Video: ಬೆಂಗಳೂರು ಬಲು ದುಬಾರಿ; 1.3 ಲಕ್ಷ ರೂ ತಿಂಗಳ ಖರ್ಚು ಎಂದ ದಂಪತಿ

ಹೆಚ್ಚಿನವರಿಗೆ ಬೆಂಗಳೂರು ಅಂದ್ರೆ ಕನಸಿನ ಲೋಕ. ಹೀಗಾಗಿ ಉದ್ಯೋಗ ಅರಸುತ್ತಾ ಬೆಂಗಳೂರಿನತ್ತ ಬರುವವರೇ ಹೆಚ್ಚು. ಆದರೆ ಈ ದುಬಾರಿ ದುನಿಯಾದಲ್ಲಿ ಖರ್ಚು ವೆಚ್ಚಗಳಿಗೆ ಬ್ರೇಕ್ ಅನ್ನೋದೇ ಇಲ್ಲ. ಬೆಂಗಳೂರಿನಲ್ಲಿ ಜೀವನ ವೆಚ್ಚ ಎಷ್ಟು ದುಬಾರಿ ಆಗಿದೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿ. ದಂಪತಿಯಿಬ್ಬರೂ ತಿಂಗಳ ಖರ್ಚು ವೆಚ್ಚಗಳ ಬಗ್ಗೆ ರಿವೀಲ್ ಮಾಡಿದ್ದು, ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಬೆಂಗಳೂರು ಬಲು ದುಬಾರಿ; 1.3 ಲಕ್ಷ ರೂ ತಿಂಗಳ ಖರ್ಚು ಎಂದ ದಂಪತಿ
ವೈರಲ್‌ ವಿಡಿಯೋ
Image Credit source: Instagram

Updated on: May 12, 2026 | 4:36 PM

ಬೆಂಗಳೂರು, ಮೇ 12: ಬೆಂಗಳೂರು (Bengaluru) ಅಂದ್ರೆ ದುಬಾರಿ ಅನ್ನೋದು ಅನೇಕರ ಅಭಿಪ್ರಾಯ. ಇನ್ನೊಂದೆಡೆ ಗಂಡ ಹೆಂಡತಿ ಇಬ್ಬರೂ ದುಡಿದ್ರೂ ಈ ನಗರದಲ್ಲಿ ತಿಂಗಳ ಖರ್ಚು ವೆಚ್ಚಗಳನ್ನು ತೂಗಿಸಿಕೊಂಡು ಹೋಗೋದು ಕಷ್ಟ. ಹೀಗಿರುವಾಗ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ದಂಪತಿ ತಿಂಗಳಿಗೆ ಸುಮಾರು 1.3 ಲಕ್ಷ ರೂ. ಖರ್ಚು ಮಾಡುತ್ತಿದ್ದು, ಆರ್ಥಿಕ ಹೊರೆಯಾಗುತ್ತಿದೆ ಎಂದು ಹೇಳಿದ್ದಾರೆ. ದಂಪತಿ ಮಾಡಿದ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ.

ಬೆಂಗಳೂರಿನಲ್ಲಿ ಉತ್ಪನ್ನ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿರುವ ರಾಧಿಕಾ ಹಾಗೂ ಏಕಾನ್ಶ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ದಂಪತಿ ಪ್ರತಿ ತಿಂಗಳು ತಮ್ಮ ಅಪಾರ್ಟ್‌ಮೆಂಟ್‌ಗೆ 56 ಸಾವಿರ ರೂ ಬಾಡಿಗೆ ಕಟ್ಟಿರುತ್ತಿರುವುದಾಗಿ ಹೇಳಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ

ಮನೆಗೆಲಸದವರಿಗೆ ಹಾಗೂ ಅಡುಗೆಯವರಿಗೆ ಸುಮಾರು 10,000 ರೂ ಖರ್ಚು ಮಾಡುತ್ತೇವೆ. ನಾವಿಬ್ಬರೂ ಪೂರ್ಣ ಸಮಯ ಕೆಲಸ ಮಾಡುವುದರಿಂದ ನಾವು ಮಾಡುವ ಅತ್ಯುತ್ತಮ ವೆಚ್ಚ. ದಿನಸಿ ಸಾಮಗ್ರಿಗಳಿಗೆ ಪ್ರತಿ ತಿಂಗಳು 15,000 ರೂ, ವಿದ್ಯುತ್ ಹಾಗೂ ಇಂಟರ್ನೆಟ್‌ ಗೆ 15,000 ರೂ ಹಣ ವ್ಯಯಿಸಬೇಕಾಗುತ್ತದೆ ಎಂದು ಹೇಳಿಕೊಂಡಿದ್ದಾರೆ.

