Viral: ಪರ್ಮಿಷನ್ ಕೇಳದೇ ವರ್ಕ್ ಫ್ರಮ್ ಹೋಮ್ ಮಾಡಿದ ಉದ್ಯೋಗಿಗೆ ಖಡಕ್ ವಾರ್ನಿಂಗ್ ನೀಡಿದ ಸಿಇಒ

ಯಾರಾದ್ರೂ ವರ್ಕ್ ಫ್ರಮ್ ಹೋಮ್ ಕೆಲ್ಸ ಮಾಡ್ತಾ ಇದ್ರೆ ಎಷ್ಟು ಅದೃಷ್ಟವಂತ ಎಂದು ಮನಸ್ಸಲ್ಲಿಯೇ ಅಂದುಕೊಳ್ತೇವೆ. ಕೆಲವು ಕಂಪನಿಗಳಲ್ಲಿ ಮನೆಯಲ್ಲೇ ಕೆಲಸ ಮಾಡುವ ಆಪ್ಷನ್ ಕೂಡ ಇದೆ. ಆದರೆ ಇಲ್ಲೊಬ್ಬ ವ್ಯಕ್ತಿಯೂ ಪರ್ಮಿಷನ್ ಇಲ್ಲದೇ ವರ್ಕ್ ಫ್ರಮ್ ಹೋಮ್ ತೆಗೆದುಕೊಂಡಿದ್ದು, ಈ ಉದ್ಯೋಗಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಸಿಇಒ ಜೊತೆ ಉದ್ಯೋಗಿ ನಡೆಸಿದ ಸಂಭಾಷಣೆಯ ಸ್ಕ್ರೀನ್‌ಶಾಟ್ ಹಂಚಿಕೊಂಡು ಏನೆಲ್ಲಾ ನಡೆಯಿತು ಎಂದು ವಿವರಿಸಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Viral: ಪರ್ಮಿಷನ್ ಕೇಳದೇ ವರ್ಕ್ ಫ್ರಮ್ ಹೋಮ್ ಮಾಡಿದ ಉದ್ಯೋಗಿಗೆ ಖಡಕ್ ವಾರ್ನಿಂಗ್ ನೀಡಿದ ಸಿಇಒ
ಸಾಂದರ್ಭಿಕ ಚಿತ್ರ
Image Credit source: Pinterest

Updated on: Oct 26, 2025 | 7:05 PM

ಆಫೀಸಿಗೆ ಹೋಗಿ ಯಾರ್ ಕೆಲ್ಸ ಮಾಡ್ತಾರೆ, ಹೀಗಾಗಿ ವರ್ಕ್ ಫ್ರಮ್ ಹೋಮ್ (work from home) ಬೆಸ್ಟ್ ಎನ್ನುವ ಮೈಂಡ್ ಸೆಟ್ ಬಹುತೇಕರಲ್ಲಿದೆ. ಕೋವಿಡ್ ಸಮಯಕ್ಕೆ ಹೋಲಿಸಿದ್ರೆ ಈಗ ವರ್ಕ್ ಫ್ರಮ್ ಹೋಮ್ ಆಪ್ಷನ್ ಇರೋದು ಕಡಿಮೆಯೇ. ಆದರೆ ಕೆಲವೊಮ್ಮೆ ಅನಾರೋಗ್ಯ ಕೈ ಕೊಟ್ಟಾಗ ಅಥವಾ ಇನ್ಯಾವುದೋ ವೈಯುಕ್ತಿಕ ಕಾರಣದಿಂದ ಬಾಸ್‌ಗೆ ಹೇಳಿ ವರ್ಕ್ ಫ್ರಮ್ ಹೋಮ್ ಕೆಲಸ ಮಾಡುವವರು ಇದ್ದಾರೆ. ಆದರೆ ಇಲ್ಲೊಬ್ಬರು ಉದ್ಯೋಗಿ (Employee) ಅನುಮತಿ ಪಡೆದೇನೇ ಮನೆಯಲ್ಲೇ ಕೆಲಸ ಮಾಡಿದ್ದಾರೆ. ಇದರಿಂದ ಗರಂ ಆದ ಸಿಇಒ ಖಡಕ್ ವಾರ್ನಿಂಗ್ ನೀಡಿದ್ದಾರಂತೆ. ಈ ಬಗ್ಗೆ ರೆಡ್ಡಿಟ್‌ನಲ್ಲಿ ಹಂಚಿಕೊಂಡು ಹೀಗೆ ಯಾಕೆ ಆಯ್ತು ಎಂದು ಹೇಳಿಕೊಂಡಿದ್ದಾರೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಎಲ್ಲವನ್ನು ಪಾಸಿಟಿವ್ ಆಗಿ ತೆಗೆದುಕೊಳ್ಳಿ ಎಂದು ಹೇಳಿದ್ದಾರೆ.

