Video: ನೋಡ ನೋಡುತ್ತಿದ್ದಂತೆ ಪೂಜಾ ತಟ್ಟೆಯಲ್ಲಿದ್ದ 500 ರೂ ಎಗರಿಸಿದ ಯುವಕ
ಸುಲಭ ರೀತಿಯಲ್ಲಿ ಹಣ ಮಾಡಲು ದರೋಡೆ, ಕಳ್ಳತನ ಮಾಡುವವರನ್ನು ನೀವು ನೋಡಿರುತ್ತೀರಿ ಅಲ್ವಾ. ಇದಕ್ಕೆ ಸಾಕ್ಷಿ ಎನ್ನುವಂತಹ ಸಾಕಷ್ಟು ಘಟನೆಗಳು ನಮ್ಮ ಸುತ್ತಮುತ್ತಲಿನಲ್ಲಿ ನಡೆಯುತ್ತಿರುತ್ತವೆ. ಯುವಕನೊಬ್ಬನು ನೋಡ ನೋಡುತ್ತಿದ್ದಂತೆ ಪೂಜಾ ತಟ್ಟೆಯಲ್ಲಿದ್ದ 500 ರೂಪಾಯಿಯನ್ನು ಎಗರಿಸಿದ್ದಾನೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಕಳ್ಳರು ಎಷ್ಟೇ ಜಾಣತಣದಿಂದ ಕಳ್ಳತನ ಮಾಡಿದರೂ, ಅದೃಷ್ಣ ಕೆಟ್ಟು ಒಂದಲ್ಲಾ ಒಂದು ದಿನ ಸಿಕ್ಕಿ ಹಾಕಿಕೊಳ್ಳುತ್ತಾರೆ. ಹೀಗೆ ಕಳ್ಳತನ (Theft) ಮಾಡಲು ಹೋಗಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದು, ವದೆ ತಿಂದ ಘಟನೆಗಳು ನಮ್ಮ ಸುತ್ತಮುತ್ತಲಿನಲ್ಲಿ ನಡೆದಿವೆ. ಆದರೆ ಕೆಲವರು ನೋಡ ನೋಡುತ್ತಿದ್ದಂತೆ ಕಳ್ಳತನ ಮಾಡಿ ಏನು ಆಗಿಲ್ಲ ಎನ್ನುವಂತೆ ವರ್ತಿಸುತ್ತಾರೆ. ಆದರೆ ಇಲ್ಲೊಬ್ಬ ಯುವಕನು (Young man) ಅಂಗಡಿಯ ಕೌಂಟರ್‌ನಲ್ಲಿಟ್ಟಿದ್ದ ಪೂಜಾ ತಟ್ಟೆಯಲ್ಲಿಟ್ಟಿದ್ದ 500 ರೂ ನೋಟನ್ನು ಎಗರಿಸಿದ್ದಾನೆ. ಯಾರೋ ತಾನು ಈ ಕೃತ್ಯ ಮಾಡಿರುವುದನ್ನು ಗಮನಿಸಿಲ್ಲ ಎಂದುಕೊಂಡಿದ್ದಾನೆ. ಆದರೆ ಸಿಸಿಟಿವಿಯಲ್ಲಿ ಈ ದೃಶ್ಯವು ಸೆರೆಯಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಯುವಕನೊಬ್ಬನು ಕಳ್ಳತನ ಮಾಡುವ ವಿಡಿಯೋ ವೈರಲ್ ಆಗುತ್ತಿದ್ದು, ಬಳಕೆದಾರರು ಗ್ರಹಚಾರ ಕೆಟ್ಟರೆ ಹೀಗೆ ಆಗೋದು ಎಂದಿದ್ದಾರೆ.
