Viral Video : ಬಾಂಧವ್ಯ ಚೆನ್ನಾಗಿರಬೇಕೆಂದರೆ ಆಗಾಗ ಖುಷಿ ಉಂಟುಮಾಡುವ ಉಪಾಯಗಳನ್ನು ಹೂಡುತ್ತಿರಬೇಕು. ಅದು ಯಾವ ಸಂಬಂಧವೇ ಆಗಿರಲಿ, ಅವರ ಮನಸ್ಸಿನಲ್ಲಿ ಏನಿದೆ ಏನು ಬೇಕು ಎನ್ನುವುದನ್ನು ತಿಳಿದುಕೊಂಡು ಅದನ್ನು ಒದಗಿಸುವುದು ಒಂದು ರೀತಿಯ ಪ್ರೀತಿಯೇ. ಈಗಿಲ್ಲಿ ಅಣ್ಣನೊಬ್ಬ ತಂಗಿಗೆ ಸ್ಕೂಟಿ ಕೊಡಿಸಿ ಅಚ್ಚರಿಗೆ ಬೀಳಿಸಿದ್ದಾನೆ. ಆ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಐಶ್ವರ್ಯ ಭದಾಣೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಇದನ್ನು ಪೋಸ್ಟ್ ಮಾಡಿದ್ದಾರೆ. ನೆಟ್ಟಿಗರು, ಇದ್ದರೆ ಇಂಥ ಅಣ್ಣನಿರಬೇಕು ಎಂದು ಪ್ರಶಂಸಿಸುತ್ತಿದ್ದಾರೆ.
ಇಂಥ ಅಣ್ಣನಿದ್ದರೆ ಬದುಕು ಸಮೃದ್ಧವಾಗಿರುತ್ತದೆ ಎಂದು ನೆಟ್ಟಿಗರು ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ಹೌದು ತಾನೆ? ಅಣ್ಣ ಕೊಟ್ಟ ಪುಟ್ಟ ಡಬ್ಬಿಯನ್ನು ತಂಗಿ ತೆರೆದು ನೋಡುತ್ತಾಳೆ. ಆಗ ಸ್ಕೂಟಿಯ ಕೀ ಅದರಲ್ಲಿ ಇರುತ್ತದೆ. ಪಕ್ಕದಲ್ಲಿದ್ದ ಸ್ಕೂಟಿ ನೋಡಿ ಆನಂದಭಾಷ್ಪ ಸುರಿಸುತ್ತಾಳೆ. ಈ ವಿಡಿಯೋ ಈಗಾಗಲೇ 9 ಮಿಲಿಯನ್ ಜನರನ್ನು ತಲುಪಿದೆ. 1 ಲಕ್ಷಕ್ಕಿಂತಲೂ ಹೆಚ್ಚು ಜನರು ಈ ವಿಡಿಯೋ ಇಷ್ಟಪಟ್ಟಿದ್ದಾರೆ.
ನನಗೂ ಇಂಥ ಅಣ್ಣನೊಬ್ಬ ಇದ್ದಿದ್ದರೆ ಎಂದು ಒಬ್ಬರು ಬೇಸರಿಸಿಕೊಂಡಿದ್ದಾರೆ. ಅಯ್ಯೋ ನನಗೆ ತಂಗಿ ಇಲ್ಲವಲ್ಲ, ನನಗೂ ಹೀಗೆಲ್ಲ ಪ್ರೀತಿಸಬೇಕು ಎನ್ನಿಸುತ್ತದೆ ಎಂದು ಇನ್ನೊಬ್ಬರು ಬೇಸರಿಸಿಕೊಂಡಿದ್ದಾರೆ. ನೀವಿಬ್ಬರೂ ಸುಖವಾಗಿರಿ ಎಂದು ಮಗದೊಬ್ಬರು ಹಾರೈಸಿದ್ದಾರೆ.
ಏನನ್ನಿಸುತ್ತಿದೆ ಈ ವಿಡಿಯೋ ನೋಡಿ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 7:56 pm, Thu, 10 November 22