AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ತುಂಡುಡುಗೆ ತೊಟ್ಟಿದ್ದಕ್ಕೆ ನೋ ಎಂಟ್ರಿ; ದೇವಳದ ಅರ್ಚಕ, ಪೊಲೀಸರೊಂದಿಗೆ ವಾಗ್ವಾದಕ್ಕಿಳಿದ ಮಹಿಳೆ

ಸಾಮಾನ್ಯವಾಗಿ ಹೆಚ್ಚಿನ ದೇವಾಲಯಗಳಲ್ಲಿ ಪುರುಷರೇ ಆಗಿರಲಿ ಅಥವಾ ಮಹಿಳೆಯರೇ ಆಗಿರಲಿ ಭಾರತೀಯ ಸಂಸ್ಕೃತಿಗೆ ತಕ್ಕಂತಿರುವ ಉಡುಗೆಗಳನ್ನೇ ತೊಡಬೇಕು ಎಂಬ ನಿಯಮವಿದೆ. ಹೀಗಿರುವಾಗ ಇಲ್ಲೊಬ್ರು ಮಹಿಳೆ ದೇವಾಲಯವೊಂದಕ್ಕೆ ಶಾರ್ಟ್ಸ್‌ ಧರಿಸಿ ಬಂದಿದ್ದು, ಬಟ್ಟೆಯ ಕಾರಣಕ್ಕೆ ತನಗೆ ಪ್ರವೇಶ ನಿರಾಕರಿಸಿದ್ದಕ್ಕೆ ಆ ಮಹಿಳೆ ದೇವಾಲಯದ ಅರ್ಚಕರು ಹಾಗೂ ಅಲ್ಲಿದ್ದ ಮಹಿಳಾ ಪೊಲೀಸ್‌ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ವೈರಲ್‌ ಆಗುತ್ತಿದೆ.

Video: ತುಂಡುಡುಗೆ ತೊಟ್ಟಿದ್ದಕ್ಕೆ ನೋ ಎಂಟ್ರಿ; ದೇವಳದ ಅರ್ಚಕ, ಪೊಲೀಸರೊಂದಿಗೆ ವಾಗ್ವಾದಕ್ಕಿಳಿದ ಮಹಿಳೆ
ವೈರಲ್‌ ವಿಡಿಯೋImage Credit source: Social Media
ಮಾಲಾಶ್ರೀ ಅಂಚನ್​
|

Updated on: Oct 03, 2025 | 3:32 PM

Share

ಪ್ರವಿತ್ರ ಸ್ಥಳಗಳಿಗೆ ಹೋಗುವಾಗ ಅಲ್ಲಿನ ಒಂದಷ್ಟು ನಿಮಯಗಳನ್ನು ನಾವು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ. ಈಗಂತೂ ಬಹುತೇಕ ಎಲ್ಲಾ ದೇವಾಲಯಗಳಲ್ಲೂ (Hindu Temples) ಮಹಿಳೆಯರು ಮತ್ತು ಪುರುಷರು ದೇವಾಲಯಕ್ಕೆ ಬರುವಂತಹ ಸಂದರ್ಭದಲ್ಲಿ ಭಾರತೀಯ ಸಂಸ್ಕೃತಿಗೆ ಅನುಗುಣವಾಗಿರುವಂತಹ ಉಡುಗೆಗಳನ್ನೇ ತೊಡಬೇಕು ಎಂಬ ನಿಯಮವಿದೆ. ಸೀರೆ, ಚೂಡಿದಾರ್‌ ಬಿಟ್ಟು ತುಂಡುಡುಗೆ ತೊಟ್ಟು ಬಂದರೆ ಅಂತಹವರಿಗೆ ಪ್ರವೇಶ ನಿರ್ಬಂಧವಿದೆ. ಅಲ್ಲಿನ ಪಾವಿತ್ರ್ಯತೆ ಮತ್ತು ಗೌರವಕ್ಕೆ ಯಾವುದೇ ಧಕ್ಕೆ ಬರದಂತೆ ಅಲ್ಲಿನ ಮಾರ್ಗಸೂಚಿಗಳನ್ನು ಪಾಲಿಸುವುದು ಎಲ್ಲರ ಕರ್ತವ್ಯ. ಹೀಗಿರುವಾಗ ಇಲ್ಲೊಬ್ರು ಮಹಿಳೆ ಶಾರ್ಟ್ಸ್‌ ತೊಟ್ಟು ದೇವಾಲಯಕ್ಕೆ ಬಂದಿದ್ದಾರೆ. ಬಟ್ಟೆಯ ಕಾರಣಕ್ಕೆ ಅವರಿಗೆ ಪ್ರವೇಶ ನಿರ್ಬಂಧಿಸಿದ್ದು, ಇದರಿಂದ ಸಿಟ್ಟಿಗೆದ್ದ ಆ ಮಹಿಳೆ ಅರ್ಚಕರು ಮತ್ತು ಮಹಿಳಾ ಪೊಲೀಸ್‌ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ.  ಈ ವಿಡಿಯೋ ಇದೀಗ ಭಾರೀ ವೈರಲ್‌ ಆಗುತ್ತಿದೆ.

