ಮನೆಯ ಹೊರಗೆ ಕುಳಿತಿದ್ದ ವೃದ್ಧೆಯ ಕಿವಿಯೋಲೆ ಕಿತ್ತು ಪರಾರಿಯಾದ ಕಳ್ಳ

|

Updated on: Apr 11, 2024 | 7:24 PM

ಕಳ್ಳ ಕಿವಿಯೋಲೆ ಕಿತ್ತು ಪರಾರಿಯಾದ ಸಂಪೂರ್ಣ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗುತ್ತಿದೆ.

ಮನೆಯ ಹೊರಗೆ ಕುಳಿತಿದ್ದ ವೃದ್ಧೆಯ ಕಿವಿಯೋಲೆ ಕಿತ್ತು ಪರಾರಿಯಾದ ಕಳ್ಳ
ವೃದ್ಧೆಯ ಕಿವಿಯೋಲೆ ಕಿತ್ತು ಪರಾರಿಯಾದ ಕಳ್ಳ
Follow us on

ಪಂಜಾಬ್‌: ದರೋಡೆ, ಕೊಲೆ ಹೀಗೆ ಹಲವು ಅಪರಾಧಗಳ ವರದಿಗಳು ಪ್ರತಿದಿನವೂ ಹೊರಬರುತ್ತಿವೆ. ಇದೀಗ ಮನೆಯ ಹೊರಗೆ ಕುಳಿತಿದ್ದ ವೃದ್ದೆಯ ಕಿವಿಯೋಲೆ ಕಿತ್ತು ಪರಾರಿಯಾಗಿರುವ ಘಟನೆ ಪಂಜಾಬ್‌ನ ಪಟಿಯಾಲಾದ ತೇಜ್ ಬಾಗ್ ಕಾಲೋನಿಯಲ್ಲಿ ನಡೆದಿದೆ. ಕಳ್ಳ ಕಿವಿಯೋಲೆ ಕಿತ್ತು ಪರಾರಿಯಾದ ಸಂಪೂರ್ಣ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗುತ್ತಿದೆ.

ಫೋಲನ್ ದೇವ(60) ವೃದ್ಧೆ ಮನೆಯ ಹೊರಗೆ ಕುರ್ಚಿಯಲ್ಲಿ ಕುಳಿತಿರುವ ವೇಳೆ ಕದೀಮರು ಕೈಚಳ ತೋರಿಸಿದ್ದು, ಚಿನ್ನದ ಕಿವಿಯೋಲೆಯೊಂದಿಗೆ ಪರಾರಿಯಾಗಿದ್ದಾರೆ. ಮಾಹಿತಿ ಪ್ರಕಾರ ವೃದ್ದೆ ಕೆಲ ತಿಂಗಳ ಹಿಂದೆ ರಸ್ತೆ ಅಪಘಾತದಿಂದಾಗಿ ಕೈಗೆ ಗಾಯವಾಗಿತ್ತು. ಜೊತೆಗೆ ಕೈಗೆ ಪ್ಲಾಸ್ಟರ್ ಕೂಡ ಹಾಕಲಾಗಿತ್ತು. ಇದರಿಂದಾಗಿ ಈ ವೃದ್ಧೆ ಬಿಸಿಲು ತೆಗೆಕೊಳ್ಳಲು ಮನೆಯ ಹೊರಗೆ ಕುಳಿತ್ತಿದ್ದಾರೆ.

ಇದನ್ನೂ ಓದಿ: 7 ಕೆಜಿ ಚಿನ್ನದಿಂದ ತಯಾರಿಸಿದ ರಾಮಾಯಣ ಪುಸ್ತಕ; ಅಯೋಧ್ಯಾ ರಾಮನಿಗೆ ಸಮರ್ಪಿಸಿದ ನಿವೃತ್ತ ಐಎಎಸ್ ಅಧಿಕಾರಿ

ಅಷ್ಟರಲ್ಲಿ ಮುಖಕ್ಕೆ ಮಾಸ್ಕ್​​​ ಹಾಕಿಕೊಂಡ ಕಳ್ಳನೊಬ್ಬ ವೃದ್ಧೆಯ ಕಿವಿಯಲ್ಲಿದ್ದ ಚಿನ್ನದ ಕಿವಿಯೋಲೆಗಳನ್ನು ಕದ್ದೊಯ್ದಿದ್ದು ಸ್ಥಳದಿಂದ ಪರಾರಿಯಾಗಿದ್ದಾನೆ.ಈ ಘಟನೆಯ ಸಂಬಂಧಿಸಿದ್ದಂತೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: