ಯುವಪೀಳಿಗೆ ಸಾಹಸಗಳನ್ನು ಮಾಡಲು ಎದುರು ನೋಡುತ್ತಿರುತ್ತಾರೆ. ಸ್ಟಂಟ್ ಮಾಡಲು ಹೆಚ್ಚು ಉತ್ಸುಕರಾಗಿರುತ್ತಾರೆ. ಆದರೆ ಕೆಲವು ಬಾರಿ ಇದರಿಂದ ಉಂಟಾಗುವ ಅಪಾಯಗಳ ಬಗ್ಗೆಯೂ ಗಮನವಹಿಸಲೇಬೇಕು. ಅಂತಹುದೇ ಒಂದು ವಿಡಿಯೋ ಇದೀಗ ವೈರಲ್ ಆಗಿದೆ. ಸೈಕಲ್ ಜತೆ ಸ್ಟಂಟ್ ಮಾಡಲು ಹೋದ ಯುವಕ ಹಾರಿ ಕೆಳಗೆ ಬಿದ್ದಿರುವ ದೃಶ್ಯವನ್ನು ವಿಡಿಯೋದಲ್ಲಿ ನೋಡಬಹುದು.
ಸಾಮಾಜಿಕ ಜಾಲತಾಣದಲ್ಲಿ ಅದೆಷ್ಟೋ ವಿಡಿಯೋಗಳು ವೈರಲ್ ಆಗುತ್ತವೆ. ಅವುಗಳಲ್ಲಿ ಕೆಲವು ತಮಷೆಯಾಗಿರುತ್ತವೆ. ಇನ್ನು ಕೆಲವು ಎಚ್ಚರಿಕೆಯ ಸಂದೇಶವನ್ನು ಸಾರುತ್ತದೆ. ಇದೀಗ ವೈರಲ್ ಆದ ಯುವಕನ ವಿಡಿಯೋ ಗಮನಿಸುವಂತೆ ಸೈಕಲ್ ಹತ್ತಿದ ಯುವಕ ಸ್ಟಂಟ್ ಮಾಡಲು ಮುಂದಾಗಿದ್ದಾನೆ.
Just a little short. ?? pic.twitter.com/LzkjQNxXCC
— ? Hold My Beer ? (@HldMyBeer) September 3, 2021
ಸೈಕಲ್ ಸವಾರ ಸ್ಟಂಟ್ ಮಾಡಲು ಫುಲ್ ಸಿದ್ದವಾಗಿದ್ದಾನೆ. ವೇಗವಾಗಿ ಸೈಕಲ್ ತುಳಿಯುತ್ತಾ ಮೇಲಕ್ಕೆ ಜಂಪ್ ಮಾಡಲು ಪ್ರಯತ್ನಿಸಿದ್ದಾನೆ. ಆದರೆ ಸಮತೋಲನ ತಪ್ಪಿ ಕೆಳಗೆ ಬಿದ್ದಿರುವ ದೃಶ್ಯವನ್ನು ವಿಡಿಯೋದಲ್ಲಿ ನೋಡಬಹುದು. ಕೆಲವರು ವಿಡಿಯೋ ನೋಡಿ ತಮಾಷೆ ಮಾಡಿದ್ದಾರೆ. ಇನ್ನು ಕೆಲವರು ಎಚ್ಚರಿಕೆಯ ಸಂದೇಶವನ್ನು ಸಾರಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನು ನೆಟ್ಟಿಗರು ಹಂಚಿಕೊಳ್ಳುತ್ತಿದ್ದಾರೆ. ಇಂತಹ ಸಾಹಸಗಳಿಗೆ ಹೆಚ್ಚು ತರಬೇತಿ ಬೇಕು. ಯುವಕ ತರಬೇತಿ ಪಡೆದುಕೊಳ್ಳುತ್ತಿದ್ದಾನೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಮತ್ತೋರ್ವರು ಅಭಿಪ್ರಾಯ ತಿಳಿಸಿದ್ದು, ಯುವಕ ಮತ್ತೊಂದು ಬಾರಿ ಸ್ಟಂಟ್ ಮಾಡಲು ನೂರು ಬಾರಿ ಯೋಚಿಸುತ್ತಾನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:
Viral Video: ಬೈಕ್ ರೈಡ್ನಲ್ಲಿ ವ್ಯಕ್ತಿಯ ಸ್ಟಂಟ್; ವಿಡಿಯೋ ನೋಡಿ ನೀವು ಹೀಗೆಲ್ಲಾ ಮಾಡಬೇಡಿ!
Viral Video: ಮಾಸ್ಕ್ ಧರಿಸದಿದ್ದಕ್ಕಾಗಿ ಸೈನಿಕನನ್ನು ಥಳಿಸಿದ ಪೊಲೀಸರು; ಮೂವರು ಅಮಾನತು
(Boy perform stunt on cycle people laugh after watching viral Video)