AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Indian Auto in London: ಲಂಡನ್ ರಸ್ತೆಯಲ್ಲಿ ಭಾರತೀಯ ಆಟೊ; ಆನಂದ್ ಮಹೀಂದ್ರಾ ಪೋಸ್ಟ್ ವೈರಲ್

ಭಾರತದಲ್ಲಿ ಸಾಮಾನ್ಯವಾಗಿ ಕಾಣುವ ಆಟೊ ರಿಕ್ಷಾವೊಂದು ಇದೀಗ ಲಂಡನ್ ರಸ್ತೆಯಲ್ಲಿ ಸಂಚರಿಸುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದೆ. ಉದ್ಯಮಿ ಆನಂದ್ ಮಹೀಂದ್ರಾ ಈ ವಿಡಿಯೊವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, ವಿಡಿಯೊಗೆ ನೆಟ್ಟಿಗರಿಂದ ಹಲವು ತಮಾಷೆಯ ಪ್ರತಿಕ್ರಿಯೆಗಳು ಬಂದಿವೆ. ಸದ್ಯ ಈ ವಿಡಿಯೊ ಎಲ್ಲೆಡೆ ವೈರಲ್ ಆಗುತ್ತಿದೆ.

Indian Auto in London: ಲಂಡನ್ ರಸ್ತೆಯಲ್ಲಿ ಭಾರತೀಯ ಆಟೊ; ಆನಂದ್ ಮಹೀಂದ್ರಾ ಪೋಸ್ಟ್ ವೈರಲ್
Indian Auto Rickshaw London
ಸಾಯಿನಂದಾ
| Edited By: |

Updated on:Oct 07, 2026 | 12:04 PM

Share

ಮುಖ್ಯಾಂಶಗಳು

  • ಲಂಡನ್ ರಸ್ತೆಯಲ್ಲಿ ಭಾರತೀಯ ಆಟೊ
  • ಯುಕೆ ರಸ್ತೆಯಲ್ಲಿ ನಮ್ಮ ಆಟೊ
  • ಆನಂದ್ ಮಹೀಂದ್ರಾ ಶೇರ್ ಮಾಡಿದ ವಿಡಿಯೊ ವೈರಲ್

ಭಾರತದಲ್ಲಿ ರಸ್ತೆಯಲ್ಲಿ ಆಟೊ ರಿಕ್ಷಾ ಕಾಣಿಸುವುದು ಸಾಮಾನ್ಯ. ಆದರೆ ಅದೇ ಆಟೊ ಲಂಡನ್‌ನ ರಸ್ತೆಯಲ್ಲಿ ಓಡಾಡುತ್ತಿದ್ದರೆ? ಸದ್ಯ ಇಂಥದ್ದೇ ದೃಶ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದೆ. ಉದ್ಯಮಿ ಆನಂದ್ ಮಹೀಂದ್ರಾ (Anand Mahindra) ಅವರು ಲಂಡನ್ ರಸ್ತೆಯಲ್ಲಿ ಸಂಚರಿಸುತ್ತಿರುವ ಭಾರತೀಯ ಆಟೊ ರಿಕ್ಷಾದ ವಿಡಿಯೊವನ್ನು ಹಂಚಿಕೊಂಡಿದ್ದು, ನೆಟ್ಟಿಗರು ತಮಾಷೆಯ ಕಾಮೆಂಟ್‌ಗಳ ಮೂಲಕ ಪ್ರತಿಕ್ರಿಯಿಸುತ್ತಿದ್ದಾರೆ.

ಆನಂದ್ ಮಹೀಂದ್ರಾ ಅವರು ಅಕ್ಟೋಬರ್ 5ರಂದು ಎಕ್ಸ್‌ನಲ್ಲಿ ಈ ವಿಡಿಯೊ ಹಂಚಿಕೊಂಡಿದ್ದಾರೆ. ವಿಡಿಯೊದಲ್ಲಿ ಭಾರತೀಯ ಶೈಲಿಯ ಮೂರು ಚಕ್ರದ ಆಟೊ ರಿಕ್ಷಾವೊಂದು ಬ್ರಿಟನ್‌ನ ರಸ್ತೆಯಲ್ಲಿ ಇತರ ವಾಹನಗಳ ನಡುವೆ ಸಂಚರಿಸುತ್ತಿರುವುದು ಕಾಣಿಸುತ್ತದೆ. ಭಾರತದಲ್ಲಿ ಪ್ರತಿದಿನ ಕಣ್ಣಿಗೆ ಕಾಣುವ ಈ ವಾಹನ ಲಂಡನ್‌ನ ರಸ್ತೆಯಲ್ಲಿ ಕಾಣಿಸಿಕೊಂಡಿರುವುದು ಹಲವರ ಗಮನ ಸೆಳೆದಿದೆ.

