Breakup Benefits: ನಿಮ್ಗೊತ್ತಾ ಬ್ರೇಕಪ್‌ನಿಂದಲೂ ಹಲವಾರು ಪ್ರಯೋಜನಗಳಿವೆಯಂತೆ

Updated on: May 06, 2025 | 7:58 PM

ಪ್ರೇಮ ಸಂಬಂಧ ಎನ್ನುವಂತಹದ್ದು ಎಷ್ಟು ಸುಂದರವಾದ ಬಂಧವೋ, ಆ ಪ್ರೇಮ ಸಂಬಂಧ ಮುರಿದು ಬಿದ್ದಾಗ ಅಂದರೆ ಬ್ರೇಕಪ್‌ ಆದಾಗ ಅಷ್ಟೇ ನೋವಾಗುತ್ತದೆ. ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ಹುಡುಗ ಅಥವಾ ಹುಡುಗಿ ಕೈ ಕೊಟ್ಟರೆ ಮನಸ್ಸಿಗಾಗುವ ನೋವು ಅಷ್ಟಿಷ್ಟಲ್ಲ. ಇದೇ ನೋವಿನಲ್ಲಿ, ಪ್ರೇಮಿಯ ನೆನಪಿನಲ್ಲಿ ಪ್ರಾಣವನ್ನೇ ಕಳೆದುಕೊಂಡವರು ಇದ್ದಾರೆ. ಭಿನ್ನಾಭಿಪ್ರಾಯ, ಮನಸ್ತಾಪಗಳಿಂದ ಉಂಟಾಗುವ ಬ್ರೇಕಪ್‌ಗಳಿಂದ ಮನಸ್ಸಿಗೆ ಗುಣಪಡಿಸಲಾಗದ ನೋವಾಗುವುದು ಖಂಡಿತ. ಅದೇ ರೀತಿ ಬ್ರೇಕಪ್‌ನಿಂದ ಹಲವಾರು ಪ್ರಯೋಜನಗಳು ಕೂಡಾ ಇವೆಯಂತೆ. ಹಾಗಾದ್ರೆ ಬ್ರೇಕಪ್‌ನಿಂದ ಆಗುವಂತಹ ಪ್ರಯೋಜನಗಳಾದರೂ ಏನು ಎಂಬುದನ್ನು ನೋಡೋಣ ಬನ್ನಿ.

1 / 7
ಪ್ರೇಮ ಸಂಬಂಧ ಮುರಿದು ಬಿದ್ದಾಗ ಅದರಿಂದ ನೀವು ಹಲವು ಪಾಠಗಳು ಮತ್ತು ಹಲವು ಅನುಭವಗಳನ್ನು ಕಲಿಯುತ್ತೀರಿ. ಈ ಅನುಭವಗಳು ನಿಮ್ಮನ್ನು ಮೊದಲಿಗಿಂತ ಹೆಚ್ಚು ಜವಾಬ್ದಾರಿಯುತವಾಗಿಸುತ್ತದೆ. ಜೊತೆಗೆ ಎಂತಹವರ ಜೊತೆ ಸಂಬಂಧ ಬೆಳೆಸಬೇಕು ಮತ್ತು ಸಂಬಂಧ ಹಾಳಾಗಲು ಕಾರಣಗಳೇನು ಎಂಬ ಅಂಶಗಳ ಬಗ್ಗೆ ನೀವು ತಿಳಿದುಕೊಳ್ಳುತ್ತೀರಿ. ಅಂದರೆ ನೀವು ಬ್ರೇಕಪ್‌ ನಂತರ ಪ್ರೀತಿ-ಪ್ರೇಮದ ವಿಷಯದಲ್ಲಿ ತುಂಬಾನೇ ಮೆಚ್ಯೂರ್ಡ್‌ ಆಗಿ ವರ್ತಿಸುತ್ತೀರಿ ಅಂತಾನೇ ಹೇಳಬಹುದು.

