Viral: ಜಿಮ್‌ನಲ್ಲಿ ಶುರುವಾಯ್ತು ಜಡೆ ಜಗಳ, ಈ ಫೈಟ್‌ಗೆ ಕಾರಣವಾಗಿದ್ದು ಇದೇ ವಿಚಾರ
ಬಸ್, ರೈಲು, ಮೆಟ್ರೋದಲ್ಲಿ ಸೀಟಿನ ವಿಚಾರವಾಗಿ ಮಹಿಳೆಯರ ನಡುವೆ ಜಗಳಗಳು ನಡೆಯುವುದನ್ನು ನೀವು ನೋಡಿರುತ್ತೀರಿ. ಇದೀಗ ಇಲ್ಲೊಂದು ಕಡೆ ಜಿಮ್‌ನಲ್ಲಿ ಜಡೆ ಜಗಳ ನಡೆದಿದೆ. ಜಿಮ್ ನಲ್ಲಿ ಯಂತ್ರ ಬಳಸುವ ವಿಚಾರವಾಗಿ ನಡೆದ ಮಹಿಳೆಯರ ನಡುವಿನ ವಾಗ್ವಾದ ಅತಿರೇಕಕ್ಕೆ ತಿರುಗಿ ಕೊನೆಗೆ ಜುಟ್ಟು ಹಿಡಿದುಕೊಂಡು ಎಳೆದಾಡಿ ದೊಡ್ಡ ರಂಪಾಟವನ್ನೇ ಮಾಡಿದ್ದಾರೆ. ಈ ಜಡೆಜಗಳದ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಉತ್ತರ ಪ್ರದೇಶ, ಸೆಪ್ಟೆಂಬರ್ 30: ಕೆಲ ಮಹಿಳೆಯರೇ (Woman) ಹಾಗೆ, ಜಗಳವಾಡಲು ತುದಿಗಾಲಲ್ಲಿ ನಿಂತಿರುತ್ತಾರೆ. ಸಣ್ಣ ಪುಟ್ಟ ವಿಷ್ಯವನ್ನೇ ದೊಡ್ಡದು ಮಾಡಿ ಎಲ್ಲೆಂದರಲ್ಲಿ ಜಗಳಕ್ಕೆ ನಿಂತು ಬಿಡುತ್ತಾರೆ. ಇಬ್ಬರೂ ಮಹಿಳೆಯರ ನಡುವೆ ಜಗಳ ಶುರುವಾದ್ರೆ ಕೇಳಬೇಕೇ, ಜಗಳವಂತೂ ನಿಲ್ಲೋದೇ ಇಲ್ಲ. ಇದೀಗ ಜಿಮ್‌ನಲ್ಲಿ ಇಬ್ಬರೂ ಮಹಿಳೆಯರು ಕಿತ್ತಾಡಿಕೊಂಡಿದ್ದಾರೆ. ಮೆಷಿನ್ ಬಳಸುವ ವಿಚಾರವಾಗಿ ಶುರುವಾದ ಜಗಳವೂ ( ಕೊನೆಗೆ ಪರಸ್ಪರ ಜುಟ್ಟು ಹಿಡಿದು ಹೊಡೆದಾಡಿಕೊಳ್ಳುವ ಹಂತಕ್ಕೆ ತಲುಪಿದೆ. ಈ ಜಗಳದ ದೃಶ್ಯವೂ ಅಲ್ಲೇ ಇದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಘಟನೆಯೂ ಉತ್ತರ ಪ್ರದೇಶದ ನೋಯ್ಡಾದಲ್ಲಿ (Noida of Uttara Pradesh) ನಡೆದಿದೆ ಎನ್ನಲಾಗಿದೆ. ಈ ಜಡೆಜಗಳದ ವಿಡಿಯೋ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಈ ದೃಶ್ಯ ನೋಡಿ ಬಾಯಿಯ ಮೇಲೆ ಬೆರಳಿಟ್ಟುಕೊಂಡಿದ್ದಾರೆ.
