AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಬತ್ತದ ಜೀವನೋತ್ಸಾಹ; ಇಳಿ ವಯಸ್ಸಿನಲ್ಲೂ ದಾಂಡಿಯಾ ನೃತ್ಯ ಪ್ರದರ್ಶಿಸಿದ ವೃದ್ಧ ದಂಪತಿ

ದಸರಾ, ನವರಾತ್ರಿ ಹಬ್ಬದ ಸಡಗರ ಸಂಭ್ರಮವೂ ಎಲ್ಲೆಡೆ ಮನೆ ಮಾಡಿದೆ. ಈ ಹಬ್ಬದ ಸಂದರ್ಭದಲ್ಲಿ ಕೆಲವು ಕಡೆಗಳಲ್ಲಿ ದಾಂಡಿಯಾ ನೃತ್ಯವೂ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿರುತ್ತದೆ. ಆದರೆ ಇದೀಗ ಸಾಂಪ್ರದಾಯಿಕ ಗಾರ್ಬಾ ಉಡುಪುಗಳನ್ನು ಧರಿಸಿರುವ ವೃದ್ಧ ದಂಪತಿಯೂ ಅತ್ಯದ್ಭುತವಾಗಿ ದಾಂಡಿಯಾ ನೃತ್ಯ ಪ್ರದರ್ಶಿಸಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಈ ವೃದ್ಧ ದಂಪತಿಯ ಎನರ್ಜಿ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ.

Video: ಬತ್ತದ ಜೀವನೋತ್ಸಾಹ; ಇಳಿ ವಯಸ್ಸಿನಲ್ಲೂ ದಾಂಡಿಯಾ ನೃತ್ಯ ಪ್ರದರ್ಶಿಸಿದ ವೃದ್ಧ ದಂಪತಿ
ವೃದ್ಧ ದಂಪತಿಯ ದಾಂಡಿಯಾ ನೃತ್ಯ ಪ್ರದರ್ಶನ Image Credit source: Instagram
ಸಾಯಿನಂದಾ
|

Updated on: Oct 01, 2025 | 1:34 PM

Share

ನವರಾತ್ರಿ (Navaratri) ಹಬ್ಬದ ಸಂಭ್ರಮ ಜೋರಾಗಿದೆ. ಈ ಹಬ್ಬದ ಸಂದರ್ಭ ಕೆಲವೆಡೆ ಗೊಂಬೆ ಕೂರಿಸಿದರೆ, ಕೆಲವೆಡೆ ದೇವಿಯ ಮೂರ್ತಿ ಇಟ್ಟು ಪೂಜೆ ಮಾಡಿ ದೇವಿಯನ್ನು ಆರಾಧಿಸುತ್ತಾರೆ. ಆದರೆ ಗುಜರಾತಿನಲ್ಲಿ ನವರಾತ್ರಿಯ ದಿನಗಳಲ್ಲಿ ದುರ್ಗಾಪೂಜೆಯೊಂದಿಗೆ ರಾತ್ರಿಯ ವೇಳೆ ದಾಂಡಿಯಾ ಹಾಗೂ ಗಾರ್ಬಾ ನೃತ್ಯ ಪ್ರದರ್ಶಿಸುವುದು ಬಹಳ ವಿಶೇಷ. ಆದರೆ ಇಳಿವಯಸ್ಸಿನಲ್ಲೂ ಬತ್ತದ ಜೀವನೋತ್ಸಾಹದೊಂದಿಗೆ ವೃದ್ಧ ದಂಪತಿಯ (elderly couple) ಅದ್ಭುತವಾಗಿ ದಾಂಡಿಯಾ ನೃತ್ಯ ಪ್ರದರ್ಶನ ನೀಡಿದ್ದಾರೆ. ಈ ವಿಶೇಷ ಹಾಗೂ ಆಕರ್ಷಕ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ದಾಂಡಿಯಾ ನೃತ್ಯ ಪ್ರದರ್ಶಿಸಿದ ವೃದ್ಧ ದಂಪತಿ