@BeatAdditional3046 ಹೆಸರಿನ ಖಾತೆಯಲ್ಲಿ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ, ಉದ್ಯೋಗಿ ಭಾರತದಲ್ಲಿ ಕಚೇರಿ ಹೊಂದಿರುವ ವಿದೇಶಿ ಸ್ಟಾರ್ಟ್‌ಅಪ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. ಇಲ್ಲಿ ಹೇಳಿರುವಂತೆ ವರ್ಕ್ ಫ್ರಮ್ ಹೋಮ್ ಅಥವಾ ರಜೆಗಳ ಬಗ್ಗೆ ಸ್ಪಷ್ಟ ನಿಯಮಗಳಿರಲಿಲ್ಲ. ಇದಕ್ಕೂ ಮೊದಲು, ಉದ್ಯೋಗಿ ಅನುಮೋದನೆಗಳಿಗಾಗಿ ಮ್ಯಾನೇಜರ್ ಮತ್ತು ಹೆಚ್‌ಆರ್‌ಗೆ ಇಮೇಲ್ ಮಾಡುತ್ತಿದ್ದರು. ಆದರೆ ಇಬ್ಬರೂ ರಾಜೀನಾಮೆ ನೀಡಿದ ನಂತರದಲ್ಲಿ ಎಲ್ಲಾ ಸಂವಹನವನ್ನು ನೇರವಾಗಿ ಸಿಇಒ ಜೊತೆ ಮಾಡಬೇಕಾಗಿತ್ತು ಎನ್ನಲಾಗಿದೆ.

ವೈರಲ್ ಪೋಸ್ಟ್ ಇಲ್ಲಿದೆ ನೋಡಿ

ಇದನ್ನೂ ಓದಿ
ಉದ್ಯೋಗ ಸ್ಥಳದಲ್ಲಿ ತನ್ನನ್ನು ನಡೆಸಿಕೊಳ್ಳುವ ರೀತಿ ಇದು ಎಂದ ವ್ಯಕ್ತಿ
ಹೊಸ ಉದ್ಯೋಗಿಯ ವರ್ತನೆಗೆ ಮ್ಯಾನೇಜರ್ ಶಾಕ್!
ಬೆಂಗಳೂರಿನ ಜೆಪ್ಟೋ ಡೆಲಿವರಿ ಬಾಯ್ ವಾರದ ಸಂಪಾದನೆ 21 ಸಾವಿರ ರೂ ಅಂತೆ
ಟಾರ್ಗೆಟ್ ಹೆಚ್ಚಾಗ್ತವೆ, ಸಂಬಳವಲ್ಲ; ಉದ್ಯೋಗಿಯ ರಿಸೈನ್‌ ಲೆಟರ್‌ ವೈರಲ್‌

ಮನೆಯಿಂದ ಕೆಲಸ ಮಾಡುವ ಬಗ್ಗೆ ತಿಳಿಸಲು ವೃತ್ತಿಪರ ಇಮೇಲ್ ಕಳುಹಿಸಿದ್ದೇನೆ ಎಂದು ಉದ್ಯೋಗಿ ಹೇಳಿಕೊಂಡಿದ್ದಾರೆ. ಏಳು ತಿಂಗಳಲ್ಲಿ ಇದು ಎರಡನೇ ಬಾರಿಗೆ ವರ್ಕ್ ಫ್ರಮ್ ಹೋಮ್ ತೆಗೆದುಕೊಂಡ ಕಾರಣ, ಮಾಹಿತಿ ನೀಡಿದರೆ ಸಾಕು ಎಂದು ಉದ್ಯೋಗಿ ಭಾವಿಸಿದ್ದರು. ಆದರೆ ಇವರ ಈ ಮೇಲ್‌ಗೆ ಗರಂ ಆದ ಸಿಇಒ ಅಧಿಸೂಚನೆಯಲ್ಲ, ಅನುಮತಿ ಕೇಳಬೇಕು ಎಂದು ಖಾರವಾಗಿಯೇ ಹೇಳಿದ್ದಾರಂತೆ.

