AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bizarre News: ಚಾಯ್ ಚಾಯ್ ಚಾಯ್.. ರಸಗುಲ್ಲಾ ಚಾಯ್.. ವಿಡಿಯೋ ವೈರಲ್

Viral Video: ಗ್ರೀನ್ ಟೀ, ಲೆಮೆನ್ ಟೀ, ಶುಂಠಿ ಟೀ ಇತ್ಯಾದಿ ಫ್ಲೇವರ್ ಟೀ ನೋಡಿದ್ದೀರಿ, ಆದರೆ ಎಂದಾದರೂ ಸಕ್ಕರೆಪಾಕದಲ್ಲಿ ಸವಿಯು ರಸಗುಲ್ಲಾದ ಚಹಾ ನೋಡಿದ್ದೀರಾ? ಇಲ್ಲಿದೆ ನೋಡಿ ರಸಗುಲ್ಲಾ ಚಹಾದ ವಿಡಿಯೋ..

Bizarre News: ಚಾಯ್ ಚಾಯ್ ಚಾಯ್.. ರಸಗುಲ್ಲಾ ಚಾಯ್.. ವಿಡಿಯೋ ವೈರಲ್
ರಸಗುಲ್ಲಾ ಚಹಾ
TV9 Web
| Edited By: Rakesh Nayak Manchi|

Updated on:Aug 21, 2022 | 10:03 AM

Share

ಚಹಾಕ್ಕೆ ಭಾರತದಲ್ಲಿ ತನ್ನದೇ ಆದ ಸ್ಥಾನವಿದೆ, ವಿಶ್ರಾಂತಿ ವೇಳೆ ಜ್ಯೂಸ್ ಕುಡಿಯುವವರಿಗಿಂತ ಒಂದು ಕಪ್ ಚಹಾ ಕುಡಿಯುವವರೇ ಹೆಚ್ಚು. ಇನ್ನು ಯುವಕರಾದರೆ ಬೈಕ್ ಮೂಲಕ ಹೋಗಿ 10 ರೂಪಾಯಿ ಚಹಾ ಕುಡಿದು ಬರುತ್ತಾರೆ. ಇಂತಹ ಚಹಾದಲ್ಲೂ ಶುಂಠಿ ಚಹಾ, ಲೆಮೆನ್ ಟೀ, ಚಾಕಲೇಟ್ ಟೀ, ಗ್ರೀನ್ ಟೀ ಸೇರಿದಂತೆ ಅನೇಕ ಫ್ಲೇವರ್​ಗಳನ್ನು ಕಾಣಬಹುದಾಗಿದು. ಆದರೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋ ನಿಮ್ಮನ್ನು ಅಚ್ಚರಿಗೊಳಿಸುವುದರಲ್ಲಿ ಅನುಮಾನವೇ ಇಲ್ಲ. ಯಾವುದನ್ನು ನೀವು ಸಕ್ಕರೆ ಪಾಕದಲ್ಲಿ ಹಾಕಿ ತಿನ್ನುತ್ತೀರೋ ಅದೇ ರಸಗುಲ್ಲಾದ ಉಂಡೆಯನ್ನು ಬೆರೆಸಿ ಚಹಾವನ್ನು ತಯಾರಿಸಲಾಗುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಅಚ್ಚರಿಗೊಂಡಿದ್ದಾರೆ.

ವಿಲಕ್ಷಣ ಸಂಯೋಜನೆಯ ರಸಗುಲ್ಲಾ ಚಹಾ ಮಾಡುತ್ತಿರುವ ದೃಶ್ಯಾವಳಿಯನ್ನು ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಸೆರೆಹಿಡಿಯಲಾಗಿದೆ. ಈ ವಿಡಿಯೋವನ್ನು ಆಹಾರ ಬ್ಲಾಗರ್ kolkatadelites ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಸೌತ್ ಸಿಟಿ ಮಾಲ್ ಪಕ್ಕದಲ್ಲಿರುವ ಚುಮುಕ್ ಚೋಮೊಕ್ ಎಂಬಲ್ಲಿ ಈ ಚಹಾ ಸಿಗುತ್ತದೆ, ಪ್ರತಿ ಕಪ್​ಗೆ 35ರೂಪಾಯಿ ಬೆಲೆ ಇದೆ” ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ.

