AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಆಟೋ ಹಿಂದೆ ಭಗವದ್ಗೀತೆ ಶ್ಲೋಕಗಳು, ಇದು ಸನಾತನ ಧರ್ಮದ ಹೊಸ ಅಧ್ಯಾಯ

ಸಾಮಾನ್ಯವಾಗಿ ನೀವು ಆಟೋದ ಹಿಂಭಾಗದಲ್ಲಿ ತಂದೆ ತಾಯಿಯ ಆಶೀರ್ವಾದ, ತಮ್ಮ ಪ್ರೀತಿ ಪಾತ್ರರೋ ಹೆಸರು, ಇಲ್ಲವಾದರೆ ಹೃದಯ ಮುಟ್ಟುವ ಸಂದೇಶಗಳನ್ನು ಬರೆದಿರುವುದನ್ನು ನೀವು ನೋಡಿರಬಹುದು. ಆದರೆ ಆಟೋದ ಹಿಂಭಾಗದಲ್ಲಿ ಭಗವದ್ಗೀತೆ ಶ್ಲೋಕದ ಸಾಲುಗಳು ಸೇರಿದಂತೆ ಅದರ ಅರ್ಥವನ್ನು ಬರೆದಿರುವುದು ವಿಶೇಷ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಆಟೋ ಹಿಂದೆ ಭಗವದ್ಗೀತೆ ಶ್ಲೋಕಗಳು, ಇದು ಸನಾತನ ಧರ್ಮದ ಹೊಸ ಅಧ್ಯಾಯ
ಆಟೋ ಹಿಂದೆ ಭಗವದ್ಗೀತೆ ಶ್ಲೋಕಗಳುImage Credit source: Twitter
ಸಾಯಿನಂದಾ
|

Updated on:Oct 01, 2025 | 6:17 PM

Share

ಭಗವದ್ಗೀತೆ (Bhagavad Gita) ಹಿಂದೂಗಳ ಪವಿತ್ರ ಗ್ರಂಥಗಳಲ್ಲಿ ಒಂದು. ಬದುಕಿಗೆ ಬೇಕಾದ ಅತ್ಯಮೂಲ್ಯ ಸಂದೇಶವೂ ಇದರಲ್ಲಿ ಅಡಗಿದೆ. ಇನ್ನು ಶ್ರೀಕೃಷ್ಣನು ಈ ಭಗವದ್ಗೀತೆಯ ಮುಖೇನ ಇಡೀ ಸಮಾಜಕ್ಕೆ ಅದ್ಭುತವಾದ ಸಂದೇಶ ನೀಡಿದ್ದಾನೆ. ಹೀಗಿರುವಾಗ ಎಷ್ಟೋ ಜನರಿಗೆ ಭಗವದ್ಗೀತೆ ಶ್ಲೋಕಗಳ ಒಳಅರ್ಥವೇ ತಿಳಿದಿಲ್ಲ. ಆದರೆ ಇಲ್ಲೊಬ್ಬ ಆಟೋ ಚಾಲಕನು ತನ್ನ ಆಟೋದ (Auto) ಹಿಂಬದಿಯಲ್ಲಿ ಭಗವದ್ಗೀತೆಯ ಶ್ಲೋಕ ಸೇರಿದಂತೆ ಅದರ ಅರ್ಥವನ್ನು ಬರೆದು, ಸನಾತನ ಧರ್ಮ ಪ್ರಚಾರಕನಾಗಿ ಎಲ್ಲರ ಗಮನ ಸೆಳೆದಿದ್ದಾನೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಈತನ ಒಳ್ಳೆಯ ಕೆಲಸವನ್ನು ಮೆಚ್ಚಿಕೊಂಡಿದ್ದಾರೆ.

