
ಬೆಂಗಳೂರಿನಲ್ಲಿ (Bengaluru) ಫ್ಲ್ಯಾಟ್‌ಮೇಟ್‌ಗಳ ಜೀವನಶೈಲಿಯೇ ವಿಭಿನ್ನ. ಒಟ್ಟಿಗೆ ವಾಸಿಸುವವರು ಮನೆ ಬಾಡಿಗೆ, ಕರೆಂಟ್ ಬಿಲ್, ಮನೆಕೆಲಸ ಸೇರಿದಂತೆ ಹಲವು ವಿಚಾರಗಳನ್ನು ಹಂಚಿಕೊಳ್ಳುವುದು ಸಾಮಾನ್ಯ. ಆದರೆ ಇಲ್ಲೊಂದು ಫ್ಲ್ಯಾಟ್‌ಮೇಟ್‌ಗಳ ಗುಂಪು ಊಟದ ವಿಚಾರವನ್ನೇ ಅಚ್ಚುಕಟ್ಟಾಗಿ ನಿರ್ವಹಿಸಲು ಮಾಡಿರುವ ಐಡಿಯಾ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇವರ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಪ್ರತಿದಿನ ಯಾರು ಏನು ತಿನ್ನಬೇಕು ಎಂಬುದನ್ನು ಮೆನು ರೂಪದಲ್ಲಿ ಕಳುಹಿಸಲಾಗುತ್ತದೆ.
ಈ ವಾಟ್ಸ್‌ಆ್ಯಪ್ ಗ್ರೂಪ್‌ಗೆ ‘Baddie Nivaas Cooking’ ಎಂದು ಹೆಸರಿಡಲಾಗಿದೆ. ಕಾಶ್ವಿ, ಉರ್ವಶಿ, ಪಾರಿ ಮತ್ತು ಇಶಿಕಾ ಎಂಬ ನಾಲ್ವರು ಫ್ಲ್ಯಾಟ್‌ಮೇಟ್‌ಗಳು ಹಾಗೂ ಅವರಿಗಾಗಿ ಅಡುಗೆ ಮಾಡುವ ಸರಿತಾ ಮತ್ತು ಸುನಿತಾ ಎಂಬ ಇಬ್ಬರು ಅಡುಗೆ ಮಾಡುವವರು ಈ ಗ್ರೂಪ್‌ನಲ್ಲಿದ್ದಾರೆ. ಕಾಶ್ವಿ ಸಕ್ಸೇನಾ ಅವರು ಗ್ರೂಪ್‌ನ ಸ್ಕ್ರೀನ್‌ಶಾಟ್ ಅನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, ಅದು ವೈರಲ್ ಆಗಿದೆ.
ಗ್ರೂಪ್‌ನಲ್ಲಿ ಹಂಚಿಕೊಂಡಿರುವ ಮೆನು ನೋಡಿದರೆ ಇದು ಮನೆಯ ಊಟದ ಪ್ಲ್ಯಾನ್‌ಗಿಂತ ಯಾವುದೋ ರೆಸ್ಟೋರೆಂಟ್‌ನ ವಿಶೇಷ ಮೆನುವಿನಂತೆ ಕಾಣುತ್ತದೆ. ಪ್ರತಿಯೊಬ್ಬರಿಗೂ ಪ್ರತ್ಯೇಕವಾಗಿ ಏನು ಬೇಕು, ಯಾವ ಪದಾರ್ಥ ಹಾಕಬೇಕು, ಯಾವುದನ್ನು ಹಾಕಬಾರದು ಎಂಬುದನ್ನೂ ವಿವರವಾಗಿ ತಿಳಿಸಲಾಗಿದೆ.
i think i’m sane because we have 2 cooks for the house and they can handle any range of items we ask them to make😭🫶
if anyone needs banger cook in indiranagar then sarita&sunita didi “have the bandwidth to pick up more projects”🗿 https://t.co/Iu7CQiJ1RP
— Kaashvi Saxena (@kaashvisaxena) October 4, 2026
ಉದಾಹರಣೆಗೆ, ಕಾಶ್ವಿಗೆ ಬೆಳಗಿನ ಉಪಾಹಾರಕ್ಕೆ ಎರಡು ಮೊಟ್ಟೆಯ ಬಿಳಿ ಭಾಗದಿಂದ ಮಾಡಿದ ಆಮ್ಲೆಟ್, ಅದರಲ್ಲಿ ಅಣಬೆ, ಈರುಳ್ಳಿ ಮತ್ತು ಟೊಮ್ಯಾಟೊ ಬೇಕು. ಆದರೆ ಬ್ರೊಕೊಲಿ ಮತ್ತು ಬ್ರೆಡ್ ಬೇಡ. ಉರ್ವಶಿಗೆ ಎರಡು ಸಂಪೂರ್ಣ ಮೊಟ್ಟೆಯ ಆಮ್ಲೆಟ್, ಆದರೆ ಈರುಳ್ಳಿ ಇಲ್ಲದೆ, ಜೊತೆಗೆ ಎರಡು ಬ್ರೆಡ್ ಸ್ಲೈಸ್ ಬೇಕು. ಇಶಿಕಾಗೆ ಅಣಬೆ, ಈರುಳ್ಳಿ ಮತ್ತು ಟೊಮ್ಯಾಟೊ ಹಾಕಿದ ಎರಡು ಮೊಟ್ಟೆಯ ಆಮ್ಲೆಟ್ ಜೊತೆಗೆ ಎರಡು ಬ್ರೆಡ್ ಸ್ಲೈಸ್ ಬೇಕು. ಪಾರಿಗೆ ಮಾತ್ರ ಬೆಳಗಿನ ಉಪಾಹಾರ ಬೇಡ.
