
ಕ್ಯಾಲಿಫೋರ್ನಿಯಾ, ಮಾರ್ಚ್ 03: ಸಾಮಾನ್ಯವಾಗಿ ನಾಯಿಗಳಿಗೆ ಚಪ್ಪಲಿ ಜತೆ ಆಡುವುದು, ಸಾಕ್ಸ್ಗಳನ್ನು ಕಚ್ಚಿ ಹಾಕುವುದು ಸೇರಿ ಮಕ್ಕಳಂತೆ ಆಡುತ್ತಿರುತ್ತವೆ. ಆದರೆ ಈ ಸಾಕು ನಾಯಿ 24 ಸಾಕ್ಸ್ಗಳನ್ನು ಹಾಗೂ ಇತರೆ ವಸ್ತುಗಳನ್ನು ತಿಂದು ಆಸ್ಪತ್ರೆಗೆ ಸೇರಿದೆ. ಕ್ಯಾಲಿಫೋರ್ನಿಯಾದಲ್ಲಿ ಘಟನೆ ನಡೆದಿದೆ. ಮನೆಯ ನಾಯಿ ಸಾಕ್ಸ್ಗಳನ್ನು ತಿಂದು ಅನಾರೋಗ್ಯವನ್ನು ಎದುರಿಸಿದೆ. ಹೇರ್ ಟೈ, ಸ್ಕ್ರಂಚಿ, ಸಾಕ್ಸ್, ಶೂ ಇನ್ಸರ್ಟ್ ಸೇರಿ ಹಲವು ವಸ್ತುಗಳನ್ನು ತಿಂದಿತ್ತು.
ತುರ್ತು ಶಸ್ತ್ರ ಚಿಕಿತ್ಸೆ ನಡೆಸಿ ನಾಯಿಯ ಜೀವ ಉಳಿಸಲಾಗಿದೆ ಎಂದು ಕೊರೊನಾ ಅನಿಮಲ್ ಎಮರ್ಜೆನ್ಸಿ ಸೆಂಟರ್ ತಿಳಿಸಿದೆ. ನಾಯಿ ಲೂನಾ ಇದೆಲ್ಲಾ ತಿಂದ ಬಳಿಕ ವಾಂತಿ ಮಾಡಲು ಶುರು ಮಾಡಿತ್ತು. ಹೊಟ್ಟೆ ಊದಿಕೊಂಡಿತ್ತು, ಏನೋ ಗಂಭೀರ ಸಮಸ್ಯೆ ಇದೆ ಎಂದು ಮನೆಯ ಮಾಲೀಕರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಳು. ವೈದ್ಯರು ಪರೀಕ್ಷೆ ನಡೆಸಿದ ಬಳಿಕ ಬಟ್ಟೆಗಳು ಕರುಳಿನಲ್ಲಿ ಸಿಕ್ಕಿಹಾಕಿಕೊಂಡಿತ್ತು .
ಸಾಕ್ಸ್‌ಗಳ ಫೋಟೋಗಳು ಮತ್ತು ಲೂನಾ ಕರುಳು ಮುಚ್ಚಿಹೋಗಿರುವುದನ್ನು ತೋರಿಸುವ ಎಕ್ಸ್-ರೇ ಅನ್ನು ಸಹ ಕ್ಲಿನಿಕ್ ಪೋಸ್ಟ್ ಮಾಡಿದೆ. ಇದು ನಾಯಿಯ ಮಾಲೀಕರನ್ನು ದಿಗ್ಭ್ರಮೆಗೊಳಿಸಿದವು.
ಅನೇಕರು ಲೂನಾ ಬದುಕುಳಿದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಬೇಗ ಗುಣಮುಖಳಾಗಲಿ ಮತ್ತು ಆರೋಗ್ಯಕರ ಆರಂಭವಾಗಲಿ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:42 pm, Mon, 3 March 25