Viral: ವಿಶ್ರಾಂತಿ ಪಡೆಯದೇ ದಿನದ 14 ಗಂಟೆ ಕೆಲಸ ಮಾಡಿದ ಬೆಂಗಳೂರಿನ ಮಹಿಳೆ, ಮುಂದೇನಾಯ್ತು ಗೊತ್ತಾ?

ಖಾಸಗಿ ಕಂಪನಿಗಳಲ್ಲಿ ನೀವು ಎಷ್ಟೇ ದುಡಿದ್ರು ಅದಕ್ಕೆ ಬೆಲೆಯೇ ಇಲ್ಲ. ಈ ಕೆಲಸದ ಸ್ಥಳಗಳಲ್ಲಿ ಉದ್ಯೋಗಿಗಳು ಹೆಚ್ಚು ಒತ್ತಡ ಅನುಭವಿಸುತ್ತಾರೆ. ಬೆಂಗಳೂರಿನ ಮಹಿಳೆಗೂ ಇದೇ ರೀತಿ ಅನುಭವವಾಗಿದೆ. ಒಂದಲ್ಲ ಎರಡಲ್ಲ, ಬರೋಬ್ಬರಿ ಆರು ತಿಂಗಳ ಕಾಲ ದಿನದ 14 ಗಂಟೆ ಕೆಲಸಕ್ಕಾಗಿಯೇ ತಮ್ಮ ಸಮಯವನ್ನು ಮೀಸಲಿಟ್ಟಿದ್ದಾರೆ. ಈ ಒತ್ತಡಭರಿತ ಕೆಲಸವೂ ದೈಹಿಕ ಮಾನಸಿಕ ಕುಸಿತಕ್ಕೆ ಹೇಗೆ ಕಾರಣವಾಯಿತು ಎಂದು ವಿವರಿಸಿದ್ದಾರೆ. ಈ ಪೋಸ್ಟ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Viral: ವಿಶ್ರಾಂತಿ ಪಡೆಯದೇ ದಿನದ 14 ಗಂಟೆ ಕೆಲಸ ಮಾಡಿದ ಬೆಂಗಳೂರಿನ ಮಹಿಳೆ, ಮುಂದೇನಾಯ್ತು ಗೊತ್ತಾ?
ಸಾಂದರ್ಭಿಕ ಚಿತ್ರ
Image Credit source: Pinterest

Updated on: Feb 06, 2026 | 1:04 PM

ಬೆಂಗಳೂರು, ಫೆಬ್ರವರಿ 06: ಕೈಯಲ್ಲಿ ಒಂದು ಉದ್ಯೋಗವಿದ್ರೆ (Job) ಮರ್ಯಾದೆ. ಆದರೆ ಕೆಲಸ ಮಾಡುವ ಸ್ಥಳದಲ್ಲಿಯೇ ನೆಮ್ಮದಿ ಅನ್ನೋದೇ ಇಲ್ಲವಾದರೆ ಏನು ಮಾಡೋದು. ಹೀಗಾಗಿ ಎಷ್ಟೇ ಜನರು ಒತ್ತಡಭರಿತ ವಾತಾವರಣಕ್ಕೆ ಬೇಸೆತ್ತು ಜಾಬ್ ರಿಸೈನ್ ಮಾಡುವ ನಿರ್ಧಾರ ಕೂಡ ಮಾಡ್ತಾರೆ. ಆದರೆ ಬೆಂಗಳೂರಿನ (Bengaluru) ಮಹಿಳೆಯೊಬ್ಬರು ದಿನದ 14 ಗಂಟೆ ಕೆಲಸ ಮಾಡಿದ್ದಕ್ಕೆ ಆರೋಗ್ಯವೂ ಹದಗೆಟ್ಟಿತು. ತನ್ನ ಈ ಒಂದು ನಿರ್ಧಾರದಿಂದ ಚೇತರಿಸಿಕೊಂಡೆ ಎಂದು ಹೇಳಿದ್ದಾರೆ. ಲಿಂಕ್ಡ್ ಇನ್‌ನಲ್ಲಿ ಮಾಡಿದ ಪೋಸ್ಟ್‌ಗೆ ನೆಟ್ಟಿಗರು ಕಾಮೆಂಟ್‌ ಮಾಡಿ ಸಲಹೆ ನೀಡಿದ್ದಾರೆ.

