Video: ರಾತ್ರಿ ಪಾಳಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡುತ್ತಾ ಪೊಲೀಸ್ ಪರೀಕ್ಷೆಗೆ ಬಿಹಾರಿ ಯುವಕನ ತಯಾರಿ
ಮನಸ್ಸಿದರೆ ಮಾರ್ಗ ಎನ್ನುವ ಮಾತಿದೆ. ಜೀವನದಲ್ಲಿ ಏನನ್ನಾದರೂ ಸಾಧಿಸಬೇಕಾದ್ರೆ ಛಲವಿರಲೇ ಬೇಕು. ಇದಕ್ಕೆ ಸಾಕ್ಷಿ ವೈರಲ್ ಆಗಿರುವ ಈ ವಿಡಿಯೋ. ಸೆಕ್ಯೂರಿಟಿ ಗಾರ್ಡ್ ಆಗಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿರುವ ಯುವಕನೊಬ್ಬನು ಪೊಲೀಸ್ ಪರೀಕ್ಷೆಗೆ ಅಧ್ಯಯನ ನಡೆಸುತ್ತಿದ್ದಾನೆ. ಈ ವಿಡಿಯೋ ಸಾಧಿಸುವ ಛಲ ಎಷ್ಟಿದೆ ಎನ್ನುವುದಕ್ಕೆ ಸಾಕ್ಷಿಯಂತಿದೆ. ಸದ್ಯಕ್ಕೆ ಈ ವಿಡಿಯೋ ವೈರಲ್ ಆಗಿದ್ದು ಎಲ್ಲರ ಗಮನ ಸೆಳೆಯುತ್ತಿದೆ.

ಕೆಲವರಿಗೆ ಮನೆಯಲ್ಲಿ ಎಲ್ಲಾ ಸವಲತ್ತುಗಳಿದ್ದು, ಆರ್ಥಿಕವಾಗಿ ಸದೃಢವಾಗಿದ್ದರೂ ಓದುವ ಮನಸ್ಸಿರುವುದಿಲ್ಲ. ತಂದೆ ತಾಯಂದಿರು ಲಕ್ಷಾನುಗಟ್ಟಲೆ ಖರ್ಚು ಮಾಡಿ ಓದಿಸಿದರೂ ಸರಿಯಾಗಿ ಓದದೇ ಎಂಜಾಯ್ ಮೆಂಟ್‌ನಲ್ಲೇ ಕಾಲ ಕಳೆಯುತ್ತಾರೆ. ಆದರೆ ಇಲ್ಲೊಬ್ಬ ಬಿಹಾರದ (Bihar) ಯುವಕನು ರಾತ್ರಿ ಪಾಳಿಯಲ್ಲಿ ಸೆಕ್ಯೂರಿಟಿ ಗಾರ್ಡ್ (Security Guard) ಆಗಿ ಕೆಲಸ ಮಾಡುತ್ತಿದ್ದು, ತನ್ನ ಕರ್ತವ್ಯದ ನಡುವೆ ಪೊಲೀಸ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾನೆ. ಈ ವಿಡಿಯೋ ಯುವಕನಿಗೆ ಸಾಧಿಸುವ ಛಲ ಹಾಗೂ ದೃಢ ಸಂಕಲ್ಪ ಎಷ್ಟಿದೆ ಎನ್ನುವುದನ್ನು ಪ್ರದರ್ಶಿಸುವಂತಿದೆ. ಈ ವಿಡಿಯೋಗೆ ನೆಟ್ಟಿಗರಿಂದ ಮೆಚ್ಚುಗೆ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
suhailrasool ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾದ ಈ ವಿಡಿಯೋಗೆ ಕಷ್ಟ ಪಟ್ಟು ದುಡಿಯುತ್ತಿರುವುದರ ನಡುವೆ ಪ್ರತಿ ರಾತ್ರಿ ನಿದ್ದೆ ಬಿಟ್ಟು ಓದುತ್ತಿರುವ ಈ ಯುವಕ ಎಲ್ಲರಿಗೂ ಸ್ಫೂರ್ತಿ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಹೌದು, ಅಮಿತ್ ಹೆಸರಿನ ಬಿಹಾರದ ಯುವಕನು ತಡರಾತ್ರಿ ಸೆಕ್ಯೂರಿಟಿ ಗಾರ್ಡ್ ಕೆಲಸದ ನಡುವೆಯೇ ಪೊಲೀಸ್ ಪರೀಕ್ಷೆಗೆ ತಯಾರಿ ನಡೆಸುತ್ತಿರುವುದನ್ನು ನೀವಿಲ್ಲಿ ನೋಡಬಹುದು. 