ಮತ್ತೆ ಕೆಲಸದ ಅವಧಿ ಬಗ್ಗೆ ಶುರುವಾಯ್ತು ಚರ್ಚೆ: ವಾರಕ್ಕೆ 80 ಗಂಟೆ ಕೆಲಸ ಮಾಡುವವರು ಬೇಕೆಂದ ಬೆಂಗಳೂರು ಉದ್ಯಮಿ!

ಬೆಂಗಳೂರಿನ ರನ್ನೇಬಲ್ ಕಂಪನಿಯ ಸಿಇಒ ಉಮೇಶ್ ಕುಮಾರ್ ಅವರ ವಾರದಲ್ಲಿ 60-80 ಗಂಟೆಗಳ ಕೆಲಸ ಮಾಡಬೇಕು ಎಂಬ ಪೋಸ್ಟ್​​​ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ತಮ್ಮ ಇಂಟರ್ನ್ ಸ್ಟಾಕ್ ಎಂಜಿನಿಯರ್ ಹುದ್ದೆಗೆ ವಾರದಲ್ಲಿ 60-80 ಗಂಟೆಗಳ ಕೆಲಸ ಮಾಡುವ ಅರ್ಹತೆ ಇರುವ ಅಭ್ಯರ್ಥಿಗಳು ಬೇಕಾಗಿದ್ದಾರೆ ಎಂದು ಹೇಳಿದ್ದಾರೆ. ಇದೀಗ ಈ ಪೋಸ್ಟ್ ಹಂಚಿಕೊಳ್ಳುವ ಮೂಲಕ​​ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಟೀಕೆಗೆ ಗುರಿಯಾಗಿದ್ದಾರೆ. ಅವರು ಹೇಳುವ ಪ್ರಕಾರ, ಯುವಕರು ವೇಗವಾಗಿ ಕಲಿಯಲು ಇದು ಸಹಕಾರಿ ಎಂದಿದ್ದಾರೆ. ಆದರೆ ನೆಟ್ಟಿಗರು ಇದನ್ನು ಅನಾರೋಗ್ಯಕರ ಉದ್ಯೋಗ ನೀತಿ ಎಂದಿದ್ದಾರೆ. ಎಂದು

ಮತ್ತೆ ಕೆಲಸದ ಅವಧಿ ಬಗ್ಗೆ ಶುರುವಾಯ್ತು ಚರ್ಚೆ: ವಾರಕ್ಕೆ 80 ಗಂಟೆ ಕೆಲಸ ಮಾಡುವವರು ಬೇಕೆಂದ ಬೆಂಗಳೂರು ಉದ್ಯಮಿ!
ಸಾಂದರ್ಭಿಕ ಚಿತ್ರ

Updated on: Oct 28, 2025 | 2:11 PM

ವಾರದಲ್ಲಿ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂಬ ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ (Narayana Murthy) ಅವರು ಹೇಳಿಕೆ ಭಾರೀ ಚರ್ಚೆ ಕಾರಣವಾಗಿತ್ತು. ನಾರಾಯಣ ಮೂರ್ತಿ ಅವರ ಈ ಹೇಳಿಕೆಯನ್ನು ಕೆಲವೊಂದು ದೈತ್ಯ ಐಟಿ ಕಂಪನಿಗಳು ಸರಿ ಎಂದು ವಾದಿಸಿದ್ರೆ, ಇನ್ನು ಕೆಲವು ಕಂಪನಿಗಳು ವಿರೋಧಿಸಿತ್ತು. ಇದೀಗ ಇಲ್ಲೊಬ್ಬರು ಉದ್ಯಮಿ ನಾರಾಯಣ ಮೂರ್ತಿ ಅವರ ವಾರದಲ್ಲಿ 70 ಗಂಟೆ ಕೆಲಸ ಮಾಡಬೇಕು ಎಂಬ ನಿಯಮವನ್ನು ತಮ್ಮ ಕಂಪನಿಯಲ್ಲಿ ತರುವ ಯೋಜನೆಯನ್ನು ಹಾಕಿಕೊಂಡಂತೆ ಕಾಣುತ್ತಿದೆ. ಬೆಂಗಳೂರಿನ ಉದ್ಯಮಿಯೊಬ್ಬರು ತನ್ನ Runable ಕಂಪನಿಗೆ ಇಂಟರ್ನ್ ಸ್ಟಾಕ್ ಎಂಜಿನಿಯರ್ ಬೇಕಾಗಿದ್ದಾರೆ ಎಂದು ಸಾಮಾಜಿಕ ಜಾಣತಾಣದಲ್ಲಿ ಹಂಚಿಕೊಂಡಿದ್ದಾರೆ. ಇದರ ಜತೆಗೆ ವಾರಕ್ಕೆ 60–80 ಗಂಟೆಗಳ ಕಾಲ ಕೆಲಸ ಮಾಡುವ ಸಾಮರ್ಥ್ಯವನ್ನು ಹೊಂದಿರಬೇಕು ಎಂದು ಹೇಳಿದ್ದಾರೆ.