ವೈರಲ್ ವಿಡಿಯೋದಲ್ಲಿ ಕಾಣುವಂತೆ, ಚಹಾ ಮಾಡುವ ಅಂಗಡಿ ಮಾಲೀಕ, ಮಣ್ಣಿನ ಲೋಟದಲ್ಲಿ ರಸಗುಲ್ಲಾದ ಉಂಡೆಯನ್ನು ಹಾಕುತ್ತಾರೆ, ನಂತರ ಅದಕ್ಕೆ ಚಹಾವನ್ನು ಬೆರೆಸುತ್ತಾರೆ. ಅಂತಿಮವಾಗಿ ಸ್ವಲ್ಪ ಬೆಣ್ಣೆ ಕೂಡ ಹಾಕಿ ಮಿಶ್ರಣ ಮಾಡುತ್ತಾರೆ. ಸದ್ಯ ಈ ವಿಡಿಯೋ ವೈರಲ್ ಪಡೆದಿದ್ದು, 11ಸಾವಿರಕ್ಕೂ ಹೆಚ್ಚು ಲೈಕ್​ಗಳು ಬಂದಿವೆ. ಈ ವಿಡಿಯೋ ಇಲ್ಲಿದೆ ನೋಡಿ:

ಮತ್ತಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:03 am, Sun, 21 August 22

Follow Us
ಎಸ್ ಜಾನಕಿ ಅವರಿಗಿದ್ದ ನೋವೇನು? ಭಾರತಿ ವಿಷ್ಣುವರ್ಧನ್ ಮಾತು
ಎಸ್ ಜಾನಕಿ ಅವರಿಗಿದ್ದ ನೋವೇನು? ಭಾರತಿ ವಿಷ್ಣುವರ್ಧನ್ ಮಾತು
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
‘ಜಾನಕಿ ಹಾಡು ಕೇಳುತ್ತಲೇ ನಮ್ಮ ತಾಯಿ ಪ್ರಾಣ ಬಿಟ್ಟಿದ್ದರು’: ಸಾಧು ಕೋಕಿಲ
‘ಜಾನಕಿ ಹಾಡು ಕೇಳುತ್ತಲೇ ನಮ್ಮ ತಾಯಿ ಪ್ರಾಣ ಬಿಟ್ಟಿದ್ದರು’: ಸಾಧು ಕೋಕಿಲ
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು
ಎಸ್. ಜಾನಕಿ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ವಾಣಿ ಹರಿಕೃಷ್ಣ
ಎಸ್. ಜಾನಕಿ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ವಾಣಿ ಹರಿಕೃಷ್ಣ
ಎಸ್.ಜಾನಕಿಯವರ ಅಂತಿಮ ದರ್ಶನ ಪಡೆದು ಭಾವುಕರಾದ ಗಾಯಕ ವಿಜಯ್ ಪ್ರಕಾಶ್
ಎಸ್.ಜಾನಕಿಯವರ ಅಂತಿಮ ದರ್ಶನ ಪಡೆದು ಭಾವುಕರಾದ ಗಾಯಕ ವಿಜಯ್ ಪ್ರಕಾಶ್
ಎಸ್​​. ಜಾನಕಿ ನಿಧನಕ್ಕೆ ಲಂಡನ್​​ನಿಂದಲೇ ಇಳಯರಾಜ್ ಸಂತಾಪ
ಎಸ್​​. ಜಾನಕಿ ನಿಧನಕ್ಕೆ ಲಂಡನ್​​ನಿಂದಲೇ ಇಳಯರಾಜ್ ಸಂತಾಪ
ಜಾನಕಮ್ಮಗೆ ಮೈಸೂರಿನ ನಂಟು ಹೇಗೆ? ನವೀನ್ ಕೇರ್​ಟೇಕರ್ ಆಗಿದ್ಯಾಕೆ?
ಜಾನಕಮ್ಮಗೆ ಮೈಸೂರಿನ ನಂಟು ಹೇಗೆ? ನವೀನ್ ಕೇರ್​ಟೇಕರ್ ಆಗಿದ್ಯಾಕೆ?
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಯುವ ಕಾಂಗ್ರೆಸ್​​ನಿಂದ ಸೈಕಲ್ ಜಾಥಾ
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಯುವ ಕಾಂಗ್ರೆಸ್​​ನಿಂದ ಸೈಕಲ್ ಜಾಥಾ
ಎಸ್. ಜಾನಕಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ಅಭಿಮಾನಿಗಳು
ಎಸ್. ಜಾನಕಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ಅಭಿಮಾನಿಗಳು