AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಕ್ಷೌರದಂಗಡಿಯಲ್ಲಿ ಕೋತಿಗೆ ಮಸಾಜ್: ವಿಡಿಯೊ ನೋಡಿ ನೆಟ್ಟಿಗರು ಫಿದಾ

ಕ್ಷೌರದಂಗಡಿಗೆ ಬಂದ ಕೋತಿಯೊಂದು ಆರಾಮವಾಗಿ ಕುರ್ಚಿಯ ಮೇಲೆ ಕುಳಿತು ಮಸಾಜ್ ಮಾಡಿಸಿಕೊಳ್ಳುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕ್ಷೌರಿಕ ಮಸಾಜ್ ಮಾಡುತ್ತಿದ್ದಂತೆ ಕೋತಿ ಕಣ್ಣು ಮುಚ್ಚಿಕೊಂಡು ನೆಮ್ಮದಿಯಿಂದ ಕುಳಿತಿದೆ. ಕೋತಿಯ ಈ ವರ್ತನೆ ಕಂಡು ನೆಟ್ಟಿಗರು ತಮಾಷೆಯ ಕಾಮೆಂಟ್‌ಗಳನ್ನು ಮಾಡಿದ್ದು, ವಿಡಿಯೊ ಸದ್ಯ ಹಲವರ ಗಮನ ಸೆಳೆಯುತ್ತಿದೆ.

Viral Video: ಕ್ಷೌರದಂಗಡಿಯಲ್ಲಿ ಕೋತಿಗೆ ಮಸಾಜ್: ವಿಡಿಯೊ ನೋಡಿ ನೆಟ್ಟಿಗರು ಫಿದಾ
Monkey Massage
ಸಾಯಿನಂದಾ
| Edited By: |

Updated on: Oct 07, 2026 | 10:50 AM

Share

ಮುಖ್ಯಾಂಶಗಳು

  • ಕ್ಷೌರದಂಗಡಿಯಲ್ಲಿ ಕೋತಿಗೆ ಮಸಾಜ್! ವಿಡಿಯೊ ವೈರಲ್
  • ಕುರ್ಚಿಯಲ್ಲಿ ಕುಳಿತು ಆರಾಮವಾಗಿ ಮಸಾಜ್ ಮಾಡಿಸಿಕೊಂಡ ಕೋತಿ
  • ‘ಮಂಕೇಶ್ ಭಾಯ್’ಗೆ ಮಸಾಜ್ ಬೇಕಂತೆ! ನೆಟ್ಟಿಗರ ತಮಾಷೆ

ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ಹಲವು ತಮಾಷೆಯ ಹಾಗೂ ಮನಸ್ಸಿಗೆ ಮುದ ನೀಡುವ ವಿಡಿಯೊಗಳು ವೈರಲ್ (Viral Video) ಆಗುತ್ತಿರುತ್ತವೆ. ಇದೀಗ ಅಂತಹದ್ದೇ ಒಂದು ವಿಡಿಯೊ ವೈರಲ್ ಆಗಿದ್ದು, ನೋಡುಗರ ಮುಖದಲ್ಲಿ ನಗು ಮೂಡಿಸಿದೆ. ಕ್ಷೌರದಂಗಡಿಯೊಂದರಲ್ಲಿ ಕೋತಿಯೊಂದು ಆರಾಮವಾಗಿ ಕುರ್ಚಿಯ ಮೇಲೆ ಕುಳಿತುಕೊಂಡು ಫುಲ್ ಬಾಡಿ ಮಸಾಜ್ ಮಾಡಿಸಿಕೊಳ್ಳುತ್ತಿರುವ ದೃಶ್ಯ ವಿಡಿಯೊದಲ್ಲಿದೆ. ಕೋತಿಯ ನಡವಳಿಕೆ ಎಷ್ಟು ಶಾಂತವಾಗಿ ಮತ್ತು ಸಹಜವಾಗಿದೆಯೆಂದರೆ, ಅದನ್ನು ನೋಡಿದಾಗ ಕಾಡುಪ್ರಾಣಿಯೊಂದು ಮಸಾಜ್ ಮಾಡಿಸಿಕೊಳ್ಳುತ್ತಿದೆ ಎಂಬುದೇ ಅನಿಸುವುದಿಲ್ಲ.

