AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆಯಾದ ಕೆಲವೇ ನಿಮಿಷಗಳಲ್ಲಿ ವಿಡಿಯೋ KYC ಮೂಲಕ ಮದುವೆ ನೋಂದಣಿ ಮಾಡಿಕೊಂಡ ಕೇರಳದ ದಂಪತಿ

ಮದುವೆ ನೋಂದಣಿ ಪ್ರಕ್ರಿಯೆ ಈಗ ಸರಳವಾಗಿದೆ. ಕೇರಳದಲ್ಲಿ ವಿಡಿಯೋ KYC ಮೂಲಕ ಕೆಲವೇ ನಿಮಿಷಗಳಲ್ಲಿ ಮದುವೆ ನೋಂದಾಣಿ ಮಾಡಿಕೊಂಡಿದ್ದಾರೆ. ಕೇರಳದ ದಂಪತಿ ಲಾವಣ್ಯ ಮತ್ತು ವಿಷ್ಣು ಈ ಡಿಜಿಟಲ್ ವ್ಯವಸ್ಥೆಯನ್ನು ಬಳಸಿಕೊಂಡಿದ್ದಾರೆ. ಈ ಪಾರದರ್ಶಕ ಮತ್ತು ನಾಗರಿಕ ಸ್ನೇಹಿ ತಂತ್ರಜ್ಞಾನದಿಂದ ಸ್ಥಳದಲ್ಲೇ ಡಿಜಿಟಲ್ ಪ್ರಮಾಣಪತ್ರ ಪಡೆಯಬಹುದು, ಕೇರಳ ದೇಶಕ್ಕೆ ಮಾದರಿಯಾಗಿದೆ.

ಮದುವೆಯಾದ ಕೆಲವೇ ನಿಮಿಷಗಳಲ್ಲಿ ವಿಡಿಯೋ KYC ಮೂಲಕ ಮದುವೆ ನೋಂದಣಿ ಮಾಡಿಕೊಂಡ ಕೇರಳದ ದಂಪತಿ
ವೀಡಿಯೋ
ಅಕ್ಷಯ್​ ಪಲ್ಲಮಜಲು​​
|

Updated on:Oct 28, 2025 | 2:07 PM

Share

ಕೇರಳ, ಅ28: ಮದುವೆಯ ನಂತರ ಭಾರತದ ಕಾನೂನಿನ ಪ್ರಕಾರ, ಮದುವೆ ನೋಂದಣಿಯನ್ನು ಮಾಡಿಕೊಳ್ಳಲೇಬೇಕು. ಆದರೆ ನೋಂದಣಿ ಮಾಡಿಕೊಳ್ಳಲು ಮೂರು-ನಾಲ್ಕು ದಿನಗಳ ಕಾಲ ಕಾಯಬೇಕಾದ ಸಂದರ್ಭದಲ್ಲಿ ಡಿಜಿಟಲ್ ನೋಂದಣಿ ಬಂದಿದೆ. ಹೌದು ಇದೀಗ ಕೇರಳ ಸರ್ಕಾರ ಮದುವೆ ನೋಂದಣಿಯನ್ನು (Marriage registration Kerala) ಸರಳೀಕರಣಗೊಳಿಸಿದೆ. ಈ ವಿಚಾರದಲ್ಲಿ ದೇಶಕ್ಕೆ ಕೇರಳ ಮಾದರಿಯಾಗಿದೆ. ಮದುವೆಯಾದ ಕೆಲವೇ ನಿಮಿಷಗಳಲ್ಲಿ ಮದುವೆ ನೋಂದಣಿ ಮಾಡಿಕೊಳ್ಳಬಹುದು. ಈ ವ್ಯವಸ್ಥೆಯ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಇದೀಗ ಈ ವ್ಯವಸ್ಥೆಯನ್ನು ಕೇರಳದ ನವ ದಂಪತಿಗಳು ಸರಿಯಾಗಿ ಬಳಸಿಕೊಂಡಿದ್ದಾರೆ. ಕೇರಳದ ಕವಸ್ಸೆರಿ ಪಂಚಾಯತ್‌ ವ್ಯಾಪ್ತಿಯಲ್ಲಿ ಬರುವ ಈ ದಂಪತಿಗಳು ವೀಡಿಯೊ KYC ಮೂಲಕ ತಮ್ಮ ಮದುವೆಯನ್ನು ನೋಂದಾಯಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿ ಭಾರೀ ವೈರಲ್​​ ಆಗಿದೆ. ದಂಪತಿಗಳು ಡಿಜಿಟಲ್​​ ಯುಗಕ್ಕೆ ತೆರೆದುಕೊಂಡಿದ್ದಾರೆ ಎಂದು ಸೋಶಿಯಲ್​​ ಮೀಡಿಯಾ ಬಳಕೆದಾರರು ಹೇಳಿದ್ದಾರೆ.

