Viral: ಬೆಂಗಳೂರಿನ ಈ ಭಾಗದಲ್ಲೇ ಟ್ರಾಫಿಕ್ ಹೆಚ್ಚು, ವೈರಲ್ ಆಯ್ತು ಪೋಸ್ಟ್
ಬೆಂಗಳೂರು ಎಂದರೆ ಮೊದಲು ನೆನಪಾಗುವುದೇ ಟ್ರಾಫಿಕ್, ಆದರೆ ಇದೀಗ ಪೂರ್ವ ಹಾಗೂ ಪಶ್ಚಿಮ ಬೆಂಗಳೂರಿನ ಸಂಚಾರ ದಟ್ಟಣೆಯಲ್ಲಿನ ವ್ಯತ್ಯಾಸವು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ. ಬೆಂಗಳೂರಿನ ಈ ಎರಡು ಭಾಗಗಳಲ್ಲಿ ಸಂಚಾರ ದಟ್ಟಣೆ ಹೇಗಿದೆ ಎನ್ನುವ ಸ್ಕ್ರೀನ್ ಶಾಟ್ ಒಳಗೊಂಡ ಪೋಸ್ಟ್ ಸದ್ಯ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಬೆಂಗಳೂರು, ಸೆಪ್ಟೆಂಬರ್ 24: ಟ್ರಾಫಿಕ್ ಟ್ರಾಫಿಕ್ ಟ್ರಾಫಿಕ್ ಹೀಗೆನ್ನುತ್ತಿದ್ದಂತೆ ಕಣ್ಣ ಮುಂದೆ ಬರುವುದೇ ಬೆಂಗಳೂರು (Bengaluru) . ಮಾಯಾನಗರಿ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಹೌದು, ಬೆಳಗ್ಗೆ ಕೆಲಸ ಹೋಗುವ ಮತ್ತು ಸಂಜೆ ಕೆಲಸದಿಂದ ವಾಪಸ್ ಆಗುವಂತಹ ಪೀಕ್ ಟೈಮ್‌ಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಿರುತ್ತದೆ. ಹೀಗಾಗಿ ವಾಹನ ಸವಾರರಂತೂ ಈ ಟ್ರಾಫಿಕ್‌ನಲ್ಲಿ ಸಿಲುಕಿ ಸುಸ್ತಾಗಿ ಹೋಗ್ತಾರೆ. ಇದೀಗ ವೈರಲ್ ಆಗಿರುವ ಪೋಸ್ಟ್ ಬೆಂಗಳೂರಿನ ಸುಧಾರಿತ ಸಾರ್ವಜನಿಕ ಸಾರಿಗೆ ಅಗತ್ಯತೆಯನ್ನು ಎತ್ತಿ ತೋರಿಸುತ್ತಿದೆ. ಪೂರ್ವ ಹಾಗೂ ಪಶ್ಚಿಮ ಬೆಂಗಳೂರಿನ ಸಂಚಾರ ದಟ್ಟಣೆಯಲ್ಲಿನ ವ್ಯತ್ಯಾಸವು ಹೊಸ ಚರ್ಚೆಗೆ ನಾಂದಿ ಹಾಡಿದೆ. ಎರಡು ಭಾಗವು ಬೆಂಗಳೂರಿಗೆ ಸೇರಿದ್ರು ಟ್ರಾಫಿಕ್ ಜಾಮ್ ಹೇಗಿರುತ್ತದೆ ಎನ್ನುವುದನ್ನು ಗೂಗಲ್ ಮ್ಯಾಪ್‌ನ ಸ್ಕ್ರೀನ್ ಶಾಟ್ (Screen shot of Google map) ಎತ್ತಿ ತೋರಿಸುತ್ತಿದೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಪಶ್ಚಿಮ ಬೆಂಗಳೂರಿನಲ್ಲಿ ನೆಲೆಸಿರುವವರು ನಿಜಕ್ಕೂ ಸೇಫ್ ಎನ್ನುತ್ತಿದ್ದಾರೆ.
