10 ನಿಮಿಷದ ನಂತರ ಮಹಿಳೆ ಆಟೋ ಬಳಿ ಬಂದಿದ್ದಾರೆ. ಆಟೋ ಚಾಲಕ ಮೇಡಂ ನನ್ನನ್ನು ಕಾಯಿಸಿದಕ್ಕಾಗಿ ಹೆಚ್ಚುವರಿಗೆ ಪಾವತಿ ಮಾಡಬೇಕು ಎಂದು ಹೇಳಿದ್ದಾರೆ. ಇದಕ್ಕೆ ಮಹಿಳೆ ಒಪ್ಪಿಲ್ಲ, ಈ ಕಾರಣಕ್ಕೆ ಇಬ್ಬರ ನಡುವೆ ಜಗಳ ನಡೆದಿದೆ.

ಇನ್ನು ಮಹಿಳೆ ನಾನು ಯಾವುದೇ ಕಾರಣಕ್ಕೂ ಹೆಚ್ಚಿನ ಪಾವತಿ ಮಾಡುವುದಿಲ್ಲ, ಬೇಕಿದ್ರೆ ನೀವೇ ಬುಕಿಂಗ್​​ನ್ನು ಕ್ಯಾನ್ಸಲ್​​​ ಮಾಡಬೇಕಿತ್ತು ಎಂದು ಹೇಳಿದ್ದಾರೆ. ಇದಕ್ಕೆ ಆಟೋ ಚಾಲಕ ನಾನು ಯಾಕೆ ರದ್ದು ಮಾಡಬೇಕು, ನೀವೇ ಮಾಡಬೇಕಿತ್ತು ಎಂದು ಇಬ್ಬರು ವಾದಿಸಿದ್ದಾರೆ. ಕೊನೆಗೆ ಇಬ್ಬರು ಈ ವಾದವನ್ನು ನಿಲ್ಲಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆಗಳು ವ್ಯಕ್ತವಾಗಿದ್ದು, ಬಳಕೆದಾರರು ತಮ್ಮ ಅಭಿಪ್ರಾಯವನ್ನು ಸೋಶಿಯಲ್​​​ ಮೀಡಿಯಾದಲ್ಲಿ ಕಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ: ಹಿಂದೂ ದೇವಾಲಯಕ್ಕೆ ಭೇಟಿ ನೀಡಿದ ಬ್ರಿಟನ್​​ನ ರಾಜ – ರಾಣಿ, ಇದೊಂದು ಸುಂದರ ಕ್ಷಣ ಎಂದ ಜನ

ವೈರಲ್​ ವಿಡಿಯೋ ಇಲ್ಲಿದೆ ನೋಡಿ:

ಕೆಲವು ಬಳಕೆದಾರರು ಚಾಲಕನ ಪರ ನಿಂತಿದ್ದಾರೆ. ಅವರ ಸಮಯಕ್ಕೆ ಬೆಲೆ ಇದೆ. ಇದು ಸರಿಯಲ್ಲ ಎಂದು ಹೇಳಿದ್ದಾರೆ. ಇನ್ನು ಕೆಲವು ಬಳಕೆದಾರರು, ಇದೊಂದು ಸಂವಹನ ಮತ್ತು ನಮ್ಯತೆ ಕೆಲಸದ ಭಾಗವಾಗಿದೆ ಎಂದು ಹೇಳಿದ್ದಾರೆ. ಒಬ್ಬ ಬಳಕೆದಾರ 10 ನಿಮಿಷಗಳ ಕಾಲ ಕಾಯುವಂತೆ ಮಾಡುವುದು ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರ, ನಾನು ಮನೆಯಿಂದ ಹೊರಟ ನಂತರವೇ ನಾನು ಆಟೋ ಬುಕ್​ ಮಾಡುವುದು, ಯಾವ ಕಾರಣಕ್ಕೆ ಮತ್ತೊಬ್ಬರನ್ನು ಕಾಯಿಸಬಾರದು ಎಂದು ಹೇಳಿದ್ದಾರೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