AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಬೆಂಗಳೂರಿನಲ್ಲಿ ಯೋಗ್ಯ ಜೀವನಕ್ಕೆ ತಿಂಗಳಿಗೆ 51,000 ರೂ ಬೇಕೇ ಬೇಕು; ಅಮೆಜಾನ್ ಉದ್ಯೋಗಿ ಹೀಗೆಂದಿದ್ದೇಕೆ?

ಗುಣಮಟ್ಟದ ಜೀವನ, ಹೆಚ್ಚು ಸಂಬಳ ಸಿಗುವ ಕೆಲಸವೇ ಬೇಕೆಂದು ಓದು ಮುಗಿಯುತ್ತಿದ್ದಂತೆ ಹಳ್ಳಿ ಬಿಟ್ಟು ನಗರಕ್ಕೆ ಬರುವವರೇ ಹೆಚ್ಚು. ಆದರೆ ನಗರದಲ್ಲಿ ತಿಂಗಳ ಅಲ್ಪ ಸಂಬಳದಲ್ಲಿ ನಗರದಲ್ಲಿ ಜೀವನ ನಡೆಸೋದು ಹೇಳಿದ್ದಷ್ಟು ಸುಲಭವಲ್ಲ. ಅಮೆಜಾನ್ ಉದ್ಯೋಗಿಯೊಬ್ಬರು ಬೆಂಗಳೂರಿನಲ್ಲಿ ಯೋಗ್ಯ ಜೀವನಕ್ಕಾಗಿ ತಿಂಗಳಿಗೆ 51,000 ರೂ ಖರ್ಚು ಮಾಡುವುದಾಗಿ ಹೇಳಿಕೊಂಡಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಬೆಂಗಳೂರಿನಲ್ಲಿ ಯೋಗ್ಯ ಜೀವನಕ್ಕೆ ತಿಂಗಳಿಗೆ 51,000 ರೂ ಬೇಕೇ ಬೇಕು; ಅಮೆಜಾನ್ ಉದ್ಯೋಗಿ ಹೀಗೆಂದಿದ್ದೇಕೆ?
ವೈರಲ್‌ ವಿಡಿಯೋImage Credit source: Instagram
ಸಾಯಿನಂದಾ
|

Updated on:May 11, 2026 | 7:10 PM

Share

ಬೆಂಗಳೂರು, ಮೇ 11: ಇಂದಿನ ದುಬಾರಿ ದುನಿಯಾದಲ್ಲಿ ಬದುಕೋದೇ ಕಷ್ಟ. ಅದಲ್ಲದೇ, ಲಕ್ಷ ಲಕ್ಷ ಸಂಬಳ ಬರ್ತಾ ಇದ್ರು ತಿಂಗಳ ಕೊನೆಯಲ್ಲಿ ದುಡ್ಡು ಉಳಿಯಲ್ಲ ಎಂದು ಹೇಳೋದನ್ನು ಕೇಳಿದ್ದೀರಬಹುದು. ಅಮೆಜಾನ್‌ ಉದ್ಯೋಗಿಯೊಬ್ಬರು ಬೆಂಗಳೂರಿನಲ್ಲಿ (Bengaluru) ತಮ್ಮ ಮಾಸಿಕ ಖರ್ಚು ವೆಚ್ಚಗಳ ಬಗ್ಗೆ ಮಾತನಾಡಿದ್ದಾರೆ. ಯೋಗ್ಯ ಜೀವನಕ್ಕಾಗಿ ತಿಂಗಳಿಗೆ 50 ಸಾವಿರಕ್ಕೂ ಹೆಚ್ಚು ಹಣ ಖರ್ಚು ಮಾಡುವುದಾಗಿ ರಿವೀಲ್‌ ಮಾಡಿದ್ದಾರೆ. ಈ ವಿಡಿಯೋ ಆನ್‌ಲೈನ್‌ನಲ್ಲಿ ಚರ್ಚೆ ಹುಟ್ಟುಹಾಕಿದೆ.