ಈ ವಿಡಿಯೊ ಇನ್‌ಸ್ಟಾಗ್ರಾಮ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹರಿದಾಡುತ್ತಿದೆ. ದಿನನಿತ್ಯದ ಕೆಲಸ, ಒತ್ತಡ ಮತ್ತು ಜಂಜಾಟದ ನಡುವೆ ಇಂತಹ ಸಣ್ಣ-ಪುಟ್ಟ ಮೋಜಿನ ಕ್ಷಣಗಳು ಜನರ ಮುಖದಲ್ಲಿ ನಗು ಮೂಡಿಸುತ್ತವೆ. ಈ ವಿಡಿಯೊ ಕೂಡ ಅದೇ ಕಾರಣಕ್ಕೆ ಹಲವರ ಗಮನ ಸೆಳೆದಿದೆ.

ಈ ವಿಡಿಯೊವನ್ನು ಇನ್‌ಸ್ಟಾಗ್ರಾಮ್‌ನ @ghantaa ಎಂಬ ಖಾತೆಯಿಂದ ಹಂಚಿಕೊಳ್ಳಲಾಗಿದೆ. ವಿಡಿಯೊದಲ್ಲಿ ಕೋತಿಯೊಂದು ಯಾವುದೇ ಭಯವಿಲ್ಲದೆ ಕ್ಷೌರದಂಗಡಿಯೊಳಗೆ ಪ್ರವೇಶಿಸುವುದು ಕಾಣಿಸುತ್ತದೆ. ಬಳಿಕ ಅದು ನೇರವಾಗಿ ಖಾಲಿ ಕುರ್ಚಿಯ ಮೇಲೆ ಹೋಗಿ ಕುಳಿತುಕೊಳ್ಳುತ್ತದೆ. ಕೋತಿಯನ್ನು ಓಡಿಸುವ ಬದಲು ಕ್ಷೌರಿಕ ಅದರೊಂದಿಗೆ ಆತ್ಮೀಯವಾಗಿ ವರ್ತಿಸಿ ಮಸಾಜ್ ಮಾಡಲು ಆರಂಭಿಸುತ್ತಾನೆ.

ವೈರಲ್ ವಿಡಿಯೋ ಇಲ್ಲಿದೆ

View this post on Instagram

A post shared by ghantaa (@ghantaa)

ಕ್ಷೌರಿಕ ಮಸಾಜ್ ಮಾಡುತ್ತಿದ್ದಂತೆ ಕೋತಿ ಕಣ್ಣುಗಳನ್ನು ಮುಚ್ಚಿಕೊಂಡು ಆರಾಮವಾಗಿ ಕುಳಿತಿರುತ್ತದೆ. ತಲೆ, ಕೈ ಮತ್ತು ಕಾಲುಗಳಿಗೆ ಮಸಾಜ್ ಮಾಡಿಸಿಕೊಳ್ಳುತ್ತಿರುವ ದೃಶ್ಯವೂ ಕಂಡುಬರುತ್ತದೆ. ಅಂಗಡಿಯಲ್ಲಿದ್ದ ಜನರು ಈ ದೃಶ್ಯವನ್ನು ಅಚ್ಚರಿಯಿಂದ ನೋಡುತ್ತಿದ್ದು, ಕೆಲವರು ಅದನ್ನು ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾರೆ.