ಬೆಂಗಳೂರಿನ ರನ್ನೇಬಲ್ ಕಂಪನಿಯ ಸಹ-ಸಂಸ್ಥಾಪಕ ಮತ್ತು ಸಿಇಒ ಆಗಿರುವ ಉಮೇಶ್ ಕುಮಾರ್​​​ ಅವರ ಈ ಪೋಸ್ಟ್​​​ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಅವರು ತಮ್ಮ ಕಂಪನಿಯಲ್ಲಿ ಇಂಟರ್ನ್ ಸ್ಟಾಕ್ ಎಂಜಿನಿಯರ್ ಹುದ್ದೆ ಖಾಲಿಯಿದೆ. ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಎಂದು ಹೇಳಿದ್ದಾರೆ. ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಅರ್ಹತೆಗಳನ್ನು ಹಾಗೂ ಕೌಶಲ್ಯಗಳನ್ನು ಹೊಂದಿರಬೇಕು. ಅದರಲ್ಲಿ ಮುಖ್ಯವಾಗಿ  ವಾರದಲ್ಲಿ 6 ದಿನ ಕೆಲಸ ಹಾಗೂ 60 ರಿಂದ 80 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ. ಈ ಅರ್ಹತೆಯನ್ನು ಯಾಕೆ ಹೊಂದಿರಬೇಕು ಎಂದು ಅವರು ಎಚ್​​​​​ಟಿಗೆ ವಿವರಿಸಿದ್ದಾರೆ. “ಉದ್ಯೋಗಿಗಳು 20ರ ದಶಕದಿಂದ ಹೊರಬೇಕು ಎಂಬುದು ನನ್ನ ಆಸೆ, ಯುವ ಉದ್ಯೋಗಿಗಳು ಹೊಸತನವನ್ನು ವೇಗವಾಗಿ ಕಲಿಯಬೇಕು. ಹಾಗೂ ವೃತ್ತಿಜೀವನಕ್ಕೆ ಬಲವಾದ ಅಡಿಪಾಯವನ್ನು ಹಾಕಿಕೊಳ್ಳಬೇಕು” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮದುವೆಯಾದ ಕೆಲವೇ ನಿಮಿಷಗಳಲ್ಲಿ ವಿಡಿಯೋ KYC ಮೂಲಕ ಮದುವೆ ನೋಂದಣಿ ಮಾಡಿಕೊಂಡ ಕೇರಳದ ದಂಪತಿ

ವೈರಲ್​​ ಪೋಸ್ಟ್​​ ಇಲ್ಲಿದೆ ನೋಡಿ:

ಇನ್ನು ಉಮೇಶ್ ಕುಮಾರ್ ಅವರ ಈ ಪೋಸ್ಟ್​​ಗೆ ಸಾಮಾಜಿಕ ಜಾಲಾತಾಣದಲ್ಲಿ ಭಾರೀ ಟೀಕೆಗಳು ವ್ಯಕ್ತವಾಗಿದೆ. ಸೋಶಿಯಲ್​​ ಮೀಡಿಯಾ ಬಳಕೆದಾರರು 60 ರಿಂದ 80 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂಬ ವಾದವನ್ನು ವಿರೋಧಿಸಿದ್ದಾರೆ. ಬಳಕೆದಾರರೊಬ್ಬರು 80 ಗಂಟೆಗಳ ಕಾಲ ಕೆಲಸ ಮಾಡುವುದು ಆರೋಗ್ಯಕರವಲ್ಲ, ದಿನಕ್ಕೆ 12 ಗಂಟೆಗಳಿಗಿಂತ ಹೆಚ್ಚು ಸಮಯ ಕೆಲಸ ಮಾಡುವ ಮನೋಭಾವವನ್ನು ಮೊದಲು ಬಿಡಬೇಕು ಎಂದು ಹೇಳಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:06 pm, Tue, 28 October 25