ಅನೇಕ ಅಪರೂಪದ ಹಾಗೂ ವಿಲಕ್ಷಣ ಜನನಗಳಿಗೆ ಜಗತ್ತು ಸಾಕ್ಷಿಯಾಗಿದೆ. ಇದೀಗ ಛತ್ತೀಸ್‌ಗಢದ ರಾಜನಂದಗಾಂವ್‌ನ ಹೇಮಂತ್ ಚಂದೇಲ್ ಅವರ ಮನೆಯಲ್ಲಿ ಹಸುವೊಂದು ಮೂರು ಕಣ್ಣುಗಳನ್ನು ಹೊಂದಿರುವ ಹೆಣ್ಣು ಕರುವಿಗೆ ಜನ್ಮ ನೀಡಿದೆ. ಈ ವಿಚಾರ ಹಬ್ಬುತ್ತಿದ್ದಂತೆ ಕರುವನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಿದ್ದಾರೆ. ಇನ್ನೂ ಕೆಲವರು ಈ ಕರುವನ್ನು ಶಿವನ ಅವತಾರವೆಂದು ಪೂಜೆಯನ್ನೂ ಮಾಡಿದ್ದಾರೆ. ಈ ಕರು ಮೂರು ಕಣ್ಣುಗಳ ಜೊತೆಗೆ ನಾಲ್ಕು ಮೂಗಿನ ಹೊಳ್ಳೆಗಳನ್ನು ಕೂಡ ಹೊಂದಿದೆ.
“ಕರು ತನ್ನ ಹಣೆಯ ಮಧ್ಯದಲ್ಲಿ ಹೆಚ್ಚುವರಿ ಕಣ್ಣು ಮತ್ತು ಮೂಗಿನ ಹೊಳ್ಳೆಯಲ್ಲಿ ನಾಲ್ಕು ರಂಧ್ರಗಳನ್ನು ಹೊಂದಿದೆ. ಇದರ ಬಾಲವು ‘ಜಟಾ’ (ಮಚ್ಚೆಯ ಕೂದಲಿನ ರಾಶಿ) ನಂತೆ ಕಾಣುತ್ತದೆ ಮತ್ತು ಅದರ ನಾಲಿಗೆ ಸಾಮಾನ್ಯ ಕರುಗಳಿಗಿಂತ ಉದ್ದವಾಗಿದೆ” ಎಂದು ಹೇಮಂತ್ ಚಾಂದೇಲ್ ಅವರು ಸುದ್ದಿ ಸಂಸ್ಥೆ ಪಿಟಿಐ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.
ಕರು ಹುಟ್ಟಿದಾಗಿನಿಂದಲೂ ರೈತ ಚಂದೇಲ್ ಮನೆಯಲ್ಲಿ ತೆಂಗಿನಕಾಯಿ, ಹೂವಿನ ನೈವೇದ್ಯ ಸಮರ್ಪಿಸುತ್ತಿದ್ದಾರೆ. ಆದಾಗ್ಯೂ, ಪಶುವೈದ್ಯ ತಜ್ಞರು, ಅಂತಹ ನಿದರ್ಶನಗಳನ್ನು ಪವಾಡಗಳಂತೆ ನೋಡಬಾರದು. ಬದಲಿಗೆ ವೈದ್ಯಕೀಯ ವೈಪರೀತ್ಯಗಳಾಗಿ ಪರಿಗಣಿಸಬೇಕು ಎಂದು ಹೇಳುತ್ತಾರೆ. ಅಂತಹ ವಿರೂಪಗಳೊಂದಿಗೆ ಜನಿಸಿದ ಹೆಚ್ಚಿನ ಪ್ರಾಣಿಗಳಂತೆಯೇ ಕರುವಿನ ಆರೋಗ್ಯವು ಶೀಘ್ರದಲ್ಲೇ ಹದಗೆಡಬಹುದು ಎಂದು ತಿಳಿಸಿದ್ದಾರೆ.
Chhattisgarh| Three-eyed cow born in Rajnandgaon district worshipped as reincarnation of god Shiva
"We were surprised. Its nose has four holes instead of two & has 3 eyes. Medical screening has been done. She is healthy. Villagers are worshipping the calf," said Neeraj (16.01) pic.twitter.com/NrG2b8LNXt
— ANI (@ANI) January 17, 2022
ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಮಾತನಾಡಿದ ಜಾನುವಾರು ಇಲಾಖೆಯ ಡಾ. ತರುಣ್ ರಾಮ್ಟೆಕೆ, “ಇದು ಹಾರ್ಮೋನ್ ಅಸ್ವಸ್ಥತೆಯ ಕಾರಣದಿಂದ ಇಂತಹ ಕರುವಿನ ಜನನವಾಗಿದೆ. ಅಂತಹ ಸಂದರ್ಭಗಳಲ್ಲಿ ಪ್ರಾಣಿ ದೀರ್ಘಕಾಲ ಬದುಕುವುದಿಲ್ಲ. ಕೆಲವು ಎರಡು ವರ್ಷ ಅಥವಾ ಆರು ತಿಂಗಳು ಬದುಕಿದರೆ, ಇನ್ನೂ ಕೆಲವು ಕೇವಲ 10-15 ದಿನಗಳವರೆಗೆ ಬದುಕುತ್ತವೆ ಎಂದಿದ್ದಾರೆ. ವೈದ್ಯಕೀಯ ತಪಾಸಣೆಯ ನಂತರ ಕರು ಆರೋಗ್ಯವಾಗಿರುವುದು ಕಂಡುಬಂದಿದೆ ಎಂದು ಎಎನ್‌ಐ ವರದಿ ಮಾಡಿದೆ. ಕರುವಿನ ಚಿತ್ರಗಳನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡಾಗಿನಿಂದ, ಜನರು ವಿಚಿತ್ರ ಜನ್ಮದಿಂದ ಆಕರ್ಷಿತರಾಗಿದ್ದಾರೆ.
ಮತ್ತಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:46 am, Sun, 21 August 22