AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಅಮೆರಿಕದಲ್ಲಿ ಶಿಕ್ಷಣ ಪಡೆದ್ರು ಸಿಗದ ಉದ್ಯೋಗ, ಯುವಕನ ಪರಿಸ್ಥಿತಿಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಭಾರತೀಯ ಮಹಿಳೆ

ವಿದೇಶಕ್ಕೆ ಓದಲು ಹಾಗೂ ಉದ್ಯೋಗಕ್ಕೆಂದು ತೆರಳುವುದೇ ಹೆಚ್ಚು. ಫಾರಿನ್‌ನಲ್ಲಿ ಓದಿ ಕೆಲಸ ಸಿಕ್ಕರೆ ಲೈಫ್ ಸೆಟಲ್ ಆಗ್ಬಹುದು ಎಂದು ಬಹುತೇಕರು ಅಂದುಕೊಂಡಿರುತ್ತಾರೆ. ಆದರೆ ಭಾರತೀಯ ಮೂಲದ ಮಹಿಳೆಯೊಬ್ಬರು ಅನೇಕ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಬಹುನಿರೀಕ್ಷಿತ ಅಮೆರಿಕನ್ ಕನಸು ಕುಸಿಯುತ್ತಿದೆ ಎಂದು ವಾಸ್ತವ ಸ್ಥಿತಿಯನ್ನು ವಿವರಿಸಿದ್ದಾರೆ. ಅಮೆರಿಕದಲ್ಲಿ ಅಧ್ಯಯನ ಮಾಡಲು ಬಯಸುವವರು ಜಾಗರೂಕರಾಗಿರಿ ಎಂದು ಮಹಿಳೆಯೊಬ್ಬರು ಎಚ್ಚರಿಸಿದ್ದಾರೆ.

Viral: ಅಮೆರಿಕದಲ್ಲಿ ಶಿಕ್ಷಣ ಪಡೆದ್ರು ಸಿಗದ ಉದ್ಯೋಗ, ಯುವಕನ ಪರಿಸ್ಥಿತಿಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಭಾರತೀಯ ಮಹಿಳೆ
ಸಾಂದರ್ಭಿಕ ಚಿತ್ರImage Credit source: Pinterest
ಸಾಯಿನಂದಾ
|

Updated on: Aug 27, 2025 | 5:44 PM

Share

ಚೆನ್ನಾಗಿ ಓದ್ಬೇಕು, ಒಳ್ಳೆಯ ಸಂಬಳ ಸಿಗುವ ಕೆಲಸ ಗಿಟ್ಟಿಸಿಕೊಳ್ಳಬೇಕು ಹೀಗೆ ನೂರಾರು ಕನಸುಗಳನ್ನು ಕಟ್ಟಿಕೊಂಡು ಯುವಕ ಯುವತಿಯರು ಶಿಕ್ಷಣಕ್ಕಾಗಿ ವಿದೇಶಕ್ಕೆ ಹಾರುತ್ತಾರೆ. ಅಮೆರಿಕ (America) ಸೇರಿದಂತೆ ವಿದೇಶದಲ್ಲಿ ಓದುವುದೆಂದರೆ ದುಬಾರಿ ಹಣ ಖರ್ಚಾಗುತ್ತದೆ. ಸ್ಯಾನ್ ಫ್ರಾನ್ಸಿಸ್ಕೋದಲ್ಲಿ (San Francisco) ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಮಹಿಳೆಯೊಬ್ಬರು ತಮ್ಮ ಸ್ನೇಹಿತನ ಸಹೋದರನು ಅಮೆರಿಕದಲ್ಲಿ ಶಿಕ್ಷಣ ಪಡೆದಿದ್ದು, ಆದರೆ ಓದಿಗಾಗಿ ಐವತ್ತು ಲಕ್ಷ ರೂ ಸಾಲ ಮಾಡಿಕೊಂಡಿದ್ದಾರೆ. ಈ ವ್ಯಕ್ತಿ ಈಗ ಪಡೆಯುವ ಸಂಬಳ ಇಪ್ಪತ್ತು ಸಾವಿರ ರೂಪಾಯಿ ಎಂದು ವಾಸ್ತವ ಸ್ಥಿತಿಯನ್ನು ಬಿಚ್ಚಿಟ್ಟಿದ್ದಾರೆ.

ಪೋಸ್ಟ್‌ನಲ್ಲಿ ಭಾರತೀಯ ಮೂಲದ ಮಹಿಳೆ, ತನ್ನ ಸ್ನೇಹಿತನ ಸಹೋದರನು ಅಮೇರಿಕನ್ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆಯಲು $60,000 ಖರ್ಚು ಮಾಡಿದ್ದರು. ಆದರೆ ಓದಿಗೆ ತಕ್ಕ ಉದ್ಯೋಗ ಸಿಗಲೇ ಇಲ್ಲ, ಹೀಗಾಗಿ ಉದ್ಯೋಗದ ಕೊರತೆಯಿಂದ ಮತ್ತೆ ಮುಂಬೈಗೆ ಮರಳಿದ್ದು, ಆದರೆ ಬರೋಬ್ಬರಿ 50 ಲಕ್ಷ ರೂ ಸಾಲ ಅವರ ತಲೆ ಮೇಲಿದೆ. ಕಡಿಮೆ ಸಂಬಳದಲ್ಲಿ ದುಡಿಯುತ್ತಿದ್ದು, ಲಕ್ಷಾನುಗಟ್ಟಲೇ ಸಾಲಯಿದ್ದು, ಮುಂದೇನು ಮಾಡಬೇಕು ಎಂದು ತೋಚದಂತಹ ಪರಿಸ್ಥಿತಿ ಅವರದ್ದಾಗಿದೆ ಎಂದಿದ್ದಾರೆ.

