AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಮನೆ ಕ್ಲೀನ್ ಮಾಡು ಎಂದ ತಾಯಿ; ಕೋಪಗೊಂಡು ಮೊಬೈಲ್ ಟವರ್ ಹತ್ತಿದ ಬಾಲಕಿ

ಈಗಿನ ಕಾಲದಲ್ಲಿ ಮಕ್ಕಳಿಗೆ ಹೆತ್ತವರು ಏನ್ ಹೇಳಿದ್ರೂ ತಪ್ಪೇ. ಮಕ್ಕಳು ತಪ್ಪು ಮಾಡಿದ್ರೂ ಗದರುವಂತಿಲ್ಲ. ಮನೆ ಕೆಲಸ ಮಾಡು ಅಂತ ಹೇಳುವಂತಿಲ್ಲ. ಹೌದು, ಇಲ್ಲೊಂದು ಕಡೆ ಮಗಳಿಗೆ ತಾಯಿ ಮನೆ ಕ್ಲೀನ್ ಮಾಡು ಎಂದು ಹೇಳಿದ್ದಾಳೆ. ಇದೇ ವಿಚಾರವಾಗಿ ಕೋಪಗೊಂಡ ಬಾಲಕಿಯೂ ಮಾಡಿದ ಕೆಲಸ ನೋಡಿದ್ರೆ ನೀವು ಶಾಕ್ ಆಗ್ತೀರಾ. ಈ ಕುರಿತಾದ ಮಾಹಿತಿ ಇಲ್ಲಿದೆ.

Video: ಮನೆ ಕ್ಲೀನ್ ಮಾಡು ಎಂದ ತಾಯಿ; ಕೋಪಗೊಂಡು ಮೊಬೈಲ್ ಟವರ್ ಹತ್ತಿದ ಬಾಲಕಿ
ಮೊಬೈಲ್ ಟವರ್ ಏರಿದ ಬಾಲಕಿImage Credit source: Twitter
ಸಾಯಿನಂದಾ
|

Updated on: Oct 19, 2025 | 3:55 PM

Share

ಉತ್ತರ ಪ್ರದೇಶ, ಅಕ್ಟೋಬರ್‌ ೧೯: ಹತ್ತಿರ ಬರುತ್ತಿದ್ದಂತೆ ಮಹಿಳೆಯರು ಮನೆ ಕ್ಲೀನಿಂಗ್‌ನತ್ತ ಎಲ್ಲರೂ ಗಮನ ಕೊಡ್ತಾರೆ. ಅದ್ರಲ್ಲೂ ಮನೆಯಲ್ಲಿ ಹೆಣ್ಣು ಮಕ್ಕಳು ಇದ್ದರೆ ತಾಯಿಯಾದವಳು ಮನೆ ಕ್ಲೀನಿಂಗ್ ಮಾಡು ಇಲ್ಲಾಂದ್ರೆ ನನಗೆ ಸಹಾಯ ಮಾಡು ಎಂದು ಹೇಳುವುದು ಸಹಜ. ಆದ್ರೆ ಈಗಿನ ಕಾಲದ ಮಕ್ಕಳಿಗೆ ಮನೆ ಕೆಲಸ ಮಾಡು ಅನ್ನೋ ಹಾಗಿಲ್ಲ. ಹೌದು ದೀಪಾವಳಿ ಹಬ್ಬ ಹತ್ತಿರ ಬರುತ್ತಿದ್ದಂತೆ ತಾಯಿಯೊಬ್ಬಳು ಮಗಳಿಗೆ ಮನೆ ಕ್ಲೀನ್ ಮಾಡು ಎಂದು ಹೇಳಿದ್ದಾಳೆ. ಹೀಗೆ ಹೇಳಿದ್ದೇ ತಡ ಮಗಳು ಮೊಬೈಲ್ ಟವರ್ (mobile tower) ಏರಿ ಅಮ್ಮನ ಮೇಲಿನ ಕೋಪವನ್ನು ವಿಚಿತ್ರವಾಗಿ ತೀರಿಸಿಕೊಂಡಿದ್ದಾಳೆ. ಈ ಘಟನೆಯೂ ಉತ್ತರ ಪ್ರದೇಶ ಮಿರ್ಜಾಪುರದಲ್ಲಿ(Mirzapur of Uttara Pradesh) ಈ ಘಟನೆ ನಡೆದಿದೆ ಎನ್ನಲಾಗಿದೆ. ಮೊಬೈಲ್ ಟವರ್ ಏರಿದ ಹುಡುಗಿಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಅಮ್ಮನ ಮೇಲಿನ ಕೋಪಕ್ಕೆ ಟವರ್‌ ಏರಿದ ಹುಡುಗಿ

@gaurav1307kumar ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ವೀಡಿಯೋದಲ್ಲಿ ಮಿರ್ಜಾಪುರದಲ್ಲಿ, ದೀಪಾವಳಿಯ ಸಮಯದಲ್ಲಿ ಮನೆ ಸ್ವಚ್ಛತೆ ಮಾಡುವಂತೆ ಯುವತಿಗೆ ತಾಯಿಯೂ ಗದರಿಸಿದ್ದಾಳೆ.  ಇದರಿಂದ ಕೋಪಗೊಂಡ ಬಾಲಕಿ ಮೊಬೈಲ್ ಟವರ್ ಮೇಲೆ ಹತ್ತಿ ಹೈಡ್ರಾಮ ಮಾಡಿದ್ದಾಳೆ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಈ ವಿಡಿಯೋದಲ್ಲಿ ಯುವತಿಯೂ ಮೊಬೈಲ್ ಟವರ್ ಏರುತ್ತಿರುವುದನ್ನು ನೀವಿಲ್ಲಿ ನೋಡಬಹುದು.

ಇದನ್ನೂ ಓದಿ
Image
ಸೀಟಿಗಾಗಿ ಪ್ರಯಾಣಿಕರ ಮೇಲೆ ಪೆಪ್ಪರ್‌ ಸ್ಪ್ರೇ ಸಿಂಪಡಿಸಿದ ಮಹಿಳೆ ‌
Image
ರಾತ್ರಿ ನನ್ನ ಹೆಂಡತಿ ಹಾವಾಗಿ ಬದಲಾಗುತ್ತಾಳೆ; ವಿಚಿತ್ರ ದೂರು ನೀಡಿದ ಗಂಡ!
Image
ಪೆಟ್ರೋಲ್ ಬಂಕ್ ಸಿಬ್ಬಂದಿಗೆ ಥಳಿಸಿ ನಗದು ದೋಚಿದ ಖದೀಮರು
Image
ಟಿಸಿಯ ಶಿರಚ್ಛೇದ ಮಾಡುವುದಾಗಿ ಬೆದರಿಕೆ ಹಾಕಿದ ಮಹಿಳೆ

ವೈರಲ್‌ ವಿಡಿಯೋ ಇಲ್ಲಿದೆ ನೋಡಿ

ಈ ಯುವತಿಯೂ ಮೊಬೈಲ್ ಟವರ್ ಏರುತ್ತಿದ್ದಂತೆ ತಕ್ಷಣವೇ ಪೋಷಕರು ಹಾಗೂ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಅಧಿಕಾರಿಗಳು ಬಾಲಕಿಯ ಮನವೊಲಿಸಿ ಆಕೆಯನ್ನು ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಕ್ಟೋಬರ್ 17 ರಂದು ಹಂಚಿಕೊಳ್ಳಲಾದ ಈ ವಿಡಿಯೋ ಅಧಿಕ ವೀಕ್ಷಣೆ ಪಡೆದುಕೊಂಡಿವೆ. ಈ ವಿಡಿಯೋ ನೋಡಿ ಮಿರ್ಜಾಪುರ ಪೊಲೀಸರು ಯುವತಿ ಸುರಕ್ಷಿತವಾಗಿದ್ದಾಳೆ. ಕಚ್ವಾ ಪೊಲೀಸ್ ಠಾಣೆ ಪೊಲೀಸರು ತಕ್ಷಣ ಕ್ರಮ ಕೈಗೊಂಡು ಅವಳನ್ನು ಸುರಕ್ಷಿತವಾಗಿ ಟವರ್ ನಿಂದ ಕೆಳಗೆ ಇಳಿಸಿದ್ದಾರೆ. ಬಾಲಕಿಯನ್ನು ಕುಟುಂಬ ಸದಸ್ಯರಿಗೆ ಒಪ್ಪಿಸಿದ್ದಾರೆ ಎಂದು ಮಿರ್ಜಾಪುರ ಪೊಲೀಸರು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ:ಟ್ರೈನ್‌ನಲ್ಲಿ ಸೀಟಿಗಾಗಿ ಸಹ ಪ್ರಯಾಣಿಕರ ಮೇಲೆ ಪೆಪ್ಪರ್‌ ಸ್ಪ್ರೇ ಸಿಂಪಡಿಸಿದ ಮಹಿಳೆ ‌

ಮತ್ತೊಬ್ಬರು, ಈಗಿನ ಕಾಲದ ಮಕ್ಕಳಿಗೆ ಸ್ವಲ್ಪ ಏನಾದ್ರು ಹೇಳಿದ್ರೆ ಕೋಪನೇ ಬರುತ್ತೆ, ಮುದ್ದು ಮಾಡೋದು ಕಡಿಮೆ ಮಾಡ್ಬೇಕು ಎಂದು ಹೇಳಿದ್ದಾರೆ. ಇನ್ನೊಬ್ಬರು ಈ ಮಕ್ಕಳು ಮಾಡೋ ಅವಾಂತರದಿಂದ ಹೆತ್ತವರ ಹೃದಯವೇ ಬಾಯಿಗೆ ಬಂದಿರುತ್ತೆ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