
ಕೆಲವರ ಬದುಕಿನಲ್ಲಿ ಎಲ್ಲಾ ಇರುತ್ತೆ, ಶ್ರೀಮಂತಿಕೆಗೆ ಕೊರತೆನೇ ಇರಲ್ಲ. ಕೈ ತುಂಬಾ ಸಂಬಳ ಸಿಗುವ, ಬೇಕಾದ್ದನ್ನು ಖರೀದಿಸುವ ತಾಕತ್ತು ಹೀಗೆ . ಆದರೆ ನೆಮ್ಮದಿ, ಸಂತೋಷ ಅನ್ನೋ ಮಾತು ದೂರವಾಗಿರುತ್ತದೆ. ಹೀಗಾಗಿ ಕೆಲವರು ನೆಮ್ಮದಿಗಾಗಿ ತಮ್ಮ ಇಷ್ಟದ ಕಾಯಕ ಮಾಡೋದನ್ನು ನೀವು ನೋಡಿರಬಹುದು. ಬೆಂಗಳೂರಿನ (Bengaluru) ಸಾಫ್ಟ್ ವೇರ್ ಇಂಜಿನಿಯರ್‌ಯದ್ದು ಇದೇ ಪರಿಸ್ಥಿತಿ. ಹೌದು ಕಂಪನಿಯಲ್ಲಿ ಕೆಲಸ, ವಾರ್ಷಿಕವಾಗಿ 30 ಲಕ್ಷ ರೂ ದುಡಿಮೆ. ಆದರೆ ಈ ವ್ಯಕ್ತಿಯನ್ನು ವಿಪರೀತವಾಗಿ ಒಂಟಿತನ ಕಾಡುತ್ತಿದೆಯಂತೆ. ಇದರಿಂದ ಮುಕ್ತವಾಗಲು ವೀಕೆಂಡ್‌ನಲ್ಲಿ ರ‍್ಯಾಪಿಡೋ ಬೈಕ್ ಡ್ರೈವರ್ (Bike driver) ಆಗಿ ಕೆಲಸ ಮಾಡುತ್ತಿದ್ದಾರೆ. ಈ ಕುರಿತಾದ ಪೋಸ್ಟ್ ಸದ್ಯ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಅಚ್ಚರಿ ಪಟ್ಟುಕೊಂಡಿದ್ದಾರೆ.
@saad – akbar-10 ಹೆಸರಿನ ಎಕ್ಸ್ ಖಾತೆಯಲ್ಲಿ ಬಳಕೆದಾರರೊಬ್ಬರು ಬೆಂಗಳೂರಿನ ಸಾಫ್ಟ್ ವೇರ್ ಇಂಜಿನಿಯರ್ ಅವರು ತಮ್ಮ ಜೊತೆಗೆ ಹಂಚಿಕೊಂಡ ಅನುಭವವನ್ನು ಇಲ್ಲಿ ಹೇಳಿದ್ದಾರೆ. ಕಾರ್ಪೋರೇಟ್ ಜೀವನದಿಂದ ಎದುರಾದ ಒಂಟಿತನವನ್ನು ಹೋಗಲಾಡಿಸಲು ರ‍್ಯಾಪಿಡೋ ಬೈಕ್ ಡ್ರೈವರ್ ಆಗಿ ಕೆಲಸ ಮಾಡುತ್ತಿರುವ ಬೆಂಗಳೂರಿನ ಟೆಕ್ಕಿಯ ಕುರಿತು ಬರೆದುಕೊಂಡಿದ್ದಾರೆ. ತಮ್ಮ ಟಿವಿಎಸ್ ರೊನಿನ್ ಬೈಕ್‌ನಲ್ಲಿ ರ‍್ಯಾಪಿಡೋ ಗ್ರಾಹಕರನ್ನು ಪಿಕಪ್ ಮಾಡಲು ಬಂದ ವೇಳೆಯಲ್ಲಿ ಪ್ರಯಾಣಿಕರೊಬ್ಬರು ಇವರನ್ನು ಮಾತನಾಡಿಸುವ ಪ್ರಯತ್ನ ಮಾಡಿದ್ದು, ಈ ವೇಳೆ ತಾವು ಈ ಕೆಲಸ ಯಾಕೆ ಆಯ್ಕೆ ಮಾಡಿಕೊಂಡೆ ಎಂದು ತಿಳಿಸಿದ್ದಾರೆ.