ವೈರಲ್ ವಿಡಿಯೊ:

ವಿಡಿಯೊ ಹಂಚಿಕೊಳ್ಳುವಾಗ ಆನಂದ್ ಮಹೀಂದ್ರಾ ಅವರು ಗುಜರಾತಿಯಲ್ಲಿ, ‘‘ಯುಕೆಗೂ ರಿಕ್ಷಾ ಬಂದಿದೆ… ಇದು ಮಹೀಂದ್ರಾದ್ದು, ನಮ್ಮದು’’ ಎಂಬ ಅರ್ಥದ ಬರಹ ಹಾಕಿದ್ದಾರೆ. ಜೊತೆಗೆ ಈ ಆಟೊವನ್ನು ಒಬ್ಬ ಹವ್ಯಾಸಿ ಯುಕೆಗೆ ತಂದಿದ್ದಾನೆ ಎಂದು ತಿಳಿಸಿದ್ದಾರೆ.

ಲಂಡನ್ ರಸ್ತೆಯಲ್ಲಿ ಆಟೊ ನೋಡಿ ನೆಟ್ಟಿಗರು ಫಿದಾ

ಭಾರತೀಯ ಆಟೊ ಲಂಡನ್ ರಸ್ತೆಯಲ್ಲಿ ಸಂಚರಿಸುತ್ತಿರುವುದನ್ನು ಕಂಡು ಸಾಮಾಜಿಕ ಜಾಲತಾಣ ಬಳಕೆದಾರರು ಹಲವು ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು ಭಾರತದಿಂದ ಬ್ರಿಟನ್‌ಗೆ ಆಟೊ ಹೋಗಿರುವುದನ್ನು ತಮಾಷೆಯಾಗಿ ‘ರಿವರ್ಸ್ ಕಾಲೊನೈಸೇಷನ್’ ಎಂದು ಕರೆದಿದ್ದಾರೆ. ಬ್ರಿಟನ್‌ನ ರಸ್ತೆಯಲ್ಲಿ ಭಾರತೀಯ ಆಟೊ ಕಾಣಿಸಿಕೊಂಡಿರುವುದನ್ನು ಭಾರತದ ವಾಹನ ಸಂಸ್ಕೃತಿಯ ಜಾಗತಿಕ ಪಯಣ ಎಂದು ಕೆಲವರು ಬಣ್ಣಿಸಿದ್ದಾರೆ.

ಇನ್ನೂ ಕೆಲವರು ಭಾರತೀಯ ಆಟೊಗಳಿಗೆ ಸಾಮಾನ್ಯವಾಗಿ ಕಾಣಿಸುವ ‘ಹಾರ್ನ್ ಪ್ಲೀಸ್’ ಸೇರಿದಂತೆ ವಿವಿಧ ಬರಹಗಳನ್ನು ಲಂಡನ್‌ನ ಆಟೊದಲ್ಲೂ ನೋಡಬಹುದೇ ಎಂದು ತಮಾಷೆ ಮಾಡಿದ್ದಾರೆ. ಮತ್ತೊಬ್ಬರು, ಲಂಡನ್‌ನಲ್ಲಿ ಆಟೊ ಓಡಿಸುವಾಗಲೂ ಪ್ರಯಾಣಿಕರೊಂದಿಗೆ ದರದ ಬಗ್ಗೆ ಚೌಕಾಸಿ ನಡೆಯುತ್ತದೆಯೇ? ಎಂದು ಪ್ರಶ್ನಿಸಿದ್ದಾರೆ.

Viral Video: ಕ್ಷೌರದಂಗಡಿಯಲ್ಲಿ ಕೋತಿಗೆ ಮಸಾಜ್: ವಿಡಿಯೊ ನೋಡಿ ನೆಟ್ಟಿಗರು ಫಿದಾ

ಇದು ಸಾಮಾನ್ಯ ಪ್ರಯಾಣಿಕ ಆಟೊ ಅಲ್ಲ!

ಈ ಆಟೊ ಕೇವಲ ಲಂಡನ್‌ಗೆ ಹೋಗಿರುವುದಷ್ಟೇ ಈ ಸುದ್ದಿಯ ವಿಶೇಷವಲ್ಲ. ವರದಿಗಳ ಪ್ರಕಾರ, ಮಹೀಂದ್ರಾ ತನ್ನ ವಿದ್ಯುತ್ ಚಾಲಿತ ಮೂರು ಚಕ್ರದ ವಾಹನಗಳನ್ನು ಯುಕೆಗೆ ರಫ್ತು ಮಾಡುತ್ತಿದೆ. ಅಲ್ಲಿ ಇವುಗಳನ್ನು ಸಾಮಾನ್ಯ ಪ್ರಯಾಣಿಕರ ಸಂಚಾರದ ಜೊತೆಗೆ ಪ್ರಚಾರ, ಆತಿಥ್ಯ ಸೇವೆ ಹಾಗೂ ಸರಕು ಸಾಗಣೆ ಸೇರಿದಂತೆ ವಿವಿಧ ಉದ್ದೇಶಗಳಿಗೆ ಬಳಸಲಾಗುತ್ತಿದೆ.