ಕಾರ್ತಿಕ್ ಸಿಂಗ್ ಪರಿಹಾರ್ (trainlikekartik) ಎಂಬ 26 ವರ್ಷದ ಯುವಕ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದು, ಇದು ಬೆಂಗಳೂರಿನಲ್ಲಿ ನನ್ನ 10 ವರ್ಷಗಳ ಅನುಭವ ಎಂಬ ಶೀರ್ಷಿಕೆ ನೀಡಿದ್ದಾರೆ. ಈ ವಿಡಿಯೋದಲ್ಲಿ ಉತ್ತಮ ಜೀವನವನ್ನು ಕಾಪಾಡಿಕೊಳ್ಳಲು ತಿಂಗಳಿಗೆ ಸುಮಾರು 51,000 ರೂ ವೆಚ್ಚವಾಗುತ್ತದೆ ಎಂದು ಹೇಳಿದ್ದಾರೆ.

ವೈರಲ್‌ ವಿಡಿಯೋ ಇಲ್ಲಿದೆ

ಹೆಚ್ ಎಸ್ ಆರ್ ಲೇಔಟ್‌ನಲ್ಲಿ 1ಬಿ ಹೆಚ್ ಕೆ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದು 20,000 ರೂ ಬಾಡಿಗೆ ಪಾವತಿಸುತ್ತೇನೆ. ಬೆಂಗಳೂರಿನ ಇತರ ಭಾಗಗಳಿಗೆ ಭೇಟಿ ನೀಡಿದ ನಂತರ, ಹೆಚ್‌ಎಸ್‌ಆರ್‌ನಲ್ಲಿ ಹಣಕ್ಕೆ ಮನೆ ಯೋಗ್ಯವಾಗಿದೆ ಎಂದು ನಾನು ಭಾವಿಸುತ್ತೇನೆ. ಬಾಡಿಗೆಯ ಹೊರತಾಗಿ, ಸೋಫಾ, ಫ್ರಿಡ್ಜ್ ಮತ್ತು ಹಾಸಿಗೆ ಸೇರಿದಂತೆ ಪೀಠೋಪಕರಣಗಳ ಬಾಡಿಗೆಗೆ 4,000 ರೂ ಆಗುತ್ತದೆ ಎಂದು ಹೇಳಿದ್ದಾರೆ.

ವಾರಕ್ಕೆ ಸುಮಾರು 1,000 ರೂ ದಿನಸಿಗಾಗಿ ಖರ್ಚು ಮಾಡುತ್ತೇನೆ, ಇದರಿಂದಾಗಿ ಮಾಸಿಕ ಪಡಿತರ ಖರ್ಚು 4,000 ರೂ ಆಗುತ್ತದೆ. ಆಫೀಸಿನಲ್ಲಿ ಊಟ ತಿಂಡಿಗಾಗಿ ತಿಂಗಳಿಗೆ 5,000 ರೂ ಆಗುತ್ತದೆ. ವಾರಾಂತ್ಯದಲ್ಲಿ ಕನಿಷ್ಠ ಒಂದು ಅಥವಾ ಎರಡು ಬಾರಿ ಹೊರಗೆ ಊಟ ಮಾಡುತ್ತೇನೆ. ವಾರಾಂತ್ಯಕ್ಕೆ ಸುಮಾರು 1,000 ರೂ ಖರ್ಚು ಮಾಡುತ್ತೇನೆ. ಅಂದರೆ ಮಾಸಿಕ ವೆಚ್ಚಗಳಿಗೆ ಹೆಚ್ಚುವರಿಯಾಗಿ 4,000 ರೂ ಸೇರುತ್ತದೆ ಎಂದಿದ್ದಾರೆ.