A Rapido guy came on a TVS Ronin that costs around ₹2 lakh. Seeing the bike, I asked him why he was doing this job. He replied that he is an SDE-2 at Oracle and rides his bike on weekends to cure his loneliness
— Saad Akbar (@saad_akbar_10) September 13, 2025
ಹೌದು, ಒರಾಕಲ್ ಕಂಪನಿಯಲ್ಲಿ ಸೀನಿಯರ್ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ವ್ಯಕ್ತಿಯೊಬ್ಬರು ಒಂಟಿತನವನ್ನು ಅನುಭವಿಸುತ್ತಿದ್ದಾರೆ. ಆರ್ಥಿಕ ಸಮಸ್ಯೆಯಿಲ್ಲ, ಕೈ ತುಂಬಾ ಸಂಬಳ ಸಿಗುವ ಉದ್ಯೋಗವಿದೆ. ಆದರೆ ಒಂಟಿತನವೇ ಇವರನ್ನು ಹಿಂಡಿ ಹಿಪ್ಪೆ ಮಾಡಿದೆ. ನನ್ನ ವೃತ್ತಿ ಜೀವನವೇ ನನ್ನನ್ನು ವಾರಾಂತ್ಯಗಳಲ್ಲಿ ಈ ಕೆಲಸ ಮಾಡುವಂತೆ ಮಾಡಿದೆ. ಡ್ರೈವರ್ ಆಗಿ ದುಡ್ಡು ಗಳಿಸೋದು ನನ್ನ ಉದ್ದೇಶವಲ್ಲ. ಆದರೆ ಎಲ್ಲರ ಜೊತೆಗೆ ಬೆರೆಯಬೇಕು, ವ್ಯಕ್ತಿಗಳ ಜೊತೆಗೆ ಸಂಪರ್ಕದಲ್ಲಿರಬೇಕು ಎನ್ನುವ ಕಾರಣಕ್ಕೆ ಈ ಕೆಲಸ ಆಯ್ಕೆ ಮಾಡಿಕೊಂಡೆ.
ಕಾರ್ಪೋರೇಟ್ ಜೀವನದಿಂದ ಬೇಸೆತ್ತು ಹೋಗಿದ್ದೇನೆ. ಕಂಪನಿಯಲ್ಲಿ ಬಿಡುವಿಲ್ಲದ ಕೆಲಸ ಹೀಗಾಗಿ ನಾನು ಒಂಟಿಯಾಗಿದ್ದೇನೆ. ನನ್ನ ಸ್ನೇಹಿತರು ಹಾಗೂ ಕುಟುಂಬದವರನ್ನು ಭೇಟಿಯಾಗಲು ನನಗೆ ಆಗುತ್ತಿಲ್ಲ. ಹೀಗಾಗಿ ನಾನು ನನ್ನ ಒಂಟಿತನ ಕಳೆಯಲು ರ‍್ಯಾಪಿಡೋ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದೇನೆ. ನಾನು ಪಿಕಪ್ ಮಾಡುವ ಅಪರಿಚಿತ ಪ್ರಯಾಣಿಕರ ಜೊತೆಗೆ ಬೆರೆಯುತ್ತೇನೆ. ನಾನು ಎಲ್ಲಾ ನಿರ್ಬಂಧಗಳನ್ನು ಮೀರಿ ನಾನು ನಾನಾಗಿರಲು ಇಲ್ಲಿ ಮಾತ್ರ ಸಾಧ್ಯ ಎಂದು ಹೇಳಿದ್ದಾರಂತೆ. ಈ ಮೂಲಕ ಪ್ರಯಾಣಿಕರೊಬ್ಬರು ಬೆಂಗಳೂರಿನ ಟೆಕ್ಕಿಯೊಬ್ಬರ ಬದುಕಿನ ಕರಾಳ ಮುಖವನ್ನು ಪರಿಚಯಿಸಿದ್ದಾರೆ .
ಇದನ್ನೂ ಓದಿ:Viral: ಮೂವಿ ನೋಡೋಕ್ ಥಿಯೇಟರ್‌ಗೆ ಬಂದ್ರು ಬೆಂಗಳೂರು ಮಹಿಳೆಯ ಬೆನ್ನು ಬಿಟ್ಟಿಲ್ಲ ವರ್ಕ್ ಟೆನ್ಶನ್
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬಳಕೆದಾರರು, ಕೈತುಂಬಾ ಸಂಬಳ ಸಿಗುವ ಉದ್ಯೋಗದಲ್ಲಿರುವವರನ್ನು ಕಾಡುತ್ತಿರುವ ಸಮಸ್ಯೆಯೇ ಇದು. ಇದರಿಂದ ಮಾನಸಿಕ ಆರೋಗ್ಯವು ಹದಗೆಡುತ್ತದೆ ಎಂದಿದ್ದಾರೆ. ಮತ್ತೊಬ್ಬರು ಏನೇ ಹೇಳಿ ಸಂಬಳ ಕಡಿಮೆಯಿದ್ರು ನೆಮ್ಮದಿ ಮುಖ್ಯ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರ ಎರಡೆರಡು ಉದ್ಯೋಗ ಮಾಡಿ ಜೀವನ ನಡೆಸುವವರನ್ನು ನೋಡಿದ್ದೇನೆ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:12 pm, Fri, 19 September 25