ಎಲ್ಲರ ಜೀವನದಲ್ಲಿ ಮದುವೆ ಒಂದು ವಿಶೇಷ ದಿನ. ಆ ದಿನ ನೆನಪಿನ ದಿನವಾಗಬೇಕು ಎಂದು ಹೊಸ ಹೊಸ ರೀತಿಯ ಸಂಭ್ರಮದ ಆಚರಣೆಗಳನ್ನು ಮಾಡುತ್ತಾರೆ. ಅದ್ದೂರಿ ತಯಾರಿ ನಡೆಸುತ್ತಾರೆ. ಇತ್ತೀಚೆಗಂತೂ ಮದುವೆ ಮನೆಯಲ್ಲಿ ವಧುವರರ ಆಗಮನಕ್ಕೆಂದು ವಿಭಿನ್ನ ರೀತಿಯ ಯೋಜನೆಗಳನ್ನು ಮಾಡುತ್ತಾರೆ. ಅದಕ್ಕೆಂದೇ ಸಾಕಷ್ಟು ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿಗಳು ಹುಟ್ಟಿಕೊಂಡಿವೆ. ಪ್ರೀ ವೆಡ್ಡಿಂಗ್ ಶೂಟ್ , ಪೋಸ್ಟ್ ವೆಡ್ಡಿಂಗ್ ಶೂಟ್ ಒಂದು ರೀತಿಯ ಟ್ರೆಂಡ್ ಆದರೆ ಹುಡುಗ ಹುಡುಗಿಯನ್ನು ರಥದಲ್ಲಿ ಕರೆತರುವುದು, ಉಯ್ಯಾಲೆಯಲ್ಲಿ ವೇದಿಕೆಗೆ ಇಳಿಸುವುದು ಹೀಗೆ ವಿಭಿನ್ನ ರೀತಿಯಲ್ಲಿ ಕರೆತರುವುದು ಈಗ ಟ್ರೆಂಡ್ ಆಗಿದೆ. ಮೂರರಿಂದ ನಾಲ್ಕು ದಿನದದವರೆಗೂ ನಡೆಯುವ ಮದುವೆ ಸಮಾರಂಭ ಮೆಹಂದಿ ಶಾಸ್ತ್ರ, ಅರಿಶಿನ ಶಾಸ್ತ್ರ, ಸಂಗೀತ ಹೀಗೆ ವಿವಿದ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಈವೆಂಟ್ ಮ್ಯಾನೇಜ್ಮೆಂಟ್ಗಳಿಗೆ ವಹಿಸಿದರೆ ಮದುವೆಯ ಎಲ್ಲ ಕಾರ್ಯಕ್ರಮಗಳಿಗೆ ಅದ್ದೂರಿ ತಯಾರಿ ನಡೆಸುತ್ತಾರೆ. ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿಗಳ ಈ ರೀತಿಯ ವಿಭಿನ್ನ ಯೋಜನೆಗಳು ಕೆಲವೊಮ್ಮೆ ಅನಾಹುತಕ್ಕೆ ಕಾರಣವಾಗುತ್ತದೆ. ಅಂತಹ ಒಂದು ಆಘಾತಕಾರಿ ಘಟನೆ ಛತ್ತೀಸ್ಘಡದ ರಾಯ್ಪುರದಲ್ಲಿ ಮದುವೆ ಸಮಾರಂಭವೊಂದರಲ್ಲಿ ನಡೆದಿದೆ.
ಅದರ ಒಂದು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೋದಲ್ಲಿ ವೇದಿಕೆಯ ಮೇಲೆ ಹಲವರು ಡ್ಯಾನ್ಸ್ ಮಾಡುತ್ತಿದ್ದು, ಹಲವು ಕ್ರ್ಯಾಕರ್ಸ್ಗಳನ್ನು ಸಿಡಿಸಲಾಗುತ್ತಿದೆ. ಅದರ ನಡುವೆ ವೃತ್ತಾಕಾರದ ಸುಂದರ ಸ್ವಿಂಗ್ನಲ್ಲಿ ವಧುವರರ ಆಗಮನವಾಗುತ್ತದೆ. ಆದರೆ ಸ್ವಿಂಗ್ ಕೆಳಗಿಳಿಯುತ್ತಿದ್ದಂತೆ ಅಚಾನಕ್ಕಾಗಿ ಮುರಿದು 12 ಅಡಿ ಎತ್ತರದಿಂದ ಕೆಳಕ್ಕೆ ಬೀಳುತ್ತದೆ. ಇದರಿಂದ ಸ್ವಿಂಗ್ನಲ್ಲಿದ್ದ ನವಜೋಡಿ ಕೆಳಕ್ಕೆ ಬೀಳುತ್ತಾರೆ. ವಧುವರರಿದ್ದ ಉಯ್ಯಾಲೆ ಕೆಳಕ್ಕೆ ಬೀಳುತ್ತಿದ್ದಂತೆ ಕುಟುಂಬ ಸದಸ್ಯರು ಹಾಗೂ ಸಂಬಂಧಿಕರು ವೇದಿಕೆ ಧಾವಿಸಿ ನವಜೋಡಿಯನ್ನು ರಕ್ಷಿಸಿದ್ದಾರೆ.
Unfortunate accident at Raipur Wedding yesterday.
Thank God all are safe.
source : https://t.co/yal9Wzqt2f pic.twitter.com/ehgu4PTO8f— Amandeep Singh ? (@amandeep14) December 12, 2021
ಇದರ ವೀಡಿಯೋ ಇದೀಗ ವೈರಲ್ ಆಗಿದೆ. ಈ ಆಘಾತಕಾರಿ ಘಟನೆಯಲ್ಲಿ ವಧುವರರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಸುದ್ದಿಸಂಸ್ಥೆಯ ವರದಿ ತಿಳಿಸಿದೆ. ಘಟನೆಯ ನಡೆದು ಅರ್ಧಗಂಟೆಯ ಬಳಿಕ ಮದುವೆ ಶಾಸ್ತ್ರಗಳು ಸಾಂಗವಾಗಿ ನೆರವೇರಿದೆ ಎಂದು ಹೇಳಲಾಗಿದೆ. ಅಲ್ಲದೆ ವೃತ್ತಾಕಾರದ ಸ್ವಿಂಗ್ ಕೆಳಕ್ಕೆ ಬಿದ್ದ ಘಟನೆಯ ಸಂಪೂರ್ಣ ಜವಾಬ್ದಾರಿಯನ್ನು ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿ ವಹಿಸಿಕೊಂಡಿದೆ.
ಇದನ್ನೂ ಓದಿ:
ದೈತ್ಯಾಕಾರದ ಹೆಬ್ಬಾವಿನ ಮೇಲೆ ಮಲಗಿ ಆಟವಾಡಿದ ಪುಟ್ಟ ಬಾಲಕಿ; ವಿಡಿಯೋ ವೈರಲ್
ಜೀವನದಲ್ಲಿ ಮೊದಲ ಬಾರಿಗೆ ಶ್ವಾನವನ್ನು ನೋಡಿದಾಗ ಮಗುವಿನ ರಿಯಾಕ್ಷನ್ ಹೇಗಿತ್ತು?; ಅಪರೂಪದ ವಿಡಿಯೋ ನೋಡಿ
Published On - 12:15 pm, Mon, 13 December 21