Viral: ಅಂದು ತಿಂಗಳಿಗೆ 18 ಸಾವಿರ ರೂ ಸಂಬಳ, ಇಂದು ವಾರ್ಷಿಕ ಸಂಬಳವೇ 24 ಲಕ್ಷ ರೂ; ಯಶಸ್ಸಿನ ಹಾದಿ ಬಿಚ್ಚಿಟ್ಟ ಬೆಂಗಳೂರಿನ ಯುವಕ
ಇತ್ತೀಚೆಗಿನ ದಿನಗಳಲ್ಲಿ ಕಡಿಮೆ ಸಂಬಳಕ್ಕೆ ಕೆಲಸ ಮಾಡಿ ಲೈಫ್ ಸೆಟ್ಲ್ ಆಗೋದು ಅಂದ್ರೆ ಕಷ್ಟದ ಮಾತು. ಆದರೆ ಈ ಎಲ್ಲಾ ಕಷ್ಟಗಳನ್ನು ಮೆಟ್ಟಿ ನಿಂತು ಇಂದು ಬದುಕು ಕಟ್ಟಿಕೊಂಡ ಬೆಂಗಳೂರಿನ ಯುವಕನ ಕಥೆಯಿದು. ಪ್ರಾರಂಭದಲ್ಲಿ ಇಂಟರ್ನ್ ಆಗಿ ಕೆಲಸಕ್ಕೆ ಸೇರಿಕೊಂಡಾಗ ಕೈಗೆ ಸಿಗುತ್ತಿದ್ದದ್ದು 18 ಸಾವಿರ ರೂ ಅಂತೆ. ಆದರೆ ಇಂದು ಕೈತುಂಬಾ ಸಂಬಳ, ಮನೆ ಎಲ್ಲವೂ ಇದೆ ಎಂದು ಹೇಳಿದ್ದಾನೆ. ಈ ಕುರಿತಾದ ಪೋಸ್ಟ್ ವೈರಲ್ ಆಗಿದೆ.

ಬದುಕು ಒಂದೇ ರೀತಿ ಇರಲ್ಲ, ಇವತ್ತಿದ್ದಂತೆ ನಾಳೆಯೂ ಇರಬೇಕಾಗಿಲ್ಲ. ಒಂದು ಕಾಲದಲ್ಲಿ ಏನು ಇಲ್ಲದ ವ್ಯಕ್ತಿಗಳು ಇಂದು ಬದುಕಿನಲ್ಲಿ ಯಶಸ್ಸು ಕಂಡಿದ್ದಾರೆ. ಅಂತಹ ನೂರಾರು ಉದಾಹರಣೆಗಳು ನಮ್ಮ ಕಣ್ಣ ಮುಂದೆ ಇದೆ. ತಾಂತ್ರಿಕ ತಜ್ಞನಾಗಿ (Technical expert) ಕೆಲಸ ಮಾಡುತ್ತಿರುವ 23 ವರ್ಷದ ಬೆಂಗಳೂರಿನ ಯುವಕನು (Young boy from Bengaluru) ತನ್ನ ಬದುಕಿನ ಹಾದಿ ಹೇಗಿತ್ತು ಎಂದು ಬಿಚ್ಚಿಟ್ಟಿದ್ದಾನೆ. ಕೆಲಸಕ್ಕೆ ಸೇರಿದ್ದ ಪ್ರಾರಂಭದಲ್ಲಿ ಪಡೆಯುತ್ತಿದ್ದದ್ದು 18000 ಸಾವಿರ ರೂ ಅಂತೆ, ಆದರೆ ಇಂದು ವಾರ್ಷಿಕವಾಗಿ 24 ಲಕ್ಷ ರೂ ಸಂಬಳ ಕೈ ಸೇರುತ್ತದೆ ಎಂದಿದ್ದಾನೆ. ಇಷ್ಟು ಸಣ್ಣ ವಯಸ್ಸಿನಲ್ಲಿ ಮನೆಯನ್ನು ಖರೀದಿಸಿದೆ ಎಂದು ತನ್ನ ಯಶಸ್ಸಿನ ಹಾದಿಯನ್ನು ಇಂಚಿಂಚಾಗಿ ವಿವರಿಸಿದ್ದಾನೆ. ಈ ಯುವಕನ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಈ ಯುವಕನ ಸಾಧನೆಯನ್ನು ಹಾಡಿಹೊಗಳಿದ್ದಾರೆ.
