Video: ಮೊದಲ ಬಾರಿಗೆ ಪಾವ್ ಭಾಜಿ ಸವಿದು ಕ್ಯೂಟ್ ರಿಯಾಕ್ಷನ್ ಕೊಟ್ಟ ಕೆನಡಿಯನ್ ಮಹಿಳೆ

ಭಾರತಕ್ಕೆ ಬರುವ ವಿದೇಶಿಗರು ಇಲ್ಲಿನ ಪ್ರವಾಸಿ ತಾಣಗಳ ಜತೆಗೆ ಇಲ್ಲಿನ ಆಹಾರ, ತಿಂಡಿ ತಿನಿಸುಗಳನ್ನು ಇಷ್ಟ ಪಟ್ಟು ಸವಿಯುತ್ತಾರೆ. ಇದೀಗ ಕೆನಡಿಯನ್ ಮಹಿಳೆ ಬಾಯಿ ಚಪ್ಪರಿಸಿಕೊಂಡು ಪಾವ್ ಭಾಜಿ ಸವಿದು, ಅದರ ರುಚಿಗೆ ಫುಲ್‌ ಫಿದಾ ಆಗಿದ್ದಾರೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಮೊದಲ ಬಾರಿಗೆ ಪಾವ್ ಭಾಜಿ ಸವಿದು ಕ್ಯೂಟ್ ರಿಯಾಕ್ಷನ್ ಕೊಟ್ಟ ಕೆನಡಿಯನ್ ಮಹಿಳೆ
ವೈರಲ್‌ ವಿಡಿಯೋ
Image Credit source: Instagram

Updated on: Aug 31, 2026 | 7:14 PM

ಇಂಡಿಯನ್ ಫುಡ್ ಅಂದ್ರೆ ಭಾರತೀಯರಿಗೆ ಮಾತ್ರವಲ್ಲ, ವಿದೇಶಿಗರಿಗೂ ಇಷ್ಟ. ಹೀಗಾಗಿ ಭಾರತಕ್ಕೆ ಭೇಟಿ ನೀಡುವ ವಿದೇಶಿಗರು ಇಲ್ಲಿನ ಫುಡ್‌ನ ರುಚಿ ಸವಿಯುತ್ತಾರೆ. ಇದೀಗ ವಿದೇಶಿ ಮಹಿಳೆ (foreign woman) ಮೊದಲ ಬಾರಿಗೆ ಪಾವ್ ಭಾಜಿ ಸವಿದಿದ್ದಾಳೆ. ಹೌದು, ಮುಂಬೈನ ಸ್ಪೆಷಲ್ ತಿನಿಸು ಸವಿದು ಫಿದಾ ಆಗಿದ್ದಾಳೆ. ಈ ವಿಡಿಯೋ ನೆಟ್ಟಿಗರ ಗಮನ ಸೆಳೆದಿದೆ.

ಪಾವ್‌ ಭಾಜಿ ಸವಿದ ಕೆನಡಿಯನ್‌ ಮಹಿಳೆ

ವೆಗ್ ಮೊಮೊ (Vegg Momo) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಕೆನಡಿಯನ್ ಮಹಿಳೆ ಪಾವ್ ಸವಿಯುವ ದೃಶ್ಯವನ್ನು ಕಾಣಬಹುದು. ಆ ಬಳಿಕ ಆಕೆಯ ಜತೆಗೆ ಇದ್ದವರು ಪಾವ್ ಭಾಜಿ ಹೇಗೆ ಸವಿಯುವುದೆಂದು ಹೇಳಿಕೊಟ್ಟಿದ್ದಾರೆ. ಪಾವ್ ಜತೆಗೆ ಭಾಜಿ ಹಾಗೂ ಮಸಾಲೆಭರಿತ ಈರುಳ್ಳಿಯನ್ನು ಬಾಯಿಚಪ್ಪರಿಸಿಕೊಂಡು ಸವಿದಿದ್ದಾಳೆ.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಕೃಷಿ ಕಾಯಕದಲ್ಲಿ ತೊಡಗಿದ್ದ ಹಳ್ಳಿ ಮಹಿಳೆಯರ ಜತೆಗೆ ಬೆರೆತ ವಿದೇಶಿ ಮಹಿಳೆ

ಈ ವಿಡಿಯೋ ಒಂಭತ್ತು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಪಾವ್ ಭಾಜಿ ತಿಂದ ಬಳಿಕ ಆಕೆಯ ರಿಯಾಕ್ಷನ್ ನೋಡಿ ಶಾಕ್ ಆಯ್ತು ಎಂದಿದ್ದಾರೆ. ಇನ್ನೊಬ್ಬರು, ಭಾಜಿ ಸವಿಯಲು ಆಕೆಗೆ ಸ್ಫೂನ್ ಕೊಡಿ ಎಂದು ಹೇಳಿದ್ದಾರೆ. ಮತ್ತೊಬ್ಬರು, ಆರೋಗ್ಯಕರ ಪಾವ್ ಭಾಜಿ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Loading...
Unable to load recommendations.
Follow Us