ತಮಿಳುನಾಡಿನಿಂದ ಶ್ರೀಲಂಕಾಕ್ಕೆ ಹಡಗು ಪ್ರಯಾಣ: ಟಿಕೆಟ್ ಬೆಲೆ ಎಷ್ಟು ಗೊತ್ತಾ?

|

Updated on: Dec 03, 2023 | 10:41 PM

ಭಾರತ ಮತ್ತು ಶ್ರೀಲಂಕಾ ನಡುವಿನ ಪ್ರವಾಸೋದ್ಯಮ ಮತ್ತು ವ್ಯಾಪಾರವನ್ನು ಹೆಚ್ಚಿಸುವ ದೃಷ್ಟಿಯಿಂದ ಹಡಗು ಸೇವೆಯನ್ನು ಆರಂಭಿಸಲಾಗಿದೆ. ಈ ಮೂಲಕ ನೀವು ಕಡಿಮೆ ಸಮಯ ಮತ್ತು ಕಡಿಮೆ ಟಿಕೆಟ್​ ಬೆಲೆಯಲ್ಲಿ ಶ್ರೀಲಂಕಾಕ್ಕೆ ತಲುಪಬಹುದಾಗಿದೆ. ಹಡಗಿನಲ್ಲಿ ತಮಿಳುನಾಡು ಮೂಲಕ ಸುಲಭವಾಗಿ ಶ್ರೀಲಂಕಾಗೆ ತಲುಪಬಹುದಾಗಿದೆ.

ತಮಿಳುನಾಡಿನಿಂದ ಶ್ರೀಲಂಕಾಕ್ಕೆ ಹಡಗು ಪ್ರಯಾಣ: ಟಿಕೆಟ್ ಬೆಲೆ ಎಷ್ಟು ಗೊತ್ತಾ?
ಹಡಗು ಸೇವೆ
Follow us on

ಕಡಿಮೆ ಬಜೆಟ್‌ನಲ್ಲಿ ವಿದೇಶಕ್ಕೆ ಪ್ರಯಾಣಿಸಲು ಬಯಸುವವರಿಗೆ ಶ್ರೀಲಂಕಾ (sri lanka) ಅತ್ಯಂತ ಸೂಕ್ತ ಪ್ರವಾಸಿ ತಾಣವಾಗಿದೆ. ಶ್ರೀಲಂಕಾ, ಭಾರತಕ್ಕೆ ಹತ್ತಿರವಿರುವುದರಿಂದ ಅತೀ ಕಡಿಮೆ ವೆಚ್ಚದಲ್ಲಿ ಹಡಗಿನ ಮೂಲಕ ಶ್ರೀಲಂಕಾ ಪ್ರವಾಸವನ್ನು ನೀವು ಆನಂದಿಸಬಹುದಾಗಿದೆ. ತಮಿಳುನಾಡು ಮೂಲಕ ಸುಲಭವಾಗಿ ಶ್ರೀಲಂಕಾಗೆ ತಲುಪಬಹುದಾಗಿದೆ. ಈ ಪ್ರವಾಸವನ್ನು ಮತ್ತಷ್ಟು ಸುಲಭವಾಗಿಸಲು ಯಾತ್ರಾ ಹಡಗು ಸೇವೆಯು ಅಕ್ಟೋಬರ್ 2023ರ ಮೊದಲ ವಾರದಿಂದ ಪ್ರಾರಂಭಿಸಲಾಗಿದೆ. ಈ ಹಡಗು ಸೇವೆಯು ತಮಿಳುನಾಡಿನ ನಾಗಪಟ್ಟಣದಿಂದ ಶ್ರೀಲಂಕಾದ ಕಂಕಸಂತುರೈ ಗೆ ಇದೆ.

