
ಕೆಲವು ದಿನಗಳ ಹಿಂದೆ ಮಹಾರಾಷ್ಟ್ರದ ವ್ಯಕ್ತಿಯೊಬ್ಬರು ಮಗನ ಆಸೆಯನ್ನು ಪೂರೈಸಲು ಗುಜರಿ ವಸ್ತುಗಳಿಂದ ವಾಹನವನ್ನು ತಯಾರಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದು ಮಹೀಂದ್ರಾ ಸಂಸ್ಥೆಯ ಚೇರ್ಮನ್ ಆನಂದ್ ಮಹೀಂದ್ರಾ (Anand Mahindra) ಅವರ ಗಮನ ಸೆಳೆದಿತ್ತು. ಈ ಕುರಿತು ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿಯೂ ಹಂಚಿಕೊಂಡು, ಅವರು ತಯಾರಿಸಿದ ಕಾರನ್ನು ತಾವು ಖರೀದಿಸಿ ಹೊಸದಾದ ಕಾರನ್ನು ನೀಡುವುದಾಗಿ ಹೇಳಿದ್ದರು. ಅದೇ ಮಾತಿನಂತೆ ನಿನ್ನೆ ದತ್ತಾತ್ರೆಯ ಲೊಹಾರ್ (Dattatraya Lohar ) ಅವರ ಕುಟುಂಬವನ್ನು ಭೇಟಿಯಾಗಿ, ಹೊಸ ಬೊಲೆರೋ ಕಾರನ್ನು (Bolero Car) ಉಡುಗೊರೆಯಾಗಿ ನೀಡಿ, ಅವರು ಗುಜರಿ ವಸ್ತುಗಳಿಂದ ತಯಾರಿಸಿದ ಕಾರನ್ನು ಆನಂದ್ ಮಹೀಂದ್ರಾ ಖರೀದಿ ಮಾಡಿದ್ದಾರೆ.
ಈ ಕುರಿತು ಆನಂದ್ ಮಹೀಂದ್ರಾ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ನಿನ್ನೆ ದತ್ತಾತ್ರೆಯ ಲಾಹೋರ್ ಅವರ ಕುಟುಂಬವನ್ನು ಭೇಟಿಯಾಗಿದ್ದೆ. ಈ ವೇಳೆ ಹೊಸ ಬೊಲೇರೋ ಕಾರನ್ನು ನೀಡಲಾಯಿತು. ಅವರ ಕುಟುಂಬವೂ ಸಂತಸಗೊಂಡಿದೆ ಎಂದಿದ್ದಾರೆ. ಆನಂದ್ ಮಹೀಂದ್ರಾ ಅವರು ಹಂಚಿಕೊಂಡ ಫೋಟೋಗಳು 29 ಸಾವಿರಕ್ಕೂ ಹೆಚ್ಚು ಲೈಕ್ಸ್ ಪಡೆದಿದೆ. ಈ ಕುರಿತು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಉತ್ತಮ ಕೆಲಸ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.
ಮಹೀಂದ್ರಾ ಕಂಪನಿಯ ಸಿಇಒ ಆನಂದ್ ಮಹೀಂದ್ರಾ ಸಾಮಾಜಿಕ ಕೆಲಸಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತಾರೆ. ಜನರ ಕಷ್ಟಗಳಿಗೆ ಮಿಡಿಯುವ ಅವರು ದೇಶದ ದೊಡ್ಡ ಉದ್ಯಮಿಯಾದರೂ ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುವ ಗುಣ ಹೊಂದಿದ್ದಾರೆ. ಜತೆಗೆ ಭಾರತೀಯರ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುತ್ತಾರೆ.
ಇದನ್ನೂ ಓದಿ;
ಮೊದಲ ಬಾರಿಗೆ ಸಮೋಸಾ ತಿಂದ ಇಟಾಲಿಯನ್ ವ್ಯಕ್ತಿ; ಆತನ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ..? ಇಲ್ಲಿದೆ ವೈರಲ್ ವಿಡಿಯೋ
Published On - 3:44 pm, Wed, 26 January 22