Video: ಫ್ರೆಂಚ್‌ನಲ್ಲಿ ಮಾತಾಡಿ ವಿದೇಶಿಗನಿಗೆ ಶಾಕ್ ನೀಡಿದ ಭಾರತೀಯ ಆಟೋ ಡ್ರೈವರ್
ವಿದೇಶಿಗರು ಭಾರತಕ್ಕೆ ಬಂದು ಇಲ್ಲಿನ ಸುಂದರ ಕ್ಷಣಗಳನ್ನು ಸೆರೆ ಹಿಡಿಯುತ್ತಾರೆ. ಈ ವೇಳೆ ಕೆಲವು ಅಚ್ಚರಿಕಾರಿ ವಿಚಾರಗಳನ್ನು ವಿಡಿಯೋದ ಮೂಲಕ ಎಲ್ಲರಿಗೂ ತೋರಿಸುವ ಪ್ರಯತ್ನ ಮಾಡ್ತಾರೆ. ವಿದೇಶಿಗ ಕಂಟೆಂಟ್ ಕ್ರಿಯೇಟರ್‌ಗೂ ಇದೇ ರೀತಿ ಆಗಿದೆ. ಹೌದು, ಭಾರತೀಯ ಆಟೋ ರಿಕ್ಷಾ ಸಲೀಸಾಗಿ ಫ್ರೆಂಚ್ ಭಾಷೆ ಮಾತನಾಡುವುದನ್ನು ಕಂಡು ಶಾಕ್ ಆಗಿದ್ದಾರೆ. ಈ ಕುರಿತಾದ ವಿಡಿಯೋ ಸದ್ಯ ಎಲ್ಲೆಡೆ ಹರಿದಾಡುತ್ತಿದೆ.

ಭಾರತಕ್ಕೆ ಭೇಟಿ ನೀಡುವ ವಿದೇಶಿಗರು (foreigner) ಇಲ್ಲಿನ ಹೊಸ ಹೊಸ ವಿಚಾರಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಾರೆ. ಇಲ್ಲಿನ ಆಚಾರ ವಿಚಾರ, ಸಂಸ್ಕೃತಿಯನ್ನು ಅಳವಡಿಸಿಕೊಳ್ಳುತ್ತಾರೆ. ಕೆಲವರು ಇಲ್ಲಿನ ಭಾಷೆ ಕಲಿಯಲು ಮನಸ್ಸು ಮಾಡುತ್ತಾರೆ. ಭಾರತಕ್ಕೆ ಬಂದ ವಿದೇಶಿಗರ ಬಳಿ ನಮ್ಮವರು ತಕ್ಕ ಮಟ್ಟಿಗೆ ಇಂಗ್ಲಿಷ್ ಮಾತನಾಡಿ ವ್ಯವಹರಿಸುವುದನ್ನು ನೀವು ನೋಡಿಯೇ ಇರುತ್ತೀರಿ. ಕೆಲವೊಮ್ಮೆ ಇಲ್ಲಿನ ಆಟೋ ಚಾಲಕರು (auto driver) ಬಟ್ಲರ್ ಇಂಗ್ಲಿಷ್ ಮಾತನಾಡಿ, ಅವರು ಹೇಳಿರುವ ಸ್ಥಳಗಳಿಗೆ ತಲುಪಿಸುತ್ತಾರೆ. ಆದ್ರೆ ಭಾರತಕ್ಕೆ ಬಂದ ಅಮೆರಿಕದ ಪ್ರಜೆಯೊಂದಿಗೆ ಆಟೋ ಡ್ರೈವರ್ ಫ್ರೆಂಚ್ ಭಾಷೆ ಮಾತನಾಡಿದ್ದಾರೆ. ಇವರು ಸಲೀಸಾಗಿ ಫ್ರೆಂಚ್ ಭಾಷೆ ಮಾತನಾಡುವುದನ್ನು ನೋಡಿ ಶಾಕ್ ಆಗಿದ್ದು, ನಗುತ್ತಲೇ ವಿದೇಶಿಗ ರಿಯಾಕ್ಷನ್ ಕೊಟ್ಟಿದ್ದಾರೆ. ಈ ವಿಡಿಯೋ ಸದ್ಯ ವೈರಲ್ ಆಗಿದೆ.
jaystreazy ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾದ ವಿಡಿಯೋದಲ್ಲಿ ಅಮೆರಿಕದ ಮೂಲದ ಕಂಟೆಂಟ್ ಕ್ರಿಯೇಟರ್ ಭಾರತಕ್ಕೆ ಬಂದಿದ್ದು, ಇವರನ್ನು ಇಲ್ಲಿನ ಆಟೋ ಡ್ರೈವರ್ ಮಾತನಾಡಿಸುವ ಪ್ರಯತ್ನ ಮಾಡಿದ್ದಾರೆ. ಈ ವಿಡಿಯೋಗೆ ಭಾರತದಲ್ಲಿ ಫ್ರೆಂಚ್ ಭಾಷೆ ಮಾತನಾಡುವ ಆಟೋ ಡ್ರೈವರ್ ಎಂದು ಶೀರ್ಷಿಕೆ ಯಲ್ಲಿ ಬರೆಯಲಾಗಿದ್ದು, ಭಾರತೀಯ ಆಟೋ ಡ್ರೈವರ್ ಒಬ್ಬರು ಎಷ್ಟು ಭಾಷೆ ಮಾತಾಡ್ತೀರಾ ಎಂದು ಇಂಗ್ಲೀಷ್ ಭಾಷೆಯಲ್ಲಿ ಆಟೋ ಡ್ರೈವರ್ ವಿದೇಶಿ ವ್ಯಕ್ತಿಗೆ ಕೇಳುತ್ತಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಇದಕ್ಕೆ ಪ್ರತಿಕ್ರಿಯೆ ನೀಡಿದ ಜಯ್ ಫ್ರೆಂಚ್ ಹಾಗೂ ಇಂಗ್ಲೀಷ್ ಎಂದಿದ್ದಾರೆ. ಫ್ರೆಂಚ್ ಭಾಷೆ ಎನ್ನುತ್ತಿದ್ದಂತೆ ಆಟೋ ಡ್ರೈವರ್ ಅವರು ಖುಷಿಯಿಂದಲೇ ಈ ಅಮೆರಿಕದ ವ್ಯಕ್ತಿಯ ಬಳಿ ಫ್ರೆಂಚ್ ಭಾಷೆಯಲ್ಲಿ ಮಾತನಾಡುತ್ತಾರೆ. ಈ ವೇಳೆ ಈ ವಿದೇಶಿ ವ್ಯಕ್ತಿ ಜಯ್ ನಗುತ್ತಲೇ ಪ್ರತಿಕ್ರಿಯೆ ನೀಡುತ್ತಾ ಅವರು ಆತ್ಮವಿಶ್ವಾಸದಿಂದ ಫ್ರೆಂಚ್ ಭಾಷೆ ಮಾತನಾಡುವುದನ್ನು ಅಚ್ಚರಿ ವ್ಯಕ್ತಪಡಿಸುತ್ತಾರೆ.
ಇದನ್ನೂ ಓದಿ:Video: ಆಹಾ! ಎಷ್ಟು ಚಂದ ನೋಡಿ ಈ ವಿದೇಶಿಗನ ಬಾಯಲ್ಲಿ ಕನ್ನಡ ಕೇಳೋದು
ಈ ವಿಡಿಯೋ ಹದಿನೈದು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಇಂಡಿಯಾದಲ್ಲಿ ಪ್ರತಿಯೊಂದು ಕ್ಷಣವನ್ನು ಆನಂದಿಸಿ ಎಂದಿದ್ದಾರೆ. ಇನ್ನೊಬ್ಬರು ನಿಮಗಿಂತ ಈ ಆಟೋ ಡ್ರೈವರ್ ಗೆ ಹೆಚ್ಚು ಭಾಷೆ ಗೊತ್ತಿರುವಂತಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ ನಾನು ಭಾರತದ ಕೇರಳದವನು, ನನಗೆ ರಷ್ಯಯನ್ ಭಾಷೆ ಗೊತ್ತಿದೆ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:42 pm, Sun, 21 September 25








