Video: ತರಕಾರಿ ಕೊಳ್ಳಲು ಬಂದ ಯುವತಿಯರ ಕದ್ದು ವಿಡಿಯೋ ಮಾಡಿದ ವ್ಯಕ್ತಿ
ಹಣ್ಣು, ತರಕಾರಿ ಹೀಗೆ ಕೆಲವೊಂದು ಸಾಮಾನುಗಳನ್ನು ಖರೀದಿಸಲು ಮಹಿಳೆಯರು ಮಾರ್ಕೆಟ್ ಹೋಗೋದು ಸಹಜ. ಆದರೆ ನಿಮ್ಗೂ ಕೆಲವು ಕಹಿ ಅನುಭವ ಆಗಿರಬಹುದು. ಈ ವಿಡಿಯೋ ನೋಡಿದ ಮೇಲೆ ನೀವು ಸ್ವಲ್ಪ ಹುಷಾರಾಗಿರೋದು ಒಳ್ಳೆಯದು. ಹೌದು ಇಲ್ಲೊಬ್ಬ ತರಕಾರಿ ಮಾರುವ ವ್ಯಕ್ತಿಯೂ ಯುವತಿಯರ ವಿಡಿಯೋ ಮಾಡಿದ್ದು, ಈ ವಿಡಿಯೋ ಸದ್ಯ ವೈರಲ್ ಆಗಿದೆ. ಈ ವ್ಯಕ್ತಿಯ ದುರ್ವತನೆಗೆ ನೆಟ್ಟಿಗರು ಗರಂ ಆಗಿದ್ದಾರೆ.

ಕೆಲವು ಪುಂಡ ಪೋಕರಿಗಳು ಮಾಡುವ ಅಸಹ್ಯ ಕೃತ್ಯಗಳಿಂದ ಮಹಿಳೆಯರು (Woman) ಸುರಕ್ಷಿತವಾಗಿ ಓಡಾಡಲು ಕೂಡ ಕಷ್ಟವಾಗಿಬಿಟ್ಟಿದೆ. ಹೊರಗೆ ಹೋಗಲು ಭಯ ಪಡುವಂತಹ ಕಾಲ ಬಂದೋದಾಗಿದೆ. ಇದಕ್ಕೆ ಸೂಕ್ತ ನಿದರ್ಶನದಂತಿರುವ ವಿಡಿಯೋ ಇದೀಗ ವೈರಲ್ ಆಗಿದ್ದು, ತರಕಾರಿ ಮಾರುವ ವ್ಯಕ್ತಿಯೊಬ್ಬನು (Vegetables vendor) ರಹಸ್ಯವಾಗಿ ಯುವತಿಯರ ವಿಡಿಯೋ ಮಾಡಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾನೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಬಳಕೆದಾರರು ಈತನ ವಿರುದ್ಧ ಕ್ರಮ ಕೈಗೊಳ್ಳಿ ಎಂದಿದ್ದಾರೆ.
ಯುವತಿಯರ ವಿಡಿಯೋ ಮಾಡಿದ ವ್ಯಕ್ತಿ
ಫ್ರಂಟಲ್ ಫೋರ್ಸ್ (Frontalforce) ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾಗಿದ್ದು, ಈ ವಿಡಿಯೋಗೆ ಮೊಹಮ್ಮದ್ ಜುಬೇರ್ ಎಂಬ ತರಕಾರಿ ಮಾರಾಟಗಾರ ರಹಸ್ಯವಾಗಿ ಯುವತಿಯರ ವಿಡಿಯೋ ಮಾಡುವಾಗ ಸಿಕ್ಕಿ ಬಿದ್ದಿದ್ದಾನೆ. ಈ ವ್ಯಕ್ತಿಯಿಂದ ತರಕಾರಿ ಖರೀದಿಸುವುದನ್ನು ನಿಲ್ಲಿಸಿ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಈ ವಿಡಿಯೋದಲ್ಲಿ ತರಕಾರಿ ಮಾರಾಟಗಾರ ಮಾಡುತ್ತಿರುವ ವ್ಯಕ್ತಿಯೂ ಯುವತಿಯರ ವಿಡಿಯೋ ಚಿತ್ರೀಕರಿಸುವುದನ್ನು ಕಾಣಬಹುದು. ಕೊನೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದು, ಅಲ್ಲೇ ಇದ್ದವರು ಈ ವ್ಯಕ್ತಿಯ ಮೊಬೈಲ್ ಪರಿಶೀಲಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
Vegetable vendor named Mohd Zubair was caught secretly filming girls
Stop buying from them 😡 pic.twitter.com/IFAN8TJHwh
— Frontalforce 🇮🇳 (@FrontalForce) September 26, 2025
ಇದನ್ನೂ ಓದಿ:Video: ಎಂಜಲು ಉಗುಳಿ ರೊಟ್ಟಿ ಬೇಯಿಸಿದ ಯುವಕ, ವೈರಲ್ ಆಯ್ತು ದೃಶ್ಯ
ಸೆಪ್ಟೆಂಬರ್ 26 ರಂದು ಶೇರ್ ಮಾಡಲಾದ ಈ ವಿಡಿಯೋ ಐದು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಬಳಕೆದಾರರು, ಯುವತಿಯರೇ ಸ್ವಲ್ಪ ಜಾಗರೂಕರಾಗಿರಿ. ಇಂತಹ ವ್ಯಕ್ತಿಗಳ ಅಂಗಡಿಯಿಂದ ಏನನ್ನೂ ಖರೀದಿಸಬೇಡಿ ಎಂದು ಹೇಳಿದ್ದಾರೆ. ಮತ್ತೊಬ್ಬರು ನಾವು ಮಹಿಳೆಯರ ಹಾಗೂ ಯುವತಿಯರ ಸುರಕ್ಷತೆಯ ಬಗ್ಗೆ ಮಾತನಾಡುತ್ತೇವೆ. ಆದರೆ ಇಂದಿನ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆ ಅನ್ನೋದೇ ಇಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರ ಈ ವ್ಯಕ್ತಿಯನ್ನು ಪೊಲೀಸರಿಗೆ ಒಪ್ಪಿಸಿ, ಹಾಗೆ ಮಾಡಿದ್ರೆ ಮಾತ್ರ ಇನ್ನು ಮುಂದೆ ದುರ್ವತನೆ ತೋರುವುದಿಲ್ಲ ಎಂದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








