Glass Bridge: ವಿಯೆಟ್ನಾಂನಲ್ಲಿ ತಯಾರಾಯ್ತು ವಿಶ್ವದಲ್ಲೇ ಅತ್ಯಂತ ಉದ್ದನೆಯ ಗ್ಲಾಸ್ ಸೇತುವೆ; ಇಲ್ಲಿದೆ ಮನಮೋಹಕ ವಿಡಿಯೋ

Viral Video: ವಿಶ್ವದಲ್ಲೇ ಅತ್ಯಂತ ದೊಡ್ಡದೆಂದು ಹೇಳಲಾಗುವ ಗಾಜಿನ ಸೇತುವೆ ಸದ್ಯದಲ್ಲೇ ಸ್ಥಳೀಯರು ಮತ್ತು ಪ್ರವಾಸಿಗರಿಗೆ ತೆರೆಯಲಿದೆ. ವಿಯೆಟ್ನಾಂನ ಉತ್ತರದ ಹೈಲ್ಯಾಂಡ್ಸ್ ಪಟ್ಟಣವಾದ ಮೊಕ್ ಚೌನಲ್ಲಿ ಬರೋಬ್ಬರಿ 2,073.5 ಅಡಿ ಉದ್ದದ ಗಾಜಿನ ಸೇತುವೆಯನ್ನು ನಿರ್ಮಾಣ ಮಾಡಲಾಗಿದೆ. ಇದರ ಮನಮೋಹಕ ವಿಡಿಯೋ ಇಲ್ಲಿದೆ.

Glass Bridge: ವಿಯೆಟ್ನಾಂನಲ್ಲಿ ತಯಾರಾಯ್ತು ವಿಶ್ವದಲ್ಲೇ ಅತ್ಯಂತ ಉದ್ದನೆಯ ಗ್ಲಾಸ್ ಸೇತುವೆ; ಇಲ್ಲಿದೆ ಮನಮೋಹಕ ವಿಡಿಯೋ
ವಿಯೆಟ್ನಾಂನಲ್ಲಿ ಉದ್ಘಾಟನೆಗೆ ಸಿದ್ಧವಾಗಿರುವ ನೂತನ ಗ್ಲಾಸ್ ಸೇತುವೆ
Follow us
TV9 Web
| Updated By: shivaprasad.hs

Updated on:Apr 19, 2022 | 10:29 AM

ವಿಶ್ವದಲ್ಲೇ ಅತ್ಯಂತ ದೊಡ್ಡದೆಂದು ಹೇಳಲಾಗುವ ವಿಯೆಟ್ನಾಂನ ಗಾಜಿನ ಸೇತುವೆ (Glass Bridge) ಸದ್ಯದಲ್ಲೇ ಸ್ಥಳೀಯರು ಮತ್ತು ಪ್ರವಾಸಿಗರಿಗೆ ತೆರೆಯಲಿದೆ. ವಿಯೆಟ್ನಾಂನ (Vietnam) ಉತ್ತರದ ಹೈಲ್ಯಾಂಡ್ಸ್ ಪಟ್ಟಣವಾದ ಮೊಕ್ ಚೌನಲ್ಲಿ ಬರೋಬ್ಬರಿ 2,073.5 ಅಡಿ ಉದ್ದದ ಗಾಜಿನ ಸೇತುವೆಯನ್ನು ನಿರ್ಮಾಣ ಮಾಡಲಾಗಿದೆ. ಬ್ಯಾಚ್ ಲಾಂಗ್ ಹೆಸರಿನ ಈ ಸೇತುವೆಯು ವಿಯೆಟ್ನಾಂನ ಪುನರೇಕೀಕರಣ ದಿನದಂದು (Reunification Day) (ಏಪ್ರಿಲ್ 30) ಸಾರ್ವಜನಿಕರಿಗೆ ತೆರೆಯುತ್ತದೆ. ಸೋನ್ ಲಾ ಪ್ರಾಂತ್ಯದ ಮೋಕ್ ಚೌ ದ್ವೀಪ ಪ್ರದೇಶದ ಅಧಿಕಾರಿಗಳು ಗಾಜಿನ ಸೇತುವೆಯ ಅಧಿಕೃತ ಉದ್ದವನ್ನು ವಿಶ್ವದ ಅತಿ ಉದ್ದದ ಗಾಜಿನ ಸೇತುವೆ ಎಂದು ಗುರುತಿಸಲು ಗಿನ್ನೆಸ್ ವಿಶ್ವ ದಾಖಲೆಗೆ ಸಲ್ಲಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಚೀನಾದ ಹುನಾನ್ ಪ್ರಾಂತ್ಯದ ಜಾಂಗ್ಜಿಯಾಜಿ ಗ್ರಾಂಡ್ ಕ್ಯಾನ್ಯನ್ ಮೇಲಿನ 1,410.7 ಅಡಿ ಉದ್ದದ ಗಾಜಿನ ಸೇತುವೆಯ ಮೂಲಕ ಪ್ರಸ್ತುತ ಇರುವ ದಾಖಲೆಯಾಗಿದೆ. ಗಾಜಿನ ಸೇತುವೆಯ ಫೋಟೋಗಳು ಮತ್ತು ವೀಡಿಯೊಗಳು ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ವಾಸ್ತುಶಿಲ್ಪವು ಈಗಾಗಲೇ ನೆಟ್ಟಿಗರಿಗೆ ಮೋಡಿ ಮಾಡಿದೆ.

