Viral Video: ನಾಯಿಗೆ ಮಸಾಜ್ ಮಾಡಿದ ಬೆಕ್ಕು; ವೈರಲ್ ಆಯ್ತು ವಿಡಿಯೋ

Cat | Dog: ಬೆಕ್ಕು- ನಾಯಿಗಳು ಸ್ವಭಾವತಃ ಶತ್ರುಗಳು ಎಂದು ಗುರುತಿಸಲ್ಪಟ್ಟವು. ಆದರೆ ನಾವು ಹಲವೆಡೆ ಅವುಗಳು ಸ್ನೇಹದಿಂದ ಇರುವುದನ್ನು ನೋಡಿರುತ್ತೇವೆ. ಅಷ್ಟೇ ಏಕೆ, ಬೆಕ್ಕು ನಾಯಿಗಳು ಜತೆಯಾಗಿ ತುಂಟಾಟವಾಡುತ್ತಾ ಇರುವುದನ್ನೂ ನೋಡಿರುತ್ತೇವೆ. ಆದರೆ ಬೆಕ್ಕೊಂದು ತನ್ನ ಕಾಲ ಮೇಲೆ ನಿಂತು ನಾಯಿಗೆ ಮಸಾಜ್ ಮಾಡುತ್ತಿರುವ ವಿಡಿಯೋ ಈಗ ನೆಟ್ಟಿಗರ ಮನಗೆದ್ದಿದೆ.

Viral Video: ನಾಯಿಗೆ ಮಸಾಜ್ ಮಾಡಿದ ಬೆಕ್ಕು; ವೈರಲ್ ಆಯ್ತು ವಿಡಿಯೋ
ವಿಡಿಯೋದಿಂದ ಸೆರೆಹಿಡಿಯಲಾದ ಚಿತ್ರ
Edited By:

Updated on: Apr 19, 2022 | 3:29 PM

ಸಾಮಾಜಿಕ ಜಾಲತಾಣಗಳಲ್ಲಿ ಸಾಕು ಪ್ರಾಣಿಗಳ ವಿಡಿಯೋಗಳಿಗೆ ಅತ್ಯಂತ ಹೆಚ್ಚಿನ ವೀಕ್ಷಕರಿದ್ದಾರೆ. ಬೆಕ್ಕು, ನಾಯಿಗಳ ತುಂಟಾಟಗಳು, ಮುದ್ದಾದ ಚಟುವಟಿಕೆಗಳನ್ನು ಜನರು ನೋಡುತ್ತಾ ತಮ್ಮ ಒತ್ತಡದಿಂದ ಮೈಮರೆಯುತ್ತಾರೆ. ಇದೀಗ ಅಂಥದ್ದೇ ಮತ್ತೊಂದು ವಿಡಿಯೋ ವೈರಲ್ (Viral Video) ಆಗಿದೆ. ಅದರಲ್ಲಿ ಬೆಕ್ಕೊಂದು ನಾಯಿಗೆ ಮಸಾಜ್ ಮಾಡುತ್ತಿದೆ. ಹೌದು, ಅಚ್ಚರಿಯಾದರೂ ಇದು ಸತ್ಯ. ಬೆಕ್ಕು- ನಾಯಿಗಳು ಸ್ವಭಾವತಃ ಶತ್ರುಗಳು ಎಂದು ಗುರುತಿಸಲ್ಪಟ್ಟವು. ಆದರೆ ನಾವು ಹಲವೆಡೆ ಅವುಗಳು ಸ್ನೇಹದಿಂದ ಇರುವುದನ್ನು ನೋಡಿರುತ್ತೇವೆ. ಅಷ್ಟೇ ಏಕೆ, ಬೆಕ್ಕು ನಾಯಿಗಳು ಜತೆಯಾಗಿ ತುಂಟಾಟವಾಡುತ್ತಾ ಇರುವುದನ್ನೂ ನೋಡಿರುತ್ತೇವೆ. ಆದರೆ ಬೆಕ್ಕೊಂದು ತನ್ನ ಕಾಲ ಮೇಲೆ ನಿಂತು ನಾಯಿಗೆ ಮಸಾಜ್ ಮಾಡುತ್ತಿರುವ ವಿಡಿಯೋ ಈಗ ನೆಟ್ಟಿಗರ ಮನಗೆದ್ದಿದೆ.

