Bengaluru scam: ಮಾಜಿ ಪ್ರಿಯಕರನನ್ನು ವಶೀಕರಣ ಮಾಡಲು ಹೋಗಿ 8 ಲಕ್ಷ ರೂ. ಕಳೆದುಕೊಂಡ ಬೆಂಗಳೂರಿನ ಯುವತಿ

ಜಾಲಹಳ್ಳಿಯ ಯುವತಿಯೊಬ್ಬಳು 'ಬ್ಲಾಕ್ ಮ್ಯಾಜಿಕ್'ನಿಂದ ಮೋಸ ಹೋಗಿ ಲಕ್ಷ ಲಕ್ಷ ದುಡ್ಡು ಕಳೆದುಕೊಂಡಿರುವುದು ವರದಿಯಾಗಿದೆ. ಬ್ರೇಕಪ್​​ನಿಂದ ನೊಂದಿದ್ದ ಯುವತಿ ತನ್ನ ಗೆಳೆಯನೊಬ್ಬನ ಸಹಾಯದಿಂದ ಆನ್ಲೈನ್​​ ಮೂಲಕ ವಶೀಕರಣ ಮಾಡಿಸುವ ಜ್ಯೋತಿಷಿಯನ್ನು ಸಂಪರ್ಕಿಸಿದ್ದಳು.

Bengaluru scam: ಮಾಜಿ ಪ್ರಿಯಕರನನ್ನು ವಶೀಕರಣ ಮಾಡಲು ಹೋಗಿ 8 ಲಕ್ಷ ರೂ. ಕಳೆದುಕೊಂಡ ಬೆಂಗಳೂರಿನ ಯುವತಿ
Black magic
Image Credit source: Pinterest

Updated on: Jan 23, 2024 | 5:16 PM

ಬೆಂಗಳೂರು: ಜಾಲಹಳ್ಳಿಯ ಯುವತಿಯೊಬ್ಬಳು ‘ಬ್ಲಾಕ್ ಮ್ಯಾಜಿಕ್'(Black Magic) ನಿಂದ ಮೋಸ ಹೋಗಿ ಲಕ್ಷ ಲಕ್ಷ ದುಡ್ಡು ಕಳೆದುಕೊಂಡಿರುವುದು ವರದಿಯಾಗಿದೆ. ‘ನಿನ್ನ ಮಾಜಿ ಪ್ರಿಯಕರ ಆದಷ್ಟು ಬೇಗ ನಿನ್ನನ್ನು ಬಂದು ತಲುಪುತ್ತಾನೆ, ಮತ್ತೆ ನಿಮ್ಮ ಪ್ರೀತಿ ಚಿಗುರೊಡೆಯುತ್ತದೆ’ ಎಂದು ಭರವಸೆ ನೀಡಿದ್ದ ಜ್ಯೋತಿಷಿಯಿಂದ ಮೋಸ ಹೋಗಿ 8.2 ಲಕ್ಷ ರೂಪಾಯಿಯನ್ನು ಯುವತಿ ಕಳೆದುಕೊಂಡಿದ್ದಳು. ಬ್ರೇಕಪ್​​ನಿಂದ ನೊಂದಿದ್ದ ಯುವತಿ ತನ್ನ ಗೆಳೆಯನೊಬ್ಬನ ಸಹಾಯದಿಂದ ಆನ್ಲೈನ್​​ ಮೂಲಕ ವಶೀಕರಣ ಮಾಡಿಸುವ ಜ್ಯೋತಿಷಿಯನ್ನು ಸಂಪರ್ಕಿಸಿದ್ದಳು.

ಡಿಸೆಂಬರ್ 22 ರಂದು ವಶೀಕರಣದ ಮೊದಲ ಹಂತವಾಗಿ ಮಾಜಿ ಪ್ರಿಯಕರ ಹಾಗೂ ಆತನ ಪೋಷಕರ ಮೇಲೆ ಮಾಟಮಂತ್ರದ ಆಚರಣೆಗಳನ್ನು ಮಾಡಲು 2.4 ಲಕ್ಷಗಳನ್ನು ಆನ್ಲೈನ್​​ ಮೂಲಕ ಪಾವತಿಸಿದ್ದಳು. ಆದಾಗ್ಯೂ, ಹಣಕಾಸಿನ ಬೇಡಿಕೆಗಳು ನಿಲ್ಲಲಿಲ್ಲ, ಕೆಲವು ದಿನಗಳ ನಂತರ, ಹೆಚ್ಚುವರಿ ರೂ. 1.7 ಲಕ್ಷ ನೀಡಲು ಬೇಡಿಕೆ ಇಟ್ಟಿದ್ದ ಜ್ಯೋತಿಷಿ, ಇದಲ್ಲದೇ ಹಣ ನೀಡದಿದ್ದರೆ ಮಾಜಿ ಪ್ರಿಯಕರನಿಗೆ ಈ ವಿಷಯ ತಿಳಿಸುವುದಾಗಿ ಬೆದರಿಕೆ ಹಾಕಿದ್ದ, ಯುವತಿ ಹೆದರಿ ಒತ್ತಡಕ್ಕೆ ಮಣಿದು ಜನವರಿ 10ರಂದು 4.1 ಲಕ್ಷ ರೂ. ಪಾವತಿಸಿದ್ದಳು.

ಇದನ್ನೂ ಓದಿ: AI Girlfriend: ಸಿಂಗಲ್​​​ ಬಾಯ್ಸ್​​​ ​​​​ ನಿಮ್ಮ ಒಂಟಿತನವನ್ನು ಹೋಗಲಾಡಿಸಲು ಬಂದಿದ್ದಾಳೆ AI ಗೆಳತಿ

ಕೊನೆಗೆ ಆರ್ಥಿಕ ನಷ್ಟದಿಂದಾಗಿ ಆಕೆಯ ಪೋಷಕರ ವರೆಗೆ ಈ ವಿಷಯ ತಿಳಿದು ಜಾಲಹಳ್ಳಿ ಪೊಲೀಸ್​​​ ಠಾಣೆಯಲ್ಲಿ ಜ್ಯೋತಿಷಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 5:15 pm, Tue, 23 January 24

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us