ಅರ್ಚಕರು ಮತ್ತು ಪೊಲೀಸರೊಂದಿಗೆ ವಾಗ್ವಾದಕ್ಕಿಳಿತ ಮಹಿಳೆ:

ಇತ್ತೀಚಿಗೆ ದೇವಸ್ಥಾನವೊಂದರಲ್ಲಿ ಶಾರ್ಟ್ಸ್‌ ಧರಿಸಿದ್ದಕ್ಕಾಗಿ ಮಹಿಳೆಯೊಬ್ಬರನ್ನು ಪ್ರವೇಶ ದ್ವಾರದಲ್ಲೇ ತಡೆದು ನಿಲ್ಲಿಸಿದಂತಹ ಘಟನೆ ನಡೆದಿದೆ. ಭಾರತೀಯ ಸಂಸ್ಕೃತಿಯಂತೆ ಬಟ್ಟೆ ತೊಟ್ಟು ಬರಬೇಕು ಎಂಬ ನಿಯಮಗಳಿದ್ದರೂ ಆ ಮಹಿಳೆ ಶಾರ್ಟ್ಸ್‌ ಧರಿಸಿ ದೇವಾಲಯಕ್ಕೆ ಬಂದಿದ್ದಾರೆ. ಬಟ್ಟೆಯ ಕಾರಣಕ್ಕೆ ಆ ಮಹಿಳೆಗೆ ಪ್ರವೇಶವನ್ನು ನಿರ್ಬಂಧಿಸಿದ್ದು, ಇದರಿಂದ ಸಿಟ್ಟಿಗೆದ್ದ ಆ ಮಹಿಳೆ ಪೊಲೀಸ್‌ ಮತ್ತು ಅರ್ಚಕರೊಂದಿಗೆ ಜಗಳಕ್ಕಿಳಿದಿದ್ದಾರೆ.

ಇದನ್ನೂ ಓದಿ
Image
ದುರ್ಗಾ ಪೂಜೆ ವೇಳೆ ಧುನುಚಿ ನಾಚ್ ಪ್ರದರ್ಶಿಸಿದ ಸ್ಮೃತಿ ಇರಾನಿ
Image
ಅಮೆರಿಕದಲ್ಲಿ ಕೆಲಸ ಕಳೆದುಕೊಂಡು ಕಣ್ಣೀರು ಸುರಿಸುತ್ತಾ ಭಾರತಕ್ಕೆ ಮರಳಿದ ಯುವ
Image
ಆಟೋ ಹಿಂದೆ ಭಗವದ್ಗೀತೆ ಶ್ಲೋಕಗಳು, ಇದು ಸನಾತನ ಧರ್ಮದ ಹೊಸ ಅಧ್ಯಾಯ
Image
ರೂಮ್‌ಗೆ ಡ್ರಾಪ್ ಮಾಡಿದ ಯುವತಿಯ ಸುರಕ್ಷತೆಗಾಗಿ ಕಾದು ನಿಂತ ಡ್ರೈವರ್

ಈ ಕುರಿತ ವಿಡಿಯೋವನ್ನು Hindutva Vigilant ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಶಾರ್ಟ್ಸ್‌ ಧರಿಸಿದ್ದಕ್ಕಾಗಿ ಪ್ರವೇಶ ನಿರಾಕರಿಸಿದ ನಂತರ ಪೊಲೀಸ್‌ ಮತ್ತು ಅರ್ಚಕರೊಂದಿಗೆ ತೀವ್ರ ವಾಗ್ವಾದ ನಡೆಸಿದ ಮಹಿಳೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ವೈರಲ್‌  ವಿಡಿಯೋ ಇಲ್ಲಿದೆ ನೋಡಿ:

ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಶಾರ್ಟ್ಸ್‌ ಧರಿಸಿ ದೇವಾಲಯಕ್ಕೆ ಬಂದಂತಹ ಮಹಿಳೆಯೊಬ್ಬರು ಅಲ್ಲಿದ್ದ ಪೊಲೀಸ್‌ ಸಿಬ್ಬಂದಿ ಹಾಗೂ ಅರ್ಚಕರೊಂದಿಗೆ ವಾಗ್ವಾದ ನಡೆಸುತ್ತಿರುವ ದೃಶ್ಯವನ್ನು ಕಾಣಬಹುದು. ನಾನು ಯಾರ ಮಾತನ್ನು ಕೇಳುವುದಿಲ್ಲ, ಪೊಲೀಸರು ಜನರೊಂದಿಗೆ ಹೇಗೆ ಮಾತನಾಡಬೇಕೆಂದು ಕಲಿಯಬೇಕು ಎಂದು ಆ ಮಹಿಳೆ ಏರು ಧ್ವನಿಯಲ್ಲಿ ಮಾತನಾಡಿದ್ದಾರೆ.

ಇದನ್ನೂ ಓದಿ: ದೆಹಲಿಯಲ್ಲಿ ದುರ್ಗಾ ಪೂಜೆ ವೇಳೆ ಧುನುಚಿ ನಾಚ್ ಪ್ರದರ್ಶಿಸಿದ ಬಿಜೆಪಿ ನಾಯಕಿ ಸ್ಮೃತಿ ಇರಾನಿ

ಅಕ್ಟೋಬರ್‌ 01 ರಂದು ಹಂಚಿಕೊಳ್ಳಲಾದ ಈ ವಿಡಿಯೋ 6 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಎಲ್ಲಾ ದೇವಾಲಯಗಳಲ್ಲೂ ಇಂತಹ ಕಟ್ಟುನಿಟ್ಟಾದ ನಿಯಮಗಳಿವೆ, ಆದರೆ ದುಃಖಕರ ಸಂಗತಿಯೆಂದರೆ ಕೆಲವು ಜನಕ್ಕೆ ಈ ಬಗ್ಗೆ ಜ್ಞಾನವೇ ಇಲ್ಲʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಮೊದಲು ಆ ಮಹಿಳೆಯನ್ನು ಬಂಧಿಸಿʼ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೊಬ್ಬ ಬಳಕೆದಾರರು ʼದೇವಾಲಯದ ನಿಯಮಗಳನ್ನು ಪಾಲಿಸುವುದು ನಮ್ಮ ಕರ್ತವ್ಯʼ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