ಜಿಮ್‌ನಲ್ಲಿ ಮಹಿಳೆಯರಿಬ್ಬರ ನಡುವೆ ಶುರುವಾಯ್ತು ಜಗಳ
Ghar Ke Kalesh ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾದ ವಿಡಿಯೋದಲ್ಲಿ ಜಿಮ್‌ನಲ್ಲಿ ಒಬ್ಬ ಮಹಿಳೆಯು ಸ್ಕ್ವಾಟ್‌ಗಳನ್ನು ಮಾಡುತ್ತಿರುವುದನ್ನು ಕಾಣಬಹುದು. ಈ ವೇಳೆಯಲ್ಲಿ ಇನ್ನೊಬ್ಬ ಮಹಿಳೆ ತನ್ನ ಸರದಿಗಾಗಿ ಕಾಯುತ್ತಿದ್ದಾನೆ. ಸ್ಕ್ವಾಟ್ ಮಾಡುತ್ತಿದ್ದ ಮಹಿಳೆ ತನ್ನ ವರ್ಕೌಟ್ ಮುಗಿಸಿ ಹೊರಡಲು ಸಿದ್ಧವಾಗಿದ್ದಾಳೆ. ಈ ವೇಳೆ ಎಲ್ಲಿಂದಲೋ ಬಂದ ಮಹಿಳೆಯೊಬ್ಬಳು ವರ್ಕೌಟ್ ಮಾಡಲು ಮುಂದಾಗಿರುವುದನ್ನು ಕಾಣಬಹುದು. ಆದರೆ ಕಾಯುತ್ತಿದ್ದ ಮಹಿಳೆಯ ಪಿತ್ತ ನೆತ್ತಿಗೆ ಏರಿದೆ. ಈ ಮಹಿಳೆಯೂ ವರ್ಕ್ ಔಟ್ ಮಾಡಲು ಬಂದ ಮಹಿಳೆಯ ಜೊತೆಗೆ ಜಗಳಕ್ಕೆ ಇಳಿದಿದ್ದಾಳೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
Kalesh b/w Females over using Smith machine for doing squats, Female only gym in Noida UP. pic.twitter.com/R3WDFZBqUc
— Ghar Ke Kalesh (@gharkekalesh) September 29, 2025
ಈ ವೇಳೆ ಇಬ್ಬರೂ ಮಹಿಳೆಯರು ಸ್ಕ್ವಾಟ್ ಮಾಡಲು ಯಂತ್ರವನ್ನು ಹಿಡಿದುಕೊಂಡಿದ್ದು ಇಬ್ಬರೂ ಒಬ್ಬರನ್ನು ಒಬ್ಬರು ತಳ್ಳಾಡುವುದನ್ನು ಕಾಣಬಹುದು. ಹೀಗೆ ಶುರುವಾದ ಜಗಳವೂ ಪರಸ್ಪರ ಇಬ್ಬರೂ ಜುಟ್ಟು ಹಿಡಿದುಕೊಂಡು ಎಳೆದಾಡಿಕೊಳ್ಳಲು ಶುರು ಮಾಡಿದ್ದಾರೆ. ಈ ಜಡೆ ಜಗಳವೂ ಮಿತಿಮೀರುತ್ತಿದ್ದಂತೆ ಜಿಮ್‌ನಲ್ಲಿದ್ದ ಮಹಿಳೆಯರು ಮಧ್ಯ ಪ್ರವೇಶಿಸಿ ಜಗಳ ನಿಲ್ಲಿಸಿರುವುದನ್ನು ಕಾಣಬಹುದು.
ಇದನ್ನೂ ಓದಿ: Video: ತರಕಾರಿ ಕೊಳ್ಳಲು ಬಂದ ಯುವತಿಯರ ಕದ್ದು ವಿಡಿಯೋ ಮಾಡಿದ ವ್ಯಕ್ತಿ
ಸೆಪ್ಟೆಂಬರ್ 29 ರಂದು ಶೇರ್ ಮಾಡಲಾದ ಈ ವಿಡಿಯೋ ಮೂರು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಬಳಕೆದಾರ ಮಹಿಳೆಯರು ಇದ್ದಲ್ಲಿ ಜಗಳ ಇಲ್ಲದೇ ಹೋದ್ರೆ ಹೇಗೆ ಅಲ್ಲವೇ ಎಂದಿದ್ದಾರೆ. ಇನ್ನೊಬ್ಬರು, ಇದಕ್ಕೆ ಹೇಳೋದು ಮಹಿಳೆಯರು ಯಾವತ್ತಿದ್ರೂ ಮಹಿಳೆಯರೇ ಎಂದು ಕಾಮೆಂಟ್ ಮಾಡಿದ್ದಾರೆ. ಪುರುಷರಿಗೆ ಇರುವಷ್ಟು ತಾಳ್ಮೆ ಮಹಿಳೆಯರಿಗೆ ಇರಲ್ಲ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








