Video: ರೂಮ್‌ಗೆ ಡ್ರಾಪ್ ಮಾಡಿದ ಯುವತಿಯ ಸುರಕ್ಷತೆಗಾಗಿ ಮಧ್ಯರಾತ್ರಿಯವರೆಗೆ ಕಾದು ನಿಂತ ರ್‍ಯಾಪಿಡೋ ಡ್ರೈವರ್
ಈಗಿನ ಕಾಲದಲ್ಲಿ ಹೆಣ್ಮಕ್ಕಳು ಭಯದಿಂದ ಓಡಾಡುವ ಸಂದರ್ಭವೇ ಹೆಚ್ಚು. ಈ ಆಟೋ ಅಥವಾ ಕ್ಯಾಬ್‌ನಲ್ಲಿ ಪ್ರಯಾಣಿಸುವಾಗ ಕೆಲ ಡ್ರೈವರ್‌ಗಳು ಅಸಭ್ಯವಾಗಿ ವರ್ತಿಸಿದ ಅನುಭವ ಕೆಲವರಿಗೆ ಆಗಿರುತ್ತದೆ. ಆದರೆ ಇಲ್ಲೊಬ್ಬ ಯುವತಿಯೂ ರ್‍ಯಾಪಿಡೋ ಚಾಲಕನ ಬಗ್ಗೆ ಒಳ್ಳೆಯ ಮಾತುಗಳನ್ನು ಆಡಿದ್ದಾಳೆ. ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಬಗ್ಗೆ ಹೇಳಿಕೊಂಡಿದ್ದು ನಡೆದ ಘಟನೆಯನ್ನು ವಿವರಿಸಿದ್ದಾಳೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಈಗಿನ ಕಾಲದಲ್ಲಿ ಒಳ್ಳೆಯವರು ಸಿಗೋದೇ ಕಡಿಮೆ. ಅದರಲ್ಲೂ ಒಂಟಿ ಮಹಿಳೆ ಅಥವಾ ಯುವತಿ (Young woman) ಕಂಡರೆ ಅವರೊಂದಿಗೆ ಅಸಭ್ಯವಾಗಿ ವರ್ತಿಸುವ ಪುಂಡ ಪೋಕರಿಗಳನ್ನು ನೀವು ನೋಡಿರುತ್ತೀರಿ. ಕೆಲವೊಮ್ಮೆ ಇಂತಹ ಕಹಿ ಅನುಭವ ಕೂಡ ನಿಮಗೆ ಆಗಿರಬಹುದು. ಆದರೆ ರ್‍ಯಾಪಿಡೋ ಚಾಲಕ (Rapido driver) ಡ್ರಾಪ್ ನೀಡಿದ ಬಳಿಕ ಯುವತಿಯ ಪಾಲಿಗೆ ಅಣ್ಣನಾಗಿ ರಕ್ಷಣೆಗೆ ನಿಂತಿದ್ದಾನೆ. ಯುವತಿಯೂ ಸ್ವತಃ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಬಗ್ಗೆ ವಿಡಿಯೋ ಮಾಡಿ ನಡೆದ ಘಟನೆಯ ಬಗ್ಗೆ ವಿವರಿಸಿದ್ದು ಅಷ್ಟಕ್ಕೂ ಆಗಿದ್ದೇನು ಎಂದು ಹೇಳಿಕೊಂಡಿದ್ದಾಳೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ರ್‍ಯಾಪಿಡೋ ಚಾಲಕನ ಒಳ್ಳೆತನಕ್ಕೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.
ರ್‍ಯಾಪಿಡೋ ಚಾಲಕನ ಒಳ್ಳೆತನವನ್ನು ಹಾಡಿ ಹೊಗಳಿದ ಯುವತಿ
laughtercolours ಹೆಸರಿನ ಖಾತೆಯಲ್ಲಿ ಶೇರ್ ಮಾಡಲಾದ ಈ ವಿಡಿಯೋದಲ್ಲಿ ಯುವತಿಯೂ ಹೀಗೆ ಹೇಳಿಕೊಂಡಿದ್ದಾಳೆ. ನಾನು ಗಾರ್ಭ ನೈಟ್ ಕಾರ್ಯಕ್ರಮಕ್ಕೆ ಹೋಗಿದ್ದು, ತಡವಾಗಿ ಬಂದೆ. ಆದರೆ ಹೋಗುವ ವೇಳೆ ನಾನು ಕೀ ಬಿಟ್ಟು ಹೋಗಿದೆ. ಇತ್ತ ನನ್ನ ಸ್ನೇಹಿತೆ ಲಾಕ್ ಮಾಡ್ಕೊಂಡು ಹೋಗಿದ್ದು, ಹೊರಗೆ ನಿಲ್ಲುವಂತಾಯಿತು. ಈ ವಿಚಾರ ತಿಳಿದ ರ್‍ಯಾಪಿಡೋ ಚಾಲಕ ನಿಮ್ಮ ಸ್ನೇಹಿತೆ ಬಂದು ನೀವು ಒಳಗೆ ಹೋಗುವವರೆಗೂ ನಾನು ಇಲ್ಲೇ ನಿಂತಿರುತ್ತೇನೆ ಎಂದು ಹೇಳಿದ್ದ. ಆದರೆ ಮಧ್ಯರಾತ್ರಿಯ ಸಮಯವಾಗಿತ್ತು. ಹೀಗಾಗಿ ನಾನು ಅವರಿಗೆ ಹೋಗಿ ಎಂದು ಹೇಳಿದ್ರೂ ಇಲ್ಲಿ ನನ್ನ ಸುರಕ್ಷತೆಗಾಗಿ ನಿಂತಿರುವುದನ್ನು ನೀವು ನೋಡಬಹುದು. ತುಂಬಾ ಒಳ್ಳೆಯ ವ್ಯಕ್ತಿ ಎಂದಿದ್ದಾಳೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಇದನ್ನೂ ಓದಿ:Video: ಡ್ರಾಪಿಂಗ್ ಪಾಯಿಂಟ್‌ನಲ್ಲೇ ಇಳಿಬೇಕು ಎಂದ ಚಾಲಕನ ಜೊತೆಗೆ ಜಗಳಕ್ಕಿಳಿದ ಮಹಿಳೆ
ಈ ವಿಡಿಯೋ ಎರಡು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಇಂತಹ ಒಳ್ಳೆಯ ವ್ಯಕ್ತಿಗಳು ಇರುವುದರಿಂದ ಕಾಲ ಕಾಲಕ್ಕೆ ಬೆಳೆ ಮಳೆ ಆಗುತ್ತಿರುತ್ತದೆ ಎಂದಿದ್ದಾರೆ. ಇನ್ನೊಬ್ಬರು, ನಿಜಕ್ಕೂ ಇವ್ರು ತುಂಬಾ ಒಳ್ಳೆಯ ವ್ಯಕ್ತಿ ಎಂದು ಹೇಳಿದ್ದಾರೆ. ಮತ್ತೊಬ್ಬರು, ಎಲ್ಲರೂ ಕೆಟ್ಟವರು ಎಂದು ಹೇಳುವುದು ಕಷ್ಟ. ಒಳ್ಳೆಯವರು ಇದ್ದಾರೆ, ಆದರೆ ಇಂತಹ ಘಟನೆ ಗಳು ಆದಾಗ ನಮಗೆ ತಿಳಿಯುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:23 pm, Wed, 1 October 25