ಆಟೋ ಹಿಂದೆ ಭಗವದ್ಗೀತೆಯ ಶ್ಲೋಕಗಳು

ಶೀತಲ್ ಚೋಪ್ರಾ (Sheetal Chopra) ಹೆಸರಿನ ಖಾತೆಯಲ್ಲಿ ಶೇರ್ ಮಾಡಲಾದ ವಿಡಿಯೋಗೆ ಸನಾತನ ಧರ್ಮವನ್ನು ಉತ್ತೇಜಿಸುವ ಆಟೋದ ಹಿಂಭಾಗದಲ್ಲಿರುವ ಭಗವದ್ಗೀತೆ ಶ್ಲೋಕ ಮತ್ತು ಅದರ ಅರ್ಥ. ಹೆಚ್ಚು ಹೆಚ್ಚು ಜನರು ಇದನ್ನು ಅನುಸರಿಸಬೇಕೆಂದು ಹಾರೈಸುತ್ತೇನೆ, ಅಂತಹ ಜನರು ನಿಜವಾದ ಧರ್ಮ ಯೋಧರು ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಈ ವಿಡಿಯೋದಲ್ಲಿ ಮಹಿಳೆಯೊಬ್ಬರು ಆಟೋದ ಹಿಂಭಾಗದಲ್ಲಿ ಬರೆಯಲಾದ ಭಗವದ್ಗೀತೆ ಶ್ಲೋಕಗಳನ್ನು ತೋರಿಸುತ್ತಿದ್ದಾರೆ. ಸನಾತನ ಧರ್ಮ ಪ್ರಚಾರಕನಾಗಿ ಕೆಲಸ ಮಾಡುತ್ತಿರುವ ಆಟೋ ಚಾಲಕನ ಈ ಕೆಲಸವನ್ನು ಈ ಮಹಿಳೆ ಮೆಚ್ಚಿಕೊಂಡಿರುವುದನ್ನು ಕಾಣಬಹುದು.

ಇದನ್ನೂ ಓದಿ
Image
ಫ್ರೆಂಚ್ ಭಾಷೆ ಮಾತನಾಡಿ ವಿದೇಶಿಗನಿಗೆ ಶಾಕ್ ನೀಡಿದ ಭಾರತೀಯ ಆಟೋ ಡ್ರೈವರ್
Image
ಬೆಂಗಳೂರು ಆಟೋರಿಕ್ಷಾದ ಹಿಂದೆ ಬರೆದ ಬರಹ ವೈರಲ್
Image
ಗೇಮಿಂಗ್ ಚೇರ್ ಅಳವಡಿಸಿಕೊಂಡ ಬೆಂಗಳೂರಿನ ಆಟೋ ಡ್ರೈವರ್
Image
ಎದೆಯ ಮೇಲೆ ಮಲಗಿರುವ ಪುಟ್ಟ ಪ್ರಪಂಚ, ಜೀವನ ನಿರ್ವಹಣೆಗಾಗಿ ಈ ಆಟೋ

ವೈರಲ್‌ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ:Viral: ‘ಗೋ ಬ್ಯಾಕ್ ಹಿಂದಿ ವಾಲಾ ಆಟೋಸ್’; ಬೆಂಗಳೂರು ಆಟೋರಿಕ್ಷಾದ ಹಿಂದೆ ಬರೆದ ಬರಹ ವೈರಲ್

ಅಕ್ಟೋಬರ್ 1 ರಂದು ಶೇರ್ ಮಾಡಲಾದ ಈ ವಿಡಿಯೋ ಹನ್ನೆರಡು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಹರೇ ಕೃಷ್ಣ ಎಂದಿದ್ದಾರೆ. ಮತ್ತೊಬ್ಬರು ಅದ್ಭುತ, ಇಂತಹ ಕೆಲಸಗಳು ಹೆಚ್ಚೆಚ್ಚು ಆಗಲಿ ಎಂದು ಹೇಳಿದ್ದಾರೆ.. ಸುಂದರ ಹರೇ ಕೃಷ್ಣ ಜೈ ಸನಾತನ ಎಂದು ಇನ್ನೊಬ್ಬ ಬಳಕೆದಾರ ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:16 pm, Wed, 1 October 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