
ಇಟಲಿಯ ರಾಜತಾಂತ್ರಿಕ ಜಿಯಾಂಡೊಮೆನಿಕೊ ಮಿಲಾನೊ (Giandomenico Milano) “ನಾನು ಪ್ರತಿದಿನ ಮಸಾಲೆ ದೋಸೆ ತಿನ್ನಬಲ್ಲೆ, ಬೆಂಗಳೂರಿನಲ್ಲಿ ಅದು ನನ್ನ ನೆಚ್ಚಿನ ಉಪಹಾರ” ಎಂದು ಈ ಹಿಂದೆ ಹೇಳಿರುವುದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಇದೀಗ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದಾರೆ. ಬೆಂಗಳೂರಿನಲ್ಲಿರುವ ಇಟಲಿಯ ಕಾನ್ಸುಲ್ ಜನರಲ್ ಜಿಯಾಂಡೊಮೆನಿಕೊ ಮಿಲಾನೊ, ಬೆಂಗಳೂರಿನ ಬೆಸ್ಟ್ 9 ಹೋಟೆಲ್ಗಳ ಬಗ್ಗೆ ಹೇಳಿದ್ದಾರೆ. ವಿಶ್ವದ ಇಟಾಲಿಯನ್ ಪಾಕಪದ್ಧತಿಯ ವಾರ ಎಂಬ ಕಾರ್ಯಕ್ರಮದಲ್ಲಿ ಈ ಬಗ್ಗೆ ಹೇಳಿದ್ದರು. ಬೆಂಗಳೂರಿನಲ್ಲಿರುವ ಇಟಾಲಿಯನ್ ರೆಸ್ಟೋರೆಂಟ್ ಯಾವುದು ಎಂಬುದನ್ನು ಇಲ್ಲಿ ತಿಳಿಸಿದೆ.
ಇಟಲಿ ಆಹಾರಗಳನ್ನು ಸೇವನೆ ಮಾಡಬೇಕೆಂದರೆ ಅವರು ಬೆಂಗಳೂರಿನ ಈ ಹೋಟೆಲ್ಗಳಿಗೆ ಹೋಗುತ್ತಾರೆ. ಈ ಬಗ್ಗೆ ಸೆರೆನಾ ಎಂಬುವವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಅವರು ಈ ವಿಡಿಯೋದಲ್ಲಿ ಹೇಳಿರುವ ಪ್ರಕಾರ, ಇಟಾಲಿಯನ್ ಫುಡ್ ವೀಕ್ ಕಾರ್ಯಕ್ರಮದ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಅತ್ಯುತ್ತಮ ಇಟಾಲಿಯನ್ ಆಹಾರವನ್ನು ನೀಡುವ ರೆಸ್ಟೋರೆಂಟ್‌ಗಳನ್ನು ಅವರು ಪಟ್ಟಿ ಮಾಡಿದ್ದಾರೆ. ಆಲ್ಟೊ ವಿನೋ, ಇಟಾಲಿಯಾ ದಿ ಪಾರ್ಕ್, ಚಿಯಾಂಟಿ, ಕ್ಯಾಪ್ರೆಸ್ ಅಟ್ ಶಾಂಗ್ರಿ-ಲಾ, ಟೊಸ್ಕಾನೊ, ಟಿಯಾಮೊ, ರೋಸ್ಮರಿನೊ, ಪಿನೋಚ್ಚಿಯೊ ರಿಸ್ಟೊರಾಂಟೆ ಮತ್ತು ಲಾ ಜಿಯೋಯಾ ಇವುಗಳು ಇಟಾಲಿಯನ್ ಫುಡ್ ನೀಡುವ ಬೆಂಗಳೂರಿನ ಪ್ರಸಿದ್ಧ ರೆಸ್ಟೋರೆಂಟ್‌ಗಳು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಹೊಟ್ಟೆ ಹಸಿದಾಗ ಬರುವ ಶಬ್ದ ಕೇಳಿ ಫುಡ್ ಆರ್ಡರ್ ಮಾಡುವ ಎಐ ಸಾಧನ ಕಂಡುಹಿಡಿದ ಮಂಗಳೂರಿನ ಯುವಕ
ಇನ್ನು ನೆಟ್ಟಿಗರು ಈ ಪೋಸ್ಟ್ಗೆ ಪ್ರತಿಕ್ರಿಯಿಸಿದ್ದಾರೆ. ಒಬ್ಬ ನೆಟ್ಟಿಗ, ಇಲ್ಲ ಬೊಲೊಗ್ನಾ ಅತ್ಯುತ್ತಮ ರೆಸ್ಟೋರೆಂಟ್ ಎಂದು ಹೇಳಿದ್ದಾರೆ. ಇದನ್ನು ಯಾಕೆ ಇಲ್ಲಿ ಉಲ್ಲೇಖಿಸಿಲ್ಲ ಎಂದು ಕೇಳಿದ್ದಾರೆ. ಇದಕ್ಕೆ ಮತ್ತೊಬ್ಬ ನೆಟ್ಟಿಗ, ಹೌದು ಬೊಲೊಗ್ನಾ ರೆಸ್ಟೋರೆಂಟ್ ತುಂಬಾ ಒಳ್ಳೆಯ ರೆಸ್ಟೋರೆಂಟ್ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