Video: ಓಡಿ ಹೋಗಿ ಸಿಕ್ಕಿ ಹಾಕಿಕೊಂಡ ಜೋಡಿ, ಪೊಲೀಸ್ ಜೀಪ್ ಮೇಲೇರಿ ರಂಪಾಟ
ಈಗಿನ ಕಾಲದಲ್ಲಿ ಯುವಕ ಯುವತಿಯರಿಗೆ ಎಲ್ಲಿ ಹೇಗೆ ವರ್ತಿಸಬೇಕು ಎನ್ನುವ ಕನಿಷ್ಠ ಪ್ರಜ್ಞೆ ಕೂಡ ಇಲ್ಲ. ರಾಜಸ್ಥಾನದ ಕೋಟಾದಲ್ಲಿ ಪ್ರೇಮಿಗಳಿಬ್ಬರೂ ಪೊಲೀಸ್ ಜೀಪ್ ಮೇಲೇರಿ ಅನುಚಿತವಾಗಿ ವರ್ತಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಈ ಕುರಿತಾದ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ರಾಜಸ್ತಾನ, ಸೆಪ್ಟೆಂಬರ್ 22: ನಾವು ವಿದ್ಯಾವಂತರೆನಿಸಿಕೊಳ್ಳುತ್ತಿದ್ದಂತೆ ನಮ್ಮ ವ್ಯಕ್ತಿತ್ವ, ನಡವಳಿಕೆಗಳು ತೀರಾ ಕೆಳಮಟ್ಟಕ್ಕೆ ತಲುಪುತ್ತಿದೆ. ಈಗಿನ ಕಾಲದಲ್ಲಿ ಯುವಕ ಯುವತಿಯರಿಗೆ ಸಾರ್ವಜನಿಕ ಸ್ಥಳಗಳಲ್ಲಿ ಹೇಗೆ ವರ್ತಿಸಬೇಕೋ ಎನ್ನುವುದೇ ತಿಳಿದಿಲ್ಲ. ಇದಕ್ಕೆ ಈ ವಿಡಿಯೋನೇ ಸಾಕ್ಷಿ. ಹೌದು, ಪ್ರೇಮಿಗಳಿಬ್ಬರೂ (Lovers) ಪೊಲೀಸ್ ಜೀಪ್ ಮೇಲೇರಿ ರಂಪಾಟ ಮಾಡಿದ್ದಾರೆ. 22 ವರ್ಷದ ಆ ವ್ಯಕ್ತಿ ಕುಡಿದ ಮತ್ತಿನಲ್ಲಿದ್ದ ಎಂದು ವರದಿಯಾಗಿದೆ. ರಾಜಸ್ಥಾನದ ಕೋಟಾದಲ್ಲಿ (Kota of Rajasthan) ಈ ಘಟನೆ ನಡೆದಿದ್ದು, ಪ್ರೇಮಿಗಳಿಬ್ಬರ ಹೈ ಡ್ರಾಮಾವು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಸೆಪ್ಟೆಂಬರ್ 19 ರಂದು ರಾಂಪುರ ಪ್ರದೇಶದಲ್ಲಿ ಓಡಿಹೋಗಲು ಯತ್ನಿಸುತ್ತಿದ್ದ ಜೋಡಿಯನ್ನು ಬಂಧಿಸಲು ಪೊಲೀಸರು ಪ್ರಯತ್ನಿಸಿದಾಗ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ, ನಾಪತ್ತೆ ಪ್ರಕರಣ ದಾಖಲಾದ ಬಳಿಕ ಈ ನಾಟಕೀಯ ಘಟನೆಯೂ ನಡೆಯಿತು. 17 ವರ್ಷದ ಅಪ್ರಾಪ್ತ ಬಾಲಕಿ ತನ್ನ ಮನೆಯಿಂದ ನಾಪತ್ತೆಯಾಗಿದ್ದಳು, ಇದರಿಂದಾಗಿ ಆಕೆಯ ಕುಟುಂಬವು ಕೋಟಾದ ಹೊರವಲಯದಲ್ಲಿರುವ ನಾಂಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತ್ತು. ಹತ್ತಿರದ ರಾಂಪುರ ಪೊಲೀಸ್ ಠಾಣೆಯ ಅಧಿಕಾರಿಗಳು, ಸುಳಿವು ಸಿಕ್ಕೊಡನೆ ರಾಂಪುರ ನೆರೆಹೊರೆಯಲ್ಲಿ ಇಬ್ಬರ ಹುಡುಕಾಟ ನಡೆಸಿದ್ದು, ಈ ವೇಳೆ 22 ವರ್ಷದ ಯುವಕ ಹಾಗೂ ಅಪ್ರಾಪ್ತ ಬಾಲಕಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