ಭಾರತ ಮತ್ತು ಶ್ರೀಲಂಕಾ ನಡುವಿನ ಪ್ರವಾಸೋದ್ಯಮ ಮತ್ತು ವ್ಯಾಪಾರವನ್ನು ಹೆಚ್ಚಿಸುವ ದೃಷ್ಟಿಯಿಂದ ಈ ಹಡಗು ಸೇವೆಯನ್ನು ಆರಂಭಿಸಲಾಗಿದೆ. ಎರಡೂ ದೇಶಗಳ ಅಭಿವೃದ್ಧಿಗೆ ಹಡಗು ಸೇವೆ ಬಹಳ ಮುಖ್ಯವಾಗಿದೆ. ಇದು ಸ್ಥಳೀಯ ಆರ್ಥಿಕತೆಯನ್ನು ಹೆಚ್ಚಿಸುತ್ತದೆ. ಇದರಿಂದ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎನ್ನುತ್ತಾರೆ ತಜ್ಞರು.

ಇದನ್ನೂ ಓದಿ: ಹೆಪ್ಪುಗಟ್ಟಿದ ಸರೋವರದಲ್ಲಿ ಸಿಲುಕಿದ ಜಿಂಕೆ: ಪ್ರಾಣಪಣಕ್ಕಿಟ್ಟು ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿ

ತಮಿಳುನಾಡಿನಿಂದ ಶ್ರೀಲಂಕಾಕ್ಕೆ ಹಡಗಿನ ಮೂಲಕ ಸುಮಾರು 110 ಕಿಮೀ ದೂರವನ್ನು ಒಳಗೊಂಡಿದೆ. ಇದು ಸುಮಾರು 3 ರಿಂದ 4 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ನಿರೀಕ್ಷಣಾ ಕೊಠಡಿಗಳು, ಕೆಫೆಟೇರಿಯಾ, ಟರ್ಮಿನಲ್‌ನಲ್ಲಿ ಪ್ರಯಾಣಿಕರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಆದ್ದರಿಂದ ನೀವು ಈ ಹಡಗಿನಲ್ಲಿ ಆರಾಮದಾಯಕ ಪ್ರಯಾಣಿಸುವುದರೊಂದಿಗೆ ನಿಜಕ್ಕೂ ಮರೆಯಲಾಗದ ಅನುಭವವನ್ನು ಪಡೆದುಕೊಳ್ಳಬಹುದಾಗಿದೆ.

ಹಡಗು ಪ್ರಯಾಣದ ಸುರಕ್ಷತೆ

ಹಡಗು ಪ್ರಯಾಣದ ಸುರಕ್ಷತೆಯ ಬಗ್ಗೆ ಯಾರು ಗೊಂದಲಕೊಳ್ಳಗಾಗಬೇಕಿಲ್ಲ. ಏಕೆಂದರೆ ಪ್ರಯಾಣಿಕರ ಸುರಕ್ಷತೆ ಮತ್ತು ಸೌಕರ್ಯವನ್ನು ಗಮನದಲ್ಲಿಟ್ಟುಕೊಂಡು ಕೆಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಇದು 150 ಪ್ರಯಾಣಿಕರಿಗೆ ಸೂಕ್ತವಾಗಿದೆ.

ಟಿಕೆಟ್ ದರ ಎಷ್ಟು?

ವರದಿಯಾದ ಮಾಹಿತಿಗಳ ಪ್ರಕಾರ ಒನ್ ವೇ ಟಿಕೆಟ್ ದರ ಸುಮಾರು 6 ಸಾವಿರ ದಿಂದ 7 ಸಾವಿರ ರೂ ಆದಾಗ್ಯೂ, ಹಡಗು ಟಿಕೆಟ್‌ನ ಅಂತಿಮ ಬೆಲೆಯನ್ನು ನಿರ್ವಾಹಕರು ನಿರ್ಧರಿಸುತ್ತಾರೆ. ಇದು ನೀವು ಆಯ್ಕೆ ಮಾಡುವ ದೋಣಿ ಪ್ರಯಾಣದ ಪ್ರಕಾರ, ವರ್ಗ, ಸಮಯ ಮುಂತಾದ ಹಲವು ಅಂಶಗಳನ್ನು ಅವಲಂಬಿಸಿರುತ್ತದೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿಕ್ಲಿಕ್​ ಮಾಡಿ

Published On - 10:40 pm, Sun, 3 December 23