Video: ಬೀದಿ ನಾಯಿಗಳಿಗೆ ಬೊಗಸೆಯಲ್ಲಿ ನೀರು ಕುಡಿಸಿ ದಾಹ ತೀರಿಸಿದ ಯುವಕ

‘ಮಂಕೇಶ್ ಭಾಯ್’ ಎಂದ ನೆಟ್ಟಿಗರು

ಈ ವಿಡಿಯೊವನ್ನು ಹಲವು ಸಾಮಾಜಿಕ ಜಾಲತಾಣ ಖಾತೆಗಳು ಮರುಹಂಚಿಕೊಂಡಿದ್ದು, ಕೋತಿಗೆ ತಮಾಷೆಯಾಗಿ ‘ಮಂಕೇಶ್ ಭಾಯ್’ ಎಂಬ ಹೆಸರನ್ನೂ ಇಟ್ಟಿದ್ದಾರೆ. ಕೆಲವರು, ಮಂಕೇಶ್ ಭಾಯ್ ಮಸಾಜ್‌ನ ಆನಂದ ಪಡೆಯುತ್ತಿದ್ದಾರೆ. ಅವರನ್ನು ತೊಂದರೆ ಕೊಡಬೇಡಿ ಎಂದು ತಮಾಷೆಯಾಗಿ ಬರೆದಿದ್ದಾರೆ.

ಇನ್ನೊಬ್ಬರು, ಮಂಕೇಶ್ ಭಾಯ್ ಇಂದು ಭಾನುವಾರವನ್ನು ಆಚರಿಸುತ್ತಿದ್ದಾರೆ. ನಿಜವಾದ ವಾರಾಂತ್ಯದ ಮಜಾ ಎಂದರೆ ಇದೇ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ದಣಿದಿರುವ ಕೋತಿ ಯಾವುದೇ ಹಣ ನೀಡದೆ ಆರಾಮದಾಯಕ ದೇಹದ ಮಸಾಜ್ ಮಾಡಿಸಿಕೊಳ್ಳಲು ಕ್ಷೌರದಂಗಡಿಗೆ ಬಂದಿದೆ. ಕ್ಷೌರಿಕನೂ ಖುಷಿಯಿಂದಲೇ ಮಸಾಜ್ ಮಾಡುತ್ತಿದ್ದಾನೆ ಎಂದು ಬರೆದಿದ್ದಾರೆ.

ಕೋತಿಯ ಶಾಂತವಾದ ಭಂಗಿ ಮತ್ತು ಮಸಾಜ್ ಮಾಡಿಸಿಕೊಳ್ಳುತ್ತಿರುವ ರೀತಿಯನ್ನು ಕಂಡು ಅನೇಕ ನೆಟ್ಟಿಗರು ನಕ್ಕಿದ್ದಾರೆ. ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹರಿದಾಡುತ್ತಿದ್ದು, ಹಲವರ ಗಮನ ಸೆಳೆಯುತ್ತಿದೆ.

(ಈ ಸುದ್ದಿಯಲ್ಲಿರುವ ಮಾಹಿತಿಯು ಸಾಮಾಜಿಕ ಜಾಲತಾಣಗಳು ಮತ್ತು ವಿವಿಧ ವರದಿಗಳಲ್ಲಿ ಮಾಡಲಾದ ಹೇಳಿಕೆಗಳನ್ನು ಆಧರಿಸಿದೆ. ಈ ಹೇಳಿಕೆಗಳ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಖಚಿತಪಡಿಸುವುದಿಲ್ಲ.)

