
ಬೆಂಗಳೂರು, ಅಕ್ಟೋಬರ್ 23: ಹಗಲು ರಾತ್ರಿ ಎನ್ನದೇ ಕೆಲಸ ಮಾಡಿ ಸ್ಯಾಲರಿ ಹೈಕ್ ಆದ್ರೆ ಯಾರಿಗಾದ್ರು ಖುಷಿಯಾಗುತ್ತದೆ. ಆದ್ರೆ ಉದ್ಯೋಗಿಗೆ ಸ್ಯಾಲರಿ ಹೆಚ್ಚಾದಂತೆ ತಲೆ ನೋವು ಶುರುವಾಗಿದೆ, ಇದಕ್ಕೆ ಕಾರಣ ಮ್ಯಾನೇಜರ್ ವರ್ತನೆ. ಈಗಾಗಲೇ ಉತ್ತಮ ಸಂಬಳ ಪಡೆಯುತ್ತಿರುವ ಬೆಂಗಳೂರಿನ ಉದ್ಯೋಗಿಗೆ (Bengaluru employee) ಹೊಸ ಮ್ಯಾನೇಜರ್ ರಾಜೀನಾಮೆ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಈ ಮ್ಯಾನೇಜರ್ ಒತ್ತಡಕ್ಕೆ ಬೇಸತ್ತ ಉದ್ಯೋಗಿ ಪೋಸ್ಟ್ ಹಂಚಿಕೊಂಡು ತನ್ನ ಅಳಲು ತೋಡಿಕೊಂಡಿದ್ದಾರೆ. ಈ ರೆಡ್ಡಿಟ್ ಪೋಸ್ಟ್‌ಗೆ ನೆಟ್ಟಿಗರು ಕಾಮೆಂಟ್ ಮಾಡಿ ಧೈರ್ಯ ತುಂಬಿದ್ದಾರೆ.
ಇಂಡಿಯನ್ ವರರ್ಕ್ ಪ್ಲೇಸ್ (IndianWorkplace) ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡ ಉದ್ಯೋಗಿ, ನನ್ನ ಸಂಬಳ ಹೆಚ್ಚಿದೆ ಎಂಬ ಒಂದೇ ಒಂದು ಕಾರಣಕ್ಕೆ ಮ್ಯಾನೇಜರ್ ರಾಜೀನಾಮೆ ನೀಡಲು ಹೇಳುತ್ತಿದ್ದಾರೆ. ನಾನು ಏನು ಮಾಡುವುದು ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.
Manager is asking me to resign cause my salary is “too high” what should I do?
by
u/appadappajappa in
IndianWorkplace
ಎರಡು ತಿಂಗಳ ಹಿಂದೆಯಷ್ಟೇ ನನ್ನ ಮ್ಯಾನೇಜರ್ ಬದಲಾಗಿದ್ದು, ಆದರೆ ಹೊಸ ಮ್ಯಾನೇಜರ್ ಬಂದ ಮೇಲೆ ಈ ರೀತಿ ಸಮಸ್ಯೆ ಶುರುವಾಗಿದೆ. ಕೆಲಸದ ಒತ್ತಡವು ಅಧಿಕವಾಗಿದೆ. ಅಪ್ರೈಸಲ್ ಬರುವ ಮೊದಲೇ ನನಗೆ ರಾಜೀನಾಮೆ ನೀಡಬೇಕು ಎಂದಿದ್ದಾರೆ. ಈಗಾಗಲೇ ನನ್ನ ಸಂಬಳ ಚೆನ್ನಾಗಿದೆ. ಆದರೆ ಸಂಬಳ ಹೆಚ್ಚಾದರೆ ಬಜೆಟ್‌ನಲ್ಲಿ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ನಿರ್ವಹಿಸಲು ಸಾಧ್ಯವಿಲ್ಲ ಎಂಬುದು ಈ ರೀತಿ ವರ್ತನೆಗೆ ಮೂಲ ಕಾರಣವಾಗಿದೆ ಎಂದು ಇಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ.
ನಾನು ಮ್ಯಾನೇಜರ್ ಒತ್ತಡಕ್ಕೆ ಮಣಿದು, ಈ ಪರಿಸ್ಥಿತಿಗೆ ಕಟ್ಟು ಬಿದ್ದು ಜಾಬ್ ರಿಸೈನ್ ಮಾಡುವ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಒಂದು ವೇಳೆ ರಾಜೀನಾಮೆ ನೀಡಿದ್ರೂ ಎರಡು ತಿಂಗಳ ನೋಟಿಸ್ ಅವಧಿಯಿದೆ. ಒಂದು ವೇಳೆ ಸ್ವಇಚ್ಛೆಯಿಂದ ರಾಜೀನಾಮೆ ನೀಡದಿದ್ದರೆ ಕಂಪನಿಯೇ ನನ್ನ ಕೆಲಸದಿಂದ ತೆಗೆದುಹಾಕಬಹುದು. ಆ ಸಂದರ್ಭದಲ್ಲಿ ಏನೆಲ್ಲಾ ಸಮಸ್ಯೆಗಳು ಆಗಬಹುದು ಎಂದು ನೆಟ್ಟಿಗರಲ್ಲಿ ಕೇಳಿದ್ದಾರೆ.
ಇದನ್ನೂ ಓದಿ: ಕೈ ತುಂಬಾ ಸ್ಯಾಲರಿ ಸಿಗೋ ಇಂಜಿನಿಯರ್ ಕೆಲ್ಸ ಬಿಟ್ಟು ರ‍್ಯಾಪಿಡೋ ಚಾಲಕನಾದ ಯುವಕ, ಅಸಲಿ ಕಾರಣ ಇಲ್ಲಿದೆ
ಈ ರೆಡ್ಡಿಟ್ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಕಾಮೆಂಟ್ ಮಾಡಿರುವ ಒಬ್ಬ ಬಳಕೆದಾರ, ರಾಜೀನಾಮೆ ನೀಡುವ ಮುನ್ನ ನೀವು ಬೇರೆ ಉದ್ಯೋಗ ಹುಡುಕಿ ಎಂದಿದ್ದಾರೆ. ಇನ್ನೊಬ್ಬರು, ಈ ವಿಚಾರವನ್ನು ಗೌಪ್ಯವಾಗಿಡದೇ ಎಚ್‌ಆರ್ ಗಮನಕ್ಕೆ ತನ್ನಿ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರ, ಮ್ಯಾನೇಜರ್ ನಿಮ್ಮ ಬಳಿ ಮಾತ್ರ ಹೀಗೆ ವರ್ತಿಸುತ್ತಿದ್ದಾರಾ ಎಂದು ಕಾಮೆಂಟ್ ನಲ್ಲಿ ಕೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:43 pm, Fri, 23 October 26