ಘರ್ ಕೆ ಕಲೇಶ್ (GharKeKalesh) ಹೆಸರಿನ ಖಾತೆಯಲ್ಲಿ ಶೇರ್ ಮಾಡಲಾದ ವಿಡಿಯೋದಲ್ಲಿ ಅಂಗಡಿಯ ಕೌಂಟರ್‌ನ ಒಂದು ಬದಿಯಲ್ಲಿ ಪೂಜಾ ತಟ್ಟೆಯಿದೆ. ಅದರಲ್ಲಿ ಐನ್ನೂರು ರೂಪಾಯಿ ಇರುವುದನ್ನು ಗಮನಿಸಬಹುದು. ಕೌಂಟರ್‌ನಲ್ಲಿ ಕುಳಿತಿದ್ದ ಯುವತಿಯೊಬ್ಬಳು ಅಂಗಡಿಯೊಳಗೆ ಬಂದ ಜನರೊಂದಿಗೆ ಮಾತನಾಡಲು ಪ್ರಾರಂಭಿಸುತ್ತಾಳೆ. ಇತ್ತ ವಾಚ್ ಮ್ಯಾನ್ ಕೂಡ ಅಲ್ಲೇ ನಿಂತಿರುತ್ತಾಳೆ. ಮತ್ತೊರ್ವ ಯುವತಿಯೊಬ್ಬಳು ಫೋನ್‌ನಲ್ಲಿ ಯರೊಂದಿಗೋ ಮಾತನಾಡುವುದರಲ್ಲಿ ಬ್ಯುಸಿಯಾಗಿದ್ದಾಳೆ. ಈ ವೇಳೆ ಕೌಂಟರ್‌ನಲ್ಲಿ ನಿಂತಿದ್ದ ಒಬ್ಬ ಯುವಕನ ಕಣ್ಣು ಪೂಜಾ ತಟ್ಟೆಯಿಲ್ಲಿಂದ 500 ರೂಪಾಯಿ ನೋಟಿನತ್ತ ಹೋಗುತ್ತದೆ. ಯುವಕನು ಯಾರಿಗೂ ತಿಳಿಯದ್ದಂತೆ 500 ರೂ ಎಗರಿಸುತ್ತಾನೆ. ಈ ಕೃತ್ಯ ಮಾಡಿದ ಬಳಿಕ ಈ ಯುವಕನು ಅಂಗಡಿಯಿಂದ ಹೊರಗೆ ಹೋಗುವುದನ್ನು ನೋಡಬಹುದು. ಕಳ್ಳತನ ಕಣ್ಣ ಮುಂದೆಯೇ ನಡೆದರೂ ಕೂಡ ಯಾರು ಇದನ್ನು ಗಮನಿಸುವುದಿಲ್ಲ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
Look at that T-shirt guy near counter 💀 pic.twitter.com/0yv32STho0
— Ghar Ke Kalesh (@gharkekalesh) September 20, 2025
ಇದನ್ನೂ ಓದಿ:Video: ಎಂಜಲು ಉಗುಳಿ ರೊಟ್ಟಿ ಬೇಯಿಸಿದ ಯುವಕ, ವೈರಲ್ ಆಯ್ತು ದೃಶ್ಯ
ಸೆಪ್ಟೆಂಬರ್ 20 ರಂದು ಶೇರ್ ಮಾಡಲಾದ ಈ ವಿಡಿಯೋ ಇದುವರೆಗೂ 1.7 ಮಿಲಿಯನ್‌ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಈ ಪ್ರತಿಭೆಯನ್ನು ಕೆಲವು ಒಳ್ಳೆಯ ಉದ್ದೇಶಗಳಿಗಾಗಿ ಬಳಸಿಕೊಂಡಿದ್ದರೆ ಭಾರತ ಇಂದು ಉತ್ತಮ ಸ್ಥಾನದಲ್ಲಿರುತ್ತಿತ್ತು ಎಂದಿದ್ದಾರೆ. ಇನ್ನೊಬ್ಬರು, ಇದು ಕೇವಲ ಅಪರಾಧವಲ್ಲ, ನಂಬಿಕೆ ಹಾಗೂ ವಿಶ್ವಾಸಕ್ಕೆ ಮಾಡಿದ ದ್ರೋಹ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:27 am, Thu, 25 September 25








