Video: ತರಕಾರಿ ವ್ಯಾಪಾರಿಗೆ ಬ್ಯಾಟ್ನಲ್ಲಿ ಹೊಡೆದು ಕೊಂದ ಪೊಲೀಸ್ ಅಧಿಕಾರಿಯ ಮಗ
ತರಕಾರಿ ವ್ಯಾಪಾರಿಯನ್ನು ಪೊಲೀಸ್ ಅಧಿಕಾರಿಯ ಮಗ ಹತ್ಯೆಗೈದ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಮಾಹಿತಿ ಪ್ರಕಾರ, ಮಂಗಳವಾರ ರಾತ್ರಿ 10:30 ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಇಡೀ ಘಟನೆ ಆ ಪ್ರದೇಶದಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ರಾಜಸ್ಥಾನ: ಜೈಪುರದ ಕರಣಿ ವಿಹಾರ್ ಪ್ರದೇಶದಲ್ಲಿ ತರಕಾರಿ ವ್ಯಾಪಾರಿಯನ್ನು ಪೊಲೀಸ್ ಅಧಿಕಾರಿಯ ಮಗ ಹತ್ಯೆಗೈದ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಕೊಲೆ ಮಾಡಿದ ನಂತರ, ದುಷ್ಕರ್ಮಿ ಶವವನ್ನು ಕಾರಿನಲ್ಲಿ ಇರಿಸಿ ಆಸ್ಪತ್ರೆಗೆ ಧಾವಿಸಿದ ಎಂದು ಈಟಿವಿ ಭಾರತ್ ವರದಿ ತಿಳಿಸಿದೆ. ಇಡೀ ಘಟನೆ ಆ ಪ್ರದೇಶದಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಮಾಹಿತಿ ಪ್ರಕಾರ, ಮಂಗಳವಾರ ರಾತ್ರಿ 10:30 ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಸ್ಥಳೀಯ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಅಂತರ್ಜಾಲದಲ್ಲಿ ವೈರಲ್ ಆಗಿದ್ದು, ಆರೋಪಿ ಕೈಯಲ್ಲಿ ಬ್ಯಾಟ್ ಹಿಡಿದುಕೊಂಡು ತನ್ನ ಮನೆಯಿಂದ ಹೊರಟು ಯುವಕನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿರುವುದು ಸೆರೆಯಾಗಿದೆ. ಕೆಲ ಹೊತ್ತಿನಲ್ಲೇ ಆರೋಪಿಯ ತಂದೆ ಪೊಲೀಸ್ ಅಧಿಕಾರಿ ಮನೆಯಿಂದ ಹೊರಬಂದಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಇದನ್ನೂ ಓದಿ: ಸೀರೆ ಉಡೋದ್ರಿಂದಲೂ ಬರುತ್ತಂತೆ ಕ್ಯಾನ್ಸರ್! ಮಹಿಳೆಯರಲ್ಲಿ ಆತಂಕ ಸೃಷ್ಟಿಸಿರುವ ಈ ಸೀರೆ ಕ್ಯಾನ್ಸರ್ ಎಂದರೇನು?
ಹಲ್ಲೆಯ ನಂತರ, ಆರೋಪಿಯ ಕುಟುಂಬದ ಸದಸ್ಯರು ಗಾಯಗೊಂಡ ಯುವಕನನ್ನು ಕಾರಿನಲ್ಲಿ ಇರಿಸಿ ಸ್ಥಳೀಯ ಆಸ್ಪತ್ರೆಗೆ ಸಾಗಿಸಿದ್ದಾರೆ ಎಂದು ವರದಿಯಾಗಿದೆ. ಆದರೆ, ಆಸ್ಪತ್ರೆಯಲ್ಲಿ ವೈದ್ಯರು ಯುವಕ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