ವಿಶ್ವವಿದ್ಯಾನಿಲಯಗಳು ಈ ಘಟನೆಗಳ ಯಾವತ್ತಿಗೂ ನಿಮ್ಮ ಬಳಿ ಹೇಳಿಕೊಳ್ಳುವುದಿಲ್ಲ. ಆದರೆ ನನ್ನ ಸ್ನೇಹಿತನ ಸಹೋದರನು ಅಷ್ಟು ಓದಿಕೊಂಡಿದ್ದರೂ ಒಳ್ಳೆಯ ಉದ್ಯೋಗವು ಸಿಕ್ಕಿಲ್ಲ. ಉದ್ಯೋಗಾವಕಾಶದ ಕೊರತೆಯಿದ್ದು, ಹೀಗಾಗಿ ಅವರು ಸ್ಟಾರ್ಟ್‌ಅಪ್ ಕಂಪನಿಯಲ್ಲಿ 20,000 ರೂ.ಗಳಿಗೆ ದುಡಿಯುತ್ತಿದ್ದಾರೆ. ಆ ವ್ಯಕ್ತಿಯ ತಂದೆಯೂ ತನಗೆ ಬರುವ ಪಿಂಚಣಿ ಹಣದಲ್ಲಿ ಶಿಕ್ಷಣ ಸಾಲದ ಬಡ್ಡಿಯನ್ನು ಕಟ್ಟುತ್ತಿದ್ದಾರೆ. ಅಮೆರಿಕದಲ್ಲಿ ಓದಿದರೆ ಪ್ರಯೋಜನಗಳು ಹಲವಿದ್ದರೂ ಈ ಕೆಲವು ವಿಷಯಗಳು ನೆನಪಿನಲ್ಲಿರಬೇಕು. ಈ ಹಿಂದೆಲ್ಲಾ ಸ್ಟೇಮ್ ಕ್ಷೇತ್ರಗಳಲ್ಲಿ ಪದವಿ ಪಡೆದವರಿಗೆ ಉದ್ಯೋಗಗಳು ಸಿಗುತ್ತಿದ್ದವು. ಅಮೆರಿಕ ಸೇರಿದಂತೆ ವಿದೇಶದಲ್ಲಿ ಓದುವ ಪ್ಲ್ಯಾನ್ ಹಾಕುವ ಮುಂಚೆ ಈ ಬಗ್ಗೆ ತಿಳಿದಿರುವುದು ಮುಖ್ಯ ಎಂದಿದ್ದಾರೆ.

ಇದನ್ನೂ ಓದಿ
Image
ಪ್ರೊಫೆಶನಲ್ ಆಗಿ ಸಂದೇಶ ಕಳುಹಿಸಿ ರಜೆ ಕೇಳಿದ ಬೆಂಗಳೂರಿನ ಮನೆಕೆಲಸದಾಕೆ
Image
ನಿಮ್ಗೆ ಈ ಕಂಪನಿಯಲ್ಲಿ ಕೆಲಸ ಸಿಗಲ್ಲ ಎಂದು ಯುವತಿಗೆ ಹೇಳಿದ ಸಂದರ್ಶಕ
Image
ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡುತ್ತಾ ಪೊಲೀಸ್ ಪರೀಕ್ಷೆಗೆ ಯುವಕನ ತಯಾರಿ
Image
ಟೈಮ್ ಆದ್ರೂ ಕೆಲಸ ವಹಿಸಿದ ಮ್ಯಾನೇಜರ್, ನೋ ಎಂದು ಆಫೀಸಿನಿಂದ ಹೊರನಡೆದ ಯುವತಿ

ಇದನ್ನೂ ಓದಿ: Viral: ಪ್ರೊಫೆಶನಲ್ ಆಗಿ ಸಂದೇಶ ಕಳುಹಿಸಿ ರಜೆ ಕೇಳಿದ ಬೆಂಗಳೂರಿನ ಮನೆಕೆಲಸದಾಕೆ

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಒಬ್ಬ ಬಳಕೆದಾರರು ವಿದೇಶದಲ್ಲಿ ಶಿಕ್ಷಣ ಪಡೆಯುವುದು ಹೇಳ್ತಾರೆ, ಆದರೆ ಶಿಕ್ಷಣದ ಹೆಸರಿನಲ್ಲಿ ಲಕ್ಷಾನುಗಟ್ಟಲೆ ಲೂಟುತ್ತಾರೆ, ಆಮೇಲೆ ಜೀವನಪರ್ಯಂತ ಸಾಲ ಕಟ್ಟೋದ್ರಲ್ಲಿ ಜೀವನ ಮುಗಿದು ಹೋಗುತ್ತೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ವಿದೇಶದಲ್ಲಿ ಓದುವ ಅದೆಷ್ಟೋ ವಿದ್ಯಾರ್ಥಿಗಳಿಗೆ ಕಹಿ ಅನುಭವವಾಗಿರುತ್ತದೆ, ಆದರೆ ನಮ್ಮ ತಿಳಿದಿರುವುದಿಲ್ಲ ಅಷ್ಟೇ ಎಂದಿದ್ದಾರೆ. ಇನ್ನೊಬ್ಬರು ನಾವು ಯಶಸ್ಸು ಕಂಡವರ ಬಗ್ಗೆ ಮಾತ್ರ ಮಾತಾಡ್ತೇವೆ,ಆದರೆ ಇಂತಹವರ ಜೀವನದಿಂದಲೂ ಕಲಿಯುವುದಕ್ಕೆ ಬೇಕಾದಷ್ಟು ಇವೆ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