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸಾಯಿನಂದಾ
ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
ಪ್ರಧಾನಿ ಮೋದಿಯವರ 25 ವರ್ಷಗಳ ಸಾರ್ಥಕ ಆಡಳಿತ: ಅಭಿವೃದ್ಧಿಯ ಪಥದಲ್ಲಿ ಭಾರತ
ಪ್ರಧಾನಿ ಮೋದಿಯವರ 25 ವರ್ಷಗಳ ಸಾರ್ಥಕ ಆಡಳಿತ: ಅಭಿವೃದ್ಧಿಯ ಪಥದಲ್ಲಿ ಭಾರತ
ವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ
ವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ
ಆಹಾರದಾಸೆಗೆ ಕಾರಿನ ಮೇಲೆ ಕಾಲಿಟ್ಟ ಕಾಡಾನೆ! ಪ್ರಯಾಣಿಕರು ಜಸ್ಟ್ ಮಿಸ್
ಆಹಾರದಾಸೆಗೆ ಕಾರಿನ ಮೇಲೆ ಕಾಲಿಟ್ಟ ಕಾಡಾನೆ! ಪ್ರಯಾಣಿಕರು ಜಸ್ಟ್ ಮಿಸ್
‘ಸ್ತ್ರೀ ವ್ಯಾಮೋಹ ಇರುವ ಕಳ್ಳ ನಾಯಿ’; ಯಶಸ್ ವಿರುದ್ಧ ಮಿತಿಮೀರಿದ ಮಂಜು ಮಾತು
‘ಸ್ತ್ರೀ ವ್ಯಾಮೋಹ ಇರುವ ಕಳ್ಳ ನಾಯಿ’; ಯಶಸ್ ವಿರುದ್ಧ ಮಿತಿಮೀರಿದ ಮಂಜು ಮಾತು
ಪ್ರಧಾನಿ ನರೇಂದ್ರ ಮೋದಿ ಅವರ 25 ವರ್ಷಗಳ ಆಡಳಿತ: ಒಂದು ಅವಲೋಕನ
ಪ್ರಧಾನಿ ನರೇಂದ್ರ ಮೋದಿ ಅವರ 25 ವರ್ಷಗಳ ಆಡಳಿತ: ಒಂದು ಅವಲೋಕನ
ರಾಜ್ಯ ಸರ್ಕಾರಕ್ಕೆ 2000 ರೂ. ದಂಡ ವಿಧಿಸಿದ ಕರ್ನಾಟಕ ಹೈಕೋರ್ಟ್!
ರಾಜ್ಯ ಸರ್ಕಾರಕ್ಕೆ 2000 ರೂ. ದಂಡ ವಿಧಿಸಿದ ಕರ್ನಾಟಕ ಹೈಕೋರ್ಟ್!
ಇಂದು ಈ ರಾಶಿಯವರಿಗೆ ಉದ್ಯೋಗದಲ್ಲಿ ಕಿರಿಕಿರಿಯ ಸಾಧ್ಯತೆ
ಇಂದು ಈ ರಾಶಿಯವರಿಗೆ ಉದ್ಯೋಗದಲ್ಲಿ ಕಿರಿಕಿರಿಯ ಸಾಧ್ಯತೆ
ಎಟಿಎಂ ಯಂತ್ರವನ್ನೇ ಕಿತ್ತು, ಕಾರಿನಲ್ಲಿ ತುಂಬಿಸಿಕೊಂಡು ಪರಾರಿಯಾದ ಕಳ್ಳರು!
ಎಟಿಎಂ ಯಂತ್ರವನ್ನೇ ಕಿತ್ತು, ಕಾರಿನಲ್ಲಿ ತುಂಬಿಸಿಕೊಂಡು ಪರಾರಿಯಾದ ಕಳ್ಳರು!
ಜನರಿಗೆ ಎರಡು ಶಾಕ್ ನೀಡಲಿದೆ ಸರ್ಕಾರ
ಜನರಿಗೆ ಎರಡು ಶಾಕ್ ನೀಡಲಿದೆ ಸರ್ಕಾರ
ಓಂಪ್ರಕಾಶ್ ರಾವ್ ನನ್ನ ಗುರುಗಳು: ‘ಪ್ರೇಮದ ಊರಲಿ’ ಡೈರೆಕ್ಟರ್ ಹೆಮ್ಮೆಯ ಮಾತು
ಓಂಪ್ರಕಾಶ್ ರಾವ್ ನನ್ನ ಗುರುಗಳು: ‘ಪ್ರೇಮದ ಊರಲಿ’ ಡೈರೆಕ್ಟರ್ ಹೆಮ್ಮೆಯ ಮಾತು