
ಬೆಂಗಳೂರು, ಡಿ.12: ಆಟೋ, ಟ್ಯಾಕ್ಸಿ ಚಾಲಕರು ಸೇರಿದಂತೆ ಪುಂಡಪೋಕರಿಗಳು ಹೆಣ್ಣು ಮಕ್ಕಳ ಜತೆ ಅಹಿತಕರವಾಗಿ ವರ್ತಿಸುವ ಘಟನೆಗಳ ಬಗ್ಗೆ ಕೇಳಿರುತ್ತೀರಿ. ಆದರೆ, ಬೆಂಗಳೂರಿನಲ್ಲಿ (Bengaluru) ಓಡಾಡುತ್ತಿದ್ದ ಮಹಿಳೆಗೆ ಒಳ್ಳೆಯ ಜನ ಇರ್ತಾರೆ ಎನ್ನುವ ಅಭಿಪ್ರಾಯ ಮೂಡಿದೆ. ಹೌದು, ಈ ಮಹಿಳೆಗೆ ಆಟೋದಲ್ಲಿ (auto) ಬರೆದ ಸಾಲುಗಳು ಕಣ್ಣಿಗೆ ಬಿದ್ದಿದೆ. ಇದನ್ನೂ ನೋಡಿದ ಈ ಮಹಿಳೆಯೂ ಬೆಂಗಳೂರು ರಾತ್ರಿ ವೇಳೆ ಹೆಣ್ಣು ಮಕ್ಕಳಿಗೆ ಸುರಕ್ಷಿತ ಎನ್ನುವ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆ. ಈ ಬಗ್ಗೆ ವಿಡಿಯೋ ಮಾಡಿ ಅಪ್ಲೋಡ್ ಮಾಡಿದ್ದು ಈ ಕುರಿತಾದ ಸ್ಟೋರಿ ಇಲ್ಲಿದೆ.
ಲಿಟಲ್ ಬೆಂಗಳೂರು ಸ್ಟೋರೀಸ್ (littlebengalurustories) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬೆಂಗಳೂರಿನಲ್ಲಿ ರಾತ್ರಿಯ ವೇಳೆ ಆಟೋದಲ್ಲಿ ತೆರಳಿದ್ದು ಈ ವೇಳೆ ಮಾಡಿದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಮಹಿಳೆಯೂ ಆಟೋದ ಒಳಗೆ ಬರೆದ ಸಾಲುಗಳನ್ನು ತೋರಿಸಿದ್ದಾರೆ. ನಾನೂ ಒಬ್ಬ ತಂದೆ, ಅಣ್ಣ ನಿಮ್ಮ ಸುರಕ್ಷತೆ ನನಗೆ ಮುಖ್ಯ. ಆರಾಮಾಗಿ ಕುಳಿತುಕೊಳ್ಳಿ” ಎಂದು ಬರೆದಿರುವುದನ್ನು ಕಂಡು ಖುಷಿ ಪಟ್ಟಿದ್ದಾರೆ. ಆ ಬಳಿಕ ಈ ಮಹಿಳೆ ನಾನು ರಾಪಿಡೋ ಆಟೋದಲ್ಲಿ ಪ್ರಯಾಣಿಸುತ್ತಿದ್ದೆ. ಬೆಂಗಳೂರಿನಲ್ಲಿ ರಾತ್ರಿ 12 ಗಂಟೆಯಾಗಿತ್ತು. ಆಗ ನಾನು ಇದನ್ನ ಓದಿದೆ. ನಿಜಕ್ಕೂ ನನಗೆ ಸುರಕ್ಷತಾ ಮನೋಭಾವ ಮೂಡಿತು. ಆರಾಮಾಗಿ ಓಡಾಡಬಹುದು ಅನಿಸಿತು ಎಂದು ಹೇಳಿರುವುದನ್ನು ನೋಡಬಹುದು.
ಇದನ್ನೂ ಓದಿ:“ಇದು ಕಾರು, ವಿಮಾನವಲ್ಲ”: ನೀವು ಬರುತ್ತಿದ್ದೀರಾ? ಎಂದು ಕೇಳಿದ್ದಕ್ಕೆ ಪ್ರಯಾಣಿಕನ ಮೇಲೆ ಸಿಟ್ಟಾದ ಚಾಲಕ
ಈ ವಿಡಿಯೋ ಇದುವರೆಗೆ ಮೂರು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ನಾನು ಇಪ್ಪತ್ತು ವರ್ಷದಿಂದ ಈ ಸಿಟಿಯನ್ನ ನೋಡುತ್ತಿದ್ದೇನೆ. ಪ್ರತಿಯೊಬ್ಬರಿಗೂ ಇದು ಸುರಕ್ಷಿತ ಸ್ಥಳ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಒಳ್ಳೆಯವರು ಇರ್ತಾರೆ ಅನ್ನೋದಕ್ಕೆ ಇದಕ್ಕಿಂತ ಸಾಕ್ಷಿ ಬೇಕೇ ಎಂದು ಕೇಳಿದ್ದಾರೆ. ಇನ್ನೊಬ್ಬರು, ಇವರೇ ನಿಜವಾದ ಬೆಂಗಳೂರು ಆಟೋ ಚಾಲಕರು. ಜವಾಬ್ದಾರಿ ಇದೇ ಅನ್ನೋದಕ್ಕೆ ಇದೆ ಉದಾಹರಣೆ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