ಮೀನಲ್ ಗೋಯೆಲ್ (Meenal Goel) ಹೆಸರಿನ ಲಿಂಕ್ಡ್ ಇನ್ ಖಾತೆಯಲ್ಲಿ ಈ ಪೋಸ್ಟ್ ಹಂಚಿಕೊಳ್ಳಲಾಗಿದೆ. ಈ ಪೋಸ್ಟ್‌ನಲ್ಲಿ ಜಾಗತಿಕ ಸಲಹಾ ಸಂಸ್ಥೆಗಳಾದ ಕೆಪಿಎಂಜಿ ಮತ್ತು ಡೆಲಾಯ್ಟ್‌ನೊಂದಿಗೆ ಕೆಲಸ ಮಾಡಿದ್ದ ಮೀನಲ್ ಗೋಯೆಲ್, ಸತತ 6 ತಿಂಗಳ ಕಠಿಣ ಕೆಲಸದ ನಂತರ ಬಳಿಕ ತನ್ನ ನಿರ್ಧಾರದಿಂದ ಹೇಗೆ ದೈಹಿಕ ಆರೋಗ್ಯವು ಸುಧಾರಿಸುವಂತೆ ಮಾಡಿತು ಎಂದು ವಿವರಿಸಿದ್ದಾರೆ.

ವೈರಲ್ ಪೋಸ್ಟ್ ಇಲ್ಲಿದೆ

ನಾನು ಆರು ತಿಂಗಳು ಸತತವಾಗಿ 14 ಗಂಟೆಗಳ ಕಾಲ ದಿನ ಕೆಲಸ ಮಾಡಿದೆ. ಕಳೆದ ವಾರ ನನಗೆ ಏನು ಮಾಡಲು ಸಾಧ್ಯವಿಲ್ಲ ಎನ್ನುವಂತಾಯಿತು. ಮಂಗಳವಾರ ಬೆಳಿಗ್ಗೆ 6 ಗಂಟೆಗೆ ಅಲಾರಾಂ ಬಾರಿಸಿತು. ನನಗೆ ಹಾಸಿಗೆಯಿಂದ ಏಳಲು ಸಾಧ್ಯವಾಗಲಿಲ್ಲ. ನಾನು ಸೋಮಾರಿಯಾಗಿದ್ದ ಕಾರಣವಲ್ಲ. ಆ ವೇಳೆ ನನ್ನ ದೇಹವು ಯಾವುದಕ್ಕೂ ತಯಾರಾಗಿರಲಿಲ್ಲ ಎಂದು ವಾಸ್ತವ ಸ್ಥಿತಿಯ ಬಗ್ಗೆ ಹೇಳಿಕೊಂಡಿದ್ದಾರೆ.

ಅರ್ಧ ವರ್ಷ ಕಾಲ ತಾನು ಶಿಕ್ಷಾರ್ಹ ವೇಳಾಪಟ್ಟಿಯನ್ನು ಅನುಸರಿಸಿದೆ ಬೆಳಿಗ್ಗೆ 6 ಗಂಟೆಗೆ ಎಚ್ಚರಗೊಳ್ಳುವುದು, ರಾತ್ರಿ 11 ಗಂಟೆಯವರೆಗೆ ಕೆಲಸ ಮಾಡುವುದು, ವಾರಾಂತ್ಯಗಳನ್ನು ಸಾಮಾನ್ಯ ಕೆಲಸದ ದಿನಗಳಂತೆ ಪರಿಗಣಿಸುವುದು. ರಜಾದಿನಗಳಲ್ಲಿಯೂ ತನ್ನ ಲ್ಯಾಪ್‌ಟಾಪ್ ಅನ್ನು ಆನ್‌ನಲ್ಲಿ ಇಡುವುದು. ಆದರೆ ನನಗೆ ಮನವರಿಕೆ ಆಯಿತು. ಕ್ಲೈಂಟ್ ಕರೆಯ ಸಮಯದಲ್ಲಿ ಇದ್ದಕ್ಕಿದ್ದಂತೆ ನಾನು ಅಸ್ವಸ್ಥಳಾದೆ. ಹೃದಯ ಬಡಿತ ಜೋರಾಗಿತ್ತು. ಉಸಿರಾಡಲು ಸಾಧ್ಯವಾಗಲಿಲ್ಲ. ಫೋನ್ ಕಟ್ ಮಾಡಬೇಕಾಯಿತು. ಈ ರೀತಿ ಕೆಲಸ ಮಾಡಿ ನನ್ನ ಆರೋಗ್ಯವೇ ಹಾಳಾಗುತ್ತಿದೆ. ನಾನು ಎಲ್ಲಾ ಕ್ಷಣವನ್ನು ಆನಂದಿಸಲು ಬಯಸಿದರೂ ದೇಹವು ದಣಿದಿರುತ್ತದೆ. ಹಾಗಿದ್ದಾಗ ಈ ಯಶಸ್ಸಿನ ಅರ್ಥವೇನು ಎಂದು ಮನವರಿಕೆ ಆಯಿತು ಎಂದು ಹೇಳಿದ್ದಾರೆ.