ಲಂಡನ್‌ನಂತಹ ನಗರದಲ್ಲಿ ಭಾರತೀಯ ಆಟೊ ರಿಕ್ಷಾ ಸಂಚರಿಸುತ್ತಿರುವ ದೃಶ್ಯ ಸಹಜವಾಗಿಯೇ ಕುತೂಹಲ ಮೂಡಿಸಿದೆ. ಇದೇ ಕಾರಣಕ್ಕೆ ಆನಂದ್ ಮಹೀಂದ್ರಾ ಹಂಚಿಕೊಂಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹರಿದಾಡುತ್ತಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:25 am, Wed, 7 October 26

Follow Us
ಸಾಯಿನಂದಾ
ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
ಸ್ವಂತ ಹಣದಲ್ಲಿ ಹೆದ್ದಾರಿಯ ನೂರಾರು ಗುಂಡಿಗಳನ್ನು ಮುಚ್ಚಿದ ಯುವಕರಪಡೆ
ಸ್ವಂತ ಹಣದಲ್ಲಿ ಹೆದ್ದಾರಿಯ ನೂರಾರು ಗುಂಡಿಗಳನ್ನು ಮುಚ್ಚಿದ ಯುವಕರಪಡೆ
ಮೈಸೂರು ದಸರಾ 2026: ಗಜಪಡೆ, ಅಶ್ವಪಡೆಗೆ ಸಿಡಿಮದ್ದು ತಾಲೀಮು
ಮೈಸೂರು ದಸರಾ 2026: ಗಜಪಡೆ, ಅಶ್ವಪಡೆಗೆ ಸಿಡಿಮದ್ದು ತಾಲೀಮು
ಕೊಪ್ಪಳ: ತಾನೇ ನಲ್ಲಿ ತಿರುಗಿಸಿ ದಾಹ ಇಂಗಿಸಿಕೊಂಡ ಗೋಮಾತೆ!
ಕೊಪ್ಪಳ: ತಾನೇ ನಲ್ಲಿ ತಿರುಗಿಸಿ ದಾಹ ಇಂಗಿಸಿಕೊಂಡ ಗೋಮಾತೆ!
4 ಗಂಟೆಗೂ ಹೆಚ್ಚು ಕಾಲ ನಿಂತಲ್ಲೇ ನಿಂತ ವಂದೇ ಭಾರತ್ ಸೇರಿ 4 ರೈಲುಗಳು!
4 ಗಂಟೆಗೂ ಹೆಚ್ಚು ಕಾಲ ನಿಂತಲ್ಲೇ ನಿಂತ ವಂದೇ ಭಾರತ್ ಸೇರಿ 4 ರೈಲುಗಳು!
ಪ್ರಧಾನಿ ಮೋದಿಯವರ 25 ವರ್ಷಗಳ ಸಾರ್ಥಕ ಆಡಳಿತ: ಅಭಿವೃದ್ಧಿಯ ಪಥದಲ್ಲಿ ಭಾರತ
ಪ್ರಧಾನಿ ಮೋದಿಯವರ 25 ವರ್ಷಗಳ ಸಾರ್ಥಕ ಆಡಳಿತ: ಅಭಿವೃದ್ಧಿಯ ಪಥದಲ್ಲಿ ಭಾರತ
ವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ
ವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ
ಆಹಾರದಾಸೆಗೆ ಕಾರಿನ ಮೇಲೆ ಕಾಲಿಟ್ಟ ಕಾಡಾನೆ! ಪ್ರಯಾಣಿಕರು ಜಸ್ಟ್ ಮಿಸ್
ಆಹಾರದಾಸೆಗೆ ಕಾರಿನ ಮೇಲೆ ಕಾಲಿಟ್ಟ ಕಾಡಾನೆ! ಪ್ರಯಾಣಿಕರು ಜಸ್ಟ್ ಮಿಸ್
‘ಸ್ತ್ರೀ ವ್ಯಾಮೋಹ ಇರುವ ಕಳ್ಳ ನಾಯಿ’; ಯಶಸ್ ವಿರುದ್ಧ ಮಿತಿಮೀರಿದ ಮಂಜು ಮಾತು
‘ಸ್ತ್ರೀ ವ್ಯಾಮೋಹ ಇರುವ ಕಳ್ಳ ನಾಯಿ’; ಯಶಸ್ ವಿರುದ್ಧ ಮಿತಿಮೀರಿದ ಮಂಜು ಮಾತು
ಪ್ರಧಾನಿ ನರೇಂದ್ರ ಮೋದಿ ಅವರ 25 ವರ್ಷಗಳ ಆಡಳಿತ: ಒಂದು ಅವಲೋಕನ
ಪ್ರಧಾನಿ ನರೇಂದ್ರ ಮೋದಿ ಅವರ 25 ವರ್ಷಗಳ ಆಡಳಿತ: ಒಂದು ಅವಲೋಕನ
ರಾಜ್ಯ ಸರ್ಕಾರಕ್ಕೆ 2000 ರೂ. ದಂಡ ವಿಧಿಸಿದ ಕರ್ನಾಟಕ ಹೈಕೋರ್ಟ್!
ರಾಜ್ಯ ಸರ್ಕಾರಕ್ಕೆ 2000 ರೂ. ದಂಡ ವಿಧಿಸಿದ ಕರ್ನಾಟಕ ಹೈಕೋರ್ಟ್!