ಚೀನಾ ಮಾದರಿಯಲ್ಲೇ ಭಾರತದಲ್ಲೂ ಸಿದ್ಧವಾಗುತ್ತಿದೆ ಗಾಜಿನ ಸೇತುವೆ: ಎಲ್ಲಿ ಗೊತ್ತಾ?

ಪ್ರಕೃತಿ ಸಫಾರಿ ಯೋಜನೆ ಅಡಿಯಲ್ಲಿ ಗಾಜಿನ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಇದರ ಜೊತೆಗೆ ಜಿಪ್​ ಲೈನ್​, ಜಿಪ್ ಬೈಕ್​ ಕಾರ್ಯಗಳು ಕೂಡ ನಡೆಯುತ್ತಿವೆ.

ಚೀನಾ ಮಾದರಿಯಲ್ಲೇ ಭಾರತದಲ್ಲೂ ಸಿದ್ಧವಾಗುತ್ತಿದೆ ಗಾಜಿನ ಸೇತುವೆ: ಎಲ್ಲಿ ಗೊತ್ತಾ?
ಗಾಜಿನ ಸೇತುವೆ ಪರಿಶೀಲಿಸಿದ ಬಿಹಾರ ಮುಖ್ಯಮಂತ್ರಿ ನಿತೀಶ್​ ಕುಮಾರ್
Follow us
ರಾಜೇಶ್ ದುಗ್ಗುಮನೆ
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 20, 2020 | 5:50 PM

ನವದೆಹಲಿ: ಚೀನಾದ ಗಾಜಿನ ಸೇತುವೆ ಬಗ್ಗೆ ಅನೇಕರು ಕೇಳಿರುತ್ತಾರೆ. ಈಗ ಅದೇ ಮಾದರಿಯಲ್ಲಿ ಭಾರತದಲ್ಲೂ ಗ್ಲಾಸ್​ ಬ್ರಿಡ್ಜ್​ ಸಿದ್ಧಗೊಳ್ಳುತ್ತಿದೆ. ಪ್ರವಾಸಿಗರ ಹಾಟ್​ಸ್ಪಾಟ್​ ಎನಿಸಿಕೊಂಡಿರುವ ಬಿಹಾರದ ರಾಜ್‌ಗೀರ್​ನಲ್ಲಿ ಈ ಗಾಜಿನ್​ ಸೇತುವೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.

ಇಂದು ಬಿಹಾರ ಮುಖ್ಯಮಂತ್ರಿ ನಿತೀಶ್​ ಕುಮಾರ್​ ಗಾಜಿನ ಸೇತುವೆ ನಿರ್ಮಾಣ ಕಾರ್ಯದ ಪರಿಶೀಲನೆ ನಡೆಸಿದರು. ಮುಂದಿನ ಮಾರ್ಚ್​ ವೇಳೆಗೆ ಈ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕೊರೊನಾ ವೈರಸ್​ನಿಂದಾಗಿ ಪ್ರವಾಸೋದ್ಯಮ ನೆಲಕಚ್ಚಿದೆ. ಆದರೆ, ಮುಂದಿನ ಮಾರ್ಚ್​ ವೇಳೆಗೆ ಎಲ್ಲವೂ ಬಹುತೇಕ ಸಮಸ್ಥಿತಿಗೆ ಬರುವ ನಿರೀಕ್ಷೆ ಇದೆ. ಹೀಗಾಗಿ, ಮಾರ್ಚ್​ನಲ್ಲಿ ಇದರ ಕಾಮಗಾರಿ ಪೂರ್ಣಗೊಂಡರೆ ಏಪ್ರಿಲ್, ಮೇನಲ್ಲಿ ಹೆಚ್ಚು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಲು ಸಹಕಾರಿಯಾಗಲಿದೆ ಎನ್ನುವ ಉದ್ದೇಶದಿಂದ ನಿತೀಶ್​ ಕುಮಾರ್​ ಅಧಿಕಾರಿಗಳಿಗೆ ಈ ಸೂಚನೆ ನೀಡಿದ್ದಾರೆ.

ಪ್ರಕೃತಿ ಸಫಾರಿ ಯೋಜನೆ ಅಡಿಯಲ್ಲಿ ಗಾಜಿನ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಇದರ ಜೊತೆಗೆ ಜಿಪ್​ ಲೈನ್​, ಜಿಪ್ ಬೈಕ್​ ಕಾರ್ಯಗಳು ಕೂಡ ನಡೆಯುತ್ತಿವೆ. ಇವುಗಳ ಪರಿಶೀಲನೆಯನ್ನು ಕೂಡ ನಿತೀಶ್​ ಕುಮಾರ್ ಮಾಡಿದರು.

ಬಿಹಾರ ಸಿಎಂ ಆದ ನಂತರ ನಿತಿಶ್​ ಕುಮಾರ್​ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲು ನಿರ್ದೇಶನ ನೀಡಿದ್ದರು. ಇದು ಅವರ ಕನಸಿನ ಯೋಜನೆ ಕೂಡ ಹೌದು. ಹೀಗಾಗಿ, ಆದಷ್ಟು ಬೇಗ ಈ ಯೋಜನೆ ಪೂರ್ಣಗೊಳಿಸಬೇಕು ಎನ್ನುವ ಕನಸನ್ನು ಕಾಣುತ್ತಿದ್ದಾರೆ.

ಪ್ರಕೃತಿ ಸಫಾರಿ ಜೊತೆಗೆ ಇಲ್ಲಿ ಝೂ ಸಫಾರಿ ಕೂಡ ಇರಲಿದೆ. ಪ್ರಾಣಿಗಳ ಮಧ್ಯೆ ವಾಹನದಲ್ಲಿ ಸಂಚಾರ ನಡೆಸಲು ಅನುವು ಮಾಡಿಕೊಡಲು ಅಗಲವಾದ ರಸ್ತೆಗಳನ್ನು ಕೂಡ ನಿರ್ಮಾಣ ಮಾಡಲಾಗಿದೆ. ಇನ್ನು ಅನಾರೋಗ್ಯ ಪ್ರಾಣಿಗಳನ್ನು ಕೂಡಿಡಲು ವಿಶೇಷ ಪಂಜರಗಳನ್ನು ಕೂಡ ನಿರ್ಮಾಣ ಮಾಡಲಾಗಿದೆ.

ಚೀನಾದಲ್ಲಿದೆ ಗಾಜಿನೆ ಸೇತುವೆ

ಚೀನಾದ ಜಾಂಗ್ಜಿಯಾಜಿದಲ್ಲಿ ಗಾಜಿನ ಸೇತುವೆ ಇದೆ. 2016ರ ಆಗಸ್ಟ್​ ತಿಂಗಳಲ್ಲಿ ಈ ಸೇತುವೆ ಲೋಕಾರ್ಪಣೆಗೊಂಡಿತ್ತು. ಸುಮಾರು ಅರ್ಧ ಕಿ.ಮೀ ಇರುವ ಈ ಸೇತುವೆ ಮೇಲೆ ಒಂದೇ ಬಾರಿಗೆ 800 ಜನರು ಓಡಾಡಬಹುದು. ಈ ಸೇತುವೆ ಮೇಲೆ ಓಡಾಡುವಾಗ ಆಳದ ಕಂದಕಗಳು ಪಾರದರ್ಶಕ ಗ್ಲಾಸ್​ನಿಂದ ಕಾಣಿಸುತ್ತವೆ. ಹೀಗಾಗಿ, ಅನೇಕರು ಇದರ ಮೇಲೆ ಓಡಾಟ ನಡೆಸಲು ಭಯ ಬಿದ್ದ ಉದಾಹರಣೆ ಇದೆ.