ಆದ್ದರಿಂದ ನಾನು ಒಂದು ನಿರ್ಧಾರ ತೆಗೆದುಕೊಂಡೆ. ರಾತ್ರಿ 8 ಗಂಟೆಯ ನಂತರ ಕೆಲಸ ಮಾಡಲ್ಲ. ತ್ವರಿತ ಇಮೇಲ್‌ ಕಳುಹಿಸುವುದು. ಭಾನುವಾರಗಳು ಸಂಪೂರ್ಣವಾಗಿ ಆಫ್ ಆಗಿರುತ್ತವೆ. ಫೋನ್ ಆಫ್ ಆಗಿರುತ್ತದೆ. ಇದಾದ ಒಂದು ವಾರದಲ್ಲೇ ನನ್ನ ಉತ್ಪಾದಕತೆ? ನಿಜವಾಗಿಯೂ ಹೆಚ್ಚಾಗಿದೆ. ನನ್ನ ಮಾನಸಿಕ ಆರೋಗ್ಯ ಉತ್ತಮವಾಯಿತು. ಒತ್ತಡವು ನಮ್ಮಳೊಗಿನ ಉತ್ಸಾಹವನ್ನು ಚಿವುಟಿ ಹಾಕುತ್ತದೆ ಎಂದು ಬರೆದಿರುವುದನ್ನು ಕಾಣಬಹುದು.

ಇದನ್ನೂ ಓದಿ: “ನಿಮ್ಮ ಸಂಸ್ಥೆಗಾಗಿ ನನ್ನ ರಕ್ತ ಸುರಿಸಿದ್ದೇನೆ”: ಕಾರಣವಿಲ್ಲದೆ ವಜಾ ಮಾಡಿದ ಕಂಪನಿಗೆ ಹಿಗ್ಗಾಮುಗ್ಗಾ ಜಾಡಿಸಿದ ಬೆಂಗಳೂರಿನ ಯುವಕ

ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ದಯವಿಟ್ಟು ವಿಶ್ರಾಂತಿ ಪಡೆಯಿರಿ. ಇಲ್ಲದಿದ್ದರೆ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ ಎಂದು ಹೇಳಿದ್ದಾರೆ. ನಾವು ಅತಿಯಾದ ಕೆಲಸವನ್ನು ಎಷ್ಟು ವೈಭವೀಕರಿಸುತ್ತೇವೆ ಎಂದರೆ ಆರೋಗ್ಯವೇ ಸರ್ವಸ್ವ ಎಂಬುದನ್ನು ನಾವು ಮರೆತುಬಿಡುತ್ತೇವೆ” ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಆರೋಗ್ಯಕ್ಕಿಂತ ಕೆಲಸ ಮುಖ್ಯವಲ್ಲ. ನೀವು ಆರೋಗ್ಯಯುತವಾಗಿದ್ದರೆ ಉತ್ತಮವಾಗಿ ಕೆಲಸ ಮಾಡ್ಬಹುದು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 1:03 pm, Fri, 6 February 26