Indian Auto in London: ಲಂಡನ್ ರಸ್ತೆಯಲ್ಲಿ ಭಾರತೀಯ ಆಟೊ; ಆನಂದ್ ಮಹೀಂದ್ರಾ ಪೋಸ್ಟ್ ವೈರಲ್
ಮಧ್ಯಾಹ್ನದ ಊಟದ ಮೆನುವೂ ಅಷ್ಟೇ ವಿಶೇಷ. ಕಾಶ್ವಿಗೆ ಚಿಕನ್, ಬ್ರೌನ್ ರೈಸ್ ಮತ್ತು ತರಕಾರಿಗಳು ಬೇಕಾದರೆ, ಉರ್ವಶಿಗೆ ಚಿಕನ್, ವೈಟ್ ರೈಸ್ ಮತ್ತು ತರಕಾರಿಗಳು ಬೇಕು. ಇಶಿಕಾ ಅವಕಾಡೊ-ಎಗ್ ಟೋಸ್ಟ್ ಕೇಳಿದ್ದಾರೆ. ಪಾರಿಗೆ ಈರುಳ್ಳಿ, ಅಣಬೆ ಮತ್ತು ಟೊಮ್ಯಾಟೊ ಹಾಕಿದ ಮೂರು ಮೊಟ್ಟೆಯ ಆಮ್ಲೆಟ್ ಜೊತೆಗೆ ಚೀಸ್ ಸ್ಯಾಂಡ್‌ವಿಚ್ ಬೇಕು.
ರಾತ್ರಿಯ ಊಟಕ್ಕೆ ಕಾಶ್ವಿ ಮತ್ತು ಉರ್ವಶಿ ಅನ್ನವಿಲ್ಲದೆ ಸ್ಲೈಸ್ ಮಾಡಿದ ಚಿಕನ್, ಸೌತೆಕಾಯಿ ಮತ್ತು ಸಲಾಡ್ ಡ್ರೆಸಿಂಗ್ ಕೇಳಿದ್ದಾರೆ. ಪಾರಿಗೆ ಬೆಂಡೆಕಾಯಿ, ರೈತ ಮತ್ತು ಎರಡು ರೊಟ್ಟಿ ಬೇಕು.
ಇಷ್ಟೊಂದು ವಿವರವಾದ ಮೆನುವನ್ನು ಪ್ರತಿದಿನ ಸಿದ್ಧಪಡಿಸುವುದು ಹೇಗೆ ಎಂದು ಸಾಮಾಜಿಕ ಜಾಲತಾಣ ಬಳಕೆದಾರರು ಕಾಶ್ವಿ ಅವರನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಅವರು, ಇದು ಪ್ರತಿದಿನ ಸಂಜೆ ಊಟದ ಸಮಯದಲ್ಲಿ ಕೇವಲ ಐದು ನಿಮಿಷ ತೆಗೆದುಕೊಳ್ಳುವ ಕೆಲಸ ಎಂದು ಹೇಳಿದ್ದಾರೆ.
ಫ್ಲ್ಯಾಟ್‌ಮೇಟ್‌ಗಳು ಊಟ ಮಾಡುವಾಗ ಮರುದಿನ ಏನು ತಿನ್ನಬೇಕು ಎಂಬುದನ್ನು ಚರ್ಚಿಸುತ್ತಾರೆ. ನಂತರ ಅಡುಗೆ ಮಾಡುವವರಿಗೆ ಒಂದೇ ವಾಯ್ಸ್ ನೋಟ್ ಕಳುಹಿಸುತ್ತಾರೆ. ಹಲವು ದಿನಗಳಿಂದ ಒಟ್ಟಿಗೆ ವಾಸಿಸುತ್ತಿರುವುದರಿಂದ ಈ ಊಟದ ಯೋಜನೆ ಈಗ ತಮಗೆ ಅಭ್ಯಾಸವಾಗಿ ಬಿಟ್ಟಿದೆ ಎಂದು ಕಾಶ್ವಿ ಹೇಳಿದ್ದಾರೆ. ಕೆಲವೊಮ್ಮೆ ತಾವು ಮೆನು ಕಳುಹಿಸದಿದ್ದರೂ ಅಡುಗೆ ಮಾಡುವವರಿಗೆ ತಾವು ಏನು ಕೇಳಬಹುದು ಎಂಬುದು ಗೊತ್ತಾಗುತ್ತದೆ ಎಂದೂ ಅವರು ತಿಳಿಸಿದ್ದಾರೆ.
ಈ ಸ್ಕ್ರೀನ್‌ಶಾಟ್ ವೈರಲ್ ಆದ ಬಳಿಕ ನೆಟ್ಟಿಗರು ಹಲವು ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಕೆಲವರಿಗೆ ಪ್ರತಿಯೊಬ್ಬರ ಬೇಡಿಕೆಗೆ ತಕ್ಕಂತೆ ಪ್ರತ್ಯೇಕ ಊಟ ಸಿದ್ಧಪಡಿಸುವ ವ್ಯವಸ್ಥೆ ಕುತೂಹಲ ಮೂಡಿಸಿದೆ. ಇನ್ನೂ ಕೆಲವರು, ಇದು ಮನೆ ಅಡುಗೆಯಲ್ಲ, ಮನೆಯಲ್ಲೇ ವೈಯಕ್ತಿಕ ರೆಸ್ಟೋರೆಂಟ್ ಇದೆ ಎಂದು ತಮಾಷೆ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:04 pm, Wed, 7 October 26