ಪೆಟ್ರೋಲ್‌ಗೆ ತಿಂಗಳಿಗೆ ಸುಮಾರು 1,500 ರೂ ಖರ್ಚು ತಗಲುತ್ತದೆ. ಜಿಮ್ ಸದಸ್ಯತ್ವಕ್ಕೆ ವಾರ್ಷಿಕ ಮೊತ್ತ 16,000 ರೂ ಅಂದರೆ ತಿಂಗಳಿಗೆ ಸುಮಾರು 1,300 ರೂ ವೆಚ್ಚ ಬರುತ್ತದೆ. ಬಟ್ಟೆಗಾಗಿ 2,000 ರೂ, ಪ್ರಯಾಣಕ್ಕಾಗಿ ತಿಂಗಳಿಗೆ 10,000 ರೂ ಮೀಸಲಿಡುತ್ತೇನೆ. ವಿದ್ಯುತ್ ಬಿಲ್ ತಿಂಗಳಿಗೆ ಸುಮಾರು 500 ರೂ ಬರುತ್ತದೆ. ಬೆಂಗಳೂರಿನಲ್ಲಿ 26 ವರ್ಷದ ಯುವಕನಾಗಿ ಯೋಗ್ಯ ಜೀವನವನ್ನು ನಡೆಸಲು ತಿಂಗಳಿಗೆ ಖರ್ಚು ಮಾಡುವ ಒಟ್ಟು ಮೊತ್ತ 51,000 ರೂ ಎಂದು ಹೇಳಿರುವುದನ್ನು ಕಾಣಬಹುದು.

ಇದನ್ನೂ ಓದಿ: ಬೆಳ್ಳಂದೂರಿನಿಂದ ಏರ್​​ಪೋರ್ಟ್​​ಗೆ ತೆರಳಲು ಮೂರುವರೆ ಗಂಟೆ!: ಬೆಂಗಳೂರು ಟ್ರಾಫಿಕ್​​ ಭೀಕರತೆ ತೆರೆದಿಟ್ಟ ಯುವತಿಯ ವಿಡಿಯೋ ವೈರಲ್​​

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ಹೆಚ್ ಎಸ್ ಆರ್ ನಲ್ಲಿ ಬಾಡಿಗೆ ದುಬಾರಿಯಾಗಿದೆ, ಆದರೆ ಸ್ಥಳವು ಖಂಡಿತವಾಗಿ ವಾಸಕ್ಕೆ ಯೋಗ್ಯವಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಮೆಟ್ರೋ ನಗರಗಳಲ್ಲಿ ಹಣವನ್ನು ಉಳಿಸುವುದು ತುಂಬಾ ಕಷ್ಟಕರ ಎಂದು ಹೇಳಿದ್ದಾರೆ. ಮತ್ತೊಬ್ಬರು, ಪ್ರಯಾಣ ಮತ್ತು ಜೀವನಶೈಲಿಯ ವೆಚ್ಚಗಳು ಮೂಲಭೂತ ಅಗತ್ಯಗಳಲ್ಲ, ವೈಯಕ್ತಿಕ ಆಯ್ಕೆಗಳು ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:25 pm, Mon, 11 May 26

