AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಟಾರ್ಗೆಟ್ ಮಾತ್ರ ಹೆಚ್ಚಾಗ್ತವೆ, ಸಂಬಳವಲ್ಲ; ರಿಸೈನ್ ಲೆಟರ್‌ನಲ್ಲಿ ಉದ್ಯೋಗಿ ಹೇಳಿದ್ದಿಷ್ಟೇ

ಸೋಶಿಯಲ್ ಮೀಡಿಯಾದಲ್ಲಿ ಉದ್ಯೋಗಿಗಗಳ ರಾಜೀನಾಮೆ ಪತ್ರದ ಫೋಟೋ ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಉದ್ಯೋಗ ತೊರೆಯುವಾಗ ಔಪಚಾರಿಕವಾಗಿ ರಾಜೀನಾಮೆ ನೀಡುವುದನ್ನು ನೀವು ನೋಡಿರುತ್ತೀರಿ. ಇದೀಗ ಉದ್ಯೋಗಿಯ ರಾಜೀನಾಮೆ ಪತ್ರವೊಂದು ವೈರಲ್ ಆಗಿದ್ದು, ಆದರೆ ಜಾಬ್ ರಿಸೈನ್ ಮಾಡುವ ನಿರ್ಧಾರ ಹಿಂದಿನ ಕಾರಣ ತಿಳಿದ್ರೆ ನೀವು ಶಾಕ್ ಆಗ್ತೀರಾ. ಈ ಬಗ್ಗೆ ಉದ್ಯೋಗಿಯೂ ಲೆಟರ್‌ನಲ್ಲಿ ಉಲ್ಲೇಖಿಸಿದ್ದು, ಈ ಕುರಿತಾದ ಸ್ಟೋರಿ ಇಲ್ಲಿದೆ.

Viral: ಟಾರ್ಗೆಟ್ ಮಾತ್ರ ಹೆಚ್ಚಾಗ್ತವೆ, ಸಂಬಳವಲ್ಲ; ರಿಸೈನ್ ಲೆಟರ್‌ನಲ್ಲಿ ಉದ್ಯೋಗಿ ಹೇಳಿದ್ದಿಷ್ಟೇ
ಸಾಂದರ್ಭಿಕ ಚಿತ್ರImage Credit source: Pinterest
ಸಾಯಿನಂದಾ
|

Updated on: Oct 19, 2025 | 12:00 PM

Share

ಟಾಂಜಾನಿಯಾ, ಅಕ್ಟೋಬರ್ 19: ಕೆಲವರು ತಮ್ಮ ಕೆಲಸದ (Job) ಸ್ಥಳದಲ್ಲಿ ಅನುಭವಿಸುವ ಕಷ್ಟ ಹೇಳಲಾಗದು. ಈ ಒತ್ತಡಭರಿತ ಕೆಲಸದಿಂದಾಗಿ ಈ ಉದ್ಯೋಗ ಬೇಡ ಎನ್ನುವ ನಿರ್ಧಾರಕ್ಕೆ ಕೆಲವರು ಬರುವವರೇ ಹೆಚ್ಚು. ಕೆಲ ಸ್ಥಳಗಳಲ್ಲಿ ಬಾಸ್ ಕಿರಿಕಿರಿ ಹೆಚ್ಚೇ ಇರುತ್ತದೆ. ಈ ಕಾರಣದಿಂದಾಗಿ ರಾಜೀನಾಮೆ ನೀಡುತ್ತಾರೆ. ಈ ಉದ್ಯೋಗಿಯದ್ದು ಇದೇ ಗೋಳು. ಟಾಂಜಾನಿಯಾದಲ್ಲಿರುವ ಜೇ ಡೆಕೋರ್ ಕಂಪನಿಯ (Jay decor) ಉದ್ಯೋಗಿಯೂ ಬಾಸ್ ಕಿರಿಕಿರಿ ತಾಳಲಾರದೆ ಜಾಬ್ ರಿಸೈನ್ ಮಾಡಿದ್ದಾನೆ. ಇದೀಗ ಉದ್ಯೋಗಿ ನೀಡಿದ ರಾಜೀನಾಮೆ ಪತ್ರ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಉದ್ಯೋಗಿಯ ರಾಜೀನಾಮೆ ಪತ್ರದಲ್ಲಿ ಏನಿದೆ?

ಸ್ವತಃ ಕಂಪನಿಯೂ ಜೇ ಡೆಕೋರ್ ಹೆಸರಿನ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾದ ಈ ಪೋಸ್ಟ್ ನಲ್ಲಿ ಎಸಿ ಮಿಂಜಾ ಎಂಬ ಉದ್ಯೋಗಿ ತನ್ನ ಬಾಸ್ ಮತ್ತು ಕಂಪನಿಯ ರೂಲ್ಸ್ ಗಳಿಂದ ಬೇಸೆತ್ತು ರಾಜೀನಾಮೆ ನೀಡಿದ್ದಾನೆ. ಈ ರಾಜೀನಾಮೆ ಪತ್ರದಲ್ಲಿ ಉದ್ಯೋಗಿಯೂ ಈ ಕಂಪನಿಯಲ್ಲಿ ಟಾರ್ಗೆಟ್ ಮಾತ್ರ ಹೆಚ್ಚಾಗ್ತವೆ, ಸಂಬಳವಲ್ಲ. ನಾನು ರಾಜೀನಾಮೆ ನೀಡುತ್ತಿದ್ದೇನೆ. ಇಲ್ಲಿ ನಾನು ಕೆಲಸ ಮಾಡುತ್ತೇನೆ. ಆದರೆ, ನಾನು ಮ್ಯಾಜಿಕ್ ಮಾಡುವುದಿಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾನೆ.

ಇದನ್ನೂ ಓದಿ
Image
ಇಂಟರ್ವ್ಯೂನಲ್ಲಿ ಯುವತಿಯನ್ನು ರಿಜೆಕ್ಟ್ ಮಾಡಿದ ಕಂಪನಿ, ಮುಂದೇನಾಯ್ತು ನೋಡಿ
Image
ಕೆಲಸದ ಬಗ್ಗೆ ಮೆಚ್ಚುಗೆಯ ಮಾತುಗಳಿಲ್ಲ; ಕೆಲಸ ಬಿಡಲು ಕಾರಣ ತಿಳಿಸಿದ ಮಹಿಳೆ
Image
ಪೈಲ್ಸ್​​​ ಆಗಿದೆ, ರಜೆ ಕೊಡಿ ಅಂದ್ರೆ ಮ್ಯಾನೇಜರ್ ಹೇಳಿದ್ದೇನು ಗೊತ್ತಾ?​​
Image
ರಾತ್ರಿ ಒಂಬತ್ತಾದ್ರೂ ಮುಗಿಯದ ವರ್ಕ್, ಮಹಿಳೆಯ ಕೆಲಸ ನೋಡಿ ಅಚ್ಚರಿಪಟ್ಟ ವ್ಲಾ

ವೈರಲ್ ಪೋಸ್ಟ್ ಇಲ್ಲಿದೆ ನೋಡಿ

ಇದನ್ನೂ ಓದಿ:Viral: ಹೈಲಿ ಕ್ವಾಲಿಫೈಡ್‌ ಎಂದು ಇಂಟರ್ವ್ಯೂನಲ್ಲಿ ಯುವತಿಯನ್ನು ರಿಜೆಕ್ಟ್ ಮಾಡಿದ ಕಂಪನಿ, ಮುಂದೇನಾಯ್ತು ಗೊತ್ತಾ?

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಈ ವ್ಯಕ್ತಿಯ ಧೈರ್ಯವನ್ನು ಮೆಚ್ಚಿದ್ದಾರೆ. ಒಬ್ಬ ಬಳಕೆದಾರರು ಇದ್ದದ್ದನ್ನು ಇದ್ದ ಹಾಗೆ ಹೇಳಲು ಗುಂಡಿಗೆ ಬೇಕು ಎಂದಿದ್ದಾರೆ. ಮತ್ತೊಬ್ಬರು ಈ ವ್ಯಕ್ತಿ ಅತೀ ಬುದ್ಧಿವಂತ ಎಂದು ಹೇಳಿದ್ದಾರೆ. ರಾಜೀನಾಮೆ ಪತ್ರದಲ್ಲಿ ಬರೆದಿರುವ ಸಾಲುಗಳು ಸಣ್ಣದಾಗಿದ್ದರೂ ಕ್ಲಿಯರ್ ಆಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಈ ರಾಜೀನಾಮೆ ಪತ್ರ ನೋಡಿ ನಗುವ ಇಮೋಜಿ ಕಳುಹಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