पापा की परी और मां का लाडला कोटा गए हैं पढ़ने के लिए, पढ़ लिख कर डॉ इंजीनियर बनेंगे, IIT और IIM में जाएंगे, नशा करने के बाद सपने में, देखिए बेचारे कितनी मेहनत कर रहे हैं, उधर मां बाप अपना खून पसीना एक कर अपना पेट काट कर इन्हें इस आशा में पैसे भेज रहे हैं कि “बेटा हमारा बड़ा नाम… pic.twitter.com/oaZLQwX5n3
— Nitin Shukla 🇮🇳 (@nshuklain) September 22, 2025
ಪೊಲೀಸರು ಈ ಜೋಡಿಯನ್ನು ಬಂಧಿಸುತ್ತಿದ್ದಂತೆ, ಪೊಲೀಸ್ ಜೀಪಿನಲ್ಲಿ ಕುಳಿತುಕೊಳ್ಳುವ ವಾಹನದ ಮೇಲೆ ಹತ್ತಿ ರಂಪಾಟ ಸೃಷ್ಟಿಸಿದ್ದು, ಹತ್ತು ನಿಮಿಗಳ ಕಾಲ ಈ ನಾಟಕೀಯ ದೃಶ್ಯ ಮುಂದವರೆಯಿತು. ನಂತರದಲ್ಲಿ ಪೊಲೀಸರು ದಂಪತಿಯನ್ನು ಕೆಳಗಿಳಿಸಿ ಯುವಕನನ್ನು ಬಂಧಿಸಿದರು. ಪೊಲೀಸ್ ವಾಹನದ ಮೇಲೆ ಹತ್ತಿ ಅವ್ಯವಸ್ಥೆ ಸೃಷ್ಟಿಸಿದ್ದಕ್ಕಾಗಿ 22 ವರ್ಷದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಹುಡುಗಿ ಅಪ್ರಾಪ್ತ ವಯಸ್ಕಳು ಎಂದು ವರದಿಯಾಗಿದೆ.
@nshuklain ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾದ ವಿಡಿಯೋದಲ್ಲಿ 17 ವರ್ಷದ ಬಾಲಕಿ ಪೊಲೀಸ್ ಜೀಪಿನ ಮೇಲಿದ್ದ ಆ ಯುವಕನನ್ನು ಕೆಳಗಿಳಿಸುವುದಾಗಿ ಪೊಲೀಸರಿಗೆ ಹೇಳುತ್ತಿರುವುದನ್ನು ಕಾಣಬಹುದು. ಇತ್ತ ತನ್ನನ್ನು ಮತ್ತು 22 ವರ್ಷದ ಯುವಕನನ್ನು ಬಂಧಿಸಬೇಡಿ ಎಂದು ಬೇಡಿ ಕೊಳ್ಳುತ್ತಿರುವುದನ್ನು ಕಾಣಬಹುದು.
ಇದನ್ನೂ ಓದಿ:Video: ಬಸ್ ಸ್ಟ್ಯಾಂಡ್‌ನಲ್ಲಿ ಲಿಪ್ ಟು ಲಿಪ್ ಕಿಸ್ ಕೊಟ್ಟ ಪ್ರೇಮಿಗಳು
ಈ ವಿಡಿಯೋ ಮೂವತ್ತೇಳು ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದು ಕೊಂಡಿದ್ದು, ಒಬ್ಬ ಬಳಕೆದಾರ ನಮ್ಮ ದೇಶದ ಪರಿಸ್ಥಿತಿ ಇದು. ಇಂದಿನ ಯುವಕ ಯುವತಿಯರಿಗೆ ಸಂಸ್ಕಾರ ಅನ್ನೋದೇ ಇಲ್ಲ ಎಂದು ಹೇಳಿದ್ದಾರೆ. ಮತ್ತೊಬ್ಬರು, ಇಂತಹ ಹುಚ್ಚಾಟಗಳಿಗೆ ಕೊನೆಯೇ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನೊಬ್ಬ ಬಳಕೆ ದಾರ ಈ ರೀತಿ ದುರ್ವತನೆ ತೋರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:24 pm, Mon, 22 September 25