ವಿಯೆಟ್ನಾಂ ಸೇತುವೆಯ ವಿಡಿಯೋ ಇಲ್ಲಿದೆ:

ಹನೋಯಿಯಿಂದ ಸುಮಾರು 200 ಕಿಲೋಮೀಟರ್ ದೂರದಲ್ಲಿರುವ ಈ ಸೇತುವೆಯು ಭೂಮಿಯ ಮೇಲಿಂದ ಸುಮಾರು 500 ಅಡಿಗಳಷ್ಟು ಎತ್ತರದಲ್ಲಿದೆ. ಫ್ರೆಂಚ್ ಕಂಪನಿ ಸೇಂಟ್ ಗೊಬೈನ್ ಉತ್ಪಾದಿಸಿದ ಸೂಪರ್ ಟೆಂಪರ್ಡ್ ಗ್ಲಾಸ್‌ನಿಂದ ಈ ಸೇತುವೆಯನ್ನು ನಿರ್ಮಿಸಲಾಗಿದೆ. ಈ ಸ್ಥಳದಲ್ಲಿ ದಕ್ಷಿಣ ಕೊರಿಯಾದಿಂದ ಆಮದು ಮಾಡಿಕೊಳ್ಳಲಾದ ಕೇಬಲ್ ಕಾರ್ ವ್ಯವಸ್ಥೆಯನ್ನು ಸಹ ನಡೆಸಲಾಗುವುದು ಎಂದು ವರದಿಗಳು ಹೇಳಿವೆ.

ಏಪ್ರಿಲ್ 30 ರಂದು ಸೇತುವೆಯು ಸಾರ್ವಜನಿಕರಿಗೆ ತೆರೆದಾಗ, ಒಂದೇ ಬಾರಿಗೆ 500 ಜನರಿಗೆ ಮಾತ್ರ ಅದರ ಮೇಲೆ ನಡೆಯಲು ಅನುಮತಿಸಲಾಗುವುದು ಎಂದು ಮೋಕ್ ಚೌ ದ್ವೀಪ ಪ್ರವಾಸಿ ಪ್ರದೇಶದ ಪ್ರತಿನಿಧಿ ಹೊವಾಂಗ್ ಮನ್ಹ್ ಡುಯ್ ಹೇಳಿದ್ದಾರೆ.

ಚೀನಾದಲ್ಲಿವೆ ಹಲವು ಗ್ಲಾಸ್ ಸೇತುವೆಗಳು:

2021 ರಲ್ಲಿ, ಚೀನಾದ ಝೆಜಿಯಾಂಗ್ ಪ್ರಾಂತ್ಯದ ಸೇತುವೆಯೊಂದು ಜನರನ್ನು ದಿಗ್ಭ್ರಮೆಗೊಳಿಸಿತ್ತು. ಆ ಸೇತುವೆಯನ್ನು 2017 ರಲ್ಲಿ ಅನಾವರಣಗೊಳಿಸಲಾಗಿತ್ತು. ಮತ್ತು 2020 ರಲ್ಲಿ ಸ್ಥಳೀಯರಿಗೆ ತೆರೆಯಲಾಗಿತ್ತು. ಚೀನಾದಲ್ಲಿ ಇಂತಹ ಹಲವು ಗ್ಲಾಸ್ ಸೇತುವೆಗಳಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿವೆ.

ಈ ಹಿಂದಿನ ಅತ್ಯಂತ ಉದ್ದದ ಹುನಾನ್ ಪ್ರಾಂತ್ಯದ ಗಾಜಿನ ಸೇತುವೆಯ ಮನಮೋಹಕ ನೋಟ:

Longest Glass Bridge

ಹುನಾನ್ ಪ್ರಾಂತ್ಯದ ಗಾಜಿನ ಸೇತುವೆ

ಇದನ್ನೂ ಓದಿ: ಒಟಿಟಿಗೆ ಬರ್ತಿದೆ ‘ದಿ ಕಾಶ್ಮೀರ್​ ಫೈಲ್ಸ್​’ ಚಿತ್ರ; ಕನ್ನಡ ಪ್ರೇಕ್ಷಕರಿಗೂ ಇಲ್ಲಿದೆ ಒಂದು ಗುಡ್​ ನ್ಯೂಸ್​

ಕಾರವಾರದ ಬೈತಕೋಲ್ ಬ್ರೇಕ್ ವಾಟರ್‌ನಲ್ಲಿ ಗಾಳಕ್ಕೆ ಸಿಕ್ಕ ಅಪರೂಪದ ಡಿಸ್ಕೊ ಫಿಶ್; ಇಲ್ಲಿದೆ ವಿಡಿಯೋ

Published On - 10:20 am, Tue, 19 April 22

ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು