ಪೆಟ್ರೋಲ್ ಬಂಕ್ ಸಿಬ್ಬಂದಿಗೆ ಥಳಿಸಿ 1 ಲಕ್ಷ ರೂ ದೋಚಿದ ಖದೀಮರು
ಜಲಗಾಂವ್ ಜಿಲ್ಲೆಯ ಮುಕ್ತೈ ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಪೆಟ್ರೋಲ್ ಬಂಕ್‌ಗೆ ನುಗ್ಗಿದ ದರೋಡೆಕೋರರು ಸಿಬ್ಬಂದಿಗಳನ್ನು ಥಳಿಸಿ 1 ಲಕ್ಷ ರೂ. ನಗದನ್ನು ದೋಚಿದ್ದಾರೆ. ಇದೇ ವೇಳೆ ಸಿಸಿಟಿವಿ ಸೇರಿದಂತೆ ಎಲೆಕ್ಟ್ರಾನಿಕ್ ಉಪಕರಣಗಳನ್ನು ಛಿದ್ರಗೊಳಿಸಿದ್ದಾರೆ. ಈ ಘಟನೆಯು ಗುರುವಾರ ಬೆಳಗ್ಗಿನ ಜಾವ ನಡೆದಿದೆ ಎನ್ನಲಾಗಿದ್ದು, ಕುರಿತಾದ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ಜಲಗಾಂವ್, ಅಕ್ಟೋಬರ್ 10: ಸುಲಭ ರೀತಿಯಲ್ಲಿ ಹಣ ಮಾಡಲು ದರೋಡೆ, ಕಳ್ಳತನ ಮಾಡುವವರನ್ನು ನೋಡಿರುತ್ತೀರಿ ಅಲ್ವಾ. ಹೌದು ಕೆಲವರು ದುಡ್ಡಿನ ಆಸೆಗೆ ಬಿದ್ದು ದರೋಡೆ, ಕಳ್ಳತನ ಮಾಡಿದ ಉದಾಹರಣೆಗಳಿವೆ. ಆದರೆ ಇದೀಗ ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ (Jalgaon district of Maharashtra) ಮುಕ್ತೈನಗರದಲ್ಲಿರುವ ಕೇಂದ್ರ ಸಚಿವೆ ರಕ್ಷಾ ಖಡ್ಸೆ (Union Minister Raksha Khadse) ಅವರ ಒಡೆತನದ ಪೆಟ್ರೋಲ್ ಬಂಕ್‌ನಲ್ಲಿ ನಡೆದ ದರೋಡೆ ಸಂಚಲನ ಮೂಡಿಸಿದೆ. ಹೌದು, ನಗರದ ರಾಷ್ಟ್ರೀಯ ಹೆದ್ದಾರಿ 6ರಲ್ಲಿರುವ ರಕ್ಷಾ ಆಟೋ ಫ್ಯೂಯೆಲ್ಸ್ ಪೆಟ್ರೋಲ್ ಬಂಕ್‌ನಲ್ಲಿ ಗುರುವಾರ ಬೆಳಗಿನ ಜಾವ ದರೋಡೆ ನಡೆದಿದೆ. ಬಂಕ್‌ಗೆ ನುಗ್ಗಿದ ದರೋಡೆಕೋರರು ಸಿಬ್ಬಂದಿಗಳನ್ನು ಥಳಿಸಿ 1 ಲಕ್ಷ ರೂ. ನಗದನ್ನು ದೋಚಿದ್ದು, ಸಿನಿಮೀಯ ರೀತಿಯಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಪೆಟ್ರೋಲ್ ಬಂಕ್‌ಗೆ ನುಗ್ಗಿದ ದರೋಡೆಕೋರರು
ಮಾಹಿತಿಯ ಪ್ರಕಾರ ಗುರುವಾರ ಬೆಳಗಿನ ಜಾವ ಬೈಕ್ ನಲ್ಲಿ ಬಂದ ಐವರು ದರೋಡೆಕೋರರು ಬಂಕ್ ನಲ್ಲಿದ್ದ ಸಿಬ್ಬಂದಿಗಳನ್ನು ಬಂದೂಕುಗಳಿಂದ ಬೆದರಿಸಿ ಥಳಿಸಿದ್ದಾರೆ. ಆ ಬಳಿಕ ಸರಿಸುಮಾರು ಒಂದು ಲಕ್ಷ ರೂಪಾಯಿ ಮೌಲ್ಯದ ನಗದನ್ನು ದೋಚಿದ್ದಾರೆ. ಅಷ್ಟೇ ಅಲ್ಲದೇ, ಬಂಕ್‌ನಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳು, ಕಂಪ್ಯೂಟರ್‌ಗಳು ಹಾಗೂ ಪ್ರಿಂಟರ್‌ಗಳು ಸೇರಿದಂತೆ ಇನ್ನಿತ್ತರ ಎಲೆಕ್ಟ್ರಾನಿಕ್ ಉಪಕರಣಗಳನ್ನು ಧ್ವಂಸಗೊಳಿಸಿದ್ದಾರೆ.
ಇದನ್ನೂ ಓದಿ:Video: ಟಿಕೆಟ್ ಇಲ್ಲದೇ ಎಸಿ ಕೋಚ್‌ನಲ್ಲಿ ಪ್ರಯಾಣ; ಟಿಸಿಯ ಶಿರಚ್ಛೇದ ಮಾಡುವುದಾಗಿ ಬೆದರಿಕೆ ಹಾಕಿದ ಮಹಿಳೆ
ಈ ದರೋಡೆಯ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿಯುತ್ತಿದ್ದಂತೆ ತಕ್ಷಣವೇ ಮುಕ್ತೈನಗರ ಪೊಲೀಸರು ತಕ್ಷಣ ಶಂಕಿತ ಆರೋಪಿಗಳನ್ನು ಸಿನಿಮೀಯ ಶೈಲಿಯಲ್ಲಿ ಬೆನ್ನಟ್ಟಿದ್ದಾರೆ. ಕಾರ್ಯಾಚರಣೆ ನಡೆಸಿದ ಪೊಲೀಸರು ಮೂವರನ್ನು ಬಂಧಿಸಿದ್ದು, ಇಬ್ಬರು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:25 pm, Fri, 10 October 25