ಪ್ಲಸ್ ಆಫ್ ಬೆಂಗಳೂರು (PluseOfBengaluru) ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡದಲಾದ ಪೋಸ್ಟ್ ನಲ್ಲಿ ಗೂಗಲ್ ಮ್ಯಾಪ್ ಸ್ಕ್ರೀನ್ ಶಾಟ್‌ನಲ್ಲಿ ಪೂರ್ವ ಹಾಗೂ ಪಶ್ಚಿಮ ಬೆಂಗಳೂರಿನ ಸಂಚಾರ ದಟ್ಟಣೆ ಹೇಗಿದೆ ಎಂದು ನೋಡಬಹುದು. ಪೂರ್ವ ಬೆಂಗಳೂರು ಸಂಚಾರ ದಟ್ಟಣೆಯಿಂದ ಗಾಢ ಕೆಂಪು ಬಣ್ಣದಲ್ಲಿ ಗುರುತಿಸಲ್ಪಟ್ಟಿದ್ದರೆ, ಪಶ್ಚಿಮ ಬೆಂಗಳೂರು ಸಂಪೂರ್ಣವಾಗಿ ಹಸಿರು ಬಣ್ಣದಲ್ಲಿ ಕಾಣಿಸಿಕೊಂಡಿದ್ದು, ಮುಕ್ತ ಸಂಚಾರವನ್ನು ಹೊಂದಿದೆ. ಪಶ್ಚಿಮ ಬೆಂಗಳೂರಿನ ರಾಜಾಜಿನಗರ, ವಿಜಯನಗರ ಮತ್ತು ಕೆಂಗೇರಿಯಂತಹ ಭಾಗಗಳಲ್ಲಿ ಸಂಚಾರ ದಟ್ಟಣೆ ಅಷ್ಟಿಲ್ಲದಿದ್ದರೂ ವೈಟ್‌ಫೀಲ್ಡ್, ಕೆಆರ್ ಪುರಂ ಮತ್ತು ಮಾರತಹಳ್ಳಿಯಂತಹ ಪ್ರದೇಶಗಳಲ್ಲಿ ದೈನಂದಿನ ದಟ್ಟಣೆಯೂ ಹೆಚ್ಚಿದೆ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ
Traffic Right know
BLR East. BLR West. pic.twitter.com/0tWWk6KSmO
— PulseOfBengaluru (@BLR_Stories) September 19, 2025
ಇದನ್ನೂ ಓದಿ:Video: ಇದು ವಾಹನಕ್ಕಲ್ಲ, ಕೋಣ ಓಡಿಸಲು ಸೂಕ್ತವಾದ ರಸ್ತೆ
ಸೆಪ್ಟೆಂಬರ್ 19 ರಂದು ಶೇರ್ ಮಾಡಲಾದ ಈ ಪೋಸ್ಟ್ ನಲವತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದು ಕೊಂಡಿವೆ. ಒಬ್ಬ ಬಳಕೆದಾರ ಪಶ್ಚಿಮದಲ್ಲಿರುವ ಆ ಪ್ರದೇಶಗಳು ಶುದ್ಧವಸತಿ ಪ್ರದೇಶಗಳಾಗಿವೆ. ಅವುಗಳಿಗೆ ಹೋಲಿಸುವುದು ಸರಿಯಲ್ಲ ಎಂದು ನಾನು ಭಾವಿಸುತ್ತೇನೆ. (ಕೈಗಾರಿಕೆಗಳು ಯಶವಂತಪುರದ ಸುತ್ತಮುತ್ತ ಹೆಚ್ಚಿವೆ) ಅಲ್ಲಿ ಯಾವಾಗಲೂ ಜನದಟ್ಟಣೆ ಇರುತ್ತದೆ ಎಂದಿದ್ದಾರೆ. ಇನ್ನೊಬ್ಬರು ಹೆಚ್ಚಿನ ಜನರು ಪಶ್ಚಿಮ ಬೆಂಗಳೂರಿನಿಂದ ಪೂರ್ವ ಬೆಂಗಳೂರಿನತ್ತ ಪ್ರಯಾಣಿಸುತ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಪಶ್ಚಿಮ ಬೆಂಗಳೂರ ವ್ಯರ್ಥ ಬೆಂಗಳೂರು, ದಯವಿಟ್ಟು ಪರಿಗಣಿಸಬೇಡಿ, ಅದನ್ನು ಹೋಲಿಸಬೇಡಿ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:29 am, Wed, 24 September 25