2 / 7
ಲವ್‌ ಬ್ರೇಕಪ್‌ ಎಷ್ಟೇ ನೋವನ್ನು ನೀಡಿದರೂ ಅದು ಬಹಳಷ್ಟು ಪಾಠವನ್ನು ನಿಮಗೆ ಕಲಿಸುತ್ತದೆ. ಬಿಟ್ಟು ಹೋದವರ ಮುಂದೆ ತಲೆ ಎತ್ತಿ ನಿಲ್ಲುತ್ತೇನೆ ಎಂಬ ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಯಾವುದೇ ಸಮಸ್ಯೆಗಳನ್ನು ಎದುರಿಸಿ ನಿಲ್ಲಬಲ್ಲೆವು, ಜೀವನದಲ್ಲಿ ಯಾರನ್ನು ಸುಲಭವಾಗಿ ನಂಬಬಾರದು ಎಂಬುದನ್ನು ಕಲಿಸುತ್ತದೆ. ಒಟ್ಟಾರೆಯಾಗಿ ಬ್ರೇಕಪ್‌ ನೋವಿನಿಂದ ಕೂಡಿದ್ದರೂ ಇದು ನಿಮ್ಮ ಜೀವನದಲ್ಲಿ ಆತ್ಮವಿಶ್ವಾಸ, ಬದುಕುವ ಛಲವನ್ನು ಹೆಚ್ಚಿಸುವುದು ಸುಳ್ಳಲ್ಲ.

3 / 7
ಮುಕ್ತವಾಗಿ ಬದಕುವ, ಯಾರ ಹಂಗಿಲ್ಲದೆ ಬದುಕುವ ಕಲೆಯನ್ನು ನೀವು ಕಲಿಯುತ್ತೀರಿ. ಜೀವನದಲ್ಲಿ ಯಾರು ಶಾಶ್ವತವಲ್ಲ, ಒಂಟಿ ಜೀವನವೇ ಲೇಸು ಎಂಬ ಪಾಠವನ್ನು ಕಲಿಸುತ್ತದೆ. ಬ್ರೇಕಪ್‌ ಬಳಿಕ ಯಾರ ತಂಟೆ ತಕರಾರು ಇಲ್ಲದೆ ನೆಮ್ಮದಿಯಾಗಿ ನಿಮ್ಮಿಚ್ಛೆಯಂತೆ ಜೀವನ ಸಾಗಿಸಬಹುದು, ನಿಮ್ಮ ಗುರಿಯನ್ನು ಸಾಧಿಸಬಹುದು. ಮತ್ತು  ಇತರರ ಅಭಿಪ್ರಾಯಗಳನ್ನು ತೆಗೆದುಕೊಳ್ಳುವ ಯಾವುದೇ ಅವಶ್ಯಕತೆ ನಿಮಗಿರುವುದಿಲ್ಲ ಮತ್ತು ನೀವು ಅಂದುಕೊಂಡ ರೀತಿ ನೀವು ಜೀವನ ನಡೆಸಬಹುದು.

4 / 7
ಪ್ರೀತಿಯಲ್ಲಿರುವಾಗ ಹೆಚ್ಚಿನ ಜನರು ತಮ್ಮ ಬಗ್ಗೆಅಂದರೆ ಸೆಲ್ಫ್‌ ಕೇರ್‌ ಬಗ್ಗೆ ಅಷ್ಟಾಗಿ ಗಮನ ಹರಿಸುವುದಿಲ್ಲ. ಆದರೆ, ಒಬ್ಬಂಟಿಯಾಗಿರುವಾಗ, ಅನೇಕರು  ಆರೋಗ್ಯ, ಸೌಂದರ್ಯ ಮತ್ತು ಫಿಟ್‌ನೆಸ್‌ನತ್ತ ಹೆಚ್ಚು ಗಮನ ಹರಿಸುತ್ತಾರೆ. ಈ ಅಂಶ ಬ್ರೇಕಪ್‌ ಬಳಿಕ ನಿಮಗೊಂದು ಹೊಸ ಮತ್ತು ಸುಂದರ ಜೀವನವನ್ನು ನೀಡುತ್ತೇ ಅಂತಾನೇ ಹೇಳಬಹುದು.