ಬೆಕ್ಕೊಂದು ತನ್ನ ಮುಂದಿನ ಎರಡೂ ಕಾಲುಗಳನ್ನೆತ್ತಿ ನಾಯಿಯ ಕುತ್ತಿಗೆಯ ಬಳಿ ಮಸಾಜ್ ಮಾಡುತ್ತಿದೆ. ವಿಡಿಯೋ ನೋಡಿದರೆ ಬೆಕ್ಕು ಮಸಾಜ್​ ಮಾಡಲು ಕೋರ್ಸ್ ಪಡೆದಿದೆಯೇನೋ ಎಂಬ ಆಲೋಚನೆಯೊಂದು ಮನದಲ್ಲಿ ಬಂದುಹೋಗುವುದು ಸುಳ್ಳಲ್ಲ. ಕಾರಣ ಅಷ್ಟು ನಾಜೂಕಾಗಿ ಕೆಂಪು ಹಾಗೂ ಬಿಳಿ ಬಣ್ಣದ ಆ ಬೆಕ್ಕು ಮಸಾಜ್ ಮಾಡುತ್ತಿದೆ.

ಬೆಕ್ಕಿನ ಮಸಾಜ್​ಗೆ ನಾಯಿಯ ರಿಯಾಕ್ಷನ್ ಕೂಡ ನೋಡಲು ಮಜವಾಗಿದೆ. ಕಣ್ಮುಚ್ಚಿಕೊಂಡು ಆನಂದಿಸುತ್ತಾ ಕುಳಿತಿದೆ ಆ ಶ್ವಾನ. ಇದನ್ನು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ. ಬೆಕ್ಕು ಹಾಗೂ ನಾಯಿಯ ನಡವಳಿಕೆಗೆ ನೆಟ್ಟಿಗರು ಆಶ್ಚರ್ಯಚಕಿತರಾಗಿದ್ದಾರೆ. ಯಾವುದಕ್ಕೂ ನೀವೂ ಒಮ್ಮೆ ವಿಡಿಯೋ ನೋಡಿಬಿಡಿ.

ಬೆಕ್ಕು ನಾಯಿಗೆ ಮಸಾಜ್ ಮಾಡುತ್ತಿರುವ ವಿಡಿಯೋ ಇಲ್ಲಿದೆ:

ಈ ವಿಡಿಯೋವನ್ನು Buitengebieden ಎಂಬ ಖಾತೆಯಿಂದ ಟ್ವಿಟರ್​ನಲ್ಲಿ ಹಂಚಿಕೊಳ್ಳಲಾಗಿದೆ. ಏಪ್ರಿಲ್ 17ರಂದು ಶೇರ್ ಮಾಡಲಾಗಿರುವ ಈ ವಿಡಿಯೋ ಸದ್ಯ 7.4 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ವಿಡಿಯೋಗೆ ‘ಇದು ಮಸಾಜ್ ಟೈಮ್’ ಎಂದು ಶೀರ್ಷಿಕೆ ನೀಡಲಾಗಿದೆ. ಜನರು ವಿಡಿಯೋ ಇಷ್ಟಪಟ್ಟಿದ್ದು ಮೆಚ್ಚುಗೆಯ ಕಾಮೆಂಟ್​ಗಳನ್ನು ಮಾಡುತ್ತಿದ್ದಾರೆ.

ಮಜವಾದ ಸಂಗತಿಯೆಂದರೆ ವಿಡಿಯೋ ನೋಡಿದ ನೆಟ್ಟಿಗರು ಇಂಥದ್ದೇ ಹಲವು ವಿಡಿಯೋಗಳನ್ನು ಕಾಮೆಂಟ್​ ಸೆಕ್ಷನ್​ನಲ್ಲಿ ಹಂಚಿಕೊಂಡಿರುವುದು. ಹೌದು, ಬೆಕ್ಕುಗಳು ಮಸಾಜ್ ಮಾಡುವುದರಲ್ಲಿ ಪರಿಣತಿ ಹೊಂದಿದ್ದಾವೆಯೇ ಎಂಬಂತೆ ಹಲವು ವಿಡಿಯೋಗಳು ಶೇರ್ ಆಗಿವೆ. ಅವುಗಳಲ್ಲಿ ಕೆಲವು ಇಲ್ಲಿವೆ.

ಇದನ್ನೂ ಓದಿ: ಪ್ಯಾಂಟ್​ ಮೇಲೆ ಪ್ಯಾಂಟ್​ ಅಂಟಿಸಿಕೊಂಡು ಬಂದ ಉರ್ಫಿ ಜಾವೇದ್​; ಇಲ್ಲಿದೆ ವಿಚಿತ್ರ ಅವತಾರದ ವಿಡಿಯೋ

Glass Bridge: ವಿಯೆಟ್ನಾಂನಲ್ಲಿ ತಯಾರಾಯ್ತು ವಿಶ್ವದಲ್ಲೇ ಅತ್ಯಂತ ಉದ್ದನೆಯ ಗ್ಲಾಸ್ ಸೇತುವೆ; ಇಲ್ಲಿದೆ ಮನಮೋಹಕ ವಿಡಿಯೋ