ನಾನು ಕಚೇರಿಗೆ ಹೋಗುವುದರಿಂದ ಟ್ರಾವೆಲ್, ಪೆಟ್ರೋಲ್ ಹಾಗೂ ಇನ್ನಿತ್ತರ ಖರ್ಚುಗಳಿಗೆ ತಿಂಗಳಿಗೆ 6,000 ರೂ ಎತ್ತಿಡಬೇಕಾಗುತ್ತದೆ. ಹೊರಗೆ ಊಟದ ಖರ್ಚು ಮತ್ತು ಫುಡ್ ಆರ್ಡರ್ ಗೆ 2000 ರೂ ಬೇಕು. ಇನ್ನು ಉಳಿದಂತೆ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್‌ನಂತಹ ಪ್ಲಾಟ್‌ಫಾರ್ಮ್‌ಗಳನ್ನು ಒಳಗೊಂಡಂತೆ ಚಂದಾದಾರಿಕೆಗಳು ತಿಂಗಳಿಗೆ 3,000 ರೂ ರಷ್ಟಿವೆ. ಅದರ ಜೊತೆಗೆ, ಶಾಪಿಂಗ್, ವೈಯಕ್ತಿಕ ವೆಚ್ಚಗಳು ಮತ್ತು ಯೋಜಿತವಲ್ಲದ ಖರೀದಿಗಳಿಗಾಗಿ 15,000 ರೂ ಖರ್ಚು ಆಗುತ್ತದೆ. ತಮ್ಮ ಮಾಸಿಕ ವೆಚ್ಚಗಳು ಸುಮಾರು 1.3 ಲಕ್ಷ ರೂ ತಲುಪುತ್ತವೆ ಎಂದಿದ್ದಾರೆ. ಗಂಭೀರವಾಗಿ ಹೇಳಬೇಕೆಂದರೆ, ಈ ಬೆಂಗಳೂರು ಉತ್ತಮ ಹಣ ಗಳಿಸಬಹುದಾದ ಸ್ಥಳವಾಗಿದ್ದು, ತಿಂಗಳ ಅಂತ್ಯದ ವೇಳೆಗೆ ಇನ್ನೂ ದಿವಾಳಿಯಾಗಿರುವಂತೆ ಭಾಸವಾಗುತ್ತದೆ ಎಂದು ವಿವರಿಸಿರುವುದನ್ನು ಕಾಣಬಹುದು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಯೋಗ್ಯ ಜೀವನಕ್ಕೆ ತಿಂಗಳಿಗೆ 51,000 ರೂ ಬೇಕೇ ಬೇಕು; ಅಮೆಜಾನ್ ಉದ್ಯೋಗಿ ಹೀಗೆಂದಿದ್ದೇಕೆ?

ಈ ವಿಡಿಯೋ ಒಂದು ಮಿಲಿಯನ್ ಗೂ ಅಧಿಕ ವೀಕ್ಷಣೆಗಳನ್ನು ಕಂಡಿವೆ. ಒಬ್ಬ ಬಳಕೆದಾರ, ನೀವು ಹೈ ಎಂಡ್ ಅಪಾರ್ಟ್‌ಮೆಂಟ್‌ನಲ್ಲಿ ಉಳಿಯಲು ಆಯ್ಕೆ ಮಾಡಿಕೊಂಡರೆ ಮಾತ್ರ ಬಾಡಿಗೆ ಹೆಚ್ಚಾಗಿರುತ್ತದೆ. ಬೆಂಗಳೂರಿನಲ್ಲಿ ಬಾಡಿಗೆ ನೀವು ವಾಸಿಸುವ ಸ್ಥಳವನ್ನು ಅವಲಂಬಿಸಿರುತ್ತದೆ ಎಂದಿದ್ದಾರೆ. ಇನ್ನೊಬ್ಬರು, ಇದೊಂದು ನಿಷ್ಪ್ರಯೋಜಕ ವಿಡಿಯೋ. ನಾವಿಬ್ಬರೂ ಕೆಲಸ ಮಾಡುತ್ತಿದ್ದೇವೆ ಮತ್ತು ಇಬ್ಬರು ಮಕ್ಕಳನ್ನು ಹೊಂದಿದ್ದೇವೆ ಮತ್ತು ಇದರಲ್ಲಿ ಅರ್ಧವನ್ನು ಖರ್ಚು ಮಾಡುವುದಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಬೆಂಗಳೂರಿನಲ್ಲಿ ಬದುಕೋದು ಹೇಳಿದ್ದಷ್ಟು ಸುಲಭವಲ್ಲ, ಆದರೆ ಖರ್ಚಿಗೆ ಲಗಾಮು ಹಾಕಿದ್ರೆ ಒಳ್ಳೆಯದು ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 4:36 pm, Tue, 12 May 26

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us