r/indian-flex ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಬೆಂಗಳೂರಿನ ಯುವಕನು ಸ್ಟೋರಿಯನ್ನು ಹಂಚಿಕೊಂಡಿದ್ದು, ಇಂಟರ್ನ್ ಕೆಲಸಕ್ಕೆ ಸೇರಿಕೊಂಡಾಗ 18,000 ರೂ.ಸಂಬಳದಿಂದ ಇಂದು ಮನೆ ಹೊಂದುವವರೆಗೆ ಎಂದು ಶೀರ್ಷಿಕೆಯಲ್ಲಿ ವಿವರಿಸಿದ್ದಾನೆ. ನಾನು ನಾಲ್ಕು ಜನರಿದ್ದ ಕುಟುಂಬದಿಂದ ಬಂದವನು. ಅಲ್ಲಿ ನನ್ನ ತಂದೆ ತಿಂಗಳ ಸಂಪಾದನೆ ಕೇವಲ 12 ರಿಂದ 15 ಸಾವಿರ ಆಗಿತ್ತು. ಅವರು ಗಳಿಸುತ್ತಿದ್ದ ಆ ಸಂಬಳದಲ್ಲಿ ಉಳಿತಾಯಕ್ಕೆ ಅವಕಾಶವಿರುವುದಿಲ್ಲ. ಆ ಸಮಯದಲ್ಲಿ ನಮಗೆ ನಮ್ಮ ಕನಸುಗಳು, ಒತ್ತಡ ಮತ್ತು ಓಡಾಟ ಮಾತ್ರವೇ ಆಗಿತ್ತು ಬಿಟ್ಟರೆ ಬೇರೇನೂ ಇರಲಿಲ್ಲ ಎಂದಿದ್ದಾನೆ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ

ಕಠಿಣ ಪರಿಶ್ರಮದಿಂದ ನಾನು ಟೈಯರ್ 1 ಕಾಲೇಜಿನಲ್ಲಿ ಪ್ರವೇಶ ಪಡೆದುಕೊಂಡೆ. ನಂತರ ನನ್ನ ಮೊದಲ ಇಂಟರ್ನ್‌ಶಿಪ್ ಅನ್ನು 18 ಸಾವಿರಕ್ಕೆ ಪ್ರಾರಂಭಿಸಿದೆ. ಆ ನಂತರ ಪ್ರತಿ ತಿಂಗಳು 40 ರೂಪಾಯಿ ಸಂಬಳವನ್ನು ಪಡೆಯಲು ಪ್ರಾರಂಭಿಸಿದೆ. ಜುಲೈ 2023 ರ ವೇಳೆಗೆ ನಾನು ವಾರ್ಷಿಕವಾಗಿ 15 ಲಕ್ಷ ರೂ ಸಂಬಳ ಪಡೆಯುವಂತಾದೆ. ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾಗ ಎಲ್ಲವನ್ನು ನಾನೇ ಗಳಿಸಿಕೊಂಡೆ ಎಂದು ಹೇಳಿದ್ದಾನೆ.
ಆದರೆ ಇಂದು ನಾನು ಹೆಮ್ಮೆಯಿಂದ ಹೇಳಬಲ್ಲೆ, ಈ ತಿಂಗಳು ನನ್ನ ಮೊದಲ ಮನೆಯನ್ನು ಖರೀದಿಸಿದೆ. ಸದ್ಯಕ್ಕೆ ಉಳಿತಾಯವಿಲ್ಲ, ಆದರೆ ಸಾಲವೂ ಇದೆ ಎಂಬುದು ನಿಜ, ಆದರೆ ಈಗ ಇದು ನನ್ನ ಮನೆ. ಒಂದು ಕಾಲದಲ್ಲಿ ಮ್ಯಾಕ್‌ಬುಕ್, ಐಫೋನ್, PS5 ಇದು ಆನ್ಲೈನ್ ನಲ್ಲಿ ನೋಡುತ್ತಿದ್ದ ವಿಷಯಗಳು ಆಗಿತ್ತು. ಆದರೆ ಇಂದು ಅದೆಲ್ಲವೂ ನನ್ನ ಬಳಿಯಿದೆ. ಟ್ರಿಕ್ಕಿಂಗ್ ಯಿಂದ ಹಿಡಿದು ನನ್ನ ಇಷ್ಟದ ಕೆಲಸಗಳನ್ನು ಎಲ್ಲಾ ಮಾಡುತ್ತಿದ್ದೇನೆ. ನನ್ನ ಸಂಬಳ ವಾರ್ಷಿಕವಾಗಿ 24 ಲಕ್ಷ ರೂ ಆಗಿದೆ..ಇಂದು ನಾನು SDE-2 ಆಗಿ ಮನೆಯಿಂದಲೇ ಕೆಲಸ ಮಾಡುತ್ತಿದ್ದೇನೆ. ನನ್ನ ಮುಂದಿನ ಗುರಿ ಈ ವರ್ಷದ ಅಂತ್ಯದ ವೇಳೆಗೆ ನನ್ನ ಆದಾಯವನ್ನು 50 ಲಕ್ಷಕ್ಕೆ ಹೆಚ್ಚಿಸುವುದು ಎಂದಿದ್ದಾನೆ.
ಇದನ್ನೂ ಓದಿ: Viral: ಅಮೆರಿಕದಲ್ಲಿ ಶಿಕ್ಷಣ ಪಡೆದ್ರು ಸಿಗದ ಉದ್ಯೋಗ, ಯುವಕನ ಪರಿಸ್ಥಿತಿಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಭಾರತೀಯ ಮಹಿಳೆ
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಈ ಯುವಕ ಯಶಸ್ಸಿನ ಕಥೆಯನ್ನು ಮೆಚ್ಚಿಕೊಂಡಿದ್ದಾರೆ. ಒಬ್ಬ ಬಳಕೆದಾರರು ಅಭಿನಂದನೆಗಳು ಎಂದರೆ, ಮತ್ತೊಬ್ಬರು, ನಿಮ್ಮ ಮನೆ ತುಂಬಾನೇ ಸುಂದರವಾಗಿದೆ. ನಿಮ್ಮ ಕಠಿಣ ಪರಿಶ್ರಮಕ್ಕೆ ಸಿಕ್ಕ ಫಲವಿದು, ಹೀಗೆ ಮುಂದುವರೆಯಿರಿ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ನಿಮ್ಮ ಹಾದಿ ಹೀಗೆ ಮುಂದುವರೆಯಲಿ, ನಿಮ್ಮ ಗುರಿಯನ್ನು ತಲುಪುವಂತಾಗಲಿ, ನಿಮ್ಮ ಖರ್ಚುಗಳನ್ನು ಮಾಡಿ ಉಳಿತಾಯವನ್ನು ಪ್ರಾರಂಭಿಸಿ ಎಂದು ಸಲಹೆ ನೀಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:46 pm, Wed, 10 September 25