23 ವರ್ಷದ ಯುವಕ ಸೆಕ್ಯೂರಿಟಿ ಗಾರ್ಡ್ ಕೆಲಸದಲ್ಲಿರುವಾಗಲೇ ಗಣಿತದ ಸಮಸ್ಯೆಗಳನ್ನು ಬಿಡಿಸುತ್ತಾ ಅಧ್ಯಯನದಲ್ಲಿ ನಿರತನಾಗಿದ್ದಾನೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಈ ಯುವಕನನ್ನು ಕಂಡು ಇನ್ಸ್ಟಾಗ್ರಾಮ್ ಬಳಕೆದಾರ ಸುಹೇಲ್ ಎಂಬುವವರು ಮಾತನಾಡಿಸಿದ್ದು ಈ ವೇಳೆಯಲ್ಲಿ ಯುವಕನು ತನ್ನನ್ನು ಪರಿಚಯಿಸಿಕೊಂಡಿದ್ದು, ಪೊಲೀಸ್ ಪರೀಕ್ಷೆಗೆ ತಯಾರಿ ನಡೆಸುತ್ತಿರುವುದ್ದಾಗಿ ಹೇಳಿದ್ದಾನೆ. ಎಲ್ಲಿಯವರು ಎಂದು ಕೇಳಿದಾಗ ಬಿಹಾರದವನೆಂದು ಹೇಳಿದ್ದಾನೆ. ಈ ವೇಳೆಯಲ್ಲಿ ಸುಹೇಲ್ ಅವರು, ಅಮಿತ್ ಸರ್ ನಿಮ್ಮ ಬಗ್ಗೆ ಹೆಮ್ಮೆ ಇದೆ, ದೇವರು ನಿಮಗೆ ಒಳ್ಳೆಯದು ಮಾಡಲಿ. ಡಬಲ್ ಸ್ಟಾರ್ ಅಲ್ಲ, ತ್ರಿಬಲ್ ಸ್ಟಾರ್ ಅಲ್ಲ, ನೀವು ಒಂದು ದಿನ ಬಿಹಾರದ ಪೊಲೀಸ್ ಆಯುಕ್ತರಾಗಲಿ ಎಂದು ಹೇಳಿರುವುದನ್ನು ನೋಡಬಹುದು.
ಇದನ್ನೂ ಓದಿ:Viral: ಸತತ 11 ವರ್ಷಗಳಿಂದ ವಡಾ ಪಾವ್ ಮಾರಿ ಜೀವನ ಸಾಗಿಸುತ್ತಿರುವ ಯಶಸ್ವಿ ಮಹಿಳೆಯ ಕಥೆಯಿದು
ಈ ವಿಡಿಯೋ 2.4 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಬಳಕೆದಾರರೊಬ್ಬರು ನಿಮ್ಮ ಬಗ್ಗೆ ನಿಜಕ್ಕೂ ಹೆಮ್ಮೆ ಅನಿಸುತ್ತಿದೆ. ನೀವು ಪಡುತ್ತಿರುವ ಕಷ್ಟವು ಬೇಗನೇ ಕೊನೆಗಾಣಲಿ, ನೀವು ಅಂದುಕೊಂಡಂತೆ ಪೊಲೀಸ್ ಪರೀಕ್ಷೆಯಲ್ಲಿ ಪಾಸ್ ಆಗಿ ಎಂದು ಹೇಳಿದ್ದಾರೆ. ತಮಿಳಿನವನಾಗಿ ಬಿಹಾರದ ಯುವಕರು ಯುಪಿಎಸ್ ಸಿ ಪರೀಕ್ಷೆಗಳಿಗೆ ಹೇಗೆ ಕಷ್ಟ ಪಟ್ಟು ತಯಾರಿ ನಡೆಸುತ್ತಾರೆ ಎಂಬುದನ್ನು ನಾನು ನೋಡಿದ್ದೇನೆ. ಹಗಲು ರಾತ್ರಿ ಅಧ್ಯಯನ ಮಾಡ್ತಾರೆ ಎಂದು ಮತ್ತೊಬ್ಬ ಬಳಕೆದಾರ ಕಾಮೆಂಟ್ ನಲ್ಲಿ ಬರೆದುಕೊಂಡಿದ್ದಾರೆ. ಈ ಯುವಕನ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕೆ ಸಿಗುತ್ತದೆ. ಎಲ್ಲಾ ಇದ್ದು ಬದುಕನ್ನು ಸಲೀಸಾಗಿ ತೆಗೆದುಕೊಳ್ಳುವ ಯುವಕರಿಗೆ ಈ ಯುವಕನು ಮಾದರಿ ಎಂದು ಇನ್ನೊಬ್ಬರು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:10 pm, Sun, 24 August 25








