Optical Illusions: ಅಳಿಲುಗಳ ಗುಂಪಿನಲ್ಲಿ ಅಡಗಿರುವ ಇಲಿಯನ್ನು ಪತ್ತೆ ಹಚ್ಚಲು ಸಾಧ್ಯವೇ?

ಇಂದಿನ ಆಪ್ಟಿಕಲ್ ಇಲ್ಯೂಷನ್ ಸವಾಲಿನ ಆಟದಲ್ಲಿ ಅಷ್ಟೂ ಅಳಿಲುಗಳ ಮಧ್ಯೆ ಅಡಗಿರುವ ಒಂದೇ ಒಂದು ಇಲಿಯನ್ನು ನೀವು ಪತ್ತೆ ಹಚ್ಚಬೇಕಿದೆ. ಎಷ್ಟೇ ಹುಡುಕಿದರೂ ಎಲ್ಲಿದೆ ಎಂದು ನಿಮ್ಮಿಂದ ಪತ್ತೆ ಹಚ್ಚಲು ಸಾಧ್ಯವಿಲ್ಲವೆಂದಾದರೆ ಈ ಲೇಖನದ ಅಂತ್ಯದಲ್ಲಿ ತಿಳಿದುಕೊಳ್ಳಿ.

Optical Illusions: ಅಳಿಲುಗಳ ಗುಂಪಿನಲ್ಲಿ ಅಡಗಿರುವ ಇಲಿಯನ್ನು ಪತ್ತೆ ಹಚ್ಚಲು ಸಾಧ್ಯವೇ?
ಆಪ್ಟಿಕಲ್ ಇಲ್ಯೂಷನ್(Optical Illusions)
Image Credit source: Bright Side

Updated on: Mar 05, 2024 | 6:51 PM

ಇಂದಿನ ಆಪ್ಟಿಕಲ್ ಇಲ್ಯೂಷನ್(Optical Illusions) ಸವಾಲಿನ ಆಟದಲ್ಲಿ ಅಷ್ಟೂ ಅಳಿಲುಗಳ ಮಧ್ಯೆ ಅಡಗಿರುವ ಒಂದೇ ಒಂದು ಇಲಿಯನ್ನು ನೀವು ಕಂಡು ಹಿಡಿಯಬೇಕಿದೆ. ನೀವು ಚಿತ್ರವನ್ನು ಸರಿಯಾಗಿ ಗಮನಿಸಿದರೆ ಮಾತ್ರ ನಿಮಗೆ ಇಲಿಯನ್ನು ಪತ್ತೆ ಹಚ್ಚಲು ಸಾಧ್ಯ. ಹದ್ದಿನ ಕಣ್ಣು ನಿಮ್ಮದಾಗಿದ್ದರೆ ನೀವು ಕೇವಲ 7 ಸೆಕೆಂಡುಗಳಲ್ಲಿ ಇಲಿಯನ್ನು ಕಂಡುಹಿಡಿಯುವಿರಿ. ನೀವು ಚಾಲೆಂಜ್ ಸ್ವೀಕರಿಸಲು ಸಿದ್ಧರಿದ್ದೀರಾ? ಹಾಗಿದ್ದರೆ ಪತ್ತೆ ಹಚ್ಚಿ ನೋಡೋಣ.

ಈ ಸವಾಲಿನ ಆಟ ನಿಮ್ಮ ದೃಷ್ಟಿ ಸಾಮರ್ಥ್ಯಕ್ಕೆ ದೊಡ್ಡ ಸವಾಲು. ಜೊತೆಗೆ ಫೋಕಸ್ ಮಟ್ಟವನ್ನು ಪರೀಕ್ಷಿಸುತ್ತದೆ.ಇದು ಬುದ್ಧಿಮತ್ತೆಯ ಮಟ್ಟವನ್ನು ನಿರ್ಣಯಿಸಲು ಸಹ ಸಹಾಯ ಮಾಡುತ್ತದೆ. ಆಪ್ಟಿಕಲ್ ಇಲ್ಯೂಷನ್​​ನಂತಹ ಸವಾಲಿನ ಆಟದ ಮೂಲಕ ನಿಮ್ಮ ದೃಷ್ಟಿ ಸಾಮರ್ಥ್ಯ ಎಷ್ಟು ಚುರುಕಾಗಿದೆ ಎಂದು ಪರೀಕ್ಷಿಸಿಕೊಳ್ಳಬಹುದು.

ಇದನ್ನೂ ಓದಿ: 7 ಸೆಕೆಂಡುಗಳಲ್ಲಿ ಚಿತ್ರದಲ್ಲಿ ಅಡಗಿರುವ 2 ಬೆಕ್ಕುಗಳನ್ನು ಹುಡುಕಬಲ್ಲಿರಾ?

ಎಷ್ಟೇ ಹುಡುಕಿದರೂ ನಿಮ್ಮಿಂದ ಇಲಿಯನ್ನು​​​ ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲವೇ? ಚಿತ್ರ ಸಾಕಷ್ಟು ಸಿಂಪಲ್​​ ಎಂದೆನಿಸಿದರೂ ಕೂಡ ಉತ್ತರವನ್ನು ಕಂಡುಹುಡುಕುವುದು ಅಷ್ಟು ಸುಲಭವಲ್ಲ. ನಿಮ್ಮಿಂದ ಇಲಿ ಎಲ್ಲಿದೆ ಎಂದು ಹುಡುಕಲು ಸಾಧ್ಯವಾಗುತ್ತಿಲ್ಲವೆಂದಾದರೆ ಇಲಿ​​ ಎಲ್ಲಿದೆ ಎಂಬುದನ್ನು ಕೆಳಗಿನ ಚಿತ್ರದಲ್ಲಿ ಕೆಂಪು ಬಣ್ಣದ ವೃತ್ತಗಳಲ್ಲಿ ಗುರುತಿಸಲಾಗಿದೆ.

ಉತ್ತರ ಇಲ್ಲಿದೆ ನೋಡಿ:

ಅಂದಹಾಗೆ, ಇಂದಿನ ಸವಾಲಿನ ಆಟ ನಿಮಗೆ ಹೇಗಾನಿಸಿತು, ನಿಮಗೆ ಇಷ್ಟವಾಯಿತೆ? ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:50 pm, Tue, 5 March 24

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us