5 / 7
ಪ್ರೀತಿಯಲ್ಲಿದ್ದಾಗ  ಪ್ರೇಮಿಗಳು ತಾವು ಪ್ರೀತಿಸುವ ವ್ಯಕ್ತಿಗಳಿಗೆ ಮಾತ್ರ ಸಮಯ ನೀಡುತ್ತಾರೆ. ಆದರೆ ಬ್ರೇಕಪ್‌ ನಂತರ ಯಾರೊಬ್ಬರಿಗೂ ಸಮಯ ಕೊಡುವ ಅವಶ್ಯಕತೆಯೇ ನಿಮಗೆ ಬರುವುದಿಲ್ಲ. ಆಗ ನೀವು ಆರಾಮವಾಗಿ  ನಿಮ್ಮ ಕುಟುಂಬ ಹಾಗೂ ಸ್ನೇಹಿತರ ಜೊತೆ ಸುಂದರ ಕ್ಷಣವನ್ನು ಕಳೆಯಬಹುದು.

6 / 7
ಪ್ರೀತಿಯಲ್ಲಿರುವಾಗ, ಜನರು ಹೆಚ್ಚಾಗಿ ತಮ್ಮ ನಿದ್ದೆಯನ್ನೂ ಪಕ್ಕಕ್ಕಿಟ್ಟು ಸಂಗಾತಿಗಳೊಂದಿಗೆ ತಡರಾತ್ರಿಯವರೆಗೆ ಮಾತನಾಡುತ್ತಾರೆ. ಇದರಿಂದ ನಿದ್ದೆ ವೇಸ್ಟ್‌ ಆಗುವುದರ ಜೊತೆಗೆ ಡಾರ್ಕ್‌ ಸರ್ಕಲ್‌ ಸಮಸ್ಯೆ ಕೂಡಾ ಕಾಣಿಸುತ್ತದೆ. ಆದರೆ ಬ್ರೇಕಪ್‌ ನಂತರ ನೀವು ಯಾರಿಗಾಗಿಯೂ ತಡ ರಾತ್ರಿತವರೆಗೆ ಸಮಯವನ್ನು ನೀವು ಅವಶ್ಯಕತೆಯೇ ಇರುವುದಿಲ್ಲ. ಚೆನ್ನಾಗಿ ನಿದ್ದೆ ಮಾಡುವ ಮೂಲಕ ನಿಮ್ಮ ಜೀವನವನ್ನು ಸುಧಾರಿಸಿಕೊಳ್ಳಬಹುದು.

7 / 7
ಬ್ರೇಕಪ್‌ ಬಳಿಕ ಎಲ್ಲಾದರೂ ಹೋಗಬೇಕಾದರೆ ಯಾರ ಅನುವತಿಯನ್ನು ಪಡೆಯುವ, ಯಾವ ಬಟ್ಟೆ ಧರಿಸಬೇಕು ಎಂದು ಕೇಳುವ ಅವಶ್ಯಕತೆಯೇ ನಿಮಗೆ ಇರುವುದಿಲ್ಲ. ನೀವು ಇಷ್ಟಪಟ್ಟಂತೆ ಯಾರ ತಂಟೆಯು ಇಲ್ಲದೆ ಸ್ವತಂತ್ರ್ಯ ಜೀವನವನ್ನು ಬ್ರೇಕಪ್‌ ನಂತರ ನಡೆಸಬಹುದು. ಹಾಗಾಗಿ ಬ್ರೇಕಪ್‌ ಆಯಿತೆಂದು ನೋವಿನಲ್ಲಿ ಜೀವನವನ್ನು ಹಾಳು ಮಾಡುವ ಬದಲು ಸುಂದರ ಜೀವನವನ್ನು ರೂಪಿಸುವತ್ತ ಗಮನ ಹರಿಸಿ.