ಈ ವ್ಯವಸ್ಥೆ ಬರುವ ಮೊದಲು ಮದುವೆ ನೋಂದಣಿ ಮಾಡಿಕೊಳ್ಳಲು ದಿನಪೂರ್ತಿ ಸರ್ಕಾರಿ ಕಚೇರಿ ಮುಂದೆ ಕಾಯಬೇಕಿತ್ತು. ಅದ್ರೂ ಅಧಿಕಾರಿಗಳು ತಾಂತ್ರಿಕ ತೊಂದರೆ ಇದೆ ಎಂದು ಕಾರಣ ಹೇಳಿ, ವಾರಗಟ್ಟಲೇ ಕಾಯಿಸುತ್ತಾರೆ. ಆದರೆ ಇದೀಗ ಡಿಜಿಟಲ್​​​ ನೋಂದಣಿಯಿಂದ ಕೆಲವೇ ನಿಮಿಷಗಳಲ್ಲಿ ಮದುವೆ ನೋಂದಣಿ ಮಾಡಿಕೊಳ್ಳಬಹುದು. ಕೇರಳದ ಲಾವಣ್ಯ ಮತ್ತು ವಿಷ್ಣು ದಂಪತಿಗಳು ಒಂದೇ ದಿನದಲ್ಲಿ ವಿವಾಹ ನೋಂದಣಿ ಮತ್ತು ಪರಿಶೀಲನೆ ಎರಡನ್ನೂ ಮಾಡಿಕೊಂಡಿದ್ದಾರೆ.

ಇಲ್ಲಿದೆ ನೋಡಿ ಪೋಸ್ಟ್​​​:

ಈ ನೋಂದಾಣಿ ಪ್ರಕ್ರಿಯೆ ಮುಗಿದ ನಂತರ ಆನ್​​​​​ಲೈನ್​​ನಲ್ಲಿ ಪಂಚಾಯತ್ ಅಧಿಕಾರಿ ಅವರಿಗೆ ಅವರ ಫೋಟೋ ಇರುವ ಡಿಜಿಟಲ್ ಸಹಿ ಮಾಡಿದ ಪ್ರಮಾಣಪತ್ರವನ್ನು ನೀಡಿದ್ದಾರೆ. ಇದೀಗ ಈ ಬಗ್ಗೆ ವಿಡಿಯೋವೊಂದನ್ನು @SreekanthB+ve ಎಂಬ ಎಕ್ಸ್​​​​ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಹೀಗೆ ಬರೆದುಕೊಳ್ಳಲಾಗಿದೆ. ” ಲಾವಣ್ಯ ಮತ್ತು ವಿಷ್ಣು ದಂಪತಿಗಳು ವೀಡಿಯೊ KYC ಮೂಲಕ ಮದುವೆ ನೋಂದಣಿ ಮಾಡಿಕೊಂಡಿದ್ದಾರೆ. ಪಂಚಾಯತ್ ಅಧಿಕಾರಿ ಅದೇ ದಿನ ಮಧು-ವರರ ಫೋಟೋದೊಂದಿಗೆ ಡಿಜಿಟಲ್ ಆಗಿ ಪರಿಶೀಲಿಸಿದ ಪ್ರಮಾಣಪತ್ರವನ್ನು ಕೂಡ ನೀಡಿದ್ದಾರೆ”.

ಇದನ್ನೂ ಓದಿ: ಬೆಂಗಳೂರು ಟ್ರಾಫಿಕ್ ಮಾಯವಾಗಿದೆ! ಹಬ್ಬದಂದು ಕೇವಲ 25 ನಿಮಿಷಗಳಲ್ಲಿ ವಿಮಾನ ನಿಲ್ದಾಣ ತಲುಪಿದ ನಟ ಆಶಿಶ್ ವಿದ್ಯಾರ್ಥಿ

ಇನ್ನು ಈ ಡಿಜಿಟಲ್​​​​ ತಂತ್ರವನ್ನು ಬಳಸಿಕೊಂಡ ಕೇರಳ ಮಾದರಿಯಾಗಿದೆ. ಈ ವ್ಯವಸ್ಥೆ ಪಾರದರ್ಶಕವಾಗಿ ಮತ್ತು ಹೆಚ್ಚು ನಾಗರಿಕ ಸ್ನೇಹಿಯಾಗಿದೆ ಎಂದು ಪೋಸ್ಟ್​​ನಲ್ಲಿ ಬರೆಯಲಾಗಿದೆ. ಈ ಪೋಸ್ಟ್​​ಗೆ ಸೋಶಿಯಲ್​ ಮೀಡಿಯಾ ಬಳಕೆದಾರರು ಕಮೆಂಟ್​​ ಮಾಡಿದ್ದಾರೆ. ಒಬ್ಬ ಬಳಕೆದಾರ ಇದು ಒಂದು ಕಾರಣಕ್ಕಾಗಿ 100% ಸಾಕ್ಷರತೆ ಎಂದು ಹೇಳಿದ್ದಾರೆ. ಈ ವಿಧಾನವನ್ನು ಶ್ಲಾಘಿಸಲೇಬೇಕು ಎಂದು ಮತ್ತೊಬ್ಬ ಬಳಕೆದಾರ ಹೇಳಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:16 am, Tue, 28 October 25