ಹೌದು, ಇದು ನಮ್ಮ ಸಂಸ್ಕೃತಿಯಲ್ಲ. ಇದು ಕೆಟ್ಟ ಅಭ್ಯಾಸ. ನಾನು ನಿಮಗೆ ಮನೆಯಿಂದ ಕೆಲಸ ಮಾಡಲು ಅವಕಾಶ ನೀಡಲಿಲ್ಲ. ನೀವು ಕೇವಲ ತಿಳಿಸುವುದಲ್ಲ, ಅನುಮತಿ ಕೇಳಬೇಕು ಎಂದು ಉದ್ಯೋಗಿ ರಜಾದಿನಗಳ ಬಗ್ಗೆ ತಿಳಿಸಿದಾಗ ಸಿಇಒ ಹೇಳಿರುವುದನ್ನು ನೀವಿಲ್ಲಿ ನೋಡಬಹುದು.

ಆ ಬಳಿಕ ಉದ್ಯೋಗಿಯೂ ಕಾಲಿಗೆ ಪೆಟ್ಟಾಗಿದ್ದು ನಡೆಯಲು ತೊಂದರೆಯಾಗಿದ್ದರಿಂದ ವರ್ಕ್ ಫ್ರಮ್ ಹೋಮ್ ನಿರ್ಧಾರಕ್ಕೆ ಬರಲಾಗಿದೆ ಎಂದು ವಿವರಿಸಿದ್ದಾರೆ. ಆದರೆ ಔಪಚಾರಿಕ ಕೆಲಸದ ಇಮೇಲ್‌ನಲ್ಲಿ ವೈಯಕ್ತಿಕ ವಿವರಗಳನ್ನು ಅತಿಯಾಗಿ ವಿವರಿಸುವುದು ಸರಿಯಲ್ಲ ಎಂದು ಸುಮ್ಮನಾಗಿದ್ದಾರೆ.

ಇದನ್ನೂ ಓದಿ: ದಿನಕ್ಕೆ 12 ಗಂಟೆ ಕೆಲಸ, ಸರಿಯಾಗಿ ಕೆಲ್ಸ ಮಾಡುತ್ತಿಲ್ಲ ಅನ್ನೋ ಆರೋಪ; ಉದ್ಯೋಗ ಸ್ಥಳದ ವಾಸ್ತವ ಸ್ಥಿತಿ ಬಿಚ್ಚಿಟ್ಟ ವ್ಯಕ್ತಿ

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬಳಕೆದಾರರೊಬ್ಬರು ನೀವು ತಮಾಷೆಗಾಗಿ ರಾಜೀನಾಮೆ ನೀಡಲು ಅನುಮತಿ ಕೇಳಿ ಎಂದು ಸಲಹೆ ನೀಡಿದ್ದಾರೆ. ಮತ್ತೊಬ್ಬರು, ನೀವು ಮನೆಯಿಂದಲೇ ಕೆಲಸ ಮಾಡುವ ಮೊದಲು ಕೇಳಬೇಕಿತ್ತು. ಕೇವಲ ತಿಳಿಸುವ ಈ ಸಂಸ್ಕೃತಿ ಇಲ್ಲಿ ಕೆಲಸ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರ ಸಿಇಒ ಹೇಳಿದ್ದು ಸರಿ, ಕಂಪನಿಯ ರೂಲ್ಸ್ ರೆಗ್ಯುಲೇಷನ್‌ಗಳನ್ನು ಪಾಲಿಸುವುದು ಕಡ್ಡಾಯ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