Follow Us
Sainandha P
Sainandha P

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
ಬಾಗೇಪಲ್ಲಿ ಭೀಕರ ರಸ್ತೆ ಅಪಘಾತ ಪ್ರಕರಣ: ಎಸ್‌ಪಿ ಬಿಗ್ ಸ್ಟೇಟ್‌ಮೆಂಟ್
ಬಾಗೇಪಲ್ಲಿ ಭೀಕರ ರಸ್ತೆ ಅಪಘಾತ ಪ್ರಕರಣ: ಎಸ್‌ಪಿ ಬಿಗ್ ಸ್ಟೇಟ್‌ಮೆಂಟ್
ಪ್ರಮಾಣವಚನ ದಿನವೇ ಕಾಂಗ್ರೆಸ್ ಭವನ ಶಂಕುಸ್ಥಾಪನೆಗೆ ಡಿಕೆಶಿ ಪ್ಲ್ಯಾನ್​
ಪ್ರಮಾಣವಚನ ದಿನವೇ ಕಾಂಗ್ರೆಸ್ ಭವನ ಶಂಕುಸ್ಥಾಪನೆಗೆ ಡಿಕೆಶಿ ಪ್ಲ್ಯಾನ್​
ಪವರ್​ ಪ್ಲೇನಲ್ಲೇ ಗುಜರಾತ್ ಪವರ್ ಕಸಿದ ಆರ್​ಸಿಬಿ
ಪವರ್​ ಪ್ಲೇನಲ್ಲೇ ಗುಜರಾತ್ ಪವರ್ ಕಸಿದ ಆರ್​ಸಿಬಿ
ಅಹಮದಾಬಾದ್‌ನಲ್ಲೂ ಆರ್‌ಸಿಬಿ ಅಲೆ!
ಅಹಮದಾಬಾದ್‌ನಲ್ಲೂ ಆರ್‌ಸಿಬಿ ಅಲೆ!
ಆರ್​​ಸಿಬಿ ಫ್ಯಾನ್ಸ್‌ಗೆ ಬೆಂಗಳೂರು ಕಮಿಷನರ್ ಕಠಿಣ ವಾರ್ನಿಂಗ್!
ಆರ್​​ಸಿಬಿ ಫ್ಯಾನ್ಸ್‌ಗೆ ಬೆಂಗಳೂರು ಕಮಿಷನರ್ ಕಠಿಣ ವಾರ್ನಿಂಗ್!
ಸಿದ್ ಶ್ರೀರಾಮ್ ಗಾಯನಕ್ಕೆ ಹಿನ್ನೆಲೆ ಸಂಗೀತದ ಅವಶ್ಯಕತೆಯೇ ಇಲ್ಲ: ವಿಡಿಯೋ
ಸಿದ್ ಶ್ರೀರಾಮ್ ಗಾಯನಕ್ಕೆ ಹಿನ್ನೆಲೆ ಸಂಗೀತದ ಅವಶ್ಯಕತೆಯೇ ಇಲ್ಲ: ವಿಡಿಯೋ
ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಬಿಗ್​​ ಅಪ್ಡೇಡ್​​ ನೀಡಿದ ಡಿ.ಕೆ ಶಿವಕುಮಾರ್
ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಬಿಗ್​​ ಅಪ್ಡೇಡ್​​ ನೀಡಿದ ಡಿ.ಕೆ ಶಿವಕುಮಾರ್
ಶ್ರೀ ಕೃಷ್ಣನ ಸನ್ನಿಧಾನದಲ್ಲಿ ವಸಿಷ್ಠ ಸಿಂಹ, ಹರಿಪ್ರಿಯ ದಂಪತಿ: ವಿಡಿಯೋ
ಶ್ರೀ ಕೃಷ್ಣನ ಸನ್ನಿಧಾನದಲ್ಲಿ ವಸಿಷ್ಠ ಸಿಂಹ, ಹರಿಪ್ರಿಯ ದಂಪತಿ: ವಿಡಿಯೋ
ಪುತ್ರಿ ರೂಪಾ ಶಶಿಧರ್ ಸಚಿವ ಸ್ಥಾನ ನೀಡುವ ಬಗ್ಗೆ ಮಹತ್ವದ ಹೇಳಿಕೆ
ಪುತ್ರಿ ರೂಪಾ ಶಶಿಧರ್ ಸಚಿವ ಸ್ಥಾನ ನೀಡುವ ಬಗ್ಗೆ ಮಹತ್ವದ ಹೇಳಿಕೆ
ವಿಜಯೇಂದ್ರ ಮತ್ತು ಅಶೋಕ್​ಗೆ ಹುಷಾರ್​​ ಆಗಿರಿ ಎಂದಿದ್ದೇಕೆ ಯತ್ನಾಳ್​
ವಿಜಯೇಂದ್ರ ಮತ್ತು ಅಶೋಕ್​ಗೆ ಹುಷಾರ್​​ ಆಗಿರಿ ಎಂದಿದ್ದೇಕೆ ಯತ್ನಾಳ್​