ಮಿತ್ತಲ್ ಜೈನ್ (mittal.jain) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾದ ಈ ವಿಡಿಯೋಗೆ ನನ್ನ 70ರ ದಶಕವನ್ನು ಹೀಗೆಯೇ ಪ್ರದರ್ಶಿಸುತ್ತಿದ್ದೇನೆ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಈ ವಿಡಿಯೋದಲ್ಲಿ ವೃದ್ಧ ದಂಪತಿ ಸಾಂಪ್ರಾದಾಯಿಕ ಗಾರ್ಬಾ ಉಡುಗೆ ಧರಿಸಿ ದಾಂಡಿಯಾ ನೃತ್ಯ ಪ್ರದರ್ಶಿಸುವುದನ್ನು ಕಾಣಬಹುದು. ಇಳಿ ವಯಸ್ಸಿನಲ್ಲಿ ಈ ಜೋಡಿಯಲ್ಲಿ ಬತ್ತದ ಉತ್ಸಾಹವನ್ನು ಕಾಣಬಹುದು. ಈ ವಿಡಿಯೋ ವೃದ್ಧ ದಂಪತಿ ದಾಂಡಿಯಾ ನೃತ್ಯ ಪ್ರದರ್ಶಿಸಿರುವುದರೊಂದಿಗೆ ಪ್ರಾರಂಭವಾಗುತ್ತದೆ. ನಂತರ ಅಲ್ಲೇ ಇದ್ದವರು ನೃತ್ಯ ಮಾಡಲು ಜೊತೆ ಸೇರುತ್ತಾರೆ.

ಇದನ್ನೂ ಓದಿ
Image
ಗಂಡನ ಮಡಿಲಿನಲ್ಲಿ ತಲೆಯಿಟ್ಟು ವಿಶ್ರಾಂತಿ ಪಡೆದ ವೃದ್ಧೆ
Image
ಹೆರಿಗೆ ನೋವಿನಲ್ಲೂ ಹೆಂಡ್ತಿ ಮೊಗದಲ್ಲಿ ನಗು ಮೂಡಿಸಿದ ಪತಿ
Image
ಗೆಳೆಯನ ಹೆಂಡತಿಯ ಬದಲಾಗಿ ತನ್ನ ಹೆಂಡತಿಯನ್ನು ಕೊಟ್ಟ ಯುವಕ!
Image
ಇಳಿ ವಯಸ್ಸಿನಲ್ಲಿ ತನ್ನ ಪತ್ನಿಗೆ ಡಿವೋರ್ಸ್ ನೀಡಲು ಮುಂದಾಗಿದ್ದ ವೃದ್ಧ

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ:Video: ಮೆಟ್ರೋದಲ್ಲಿ ಕಂಡ ಅಪರೂಪದ ದೃಶ್ಯ; ಗಂಡನ ಮಡಿಲಿನಲ್ಲಿ ವಿಶ್ರಾಂತಿ ಪಡೆದ ವೃದ್ಧೆ

ಈ ವಿಡಿಯೋ 4.2 ಮಿಲಿಯನ್‌ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ನನಗೂ ಇಂತಹ ಎನರ್ಜಿ ಬೇಕು ಎಂದಿದ್ದಾರೆ. ಇನ್ನೊಬ್ಬರು, ಈ ಹೃದಯಕ್ಕೆ ಹತ್ತಿರವಾದ ವಿಡಿಯೋ, ಎನರ್ಜಿ ಲೆವೆಲ್ ಅದ್ಭುತ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ ಇವರು 80 ರ ಆಸುಪಾಸಿನವರಾಗಿದ್ದೀರಬಹುದು, ಆದರೆ ಎನರ್ಜಿ ಮಾತ್ರ ಬೆಂಕಿನೇ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